ಪರಿಸರ ಮತ್ತು ಅರಣ್ಯ ಸಚಿವಾಲಯ

ವರ್ಷದ ಹಿನ್ನೋಟ - ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ʻಹವಾಮಾನ ಶೃಂಗಸಭೆʼಯ (ಸಿಒಪಿ 28) ಸಂದರ್ಭದಲ್ಲಿ ʻಹಸಿರು ಸಾಲʼ (ಗ್ರೀನ್‌ ಕ್ರೆಡಿಟ್‌) ಉಪಕ್ರಮಕ್ಕೆ ಚಾಲನೆ ನೀಡಿದರು

ಭಾರತವು ತನ್ನ ʻರಾಷ್ಟ್ರೀಯವಾಗಿ ನಿರ್ಧರಿಸಿದ ಕೊಡುಗೆʼಯನ್ನು (ಎನ್‌ಡಿಸಿ) ನವೀಕರಿಸಿದೆ. ಇದರ ಪ್ರಕಾರ ತನ್ನ ಒಟ್ಟು ರಾಷ್ಟ್ರೀಯ ಉತ್ಪನ್ನದ (ಜಿಡಿಪಿ) ಹೊರಸೂಸುವಿಕೆಯ ತೀವ್ರತೆಯನ್ನು 2005 ಮಟ್ಟದಿಂದ 2030ರ ವೇಳೆಗೆ 45 ಪ್ರತಿಶತಕ್ಕೆ ಹೆಚ್ಚಿಸುವ ಗುರಿಯನ್ನು ಹೊಂದಿದೆ. ಜೊತೆಗೆ, ಪಳೆಯುಳಿಕೆಯೇತರ ಇಂಧನ ಆಧಾರಿತ ಇಂಧನ ಸಂಪನ್ಮೂಲಗಳಿಂದ ಉತ್ಪಾದನೆತಯಾಗುವ ಒಟ್ಟಾರೆ ವಿದ್ಯುತ್‌ನ  ಸ್ಥಾಪಿತ ಸಾಮರ್ಥ್ಯವನ್ನು 2030ರ ವೇಳೆಗೆ 50%ಕ್ಕೆ ಹೆಚ್ಚಿಸುವ ಗುರಿಯನ್ನುಹೊಂದಲಾಗಿದೆ

ʻಗಾಂಧಿನಗರ ಅನುಷ್ಠಾನ ಮಾರ್ಗಸೂಚಿʼ ಮತ್ತು ʻಗಾಂಧಿನಗರ ಮಾಹಿತಿ ವೇದಿಕೆʼ (ಜಿಐಆರ್-ಜಿಐಪಿ) ಅಡಿಯಲ್ಲಿ ಕಾಡ್ಗಿಚ್ಚು ಮತ್ತು ಗಣಿಗಾರಿಕೆ ಪೀಡಿತ ಪ್ರದೇಶಗಳ ಭೂ ಪುನಃಸ್ಥಾಪನೆ ಕುರಿತ ʻಜಿ -20ʼ ಉಪಕ್ರಮಗಳ ಭಾಗವಾಗಿ, ʻಸಂಪನ್ಮೂಲ ದಕ್ಷತೆ ವರ್ತುಲ ಆರ್ಥಿಕತೆ ಉದ್ಯಮ ಒಕ್ಕೂಟ - ʻಆರ್‌ಇಸಿಐಸಿʼ ಹಾಗೂ ʻಸುಸ್ಥಿರ ಮತ್ತು ಸ್ಥಿತಿಸ್ಥಾಪಕ ನೀಲಿ / ಸಾಗರ ಆಧಾರಿತ ಆರ್ಥಿಕತೆಗಾಗಿ ಉನ್ನತ ಮಟ್ಟದ ತತ್ವʼಗಳಿಗೆ (HLPSRBE) ಚಾಲನೆ ನೀಡಲಾಗಿದೆ

ಪ್ರಧಾನಮಂತ್ರಿಯವರು ವಿಶ್ವ ಪರಿಸರ ದಿನದಂದು ʻಕಡಲತೀರದ ಆವಾಸಸ್ಥಾನಗಳು ಮತ್ತು ಸ್ಪಷ್ಟ ಆದಾಯಕ್ಕಾಗಿ ಮ್ಯಾಂಗ್ರೋವ್ ಉಪಕ್ರಮʼಕ್ಕೆ (MISHTI) ಚಾಲನೆ ನೀಡಿದರು

ಹುಲಿ ಸೇರಿದಂತೆ ಜಾಗತಿಕ ದೊಡ್ಡ ಬೆಕ್ಕುಗಳನ್ನು ಸಂರಕ್ಷಿಸಲು ʻಅಂತರರಾಷ್ಟ್ರೀಯ ದೊಡ್ಡ ಬೆಕ್ಕು ಒಕ್ಕೂಟʼಕ್ಕೆ (ಐಬಿಸಿಎ)
ಪ್ರಧಾನ ಮಂತ್ರಿಯವರಿಂದ ಚಾಲನೆ

ʻಇಂಡಿಯಾ ಸ್ಟೇಟ್ ಆಫ್ ಫಾರೆಸ್ಟ್ ರಿಪೋರ್ಟ್– 2021ʼ (ಐಎಸ್ಎಫ್ಆರ್) ಪ್ರಕಾರ, ಭಾರತದಲ್ಲಿ ಒಟ್ಟು ಅರಣ್ಯ ಮತ್ತು ಮರಗಳ ವ್ಯಾಪ್ತಿ 80.9 ದಶಲಕ್ಷ ಹೆಕ್ಟೇರ್ ಆಗಿದ್ದು, ಇದು ದೇಶದ ಭೌಗೋಳಿಕ ಪ್ರದೇಶದ 24.62% ರಷ್ಟಿದೆ


ಪರಿಸರ ಅನುಮತಿ ಪ್ರಸ್ತಾಪಗಳನ್ನು ಹೆಚ್ಚಿಸಲು ʻಗತಿಶಕ್ತಿʼ ಪೋರ್ಟಲ್ ಅನ್ನು ʻಪರಿವೇಶ್ 2.0ʼ ನೊಂದಿಗೆ ಸಂಯೋಜಿಸಲಾಗಿದೆ

Posted On: 22 DEC 2023 12:02PM by PIB Bengaluru

ಹವಾಮಾನ ಬದಲಾವಣೆ

ʻಹಸಿರು ಸಾಲʼ ಉಪಕ್ರಮ (ಜಿಸಿಪಿ)

ಗೌರವಾನ್ವಿತ ಪ್ರಧಾನ ಮಂತ್ರಿಗಳು ʻಹವಾಮಾನ ಶೃಂಗಸಭೆʼಯ (ಸಿಒಪಿ 28) ಸಂದರ್ಭದಲ್ಲಿ ಹಸಿರು ಸಾಲ ಉಪಕ್ರಮಕ್ಕೆ ಚಾಲನೆ ನೀಡಿದರು. ಇದು ಭಾರತ ಸರ್ಕಾರದ ʻಪರಿಸರಕ್ಕಾಗಿ ಜೀವನಶೈಲಿʼ (ಲೈಫ್‌ಸ್ಟೈಲ್‌ ಫಾರ್‌ ಎನ್ವಿರಾನ್ಮೆಂಟ್-LiFE) ಅಭಿಯಾನದ ಒಂದು ಭಾಗವಾಗಿದೆ. ʻಪರಿಸರ ಸಂರಕ್ಷಣಾ ಕಾಯ್ದೆ-1986ʼರ ಅಡಿಯಲ್ಲಿ ʻಹಸಿರು ಸಾಲ ನಿಯಮಗಳು-2023ʼ ಜಾರಿಯ ಅಧಿಸೂಚನೆಯನ್ನು 2023ರ ಅಕ್ಟೋಬರ್ 12ರಂದು ಹೊರಡಿಸಲಾಗಿದೆ. ಈ ನಿಯಮಗಳು ಸ್ವಯಂಪ್ರೇರಿತವಾಗಿ ಪರಿಸರ ಸ್ನೇಹಿ ಉಪಕ್ರಮಗಳನ್ನು ಉತ್ತೇಜಿಸಲು ಒಂದು ಕಾರ್ಯವಿಧಾನವನ್ನು ಮುಂದಿಟ್ಟಿದ್ದು, ಇದರ ಪರಿಣಾಮವಾಗಿ ʻಹಸಿರು ಸಾಲʼಗಳ ವಿತರಣೆ ಸಾಧ್ಯವಾಗಲಿದೆ. ಆರಂಭಿಕ ಹಂತದಲ್ಲಿ, ಅರಣ್ಯ ಇಲಾಖೆಗಳ ನಿಯಂತ್ರಣ ಮತ್ತು ನಿರ್ವಹಣೆಯಡಿಯಲ್ಲಿ ಅವನತಿ ಹೊಂದಿದ ಭೂಮಿ, ಪಾಳು ಭೂಮಿ, ಜಲಾನಯನ ಪ್ರದೇಶ ಇತ್ಯಾದಿಗಳಲ್ಲಿ ಸ್ವಯಂಪ್ರೇರಿತ ಮರ ನೆಡುವಿಕೆಯನ್ನು ಯೋಜಿಸಲಾಗಿದೆ.

