ಪ್ರಧಾನ ಮಂತ್ರಿಯವರ ಕಛೇರಿ

ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಉತ್ಸಾಹದಲ್ಲಿ ಪ್ರಧಾನ ಮಂತ್ರಿ ಅವರ  ಮೆಚ್ಚುಗೆ ಗಳಿಸಿದ ಡುಂಗರಪುರದ ಮಹಿಳಾ ಉದ್ಯಮಿ


ಡುಂಗರಪುರದ ಒಂದು ಸಣ್ಣ ಹಳ್ಳಿಯಲ್ಲಿ ನನ್ನ ತಾಯಂದಿರು ಮತ್ತು ಸಹೋದರಿಯರು ತುಂಬಾ ಸಂತೋಷವಾಗಿದ್ದಾರೆ ಮತ್ತು ಅವರು ನನ್ನನ್ನು ಆಶೀರ್ವದಿಸುತ್ತಿರುವುದು ನನ್ನನ್ನು ಭಾವಪರವಶನಾಗಿಸಿದೆ: ಪ್ರಧಾನ ಮಂತ್ರಿ

Posted On: 18 JAN 2024 3:44PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಕ್ಷಿತ್ ಭಾರತ್ ಸಂಕಲ್ಪ ಯಾತ್ರೆಯ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು. ದೇಶಾದ್ಯಂತದ ವಿಕ್ಷಿತ್ ಭಾರತ್ ಸಂಕಲ್ಪ ಯಾತ್ರೆಯ ಸಾವಿರಾರು ಫಲಾನುಭವಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರು, ಸಂಸದರು, ಶಾಸಕರು ಮತ್ತು ಸ್ಥಳೀಯ ಮಟ್ಟದ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ಗ್ರಾಮೀಣ ಅಜೀವಿಕಾ ಮಿಷನ್ ಅಡಿಯಲ್ಲಿ ಸ್ವಯಂ ಉದ್ಯೋಗಿಯಾಗಿರುವ ಮತ್ತು ಸ್ವಸಹಾಯ ಗುಂಪಿಗೆ ಸೇರಿದ ರಾಜಸ್ಥಾನದ ಡುಂಗರಪುರದ ಶ್ರೀಮತಿ ಮಮತಾ ಧಿಂಧೋರೆ ಅವರೊಂದಿಗೆ ಪ್ರಧಾನಮಂತ್ರಿಯವರು ಸಂವಾದ ನಡೆಸಿದರು. ಅವರು ಗುಜರಾತಿ ಭಾಷೆಯಲ್ಲೂ ಚೆನ್ನಾಗಿ ಮಾತನಾಡಬಲ್ಲರು ಎಂಬುದನ್ನು ಪ್ರಧಾನಿ ಗಮನಿಸಿದರು. ಅವರು 5 ಜನರ ಅವಿಭಕ್ತ ಕುಟುಂಬದಿಂದ ಬಂದವರು ಮತ್ತು 150 ಗುಂಪುಗಳಲ್ಲಿ 7500 ಮಹಿಳೆಯರೊಂದಿಗೆ ಕೆಲಸ ಮಾಡುತ್ತಾರೆ. ಅವರು ಜಾಗೃತಿ ಮೂಡಿಸುತ್ತಾರೆ, ತರಬೇತಿ ನೀಡುತ್ತಾರೆ ಮತ್ತು ಗುಂಪಿನ ಸದಸ್ಯರಿಗೆ ಸಾಲ ಪಡೆಯಲು ಸಹಾಯ ಮಾಡುತ್ತಾರೆ.

