ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

ಮೇರಾ ಯುವ ಭಾರತ್ (ಮೈ ಭಾರತ್) ಪೋರ್ಟಲ್ ನಲ್ಲಿ ಯುವಕರ ನೋಂದಣಿಯ ಸಂಖ್ಯೆ 35 ಲಕ್ಷ ದಾಟಿದೆ


ಮೇರಾ ಯುವ ಭಾರತ್ ವೇದಿಕೆ ಈಗ ದೇಶದ ನವ ಯುವಕ ಮತ್ತು ಯುವತಿಯರಿಗೆ ದೊಡ್ಡ ವ್ಯವಸ್ಥೆಯಾಗುತ್ತಿದೆ: ಪ್ರಧಾನಮಂತ್ರಿ

Posted On: 27 DEC 2023 3:34PM by PIB Bengaluru

ಮೇರಾ ಯುವ ಭಾರತ್ ಪೋರ್ಟಲ್ ನಲ್ಲಿ ಯುವಕರ ನೋಂದಣಿಯು 26.12.2023ಕ್ಕೆ 35 ಲಕ್ಷ ದಾಟಿದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ವೀರ ಬಾಲ ದಿವಸ ಆಚರಣೆಯ ಸಂದರ್ಭದಲ್ಲಿ ಮಾಡಿದ ಭಾಷಣದಲ್ಲಿ ಮೇರಾ ಯುವ ಭಾರತ್ (ಮೈ ಭಾರತ್) ಪೋರ್ಟಲ್ ನಲ್ಲಿ ನೋಂದಾಯಿಸಿಕೊಳ್ಳುವ ಮೂಲಕ ಈ ವ್ಯವಸ್ಥೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಯುವಕರಿಗೆ ಮನವಿ ಮಾಡಿದರು.

ವಿಕಸಿತ ಭಾರತದ ಕನಸುಗಳು ಮತ್ತು ಸಂಕಲ್ಪದೊಂದಿಗೆ ಯುವಕರನ್ನು ತಲುಪುವ ರಾಷ್ಟ್ರವ್ಯಾಪಿ ಅಭಿಯಾನದ ಬಗ್ಗೆ ಪ್ರಧಾನಮಂತ್ರಿ ಮೋದಿಯವರು ಯುವ ಪ್ರೇಕ್ಷಕರಿಗೆ ಸಂಕ್ಷಿಪ್ತವಾಗಿ ವಿವರಿಸಿದರು. ಮೈ-ಭಾರತ್ ಪೋರ್ಟಲ್ ನಲ್ಲಿ ನೋಂದಾಯಿಸಿಕೊಳ್ಳುವಂತೆ ಅವರು ಪ್ರತಿಯೊಬ್ಬ ಯುವಕರನ್ನು ಆಹ್ವಾನಿಸಿದರು. "ಈ ವೇದಿಕೆ ಈಗ ದೇಶದ ಯುವಕ-ಯುವತಿಯರಿಗೆ ದೊಡ್ಡ ವ್ಯವಸ್ಥೆಯಾಗುತ್ತಿದೆ" ಎಂದು ಅವರು ಹೇಳಿದರು. 