ʻಹಸಿರು ಸಾಲ ನಿಯಮಗಳು-2023ʼರ ಅಡಿಯಲ್ಲಿ ಹಸಿರು ಸಾಲದ ಉತ್ಪಾದನೆಯು ʻಕಾರ್ಬನ್ ಕ್ರೆಡಿಟ್ ಟ್ರೇಡಿಂಗ್ ಸ್ಕೀಮ್-2023ʼರ ಅಡಿಯಲ್ಲಿ ಇಂಗಾಲದ ಸಾಲದಿಂದ ಸ್ವತಂತ್ರವಾಗಿದೆ.

ʻಜಿಸಿಪಿʼಯ ಆಡಳಿತ ರಚನೆಯು ಸಂಬಂಧಪಟ್ಟ ಸಚಿವಾಲಯಗಳು / ಇಲಾಖೆಗಳು, ತಜ್ಞರು ಮತ್ತು ಸಂಸ್ಥೆಗಳ ʻಚಾಲನಾ ಸಮಿತಿʼ ಸದಸ್ಯರನ್ನು ಒಳಗೊಂಡಿದೆ. ʻಭಾರತೀಯ ಅರಣ್ಯ ಸಂಶೋಧನೆ ಮತ್ತು ಶಿಕ್ಷಣ ಮಂಡಳಿʼಯನ್ನು (ಐಸಿಎಫ್ಆರ್‌ಇ) ಅನ್ನು ʻಜಿಸಿಪಿʼ ನಿರ್ವಾಹಕ ಸಂಸ್ಥೆಯಾಗಿ ನಿಯೋಜಿಸಲಾಗಿದ್ದು, ಇದು ʻಜಿಸಿಪಿʼಯ ಅನುಷ್ಠಾನ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು ಹೊಂದಿದೆ. ʻಜಿಸಿಪಿʼಯ ಡಿಜಿಟಲ್ ಪ್ರಕ್ರಿಯೆಯು ಕಾರ್ಯಾಚರಣೆಗಳನ್ನು ಸುವ್ಯವಸ್ಥಿತಗೊಳಿಸಲು ವಿಶೇಷ ವೆಬ್ ವೇದಿಕೆ ಮತ್ತು ʻಹಸಿರು ಸಾಲʼ ರಿಜಿಸ್ಟ್ರಿಯನ್ನು ಒಳಗೊಂಡಿದೆ. ಜೊತೆಗೆ, ನೋಂದಣಿ, ಲೆಕ್ಕಪರಿಶೋಧನೆ ಮತ್ತು ʻಹಸಿರು ಸಾಲʼ ವಿತರಣೆಯ ಮೇಲ್ವಿಚಾರಣೆ ಸೇರಿದಂತೆ ಈ ಕಾರ್ಯವಿಧಾನಗಳು ಮತ್ತು ಮಾರ್ಗಸೂಚಿಗಳು ಹಸಿರು ಸಾಲದ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಖಚಿತಪಡಿಸುತ್ತವೆ.

 

ಭಾರತದ ʻಎನ್‌ಸಿಡಿʼ ಗುರಿಗಳ ಸಾಧನೆಗಳು-

2015ರಲ್ಲಿ ಸಲ್ಲಿಸಿದ ಭಾರತದ ಮೊದಲ ʻರಾಷ್ಟ್ರೀಯವಾಗಿ ನಿರ್ಧರಿಸಿದ ಕೊಡುಗೆʼ (ಎನ್‌ಡಿಸಿ) ಪ್ರಕಾರ, ಭಾರತವು ಈ ಗುರಿಯನ್ನು ಹೊಂದಿತ್ತು:

2005ರ ಮಟ್ಟದಿಂದ 2030ರ ವೇಳೆಗೆ ದೇಶದ ಜಿಡಿಪಿಯ ಹೊರಸೂಸುವಿಕೆಯ ತೀವ್ರತೆಯನ್ನು 33 ರಿಂದ 35 ಪ್ರತಿಶತದಷ್ಟು ಕಡಿಮೆ ಮಾಡುವುದು; ಮತ್ತು

2030ರ ವೇಳೆಗೆ ಒಟ್ಟಾರೆ ವಿದ್ಯುತ್ ಶಕ್ತಿ ಸ್ಥಾಪಿತ ಸಾಮರ್ಥ್ಯದಲ್ಲಿ ಸುಮಾರು 40 ಪ್ರತಿಶತದಷ್ಟನ್ನ ಪಳೆಯುಳಿಕೆಯೇತರ ಇಂಧನ ಆಧಾರಿತ ಸಂಪನ್ಮೂಲಗಳಿಂದ ಉತ್ಪಾದಿಸುವುದು.

ಈ ಎರಡು ಗುರಿಗಳನ್ನು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಸಾಧಿಸಲಾಗಿದೆ. ಅಕ್ಟೋಬರ್ 31, 2023 ರಂದು ಇದ್ದಂತೆ ಪಳೆಯುಳಿಕೆಯೇತರ ಇಂಧನ ಆಧಾರಿತ ಇಂಧನ ಸಂಪನ್ಮೂಲಗಳಿಂದ ಸಂಚಿತ ವಿದ್ಯುತ್ ಶಕ್ತಿ ಸ್ಥಾಪಿತ ಸಾಮರ್ಥ್ಯವು 186.46 ಮೆಗಾವ್ಯಾಟ್ ಆಗಿದೆ. ಇದು ಒಟ್ಟು ಸಂಚಿತ ವಿದ್ಯುತ್ ಶಕ್ತಿ ಸ್ಥಾಪಿತ ಸಾಮರ್ಥ್ಯದ 43.81% ಆಗಿದೆ. 2005 ಮತ್ತು 2019 ರ ನಡುವೆ ದೇಶದ ಜಿಡಿಪಿಯ ಹೊರಸೂಸುವಿಕೆಯ ತೀವ್ರತೆಯನ್ನು ಶೇಕಡಾ 33 ರಷ್ಟು ಕಡಿಮೆ ಮಾಡಲಾಗಿದೆ.

ಆಗಸ್ಟ್ 2022ರಲ್ಲಿ, ಭಾರತವು ತನ್ನ ʻಎನ್‌ಡಿಸಿʼಯನ್ನು ನವೀಕರಿಸಿತು, ಅದರ ಪ್ರಕಾರ ತನ್ನ ಜಿಡಿಪಿಯ ಹೊರಸೂಸುವಿಕೆಯ ತೀವ್ರತೆಯನ್ನು 2005 ಮಟ್ಟದಿಂದ 2030ರ ವೇಳೆಗೆ 45 ಪ್ರತಿಶತಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದೆ ಮತ್ತು ಪಳೆಯುಳಿಕೆಯೇತರ ಇಂಧನ ಆಧಾರಿತ ಸಂಪನ್ಮೂಲಗಳಿಂದ ಉತ್ಪಾದಿಸಲಾದ ಒಟ್ಟಾರೆ ವಿದ್ಯುತ್ ಶಕ್ತಿ ಸ್ಥಾಪಿತ ಸಾಮರ್ಥ್ಯವನ್ನು 2030ರ ವೇಳೆಗೆ 50% ರಷ್ಟಕ್ಕೆ ಹೆಚ್ಚಿಸುವ ಗುರಿಯನ್ನು ಹೊಂದಲಾಗಿದೆ.

