ಪಶು ಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಸಚಿವಾಲಯ

2023 ವರ್ಷಾಂತ್ಯದ ಅವಲೋಕನ: ಪಶು ಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯ (ಮೀನುಗಾರಿಕೆ, ಪಶು ಸಂಗೋಪನೆ ಮತ್ತು ಹೈನುಗಾರಿಕೆ) ಸಾಧನೆಗಳು 


ಒಟ್ಟಾರೆ ಕೃಷಿ ಮತ್ತು ಅದರ ಸಂಬಂಧಿ ವಲಯಕ್ಕೆ ಜಾನುವಾರು ಕೊಡುಗೆ, ಒಟ್ಟು ಮೌಲ್ಯ ವರ್ಧನೆ (ಜಿವಿಎ)  2014-15ರಲ್ಲಿ ಶೇ.24.38ರಷ್ಟು ಇದ್ದದ್ದು 2021-22ರಲ್ಲಿ ಶೇ.30.19ಕ್ಕೆ ಏರಿಕೆ

ಭಾರತ ಹಾಲು ಉತ್ಪಾದನೆಯಲ್ಲಿ ಮೊದಲನೇ ಸ್ಥಾನದಲ್ಲಿ, ಜಾಗತಿಕ ಹಾಲು ಉತ್ಪಾದನೆಗೆ ಶೇ.24.64ರಷ್ಟು ಕೊಡುಗೆ

ದೇಶದಲ್ಲಿ ಮೊಟ್ಟೆ ಉತ್ಪಾದನೆ 2014-15ರಲ್ಲಿ 78.48 ಬಿಲಿಯನ್ ಇದ್ದದ್ದು 2022-23ರಲ್ಲಿ 138.38 ಬಿಲಿಯನ್ ಗೆ ಏರಿಕೆ

ರಾಷ್ಟ್ರೀಯ ಗೋಕುಲ ಮಿಷನ್ ವ್ಯಾಪ್ತಿಗೆ 6,21 ಕೋಟಿ ಜಾನುವಾರುಗಳು, 7.96 ಕೋಟಿ ಜಾನುವಾರುಗಳಿಗೆ ಕೃತಕ ಗರ್ಭಧಾರಣೆ ಮತ್ತು 4 ಕೋಟಿಗೂ ಅಧಿಕ ರೈತರಿಗೆ ಲಾಭ 

ರಾಷ್ಟ್ರೀಯ ಹೈನುಗಾರಿಕೆ ಅಭಿವೃದ್ಧಿ ಕಾರ್ಯಕ್ರಮದಡಿ ಗ್ರಾಮಮಟ್ಟದಲ್ಲಿ ಹಾಲು ಸಂಗ್ರಹಣಾ ಕೇಂದ್ರಗಳಲ್ಲಿ 84.4 ಲಕ್ಷ ಲೀಟರ್ ಹಾಲು ಶೀಥಲ ಸಾಮರ್ಥ್ಯದ 3864 ಬೃಹತ್ ಮಿಲ್ಕ್ ಕೂಲರ್ ಗಳ ಸ್ಥಾಪನೆ

ಎಎಚ್ ಡಿ ರೈತರಿಗಾಗಿ 29.87 ಲಕ್ಷಕ್ಕೂ ಅಧಿಕ ಹೊಸ ಕೆಸಿಸಿಗಳ ಅನುಮೋದನೆ

Posted On: 20 DEC 2023 2:41PM by PIB Bengaluru

ಜಾನುವಾರು ವಲಯ

ಜಾನುವಾರು ವಲಯ2014-15 ರಿಂದ 2021-22ರವರೆಗೆ ಸಮಗ್ರ ವಾರ್ಷಿಕ ಬೆಳವಣಿಗೆ ದರ ಶೇ.13.36 ರಷ್ಟು ಬೆಳವಣಿಗೆಯಾಗಿದೆ. ಒಟ್ಟಾರೆ ಕೃಷಿ ಮತ್ತು ಅದರ ಸಂಬಂಧಿ ವಲಯಕ್ಕೆ ಒಟ್ಟು ಮೌಲ್ಯ ವರ್ಧನೆ (ಜಿವಿಎ)  2014-15ರಲ್ಲಿ ಶೇ. 24.38 ರಷ್ಟು ಇದ್ದ್ದು 2021-22ರಲ್ಲಿ ಶೇ. 30.19ಕ್ಕೆ ಏರಿಕೆಯಾಗಿದೆ.2021-22ರಲ್ಲಿ ಒಟ್ಟು ಜಿವಿಎಗೆ ಜಾನುವಾರು ವಲಯ ಶೇ. 5.73ರಷ್ಟು ಕೊಡುಗೆ ನೀಡಿದೆ.