ಅವರು ಸ್ವತಃ ನೀರಾವರಿಗಾಗಿ ಸಾಲ ಪಡೆದರು ಮತ್ತು ತರಕಾರಿ ಕೃಷಿ ಮತ್ತು ತರಕಾರಿ ಅಂಗಡಿಯನ್ನು ಸಹ ಮಾಡಿದರು. ಅವರು ಉದ್ಯೋಗದಾತರೂ ಆಗಿದ್ದಾರೆ. ತಾನು ಪಿಎಂ ಆವಾಸ್ ಯೋಜನೆಯಿಂದ ಪಕ್ಕಾ ಮನೆಯ ಕನಸನ್ನು ನನಸು ಮಾಡಿರುವುದಾಗಿಯೂ ಶ್ರೀಮತಿ ಮಮತಾ ಅವರು ಪ್ರಧಾನ ಮಂತ್ರಿ ಅವರಿಗೆ ತಿಳಿಸಿದರು. ಸರ್ಕಾರದ ನೆರವನ್ನು ಪಡೆಯುವ ನಿಟ್ಟಿನಲ್ಲಿ ಭ್ರಷ್ಟಾಚಾರ ಮುಕ್ತ ಪ್ರಕ್ರಿಯೆಯ ಬಗ್ಗೆ ಮತ್ತು ಮೊತ್ತದ ಬಗ್ಗೆ ಅವರು ಪ್ರಧಾನಮಂತ್ರಿಯವರಿಗೆ ಮಾಹಿತಿ ನೀಡಿದರು. ಮೋದಿ ಕಿ ಗ್ಯಾರಂಟಿ ಕಿ ಗಾಡಿ ಬಗ್ಗೆ ಜನರಿಗೆ ಅರಿವು ಮೂಡಿಸುವಲ್ಲಿ ಅವರು ಮುಂಚೂಣಿಯಲ್ಲಿದ್ದಾರೆ ಮತ್ತು ಜನರು ಅರ್ಜಿ ಸಲ್ಲಿಸಬೇಕು ಮತ್ತು ಆಗ ಯೋಜನೆಗಳ ಅಡಿಯಲ್ಲಿ ಪ್ರಯೋಜನ ಲಭಿಸುವುದು ಗ್ಯಾರಂಟಿ ಎಂದು ಅವರು ಜನರಿಗೆ ಮನವರಿಕೆ ಮಾಡಿಕೊಡುತ್ತಾರೆ.

ಆಧುನಿಕ ಪ್ರಪಂಚದ ಬಗ್ಗೆ ಅವರ ಅರಿವನ್ನು, ಜಾಗೃತಿಯನ್ನು ಶ್ಲಾಘಿಸಿದ ಪಿಎಂ ಮೋದಿ, ಗುಂಪಿನ ಮಹಿಳೆಯರು ತಮ್ಮ ಹಿನ್ನೆಲೆಯಲ್ಲಿ ಮಾಡುತ್ತಿರುವ  ವೀಡಿಯೊ ರೆಕಾರ್ಡಿಂಗ್ ಅನ್ನು ಗಮನಿಸಿದರು ಮತ್ತು ಈ ಸಂದರ್ಭದಲ್ಲಿ ಹಾಜರಿದ್ದ ಮಹಿಳಾ ಉದ್ಯಮಿಗಳನ್ನು ಉತ್ತೇಜಿಸಿದರು. "ಡುಂಗರಪುರದ ಒಂದು ಸಣ್ಣ ಹಳ್ಳಿಯಲ್ಲಿ ನನ್ನ ತಾಯಂದಿರು ಮತ್ತು ಸಹೋದರಿಯರು ತುಂಬಾ ಸಂತೋಷವಾಗಿದ್ದಾರೆ ಮತ್ತು ನನ್ನನ್ನು ಆಶೀರ್ವದಿಸುತ್ತಿದ್ದಾರೆ ಎಂದು ನಾನು ಭಾವಪರವಶನಾಗಿದ್ದೇನೆ". ಎಂದು ಪ್ರಧಾನಿ ಹೇಳಿದರು. ಇತರ ಮಹಿಳೆಯರನ್ನು ಜೊತೆಯಲ್ಲಿ ಕರೆದೊಯ್ಯುವ ಅವರ ಉತ್ಸಾಹವನ್ನು ಶ್ರೀ ಮೋದಿ ಶ್ಲಾಘಿಸಿದರು. ಕಳೆದ 9 ವರ್ಷಗಳಿಂದ ಸರ್ಕಾರವು ಸ್ವಸಹಾಯ ಗುಂಪುಗಳ ಮೂಲಕ ಮಹಿಳೆಯರನ್ನು ಸಬಲೀಕರಣಗೊಳಿಸುವ ಪ್ರಯತ್ನವನ್ನು ಮಾಡುತ್ತಿದೆ ಎಂದು ಪ್ರಧಾನಿ ಹೇಳಿದರು. 2 ಕೋಟಿ ಲಖ್ಪತಿ ದೀದಿಗಳನ್ನು ಸೃಷ್ಟಿಸುವ ಯೋಜನೆಯನ್ನು ಅವರು ಪುನರುಚ್ಚರಿಸಿದರು ಮತ್ತು ಈ ಯೋಜನೆಯಲ್ಲಿ ಅವರಂತಹ ಸ್ವಸಹಾಯ ಗುಂಪುಗಳ ಪಾತ್ರವನ್ನು ಒತ್ತಿ ಹೇಳಿದರು.

***



(Release ID: 1997466) Visitor Counter : 49