ವಿಶ್ವಸಂಸ್ಥೆಯ 28ನೇ ಹವಾಮಾನ ಬದಲಾವಣೆ ಶೃಂಗಸಭೆ(ಸಿಒಪಿ 28)

2023ರ ನವೆಂಬರ್ 30ರಿಂದ 2023ರ ಡಿಸೆಂಬರ್ 13ರವರೆಗೆ ಅರಬ್ ಸಂಯುಕ್ತ ಸಂಸ್ಥಾನದ ದುಬೈನಲ್ಲಿ ನಡೆದ ವಿಶ್ವಸಂಸ್ಥೆಯ  28ನೇ ಹವಾಮಾನ ಶೃಂಗಸಭೆಯಲ್ಲಿ (ಸಿಒಪಿ 28) ಭಾರತದ ಅಂತರ ಸಚಿವಾಲಯದ ನಿಯೋಗ ಭಾಗವಹಿಸಿತು. ʻಸಿಒಪಿ 28ʼರ ಪ್ರಮುಖ ಫಲಗಳಲ್ಲಿ, ʻಮೊದಲ ಜಾಗತಿಕ ಸ್ಟಾಕ್‌ಟೇಕ್‌ ಫಲಿತಾಂಶʼದ ನಿರ್ಧಾರ, ದಶಕದ ಅಂತ್ಯಗೊಳ್ಳುವ ಮೊದಲು ಜಾಗತಿಕ ಹವಾಮಾನ ಮಹತ್ವಾಕಾಂಕ್ಷೆಯನ್ನು ಹೆಚ್ಚಿಸುವುದು ಹಾಗೂ ನಷ್ಟ ಮತ್ತು ಹಾನಿ ನಿಧಿಯ ಕಾರ್ಯಾಚರಣೆಯ ಒಪ್ಪಂದಗಳು ಸೇರಿವೆ. ಸದಸ್ಯ ದೇಶಗಳು ʻಪ್ಯಾರಿಸ್ ಒಪ್ಪಂದʼ ಮತ್ತು ಆ ದೇಶಗಳ ವಿಭಿನ್ನ ರಾಷ್ಟ್ರೀಯ ಪರಿಸ್ಥಿತಿಗಳನ್ನು ಗಣನೆಗೆ ತೆಗೆದುಕೊಂಡು ʻರಾಷ್ಟ್ರೀಯವಾಗಿ ನಿರ್ಧರಿಸಿದʼ ರೀತಿಯಲ್ಲಿ ಈ ಜಾಗತಿಕ ಪ್ರಯತ್ನಗಳನ್ನು ಕೈಗೊಳ್ಳುತ್ತವೆ.

ಹವಾಮಾನ ಬದಲಾವಣೆ ಕುರಿತ ವಿಶ್ವಸಂಸ್ಥೆಯ ನೀತಿಯ ಸಮಾವೇಶಕ್ಕೆ ಭಾರತದ ಮೂರನೇ ರಾಷ್ಟ್ರೀಯ ಸಂವಹನವನ್ನು 2023ರ ಡಿಸೆಂಬರ್ 9ರಂದು ಸಲ್ಲಿಸಲಾಯಿತು. ಈ ವರದಿಯು ಭಾರತದ ಹಸಿರುಮನೆ ಅನಿಲ ಹೊರಸೂಸುವಿಕೆ, ಹವಾಮಾನ ಬದಲಾವಣೆಯಿಂದ ದೇಶ ಎದುರಿಸುವ ಅಪಾಯಸಾಧ್ಯತೆ ಮತ್ತು ಇಂಗಾಲ ಹೊರಸೂಸುವಿಕೆಯನ್ನು ತಗ್ಗಿಸಲು ಹಾಗೂ ಹವಾಮಾನ ಬದಲಾವಣೆಯ ಪರಿಣಾಮಗಳಿಗೆ ಹೊಂದಿಕೊಳ್ಳಲು ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಮಾಹಿತಿಯನ್ನು ಒಳಗೊಂಡಿದೆ. ಒಟ್ಟಾರೆ ಮಾನವಜನ್ಯ ಹೊರಸೂಸುವಿಕೆಗೆ ಇಂಧನ ವಲಯ ಶೇ.75.81, ಕೃಷಿ ವಲಯ ಶೇ.13.44, ಕೈಗಾರಿಕಾ ಪ್ರಕ್ರಿಯೆ ಮತ್ತು ಉತ್ಪನ್ನ ಬಳಕೆ (ಐಪಿಪಿಯು) ಶೇ.8.41 ಮತ್ತು ತ್ಯಾಜ್ಯ ಶೇ.2.34ರಷ್ಟು ಕೊಡುಗೆ ನೀಡಿವೆ.

ಭಾರತವು ʻಯುಎನ್ಎಫ್‌ಸಿಸಿʼಗೆ ʻಆರಂಭಿಕ ಹೊಂದಾಣಿಕೆ ಸಂವಹನʼವನ್ನು ಸಲ್ಲಿಸಿತು. ಹೊಂದಾಣಿಕೆಯತ್ತ ಭಾರತವು ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದೆ. ಹೊಂದಾಣಿಕೆ ಚಟುವಟಿಕೆಗಳ ಗಣನೀಯ ವ್ಯಾಪ್ತಿಯನ್ನು ಗಮನದಲ್ಲಿಟ್ಟುಕೊಂಡು ಪ್ರಮುಖ ಆರ್ಥಿಕ ಕ್ಷೇತ್ರಗಳಲ್ಲಿ ಹಲವಾರು ನೀತಿಗಳು ಮತ್ತು ಕ್ರಮಗಳನ್ನು ಜಾರಿಗೆ ತರಲಾಗಿದೆ. ಅಭಿವೃದ್ಧಿಶೀಲ ಆರ್ಥಿಕತೆಯಲ್ಲಿ ಸೀಮಿತ ಸಂಪನ್ಮೂಲಗಳಿಗಾಗಿ ಪೈಪೋಟಿಯ ಹೊರತಾಗಿಯೂ, ಭಾರತವು ಹೊಂದಾಣಿಕೆ ಸಂಬಂಧಿತ ಕ್ರಮಗಳಿಗಾಗಿ ಗಮನಾರ್ಹ ಪ್ರಮಾಣದ ಸಂಪನ್ಮೂಲಗಳನ್ನು ಖರ್ಚು ಮಾಡುತ್ತಿದೆ.

ಭಾರತದ ಗೌರವಾನ್ವಿತ ಪ್ರಧಾನಿಯವರು 2022ರ ಅಕ್ಟೋಬರ್ 20ರಂದು ʻಪರಿಸರಕ್ಕಾಗಿ ಜೀವನಶೈಲಿ ಅಭಿಯಾನʼವನ್ನು(ಮಿಷನ್‌ ಲೈಫ್‌) ಪ್ರಾರಂಭಿಸಿದರು. 2021ರ ವಿಶ್ವಸಂಶ್ಥೆಯ  26ನೇ ʻಹವಾಮಾನ ಶೃಂಗಸಭೆʼಯಲ್ಲಿ (ಸಿಒಪಿ 26), ಗೌರವಾನ್ವಿತ ಪ್ರಧಾನಿಯವರು ಜಾಗತಿಕ ಹವಾಮಾನ ಕ್ರಿಯಾ ನಿರೂಪಣೆಯಲ್ಲಿ ವೈಯಕ್ತಿಕ ನಡವಳಿಕೆಗಳನ್ನು ಮುಂಚೂಣಿಗೆ ತರಲು ʻಪರಿಸರಕ್ಕಾಗಿ ಜೀವನಶೈಲಿʼ ಉಪಕ್ರಮವನ್ನು ಘೋಷಿಸಿದ್ದರು. ʻಐಪಿಸಿಸಿ ಹವಾಮಾನ ಬದಲಾವಣೆ 2022ʼ, ʻಹವಾಮಾನ ಬದಲಾವಣೆಯ ತಗ್ಗಿಸುವಿಕೆ ಕಾರ್ಯಪಡೆ-3 ವರದಿ-2022, ʻಶರ್ಮ್ ಎಲ್-ಶೇಖ್ ಅನುಷ್ಠಾನ ಯೋಜನೆಯ ನಿರ್ಧಾರʼ-2022, ಜಪಾನ್‌ ಸಪೊರೊದಲ್ಲಿ ಅಂಗೀಕರಿಸಲಾದ ʻಜಿ-7 ಘೋಷಣೆ-2023ʼ, ʻಶಾಂಘೈ ಸಹಕಾರ ಸಂಘಟನೆಯ ಘೋಷಣೆ- 2023ʼ, ʻಜಿ-20 ನಾಯಕರ ಘೋಷಣೆ-2023ʼ ಮತ್ತು 9ನೇ ʻಜಿ-20ʼ ಸಂಸದೀಯ ಸ್ಪೀಕರ್‌ಗಳ ಶೃಂಗಸಭೆʼ ಸೇರಿದಂತೆ ವಿವಿಧ ಅಂತರರಾಷ್ಟ್ರೀಯ ವೇದಿಕೆಗಳು ʻಪರಿಸರಕ್ಕಾಗಿ ಜೀವನಶೈಲಿʼಯನ್ನು ಅಂಗೀಕರಿಸಿವೆ.