ಜಾನುವಾರು ಸಂಖ್ಯೆ

20 ನೇ ಜಾನುವಾರು ಗಣತಿಯ ಪ್ರಕಾರ ದೇಶದಲ್ಲಿ ಸುಮಾರು 303.76 ಮಿಲಿಯನ್ ಗೋವುಗಳು (ದನ, ಎಮ್ಮೆ, ಮಿಥುನ್ ಮತ್ತು ಯಾಕ್), 74.26 ಮಿಲಿಯನ್ ಕುರಿಗಳು, 148.88 ಮಿಲಿಯನ್ ಮೇಕೆಗಳು, 9.06 ಮಿಲಿಯನ್ ಹಂದಿಗಳು ಮತ್ತು ಸುಮಾರು 851.81 ಮಿಲಿಯನ್ ಕೋಳಿಗಳಿವೆ.

ಹೈನುಗಾರಿಕೆ ವಲಯ

ಹೈನುಗಾರಿಕೆಯು(ಡೈರಿ) ರಾಷ್ಟ್ರೀಯ ಆರ್ಥಿಕತೆಯ ಶೇಕಡ 5 ರಷ್ಟು ಕೊಡುಗೆ ನೀಡುತ್ತಿರುವ ಏಕೈಕ ಅತಿದೊಡ್ಡ ಕೃಷಿ ಉತ್ಪನ್ನವಾಗಿದೆ ಮತ್ತು 8 ಕೋಟಿಗೂ ಹೆಚ್ಚು ರೈತರಿಗೆ ನೇರ ಉದ್ಯೋಗ ನೀಡುತ್ತಿದೆ. ಜಾಗತಿಕ ಹಾಲು ಉತ್ಪಾದನೆಯಲ್ಲಿ ಶೇ. 24.64ರಷ್ಟು ಕೊಡುಗೆ ನೀಡುತ್ತಿರುವ ಭಾರತವು ಹಾಲು ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದೆ. ಹಾಲಿನ ಉತ್ಪಾದನೆಯು ಕಳೆದ 9 ವರ್ಷಗಳಲ್ಲಿ ಅಂದರೆ 2014-15ರಲ್ಲಿ 146.31 ದಶಲಕ್ಷ ಟನ್‌ಗಳಿಂದ 2022-23ರಲ್ಲಿ 230.58 ದಶಲಕ್ಷ ಟನ್‌ಗಳಿಗೆ, ಅಂದರೆ ಶೇ. 5.85 ರಷ್ಟು ಸಂಯುಕ್ತ ವಾರ್ಷಿಕ ಬೆಳವಣಿಗೆ ದರದಲ್ಲಿ (ಸಿಜಿಎಆರ್) ಬೆಳೆಯುತ್ತಿದೆ.

2021ನೇ ವರ್ಷಕ್ಕೆ ಹೋಲಿಸಿದರೆ 2022ರಲ್ಲಿ ವಿಶ್ವ ಹಾಲು ಉತ್ಪಾದನೆಯು ಶೇ. 0.51 ರಷ್ಟು ಹೆಚ್ಚಾಗಿದೆ (ಫುಡ್ ಔಟ್‌ಲುಕ್ ಜೂನ್ 2023). 2022 ರಲ್ಲಿ ದಿನಕ್ಕೆ ಸರಾಸರಿ 322 ಗ್ರಾಂಗಳಷ್ಟು ಹಾಲಿನ ಪ್ರತಿ ವ್ಯಕ್ತಿಗೆ 2022-23ರಲ್ಲಿ ಭಾರತದಲ್ಲಿ ದಿನಕ್ಕೆ 459 ಗ್ರಾಂ ಹಾಲಿನ ಲಭ್ಯತೆ ಇದೆ (ಆಹಾರ ಔಟ್‌ಲುಕ್ ಜೂನ್ 2023)