ಇತ್ತೀಚಿನ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾರತೀಯ ಕ್ರೀಡಾಪಟುಗಳ ಯಶಸ್ಸನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಹೆಚ್ಚಿನ ಕ್ರೀಡಾಪಟುಗಳು ಗ್ರಾಮೀಣ ಪ್ರದೇಶದ ಮಧ್ಯಮ ವರ್ಗದ ಕುಟುಂಬಗಳಿಂದ ಬಂದವರು ಎಂದು ತಿಳಿಸಿದರು. ಇದರ ಯಶಸ್ಸು ಖೇಲೋ ಇಂಡಿಯಾ ಅಭಿಯಾನಕ್ಕೆ ಸಲ್ಲುತ್ತದೆ.  ಇದು ಅವರ ಕೈಗೆಟಕುವಂತೆ ಅವರ ಮನೆಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ  ಉತ್ತಮ ಕ್ರೀಡೆ ಮತ್ತು ತರಬೇತಿ ಸೌಲಭ್ಯಗಳನ್ನು ಒದಗಿಸುವುದಲ್ಲದೆ, ಪಾರದರ್ಶಕ ಆಯ್ಕೆ ಪ್ರಕ್ರಿಯೆಯನ್ನು ಹೊಂದಿದೆ ಎಂದು ಅವರು ಹೇಳಿದರು. ಯುವಜನ ಕಲ್ಯಾಣಕ್ಕೆ ಆದ್ಯತೆ ನೀಡಿದ ಪರಿಣಾಮವಾಗಿ ಇದು ಸಾಧ್ಯವಾಗಿದೆ ಎಂದು ಪ್ರಧಾನಿ ಹೇಳಿದರು.

ದೇಶಾದ್ಯಂತದ ಯುವಕರು ಮೈ ಭಾರತ್ ಪೋರ್ಟಲ್ (https://www.mybharat.gov.in/) ನಲ್ಲಿ ನೋಂದಾಯಿಸಿಕೊಂಡು, ಈ ಪೋರ್ಟಲ್ ನಲ್ಲಿ ಲಭ್ಯವಿರುವ ವಿವಿಧ ಅವಕಾಶಗಳು ಮತ್ತು ಕಾರ್ಯಕ್ರಮಗಳಲ್ಲಿ ದಾಖಲಿಸಿಕೊಳ್ಳಬಹುದು.  

ಮೇರಾ ಯುವ ಭಾರತ್ (ಮೈ ಭಾರತ್) ಬಗ್ಗೆ:

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು 2023ರ ಅಕ್ಟೋಬರ್ 31ರಂದು ನವದೆಹಲಿಯ ಕಾರ್ತವ್ಯ ಪಥದಲ್ಲಿ ದೇಶದ ಯುವಕರಿಗಾಗಿ 'ಮೇರಾ ಯುವ ಭಾರತ್ (ಮೈ ಭಾರತ್)' ವೇದಿಕೆಗೆ ಚಾಲನೆ ನೀಡಿದರು.  ಇದನ್ನು ಯುವ ಅಭಿವೃದ್ಧಿ ಮತ್ತು ಯುವ-ನೇತೃತ್ವದ ಅಭಿವೃದ್ಧಿಗೆ ನಿರ್ಣಾಯಕ, ತಂತ್ರಜ್ಞಾನ-ಚಾಲಿತ ಆಯೋಜಕವಾಗಿ ರೂಪಿಸಲಾಗಿದೆ. ಯುವಕರ ಆಕಾಂಕ್ಷೆಗಳನ್ನು ಸಾಕಾರಗೊಳಿಸಲು ಮತ್ತು "ವಿಕಸಿತ ಭಾರತ" (ಅಭಿವೃದ್ಧಿ ಹೊಂದಿದ ಭಾರತ) ರಚನೆಗೆ ಕೊಡುಗೆ ನೀಡಲು ಅವರಿಗೆ ಸಮಾನ ಅವಕಾಶಗಳನ್ನು ಒದಗಿಸುವ ಗುರಿಯನ್ನು ಇದು ಹೊಂದಿದೆ. ಇದು ಡಿಜಿಟಲ್ ಸಂಪರ್ಕ ಸಾಧಿಸುವ ಅವಕಾಶದೊಂದಿಗೆ ದೈಹಿಕ ಚಟುವಟಿಕೆಯನ್ನು ಒಳಗೊಂಡಿರುವ 'ಫೈಗಿಟಲ್ ಪ್ಲಾಟ್ಫಾರ್ಮ್' ಆಗಿದೆ  (ಫಿಸಿಕಲ್ + ಡಿಜಿಟಲ್).

****



(Release ID: 1991025) Visitor Counter : 60