ಇಂಡಿಯಾ ಕೂಲಿಂಗ್ ಕ್ರಿಯಾ ಯೋಜನೆ: ಭಾರತವು ʻಸಮಗ್ರ ಕೂಲಿಂಗ್ ಕ್ರಿಯಾ ಯೋಜನೆʼಯನ್ನು ಅಭಿವೃದ್ಧಿಪಡಿಸಿದ ವಿಶ್ವದ ಮೊದಲ ದೇಶವಾಗಿದೆ. ಇದು ಶೈತ್ಯೀಕರಣದ ಬೇಡಿಕೆಯನ್ನು ಕಡಿಮೆ ಮಾಡುವುದು, ರೆಫ್ರಿಜರೇಟರ್ ಪರಿವರ್ತನೆ, ಇಂಧನ ದಕ್ಷತೆಯನ್ನು ಹೆಚ್ಚಿಸುವುದು ಮತ್ತು 20 ವರ್ಷಗಳ ಕಾಲಾವಧಿಯೊಂದಿಗೆ ಉತ್ತಮ ತಂತ್ರಜ್ಞಾನ ಆಯ್ಕೆಗಳನ್ನು ಒಳಗೊಂಡಿರುವ ಕ್ಷೇತ್ರಗಳಲ್ಲಿ ಶೈತ್ಯೀಕರಣದ ಸಮಗ್ರ ದೃಷ್ಟಿಕೋನವನ್ನು ಒದಗಿಸಲು ಪ್ರಯತ್ನಿಸುತ್ತದೆ. ʻಹೈಡ್ರೋ ಕ್ಲೋರೊಫ್ಲೋರೋಕಾರ್ಬನ್‌ʼಗಳ ಹಂತ -2 ಅನುಷ್ಠಾನದ ಸಮಯದಲ್ಲಿ, ಭಾರತವು ಕಠಿಣ ʻಫೋಮ್ʼ ಉತ್ಪಾದನೆಯಲ್ಲಿ ಹೈಡ್ರೋ ಕ್ಲೋರೊಫ್ಲೋರೋಕಾರ್ಬನ್ (ಎಚ್‌ಸಿಎಫ್‌ಸಿ) -141 ಬಿ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಿದೆ. ಈ ಮೈಲುಗಲ್ಲನ್ನು ಸಾಧಿಸಿದ ಅಭಿವೃದ್ಧಿಶೀಲ ದೇಶಗಳಲ್ಲಿ ಭಾರತ ಮೊದಲನೆಯದು. 1.1.2020ರ ಹೊತ್ತಿಗೆ ಮೂಲರೇಖೆಯಿಂದ 35% ಕಡಿತದ ಗುರಿಯನ್ನು ಹೊಂದಿದ್ದ, ಭಾರತವು 44% ಕಡಿತವನ್ನು ಸಾಧಿಸಿದೆ. ಇದು ʻಓಝೋನ್ʼ ಪದರವನ್ನು ರಕ್ಷಿಸುವಲ್ಲಿ ಭಾರತದ ಪ್ರಯತ್ನಗಳನ್ನು ಎತ್ತಿ ತೋರಿಸುತ್ತದೆ.

 

ಭಾರತದ ಅಧ್ಯಕ್ಷತೆಯಲ್ಲಿ ʻಜಿ-20ʼ ಉಪಕ್ರಮಗಳು - ಪರಿಸರ ಮತ್ತು ಹವಾಮಾನ ಸುಸ್ಥಿರತೆ ಕಾರ್ಯಪಡೆ(ಇಸಿಎಸ್ ಡಬ್ಲ್ಯುಜಿ)-2.

ʻಗಾಂಧಿನಗರ ಅನುಷ್ಠಾನ ಮಾರ್ಗಸೂಚಿʼ ಮತ್ತು ʻಗಾಂಧಿನಗರ ಮಾಹಿತಿ ವೇದಿಕೆʼ (ಜಿಐಆರ್-ಜಿಐಪಿ) ಅಡಿಯಲ್ಲಿ ಕಾಡ್ಗಿಚ್ಚು ಮತ್ತು ಗಣಿಗಾರಿಕೆ ಪೀಡಿತ ಪ್ರದೇಶಗಳ ಭೂ ಪುನಃಸ್ಥಾಪನೆಗಾಗಿ ಜಾಗತಿಕ ಮೈತ್ರಿಯ ಪ್ರಾರಂಭ.

ವಿಶ್ವದಾದ್ಯಂತ ಖಾಸಗಿ ವಲಯದ 40 ಸ್ಥಾಪಕ ಸದಸ್ಯರೊಂದಿಗೆ ಭಾರತದ ಅಧ್ಯಕ್ಷತೆಯ ಅಡಿಯಲ್ಲಿ ʻಸಂಪನ್ಮೂಲ ದಕ್ಷತೆ ವರ್ತುಲ ಆರ್ಥಿಕತೆ ಉದ್ಯಮ ಒಕ್ಕೂಟʼ- ಆರ್‌ಇಸಿಐಸಿʼ ಪ್ರಾರಂಭ.

ʻಸುಸ್ಥಿರ ಮತ್ತು ಸ್ಥಿತಿಸ್ಥಾಪಕ ನೀಲಿ / ಸಾಗರ ಆಧಾರಿತ ಆರ್ಥಿಕತೆಗಾಗಿ ಉನ್ನತ ಮಟ್ಟದ ತತ್ವʼಗಳನ್ನು (HLPSRBE) ಪ್ರಾರಂಭಿಸಲಾಯಿತು. ʻಜಿ-20ʼ ದೇಶಗಳು ಔಪಚಾರಿಕವಾಗಿ 9 ಸಮಗ್ರ ಉನ್ನತ ಮಟ್ಟದ ತತ್ವಗಳನ್ನು ಅಳವಡಿಸಿಕೊಂಡವು. ಇದು ಈ ಉನ್ನತ ಮಟ್ಟದ ತತ್ವಗಳ ಆಧಾರದ ಮೇಲೆ ನೀಲಿ ಆರ್ಥಿಕತೆಯನ್ನು ಉತ್ತೇಜಿಸಲು ಸಾಗರ ಪ್ರಾದೇಶಿಕ ಯೋಜನೆಯನ್ನು ಸಿದ್ಧಪಡಿಸುವ ಮೂಲ ಅಧ್ಯಯನಗಳನ್ನು ಒಳಗೊಂಡಿದೆ.

2023ರ ಮೇ 21ರಂದು ʻಮೆಗಾ ಬೀಚ್ ಕ್ಲೀನಿಂಗ್ ಇಂಟರ್ನ್ಯಾಷನಲ್ʼ ಕಾರ್ಯಕ್ರಮವನ್ನು ಅನ್ನು ಆಯೋಜಿಸಲಾಯಿತು, ಇದರಲ್ಲಿ ಒಟ್ಟು 18 ದೇಶಗಳು ಭಾಗವಹಿಸಿದ್ದವು. 20 ಅಂತರರಾಷ್ಟ್ರೀಯ ಕಡಲತೀರಗಳಲ್ಲಿ ಒಟ್ಟು 3300 ಸ್ವಯಂಸೇವಕರು ಭಾಗವಹಿಸಿದ್ದರು ಮತ್ತು ಎಲ್ಲಾ ಕಡಲತೀರಗಳಿಂದ 3593 ಕೆ.ಜಿ ಕಸವನ್ನು ಸಂಗ್ರಹಿಸಲಾಯಿತು.

ಅರಣ್ಯ ಸಂರಕ್ಷಣೆ

ದೇಶದ ʻರಾಮ್ಸರ್ʼ ತಾಣಗಳ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳ: 2014ರಿಂದ, ದೇಶಾದ್ಯಂತ 49 ಹೊಸ ಜೌಗು ಪ್ರದೇಶಗಳನ್ನು ʻರಾಮ್ಸರ್ʼ(ಅಂತರರಾಷ್ಟ್ರೀಯ ಪ್ರಾಮುಖ್ಯತೆಯ ಜೌಗು ಪ್ರದೇಶಗಳು) ತಾಣಗಳಾಗಿ ಗುರುತಿಸಲಾಗಿದ್ದು, ಇವುಗಳ ಒಟ್ಟು ಸಂಖ್ಯೆ 75ಕ್ಕೆ ತಲುಪಿದೆ. ಪ್ರಸ್ತುತ, ಭಾರತವು ಏಷ್ಯಾದ ಎರಡನೇ ಅತಿದೊಡ್ಡ ʻರಾಮ್ಸರ್ʼ ತಾಣಗಳ ಜಾಲವನ್ನು ಹೊಂದಿದೆ. 2023ರ ʻಪರಿಸರ ದಿನʼದಂದು ಸಮುದಾಯದ ಭಾಗವಹಿಸುವಿಕೆಯ ಮೂಲಕ ʻರಾಮ್ಸರ್ʼ ತಾಣಗಳ ಸಂರಕ್ಷಣೆಗಾಗಿ ʻಅಮೃತ್ ಸರೋವರ್‌ʼ ಯೋಜನೆಯನ್ನು ಪ್ರಾರಂಭಿಸಲಾಗಿದೆ. ʻಝೆಡ್‌ಎಸ್‌ಐʼ 1ನೇ ಸೆಪ್ಟೆಂಬರ್ 2023ರಂದು ಎಲ್ಲಾ 75 ʻರಾಮ್ಸರ್ʼ ತಾಣಗಳಲ್ಲಿರುವ ಪ್ರಾಣಿಪ್ರಭೇದದ ಪಟ್ಟಿಯನ್ನು ಪ್ರಕಟಿಸಿದೆ ಮತ್ತು 75 ʻರಾಮ್ಸರ್ʼ ತಾಣಗಳ ಸಸ್ಯಪ್ರಭೇದದ ದಾಸ್ತಾನು ಸಿದ್ಧಪಡಿಸಲಾಗುತ್ತಿದೆ.