ಮೊಟ್ಟೆ ಮತ್ತು ಮಾಂಸ ಉತ್ಪಾದನೆ

  1. ಆಹಾರ ಮತ್ತು ಕೃಷಿ ಸಂಸ್ಥೆಯ ಕಾರ್ಪೊರೇಟ್ ಸಾಂಖ್ಯಿಕ ದತ್ತಾಂಶ (FAOSTAT) ಉತ್ಪಾದನಾ ಡೇಟಾ (2021) ಪ್ರಕಾರ  ಭಾರತವು ಮೊಟ್ಟೆ ಉತ್ಪಾದನೆಯಲ್ಲಿ 2 ನೇ ಸ್ಥಾನದಲ್ಲಿದೆ ಮತ್ತು ವಿಶ್ವದಲ್ಲಿ ಮಾಂಸ ಉತ್ಪಾದನೆಯಲ್ಲಿ 5ನೇ ಸ್ಥಾನದಲ್ಲಿದೆ. ದೇಶದಲ್ಲಿ ಮೊಟ್ಟೆ ಉತ್ಪಾದನೆಯು 2014-15ರಲ್ಲಿ 78.48 ಶತಕೋಟಿಯಿಂದ 2022-23ರಲ್ಲಿ 138.38 ಬಿಲಿಯನ್‌ಗಳಿಗೆ ಏರಿಕೆಯಾಗಿದೆ. ದೇಶದಲ್ಲಿ ಮೊಟ್ಟೆ ಉತ್ಪಾದನೆಯು ಕಳೆದ 9 ವರ್ಷಗಳಲ್ಲಿ ಶೇ. 7.35 ರ ಸಂಯುಕ್ತ ವಾರ್ಷಿಕ ಬೆಳವಣಿಗೆ ದರದಲ್ಲಿ (ಸಿಎಜಿಆರ್) ಬೆಳೆಯುತ್ತಿದೆ. ತಲಾವಾರು ಮೊಟ್ಟೆಯ ಲಭ್ಯತೆಯು 2014-15ರಲ್ಲಿ 62 ಮೊಟ್ಟೆಗಳಿಗೆ ಹೋಲಿಸಿದರೆ 2022-23ರಲ್ಲಿ ವಾರ್ಷಿಕ 101 ಮೊಟ್ಟೆಗಳಷ್ಟಿದೆ. ದೇಶದಲ್ಲಿ ಮಾಂಸ ಉತ್ಪಾದನೆಯು 2014-15ರಲ್ಲಿ 6.69 ದಶಲಕ್ಷ ಟನ್‌ಗಳಿಂದ 2022-23ರಲ್ಲಿ 9.77 ದಶಲಕ್ಷ ಟನ್‌ಗಳಿಗೆ ಏರಿಕೆಯಾಗಿದೆ.

ಪಶು ಸಂಗೋಪನೆ ಮತ್ತು ಹೈನುಗಾರಿಕೆ ಯೋಜನೆಗಳು;

ರಾಷ್ಟ್ರೀಯ ಗೋಕುಲ್ ಮಿಷನ್ : ಸ್ಥಳೀಯ ಗೋವಿನ ತಳಿಗಳ ಅಭಿವೃದ್ಧಿ ಮತ್ತು ಸಂರಕ್ಷಣೆಗಾಗಿ.