ಅರಣ್ಯ (ಸಂರಕ್ಷಣೆ) ತಿದ್ದುಪಡಿ ಕಾಯ್ದೆ-2023: ʻಎನ್‌ಡಿಸಿʼಗಳ ದೇಶದ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಬದ್ಧತೆಗಳನ್ನು ಸಾಧಿಸಲು; ಇಂಗಾಲದ ತಟಸ್ಥತೆ, ಅಸ್ಪಷ್ಟತೆಗಳನ್ನು ತೊಡೆದುಹಾಕಲು ಮತ್ತು ವಿವಿಧ ಭೂಮಿಗಳಲ್ಲಿ ಕಾಯ್ದೆಯ ಅನ್ವಯದ ಬಗ್ಗೆ ಸ್ಪಷ್ಟತೆಯನ್ನು ತರಲು, ಅರಣ್ಯೇತರ ಭೂಮಿಯಲ್ಲಿ ನೆಡುತೋಪುಗಳನ್ನು ಉತ್ತೇಜಿಸಲು, ಅರಣ್ಯಗಳ ಉತ್ಪಾದಕತೆಯನ್ನು ಹೆಚ್ಚಿಸಲು, ʻಅರಣ್ಯ (ಸಂರಕ್ಷಣೆ) ತಿದ್ದುಪಡಿ ಕಾಯ್ದೆ-2023ʼ ಅನ್ನು ಘೋಷಿಸುವ ಮೂಲಕ ಅಸ್ತಿತ್ವದಲ್ಲಿರುವ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ.  ಕಳೆದ ಎರಡು ವರ್ಷಗಳಲ್ಲಿ, ʻಅರಣ್ಯ (ಸಂರಕ್ಷಣೆ) ಕಾಯ್ದೆ-1980ʼರ ಅಡಿಯಲ್ಲಿ ಅನುಮೋದನೆ ಪ್ರಕ್ರಿಯೆಯನ್ನು ಮತ್ತಷ್ಟು ಸುಗಮಗೊಳಿಸಲು ಅರಣ್ಯ ಸಂರಕ್ಷಣಾ ವಿಭಾಗವು ಸರಿಸುಮಾರು 60 ಮಾರ್ಗಸೂಚಿಗಳು ಅಥವಾ ಸ್ಪಷ್ಟೀಕರಣಗಳನ್ನು ನೀಡಿದೆ.

ಸಂರಕ್ಷಿತ ಪ್ರದೇಶಗಳ ಸಂಖ್ಯೆಯಲ್ಲಿ ಹೆಚ್ಚಳ: 2014ರಲ್ಲಿ 745ರಷ್ಟಿದ್ದ ಸಂರಕ್ಷಿತ ಪ್ರದೇಶಗಳ ಸಂಖ್ಯೆ ಈಗ 998ಕ್ಕೆ ಏರಿದೆ. ಇದು ದೇಶದ ಒಟ್ಟು ಭೌಗೋಳಿಕ ಪ್ರದೇಶದ 5.28% ರಷ್ಟಿದೆ. ದೇಶದಲ್ಲಿ ಸಮುದಾಯ ಮೀಸಲುಗಳ ಸಂಖ್ಯೆ 2014ರಲ್ಲಿ 43ರಿಂದ ಪ್ರಸ್ತುತ 220ಕ್ಕೆ ಏರಿದೆ.

ಅರಣ್ಯ ಮತ್ತು ಮರಗಳ ವ್ಯಾಪ್ತಿಯ ಹೆಚ್ಚಳ: ʻಇಂಡಿಯಾ ಸ್ಟೇಟ್ ಆಫ್ ಫಾರೆಸ್ಟ್ ರಿಪೋರ್ಟ್-2021ʼ (ಐಎಸ್ಎಫ್ಆರ್) ಪ್ರಕಾರ, ಭಾರತದಲ್ಲಿ ಒಟ್ಟು ಅರಣ್ಯ ಮತ್ತು ಮರಗಳ ವ್ಯಾಪ್ತಿ 80.9 ದಶಲಕ್ಷ ಹೆಕ್ಟೇರ್‌ನಷ್ಟಿದ್ದು, ಇದು ದೇಶದ ಭೌಗೋಳಿಕ ಪ್ರದೇಶದ 24.62% ಆಗಿದೆ. ಈ ಪೈಕಿ 2019ಕ್ಕೆ ಹೋಲಿಸಿದರೆ ಅರಣ್ಯ ಪ್ರದೇಶದ ಹೆಚ್ಚಳವು 1,540 ಚದರ ಕಿ.ಮೀ ಮತ್ತು ಮರಗಳ ಹೊದಿಕೆ 721 ಚದರ ಕಿ.ಮೀ ಎಂದು ತಿಳಿದುಬಂದಿದೆ. 2020ಕ್ಕೆ ಹೋಲಿಸಿದರೆ ಅಕ್ಟೋಬರ್ 2023ರವರೆಗೆ 589.70 ಕೋಟಿ ಸಸಿಗಳನ್ನು ನೆಡಲಾಗಿದೆ ಮತ್ತು ಒಟ್ಟು 8.77 ದಶಲಕ್ಷ ಹೆಕ್ಟೇರ್ ಪ್ರದೇಶವನ್ನು ನೆಡುತೋಪು ವ್ಯಾಪ್ತಿಗೆ ತರಲಾಗಿದೆ.

ʻಕಡಲತೀರದ ಆವಾಸಸ್ಥಾನಗಳಿಗಾಗಿ ಮ್ಯಾಂಗ್ರೋವ್ ಉಪಕ್ರಮ ಮತ್ತು ʻಸ್ಪಷ್ಟ ಆದಾಯಗಳುʼ(ಮಿಷ್ಠಿ): ಗೌರವಾನ್ವಿತ ಪ್ರಧಾನಿಯವರು ʻವಿಶ್ವ ಪರಿಸರ ದಿನʼದಂದು (ಜೂನ್ 5, 2023) ʻಕಡಲತೀರದ ಆವಾಸಸ್ಥಾನಗಳಿಗಾಗಿ ಮ್ಯಾಂಗ್ರೋವ್ ಉಪಕ್ರಮ ಮತ್ತು ʻಸ್ಪಷ್ಟ ಆದಾಯಗಳುʼ(ಮಿಷ್ಠಿ) ಪ್ರಾರಂಭಿಸಿದರು. ಭಾರತ ಮತ್ತು ಜಾಗತಿಕವಾಗಿ ಅಸ್ತಿತ್ವದಲ್ಲಿರುವ ಉತ್ತಮ ಕಾರ್ಯವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಭಾರತದ ಕರಾವಳಿಯುದ್ದಕ್ಕೂ ʻಮ್ಯಾಂಗ್ರೋವ್ʼ ಮರು ಅರಣ್ಯೀಕರಣ / ಅರಣ್ಯೀಕರಣ ಕ್ರಮಗಳನ್ನು ಕೈಗೊಳ್ಳುವ ಮೂಲಕ "ಮ್ಯಾಂಗ್ರೋವ್ ಕಾಡುಗಳ ಪುನಃಸ್ಥಾಪನೆ" ಇದರ ಉದ್ದೇಶವಾಗಿದೆ. ಸಚಿವಾಲಯವು ಈ ಸಂಬಂಧ ಪ್ರಸ್ತಾವನೆಯನ್ನು ಸಿದ್ಧಪಡಿಸಿದ್ದು, 2023-24ರ ಹಣಕಾಸು ವರ್ಷಕ್ಕೆ ʻಮಿಷ್ಠಿʼ ಅಡಿಯಲ್ಲಿ ಹಣವನ್ನು ಹಂಚಿಕೆ ಮಾಡಲು ಅದನ್ನು ʻರಾಷ್ಟ್ರೀಯ ಕ್ಯಾಂಪಾ ಪ್ರಾಧಿಕಾರʼಕ್ಕೆ ಸಲ್ಲಿಸಲಾಗಿದೆ. 2023-24ನೇ ಸಾಲಿಗೆ ಯೋಜನಾ ವೆಚ್ಚವಾಗಿ 100 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ.