ರಾಷ್ಟ್ರೀಯ ಗೋಕುಲ್ ಯೋಜನೆಯ ಪ್ರಮುಖ ಸಾಧನೆಗಳು ಮತ್ತು ಮಧ್ಯಪ್ರವೇಶ ಉಪಕ್ರಮಗಳು

  • ರಾಷ್ಟ್ರವ್ಯಾಪಿ ಕೃತಕ ಗರ್ಭಧಾರಣೆ ಕಾರ್ಯಕ್ರಮ- ಈ ದಿನಾಂಕದವರೆಗೆ 6.21 ಜಾನುವಾರುಗಳ ಇದರ ವ್ಯಾಪ್ತಿಗೆ ಸೇರಿದ್ದು, 7.96 ಕೋಟಿ ಜಾನುವಾರುಗಳಿಗೆ ಕೃತಕ ಗರ್ಭಧಾರಣೆ ಮಾಡಲಾಗಿದೆ ಮತ್ತು 4,118 ಕೋಟಿ ರೈತರು ಕಾರ್ಯಕ್ರಮದಿಂದ ಲಾಭ ಪಡೆದಿದ್ದಾರೆ.
  • ದೇಶದಲ್ಲಿ ಐವಿಎಫ್ ತಂತ್ರಜ್ಞಾನಕ್ಕೆ ಉತ್ತೇಜನ:: ಇಂದಿನವರೆಗೆ 19124 ಕಾರ್ಯಸಾಧ್ಯವಾದ ಭ್ರೂಣಗಳನ್ನು ಉತ್ಪಾದಿಸಲಾಗಿದೆ ಈ 10331 ಭ್ರೂಣಗಳನ್ನು ವರ್ಗಾಯಿಸಲಾಗಿದೆ ಮತ್ತು 1621 ಕರುಗಳು ಕಾರ್ಯಕ್ರಮದಡಿಯಲ್ಲಿ ಜನಿಸಿವೆ.
  • ಲಿಂಗ ವಿಂಗಡಣೆಯ ವೀರ್ಯ ಉತ್ಪಾದನೆ: ದೇಶದಲ್ಲಿ ಶೇ. 90ರಷ್ಟು ನಿಖರತೆಯವರೆಗೆ ಹೆಣ್ಣು ಕರುಗಳ ಉತ್ಪಾದನೆಗಾಗಿ ಲಿಂಗ ವಿಂಗಡಣೆಯ ವೀರ್ಯ ಉತ್ಪಾದನೆಯನ್ನು ಪರಿಚಯಿಸಲಾಗಿದೆ. ಕಾರ್ಯಕ್ರಮದಡಿಯಲ್ಲಿ,  750 ರೂ. ಸಬ್ಸಿಡಿ ದರದಲ್ಲಿ ಅಥವಾ ಖಚಿತವಾದ ಗರ್ಭಧಾರಣೆಯ ಮೇಲೆ ವಿಂಗಡಿಸಲಾದ ವೀರ್ಯದ ವೆಚ್ಚದ ಶೇ. 50ರಷ್ಟು ಸಹಾಯಧನ ರೈತರಿಗೆ ಲಭ್ಯವಿದೆ.
  • ಡಿಎನ್ಎ ಆಧರಿತ ಜೀನೋಮಿಕ್ ಆಯ್ಕೆ: ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯು ದೇಶೀಯ ತಳಿಗಳ ಆಯ್ಕೆಗಾಗಿ INDUSCHIP ಅನ್ನು ಅಭಿವೃದ್ಧಿಪಡಿಸಿದೆ ಮತ್ತು ಉಲ್ಲೇಖಿತ ಸಂಖ್ಯೆಯನ್ನು ಸೃಷ್ಟಿಸಲು ಚಿಪ್ ಅನ್ನು ಬಳಸಿಕೊಂಡು 28315 ಪ್ರಾಣಿಗಳನ್ನು ಜೀನೋಟೈಪ್ ಮಾಡಲಾಗಿದೆ. ವಿಶ್ವದಲ್ಲಿ ಇದೇ ಮೊದಲ ಬಾರಿಗೆ, ಎಮ್ಮೆಗಳ ಜೀನೋಮಿಕ್ ಆಯ್ಕೆಗಾಗಿ BUFFCHIP ಅನ್ನು ಅಭಿವೃದ್ಧಿಪಡಿಸಲಾಗಿದೆ ಮತ್ತು ಈವರೆಗೆ, ಉಲ್ಲೇಖಿತ ಸಂಖ್ಯೆಯನ್ನು ತಲುಪಲು 8000 ಎಮ್ಮೆಗಳನ್ನು ಜೀನೋಟೈಪ್ ಮಾಡಲಾಗಿದೆ.
  • ಪ್ರಾಣಿಗಳ ಗುರುತಿಸುವಿಕೆ ಮತ್ತು ಪತ್ತೆಹಚ್ಚುವಿಕೆ: 53.5 ಕೋಟಿ ಜಾನುವಾರುಗಳನ್ನು (ದನ, ಎಮ್ಮೆ, ಕುರಿ, ಮೇಕೆಗಳು ಮತ್ತು ಹಂದಿಗಳು) ಗುರುತಿಸಲಾಗುತ್ತಿದೆ ಮತ್ತು 12 ಅಂಕಿಗಳ ಯುಐಡಿ ಸಂಖ್ಯೆಯೊಂದಿಗೆ ಪಾಲಿಯುರೆಥೇನ್ ಟ್ಯಾಗ್‌ಗಳನ್ನು ಬಳಸಿ ನೋಂದಾಯಿಸಲಾಗುತ್ತಿದೆ.
  • ಸಂತಾನ ಪರೀಕ್ಷೆ ಮತ್ತು ವಂಶಾವಳಿಯ ಆಯ್ಕೆ: ಗಿರ್, ಶೈವಾಲ್ ದೇಶಿಯ ತಳಿಯ ದನ ಮತ್ತು ಮುರ್ರಾ, ಮೆಹ್ಸಾನಾ ದೇಶೀಯ ತಳಿಯ ಎಮ್ಮೆಗಳಿಗೆ ಸಂತಾನ ಪರೀಕ್ಷೆ ಕಾರ್ಯಕ್ರಮವನ್ನು ಜಾರಿಗೊಳಿಸಲಾಗಿದೆ.
  • ರಾಷ್ಟ್ರೀಯ ಡಿಜಿಟಲ್ ಜಾನುವಾರು ಮಿಷನ್ : ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯು ಎನ್‌ಡಿಡಿಬಿಯೊಂದಿಗೆ “ರಾಷ್ಟ್ರೀಯ ಡಿಜಿಟಲ್ ಜಾನುವಾರು ಮಿಷನ್ (ಎನ್‌ಡಿಎಲ್‌ಎಂ) ಅನ್ನು ಕೈಗೆತ್ತಿಕೊಂಡಿದೆ. ಇದು ಪ್ರಾಣಿಗಳ ಫಲವತ್ತತೆಯನ್ನು ಸುಧಾರಿಸಲು, ಪ್ರಾಣಿಗಳು ಮತ್ತು ಮನುಷ್ಯರ ಮೇಲೆ ಪರಿಣಾಮ ಬೀರುವ ರೋಗಗಳನ್ನು ನಿಯಂತ್ರಿಸಲು, ದೇಶೀಯ ಮತ್ತು ರಫ್ತು ಮಾರುಕಟ್ಟೆಗಳಿಗೆ ಗುಣಮಟ್ಟದ ಜಾನುವಾರುಗಳನ್ನು ಖಾತ್ರಿಪಡಿಸಿಕೊಳ್ಳಲು ಸಹಾಯ ಮಾಡುತ್ತದೆ.
  • ತಳಿ ವೃದ್ಧಿ ಫಾರ್ಮ್‌ಗಳು: ತಳಿ ವೃದ್ಧಿಗೊಳಿಸುವ ಫಾರ್ಮ್‌ಗಳನ್ನು ಸ್ಥಾಪಿಸಲು ಯೋಜನೆಯಡಿಯಲ್ಲಿ ಖಾಸಗಿ ಉದ್ಯಮಿಗಳಿಗೆ ಬಂಡವಾಳ ವೆಚ್ಚದಲ್ಲಿ (ಭೂಮಿ ವೆಚ್ಚವನ್ನು ಹೊರತುಪಡಿಸಿ) ಶೇ. 50ರಷ್ಟು (ಪ್ರತಿ ಫಾರ್ಮ್‌ಗೆ ರೂ 2 ಕೋಟಿ ವರೆಗೆ) ಸಹಾಯಧನವನ್ನು ನೀಡಲಾಗುತ್ತದೆ. ಈ ದಿನಾಂಕದವರೆಗೆ ಇಲಾಖೆಯು 111 ತಳಿ ವೃದ್ಧಿ ಫಾರ್ಮ್ ಗಳ ಸ್ಥಾಪನೆಗೆ ಅನುಮೋದನೆ ನೀಡಿದೆ.