4.6. ಬ್ಲೂ ಫ್ಲ್ಯಾಗ್ ಬೀಚ್‌ಗಳು: 2014ರಲ್ಲಿ ಭಾರತದಲ್ಲಿ ಯಾವುದೇ ʻಬ್ಲೂ ಫ್ಲ್ಯಾಗ್ʼ ಪ್ರಮಾಣೀಕೃತ ಕಡಲತೀರಗಳು ಇರಲಿಲ್ಲ. ಭಾರತ ಸರ್ಕಾರವು ಕಡಲತೀರ ಅಭಿವೃದ್ಧಿ ಕಾರ್ಯವನ್ನು ಪ್ರಾರಂಭಿಸಿತು ಮತ್ತು 08 ಕಡಲತೀರಗಳಿಗೆ 2020ರಲ್ಲಿ ʻಬ್ಲೂ ಫ್ಲ್ಯಾಗ್ʼ ಪ್ರಮಾಣಪತ್ರವನ್ನು ನೀಡಲಾಯಿತು. 2022ರಲ್ಲಿ, ಒಟ್ಟು 12 ಕಡಲತೀರಗಳು ʻಬ್ಲೂ ಫ್ಲ್ಯಾಗ್‌ʼ ಪ್ರಮಾಣೀಕರಣವನ್ನು ಹೊಂದಿದ್ದವು.

 

ಪರಿವೇಶ್

ʻಪರಿವೇಶ್ʼ ಎಂಬುದು ವೆಬ್ ಆಧಾರಿತ, ಪಾತ್ರ ಆಧಾರಿತ ಕೆಲಸದ ಹರಿವಿನ ತಂತ್ರಾಂಶವಾಗಿದೆ. ಕೇಂದ್ರ, ರಾಜ್ಯ ಮತ್ತು ಜಿಲ್ಲಾ ಮಟ್ಟದ ಪ್ರಾಧಿಕಾರಗಳಿಂದ ಪರಿಸರ, ಅರಣ್ಯ, ವನ್ಯಜೀವಿ ಮತ್ತು ಸಿಆರ್‌ಝಡ್ ಅನುಮತಿಗಳನ್ನು ಪಡೆಯಲು ಆನ್‌ಲೈನ್ ಸಲ್ಲಿಕೆ ಮೂಲಕ ಪ್ರಸ್ತಾವನೆ ಸಲ್ಲಿಸಲು ಹಾಗೂ ಅಂತಹ ಪ್ರಸ್ತಾವನೆಗಳ ಮೇಲ್ವಿಚಾರಣೆಗಾಗಿ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಇದು ಪ್ರಸ್ತಾಪಗಳ ಸಂಪೂರ್ಣ ಸ್ವಯಂಚಾಲಿತ ಮೇಲ್ವಿಚಾರಣೆಗೆ ಅವಕಾಶ ನೀಡುತ್ತದೆ. ಇದರಲ್ಲಿ ಹೊಸ ಪ್ರಸ್ತಾಪದ ಆನ್‌ಲೈನ್ ಸಲ್ಲಿಕೆ, ಪ್ರಸ್ತಾಪಗಳ ವಿವರಗಳನ್ನು ಪರಿಷ್ಕರಿಸುವುದು/ ನವೀಕರಣದ ಜೊತೆಗೆ ಕೆಲಸದ ಹರಿವಿನ ಪ್ರತಿ ಹಂತದಲ್ಲಿ ಪ್ರಸ್ತಾಪಗಳ ಸ್ಥಿತಿಯನ್ನು ನೋಡಬಹುದಾಗಿದೆ.

ಆಧುನಿಕ ವೆಬ್ ತಂತ್ರಾಂಶದೊಂದಿಗೆ ʻಪರಿವೇಶ್‌ʼನಲ್ಲಿ ಬಳಕೆದಾರರ ಅನುಭವವನ್ನು ಹೆಚ್ಚಿಸಲು, ಸಚಿವಾಲಯವು ʻಜಿಐಎಸ್ʼ, ʻಅಡ್ವಾನ್ಸ್ ಡೇಟಾ ಅನಾಲಿಟಿಕ್ಸ್ʼ ಮುಂತಾದ ಉದಯೋನ್ಮುಖ ತಂತ್ರಜ್ಞಾನವನ್ನು ಬಳಸಿಕೊಂಡು ಅಸ್ತಿತ್ವದಲ್ಲಿರುವ ಪರಿವೇಶ್ (2.0) ವ್ಯಾಪ್ತಿಯನ್ನು ವಿಸ್ತರಿಸಿದೆ. ಹಸಿರು ಅನುಮತಿಗಳ ಬಗ್ಗೆ ತ್ವರಿತ ನಿರ್ಧಾರಗಳನ್ನು ಒದಗಿಸಲು ಮತ್ತು ಸಮಗ್ರವಾಗಿ ಆನ್ಲೈನ್ ಮೌಲ್ಯಮಾಪನ ಮತ್ತು ಅನುಮತಿಗಳನ್ನು ನೀಡುವ ಮೂಲಕ ದೃಢವಾದ ಅನುಸರಣೆ ಮೇಲ್ವಿಚಾರಣೆಯನ್ನು ಒದಗಿಸುತ್ತದೆ. ಅಸ್ತಿತ್ವದಲ್ಲಿರುವ ʻಪರಿವೇಶ್ʼನ ನವೀಕರಿಸಿದ ಆವೃತ್ತಿಯಲ್ಲಿ ವಿಶಿಷ್ಟ ಮಾಡ್ಯೂಲ್‌ಗಳನ್ನು (ನಿಮ್ಮ ಅನುಮೋದನೆಯನ್ನು ತಿಳಿಯಿರಿ, ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ, ನಿರ್ಧಾರ ಬೆಂಬಲ ವ್ಯವಸ್ಥೆ ಇತ್ಯಾದಿ) ಒದಗಿಸಲಾಗಿದೆ.

ʻಪರಿವೇಶ್ 2.0ʼರಲ್ಲಿನ ಪ್ರಮುಖ ಮಾಡ್ಯೂಲ್‌ಗಳು: ವರ್ಗ ʻಎʼ ಮತ್ತು ʻಬಿʼ ಪರಿಸರ ಅನುಮತಿ ಪ್ರಸ್ತಾಪಗಳ ಸಮಗ್ರ ಆನ್‌ಲೈನ್ ಪ್ರಕ್ರಿಯೆಯನ್ನು ಕ್ರಮವಾಗಿ ಕೇಂದ್ರ ಮತ್ತು ʻಎಸ್‌ಇಐಎಎʼ ಮಟ್ಟದಲ್ಲಿ ಅಭಿವೃದ್ಧಿಪಡಿಸಿ ಹೊರತರಲಾಗಿದೆ. ಇದಲ್ಲದೆ, ಇತರ ಪ್ರಮುಖ ಅನುಮತಿಗಳ (ಎಫ್‌ಸಿ / ಡಬ್ಲ್ಯೂಎಲ್ &ಸಿಆರ್‌ಝಡ್) ಎಲ್ಲಾ ಪ್ರಮುಖ ಪ್ರಕ್ರಿಯೆಗಳನ್ನೂ ಅಭಿವೃದ್ಧಿಪಡಿಸಲಾಗಿದೆ ಮತ್ತು ಹೊರತರಲಾಗಿದೆ. ʻಸಿಆರ್‌ಝೆಡ್ʼ ಅನುಮೋದನೆಗೆ ಸಂಬಂಧಿಸಿದಂತೆ ಆನ್‌ಲೈನ್‌ ಮೂಲಕ ಸಲ್ಲಿಕೆ ಮತ್ತು ಅರ್ಜಿಗಳ ಪ್ರಕ್ರಿಯೆಗಾಗಿ ಎಲ್ಲಾ ಒಂಬತ್ತು ರಾಜ್ಯ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರಗಳನ್ನು ಮೊದಲ ಬಾರಿಗೆ ʻಪರಿವೇಶ್ 2.0ʼನಲ್ಲಿ ಸೇರ್ಪಡೆಗೊಳಿಸಲಾಗಿದೆ. ಇದಲ್ಲದೆ, ʻಪರಿವೇಶ್ 2.0ʼ ಅನ್ನು ʻಗತಿಶಕ್ತಿʼ ಮತ್ತು ʻರಾಷ್ಟ್ರೀಯ ಏಕ ಗವಾಕ್ಷಿ ಪೋರ್ಟಲ್‌ʼನೊಂದಿಗೆ ಸಂಯೋಜಿಸಲಾಗಿದೆ.

ʻಆಪ್ಶನ್‌ 3 ಪ್ಲಸ್ʼನಲ್ಲಿ ʻಎನ್‌ಎಸ್ಡಬ್ಲ್ಯೂಎಸ್‌ʼ ಅನ್ನು ಪರಿವೇಶ್ 2.0 ನೊಂದಿಗೆ ಸಂಯೋಜಿಸುವುದು: ʻಆಪ್ಶನ್‌ 3 ಪ್ಲಸ್ʼ ಅಡಿಯಲ್ಲಿ ʻಎನ್‌ಎಸ್ಡಬ್ಲ್ಯೂಎಸ್‌ʼ ಪೋರ್ಟಲ್ ಅನ್ನು ʻಪರಿವೇಶ್ 2.0ʼ ನೊಂದಿಗೆ ಸಂಯೋಜಿಸುವ ಕಾರ್ಯವು ಅಕ್ಟೋಬರ್ 2023ರಲ್ಲಿ ಪೂರ್ಣಗೊಂಡಿದೆ. ʻಆಪ್ಶನ್‌ 3 ಪ್ಲಸ್ʼ ಅಡಿಯಲ್ಲಿ, ಬಳಕೆದಾರರು ಈಗ ʻಎನ್‌ಎಸ್‌ಡಬ್ಲ್ಯೂಎಸ್ʼನಲ್ಲಿ ನೋಂದಾಯಿಸಿಕೊಳ್ಳಬಹುದು ಮತ್ತು ʻಎನ್‌ಎಸ್‌ಡಬ್ಲ್ಯೂಎಸ್ʼ ಪೋರ್ಟಲ್ ಮೂಲಕ ʻಪರಿವೇಶ್ʼನಲ್ಲಿ ನೋಂದಾಯಿಸಿಕೊಳ್ಳಬಹುದು. ʻಎನ್ಎಸ್‌ಡಬ್ಲ್ಯೂಎಸ್‌ʼನ  ನೋಂದಣಿ ವಿವರಗಳನ್ನು ʻಎಪಿಐʼ ಆಧಾರಿತ ಸೇವೆಗಳ ಮೂಲಕ ʻಪರಿವೇಶ್‌ʼಗೆ  ಕಳುಹಿಸಲಾಗುತ್ತದೆ.

ʻಪರಿವೇಶ್ 2.0ʼ ಜೊತೆಗೆ ʻಗತಿಶಕ್ತಿʼ ಪೋರ್ಟಲ್‌ ಸಂಯೋಜನೆ: ʻಪರಿವೇಶ್ʼ ಪೋರ್ಟಲ್ ಮತ್ತು ʻಗತಿಶಕ್ತಿʼ ಪೋರ್ಟಲ್ ಅನ್ನು ನಕ್ಷೆ ಸೇವೆಯ ಮೂಲಕ ಸಂಯೋಜಿಸಲಾಗಿದೆ. 5 ರಾಜ್ಯಗಳ (ಜಾರ್ಖಂಡ್, ಹರಿಯಾಣ, ಪಂಜಾಬ್, ಗುಜರಾತ್ ಮತ್ತು ತ್ರಿಪುರಾದ ಒಂದು ಜಿಲ್ಲೆ) ʻಅರಣ್ಯಭೂಮಿ ನಕ್ಷೆʼ ಹಾಗೂ ʻಗತಿಶಕ್ತಿʼಯ ಮೂಲಕ ಜಾರಿಗಾಗಿ ಯೋಜಿಸಲಾದ ಯೋಜನೆಗಳನ್ನು ʻಪರಿವೇಶ್‌ʼನಲ್ಲಿ ಯಶಸ್ವಿಯಾಗಿ ಸಂಯೋಜಿಸಲಾಗಿದೆ. ಅಂತೆಯೇ, ಪದರಗಳ ರೂಪದಲ್ಲಿ ಲಭ್ಯವಿರುವ (ಇಸಿ / ಎಫ್ಸಿ / ಡಬ್ಲ್ಯೂಎಲ್ / ಸಿಆರ್‌ಝೆಡ್‌ ಅನುಮೋದಿತ, ಸಂರಕ್ಷಿತ ಪ್ರದೇಶ ಗಡಿ, ಪರಿಸರ ಸೂಕ್ಷ್ಮ ವಲಯ) ದತ್ತಾಂಶವನ್ನು ಯಶಸ್ವಿಯಾಗಿ ʻಗತಿಶಕ್ತಿʼ ಪೋರ್ಟಲ್‌ಗೆ ಸೇರ್ಪಡೆಗೊಳಿಸಲಾಗಿದೆ.

 

ವಾಯು ಗುಣಮಟ್ಟ/ ಮಾಲಿನ್ಯ

ವಾಯು ಗುಣಮಟ್ಟದಲ್ಲಿ ಸುಧಾರಣೆ: ʻಎನ್‌ಸಿಎಪಿʼ(ರಾಷ್ಟ್ರೀಯ ಶುದ್ಧ ಗಾಳಿ ಯೋಜನೆ) ಮತ್ತು ʻಎಕ್ಸ್‌ವಿ ಎಫ್‌ಸಿʼ ಅನುದಾನದ ಅಡಿಯಲ್ಲಿ, ಗಾಳಿ ಗುಣಮಟ್ಟ ಸಾಧನೆ ಮಾಡದ 131 ನಗರಗಳಲ್ಲಿ ಗಾಳಿಯ ಗುಣಮಟ್ಟವನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ. ಈ 131 ನಗರಗಳಲ್ಲಿ ʻಪಿಎಂ 10ʼರ ವಾರ್ಷಿಕ ಸರಾಸರಿ ಸಾಂದ್ರತೆಯಲ್ಲಿ ಇಳಿಕೆ ಕಂಡುಬಂದಿರುವುದರಿಂದ, ಅವು ಸಕಾರಾತ್ಮಕ ಪರಿಣಾಮವನ್ನು ತೋರಿಸಿವೆ. ಇದು ಅಂತಿಮವಾಗಿ ಸುಧಾರಿತ ಗಾಳಿಯ ಗುಣಮಟ್ಟಕ್ಕೆ ದಾರಿ ಮಾಡಿದೆ. ʻಸ್ವಚ್ಛ ವಾಯು ಸರ್ವೇಕ್ಷಣ್ʼ ಅಡಿಯಲ್ಲಿ 100ಕ್ಕೂ ಹೆಚ್ಚು ನಗರಗಳನ್ನು ಗಾಳಿಯ ಗುಣಮಟ್ಟಕ್ಕಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ. ಸಮಗ್ರ ಕಾರ್ಯವಿಧಾನದ ಮೂಲಕ ಗಾಳಿಯ ಗುಣಮಟ್ಟವನ್ನು ಸುಧಾರಿಸುವ ಉದ್ದೇಶವನ್ನು ಈ ಅಭಿಯಾನವು ಹೊಂದಿದೆ.

 

ಗಾಳಿಯ ಗುಣಮಟ್ಟ

2019-20

2020-21

2021-22

2022-23

2023-24

2017ರ ಮೂಲ ವರ್ಷಕ್ಕೆ ಹೋಲಿಸಿದರೆ ವಾರ್ಷಿಕ ʻಪಿಎಂ 10ʼ ಮಟ್ಟದಲ್ಲಿ ಇಳಿಕೆ

85 ನಗರಗಳಲ್ಲಿ ಸುಧಾರಣೆ

102 ನಗರಗಳಲ್ಲಿ ಸುಧಾರಣೆ

95 ನಗರಗಳಲ್ಲಿ ಸುಧಾರಣೆ

90 ನಗರಗಳಲ್ಲಿ ಸುಧಾರಣೆ

ಹಣಕಾಸು ವರ್ಷದ ಆಧಾರದ ಮೇಲೆ ಲೆಕ್ಕ ಹಾಕಿರುವ, ಹಿನ್ನೆಲೆಯಲ್ಲಿ ಈ ಬಾರಿಯ ದತ್ತಾಂಶಕ್ಕಾಗಿ ಕಾಯಲಾಗುತ್ತಿದೆ

 