ಹೈನುಗಾರಿಕೆ ಅಭಿವೃದ್ಧಿಗೆ ರಾಷ್ಟ್ರೀಯ ಕಾರ್ಯಕ್ರಮ:  

ಇಲಾಖೆ 2014ರಿಂದ ದೇಶಾದ್ಯಂತ ಕೇಂದ್ರದ ಯೋಜನೆ- “ಡೈರಿ ಅಭಿವೃದ್ಧಿಗಾಗಿ ರಾಷ್ಟ್ರೀಯ ಕಾರ್ಯಕ್ರಮ (ಎನ್ ಪಿಡಿಡಿ)’’ ಜಾರಿಗೊಳಿಸಿದೆ. ಜುಲೈ 2021 ರಲ್ಲಿ, ಹಾಲು ಮತ್ತು ಹಾಲಿನ ಉತ್ಪನ್ನಗಳ ಗುಣಮಟ್ಟವನ್ನು ಹೆಚ್ಚಿಸಲು ಮತ್ತು 2021-22 ರಿಂದ 2025-26 ರವರೆಗೆ ಅನುಷ್ಠಾನಕ್ಕೆ ಸಂಘಟಿತ ಸಂಗ್ರಹಣೆ, ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ಮಾರುಕಟ್ಟೆಯ ಪಾಲನ್ನು ಹೆಚ್ಚಿಸುವ ಗುರಿಯೊಂದಿಗೆ ಡೈರಿ ಅಭಿವೃದ್ಧಿಗಾಗಿ ರಾಷ್ಟ್ರೀಯ ಕಾರ್ಯಕ್ರಮ (ಎನ್ ಪಿಡಿಡಿ) ಯೋಜನೆಯನ್ನು ಪುನರ್ ರಚಿಸಲಾಗಿದೆ.