ವರ್ತುಲ ಆರ್ಥಿಕತೆ

ವರ್ತುಲ ಆರ್ಥಕತೆ ಯೋಜನೆ: ʻವರ್ತುಲ ಆರ್ಥಿಕತೆʼ(ಸಿಇ) ಅಭಿವೃದ್ಧಿಗಾಗಿ 11 ಸಮಿತಿಗಳನ್ನು ರಚಿಸಲಾಗಿದೆ ಮತ್ತು 10 ತ್ಯಾಜ್ಯ ವಿಭಾಗಗಳಿಗೆ(ಲಿ-ಐಯಾನ್ ಬ್ಯಾಟರಿಗಳು; ಇ-ತ್ಯಾಜ್ಯ; ವಿಷಕಾರಿ ಮತ್ತು ಅಪಾಯಕಾರಿ ಕೈಗಾರಿಕಾ ತ್ಯಾಜ್ಯ; ಸ್ಕ್ರ್ಯಾಪ್ ಲೋಹ [ಫೆರಸ್ ಮತ್ತು ನಾನ್ಫೆರಸ್]; ಟೈರ್ ಮತ್ತು ರಬ್ಬರ್; ʻಜೀವಿತಾವಧಿ ಮುಗಿದ ವಾಹನಗಳು; ಜಿಪ್ಸಮ್, ಬಳಸಿದ ತೈಲ, ಪುರಸಭೆಯ ಘನ ತ್ಯಾಜ್ಯ ಮತ್ತು ಸೌರ ಫಲಕಗಳು) ಕ್ರಿಯಾ ಯೋಜನೆಗಳನ್ನು ರಚಿಸಲಾಗಿದೆ. ಅದರಂತೆ, ಹವಾಮಾನ ಗುರಿಗಳನ್ನು ಸಾಧಿಸುವತ್ತ ವೇಗವಾಗಿ ಸಾಗುವ ನಿಟ್ಟಿನಲ್ಲಿ ವರ್ತುಲ ಆರ್ಥಿಕತೆಯ ಧ್ಯೇಯವನ್ನು ಉತ್ತೇಜಿಸಲು ಈ ಕೆಳಗಿನ ತಿದ್ದುಪಡಿಗಳನ್ನು ಮಾಡಲಾಗಿದೆ.

ಎ. ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ನಿಯಮಕ್ಕೆ 27.04.2023 ರಂದು ತಿದ್ದುಪಡಿ
      ಮಾಡಲಾಗಿದೆ.

ಬಿ. ʻಬಳಸಿದ ತೈಲಕ್ಕಾಗಿ ವಿಸ್ತೃತ ಉತ್ಪಾದಕ ಜವಾಬ್ದಾರಿʼ(ಇಪಿಆರ್)  ಅನ್ನು
       18.09.2023 ರಂದು ತಿದ್ದುಪಡಿ ಮಾಡಲಾಗಿದೆ.

ಸಿ. ಇ-ತ್ಯಾಜ್ಯ (ನಿರ್ವಹಣೆ) ನಿಯಮಗಳನ್ನು 30.01.2023 ರಂದು ತಿದ್ದುಪಡಿ
      ಮಾಡಲಾಗಿದೆ.

ಡಿ. ಬ್ಯಾಟರಿ ತ್ಯಾಜ್ಯ ನಿರ್ವಹಣಾ ನಿಯಮಗಳನ್ನು 25.10.2023 ರಂದು
      ತಿದ್ದುಪಡಿ ಮಾಡಲಾಗಿದೆ.

ಇ. ʻತ್ಯಾಜ್ಯ ಟೈರ್ ನಿಯಮ-2022ʼಕ್ಕೆ 21.07.2022 ರಂದು ತಿದ್ದುಪಡಿ
       ಮಾಡಲಾಗಿದೆ.

2022-23ನೇ ಸಾಲಿಗೆ ಒಟ್ಟು 3.07 ದಶಲಕ್ಷ ಟನ್ ಪ್ಲಾಸ್ಟಿಕ್ ಪ್ಯಾಕೇಜಿಂಗ್ ಅನ್ನು ʻಇಪಿಆರ್ʼ ಅಡಿಯಲ್ಲಿ ತರಲಾಗಿದೆ. ಅಕ್ಟೋಬರ್ 2023ರಂದು ಇದ್ದಂತೆ ನೋಂದಾಯಿತ ʻಪಿಐಬಿಒʼಗಳು: 31099 ನೋಂದಾಯಿತ ಪ್ಲಾಸ್ಟಿಕ್ ತ್ಯಾಜ್ಯ ಸಂಸ್ಕರಣೆದಾರರು: 2289.

 

ವನ್ಯಜೀವಿ

ಚೀತಾಗಳ ಖಂಡಾಂತರ ಸ್ಥಳಾಂತರ: ನಮೀಬಿಯಾದಿಂದ 8 ಚೀತಾಗಳು ಮತ್ತು ದಕ್ಷಿಣ ಆಫ್ರಿಕಾದಿಂದ 12 ಚೀತಾಗಳನ್ನು ಕ್ರಮವಾಗಿ ಸೆಪ್ಟೆಂಬರ್ 22 ಮತ್ತು ಫೆಬ್ರವರಿ 2023ರಲ್ಲಿ ಭಾರತಕ್ಕೆ ಕರೆತಂದು ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಡಲಾಗಿದೆ. 1940ರ ದಶಕದ ಕೊನೆಯಲ್ಲಿ / 1950 ರ ದಶಕದ ಆರಂಭದಲ್ಲಿ ಭಾರತದಲ್ಲಿ ಚೀತಾ ಸಂಸತಿ ಅಳಿದುಹೋಗಿತ್ತು.

ಹುಲಿ ಯೋಜನೆಗೆ 50 ವರ್ಷಗಳು: ಆಗಸ್ಟ್ 2023ರಲ್ಲಿ ಬಿಡುಗಡೆಯಾದ ಇತ್ತೀಚಿನ ಹುಲಿ ಗಣತಿ ವರದಿಯ ಪ್ರಕಾರ, ಭಾರತವು ವಿಶ್ವದ 75%ಕ್ಕೂ ಹೆಚ್ಚು ಹುಲಿಗಳಿಗೆ ನೆಲೆಯಾಗಿದೆ. ಹುಲಿಗಳ ಸಂಖ್ಯೆಯು 2014ರಲ್ಲಿ 2226 ಇದ್ದದ್ದು 2023ರಲ್ಲಿ 3,682ಕ್ಕೆ ಏರಿಕೆಯಾಗಿರುವುದನ್ನು ʻ ಹುಲಿ ಗಣತಿ-2022ʼ  ತೋರಿಸುತ್ತದೆ. ಹುಲಿ ಸೇರಿದಂತೆ ಜಾಗತಿಕ ದೊಡ್ಡ ಬೆಕ್ಕುಗಳನ್ನು ಸಂರಕ್ಷಿಸಲು ಭಾರತದ ಗೌರವಾನ್ವಿತ ಪ್ರಧಾನಿಯವರು 2023ರ ಏಪ್ರಿಲ್ 9 ರಂದು ʻಅಂತರರಾಷ್ಟ್ರೀಯ ದೊಡ್ಡ ಬೆಕ್ಕುಗಳ ಒಕ್ಕೂಟʼವನ್ನು (ಐಬಿಸಿಎ) ಅನ್ನು ಘೋಷಿಸಿದರು.

ಸಸ್ಯ, ಪ್ರಾಣಿ ಮತ್ತು ಒಣ ಸಸ್ಯಗಳ ದಾಖಲೆಗಳ ಡಿಜಿಟಲೀಕರಣ: ʻಬಿಎಸ್ಐʼ ಮತ್ತು ʻಝಡ್ಎಸ್ಐʼ, 16500 ಪ್ರಭೇದಗಳ ಡಿಜಿಟಲೀಕರಣವನ್ನು ಕೈಗೊಂಡಿದ್ದು, ಭಾರತೀಯ ಪ್ರಾಣಿ ಪ್ರಭೇದಗಳ 45000 ʻಟೈಪ್‌ʼ ಮತ್ತು ʻನಾನ್‌ ಟೈಪ್‌ʼ ಚಿತ್ರಗಳನ್ನು ಹೊಂದಿದೆ. 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮತ್ತು ದೇಶಾದ್ಯಂತದ ಎಲ್ಲಾ 10 ಜೈವಿಕ ಭೌಗೋಳಿಕ ವಲಯಗಳಿಂದ ಪ್ರಾಣಿ ಪ್ರಭೇದಗಳ ಪಟ್ಟಿಯನ್ನು ʻಝಡ್ಎಸ್ಐʼ ಪೂರ್ಣಗೊಳಿಸಿದೆ. 11 ಐಎಚ್ಆರ್ ರಾಜ್ಯಗಳು ಮತ್ತು 1 ಕೇಂದ್ರಾಡಳಿತ ಪ್ರದೇಶದ (ಜಮ್ಮು ಮತ್ತು ಕಾಶ್ಮೀರ) 6124 ನೀರಿನಬುಗ್ಗೆಗಳ ದತ್ತಾಂಶವನ್ನು ʻಹಿಮಲ್ ಜಿಯೋ ಪೋರ್ಟಲ್‌ʼನಲ್ಲಿ ಪ್ರಾದೇಶಿಕವಾಗಿ ಜಿಯೋ-ಟ್ಯಾಗ್ ಮಾಡಲಾಗಿದೆ.

 

*******



(Release ID: 1991139) Visitor Counter : 165