ಈ ಯೋಜನೆ ಎರಡು (2) ಅಂಶಗಳನ್ನು ಒಳಗೊಂಡಿದೆ :-

ಅಂಶ-ಎ: ಶೀಥಲ ಸರಣಿ ಮೂಲಸೌಕರ್ಯ, ರೈತರು ಮತ್ತು ಗ್ರಾಹಕರ ನಡುವೆ ಸಂಯೋಜನೆ ಸೇರಿದಂತೆ ಗುಣಮಟ್ಟದ ಹಾಲಿಗೆ ಮೂಲಸೌಕರ್ಯ ಸೃಷ್ಟಿ ಮತ್ತು ಬಲವರ್ಧನೆ ಸೇರಿದೆ.

ಪ್ರಗತಿ : 2014-15ರಿಂದ 2023-24 (30.11.2023) ರವರೆಗೆ 3311.10 ಕೋಟಿ ರೂ. ಒಟ್ಟಾರೆ ವೆಚ್ಚದ (ಕೇಂದ್ರದ ಪಾಲು 2479.06 ಕೋಟಿ) 28 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳ 195 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಆ ಪೈಕಿ 30.11.2023ರವರೆಗೆ ಈ ಯೋಜನೆಗಳನ್ನು ಜಾರಿಗೊಳಿಸಲು ಒಟ್ಟು 1824.60 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ.  1429.62 ಕೋಟಿ ರೂ.ಗಳನ್ನು ಅನುಮೋದಿಸಿದ ಯೋಜನೆಗಳಿಗಾಗಿ ಬಳಕೆ ಮಾಡಿಕೊಳ್ಳಲಾಗಿದೆ.

 

ಭೌತಿಕ ಸಾಧನೆಗಳು

  • ಹಾಲು ಉತ್ಪಾದನಾ ಸಹಕಾರ ಸಂಘಗಳಿಂದ ಹೊಸದಾಗಿ 15.82 ಲಕ್ಷ ರೈತರಿಗೆ ಸದಸ್ಯತ್ವದ ಪ್ರಯೋಜನ ನೀಡಲಾಗಿದೆ ಮತ್ತು ಈ ಯೋಜನೆಗಳಲ್ಲಿ ಹೆಚ್ಚುವರಿಯಾಗಿ 57.31 ಲಕ್ಷ ಲೀಟರ್ ಹಾಲು ಖರೀದಿಸಲಾಗುತ್ತಿದೆ.
  • 82 ಡೈರಿ ಘಟಕಗಳನ್ನು ಬಲವರ್ಧನೆಗೊಳಿಸಲಾಗಿದ್ದು, ಅದರಿಂದ ಹೆಚ್ಚುವರಿಯಾಗಿ ಪ್ರತಿ ದಿನ 22.30 ಲಕ್ಷ ಲೀಟರ್ ಹೆಚ್ಚುವರಿ/ಹೊಸ ಹಾಲು ಸಂಸ್ಕರಣಾ ಸಾಮರ್ಥ್ಯ ಸೃಷ್ಟಿಸಲಾಗಿದೆ.
  • ಹಾಲು ಉತ್ಪಾದಕರಿಂದ ಸ್ವೀಕರಿಸಿದ ಹಾಲನ್ನು ತಕ್ಷಣವೇ ಶೀಥಲೀಕರಣ ಮಾಡಲು ಗ್ರಾಮ ಮಟ್ಟದ ಹಾಲು ಸಂಗ್ರಹಣಾ ಕೇಂದ್ರದಲ್ಲಿ 84.4 ಲಕ್ಷ ಲೀಟರ್ ಶೀಥಲ ಸಾಮರ್ಥ್ಯದ 3864 ಬೃಹತ್ ಮಿಲ್ಕ್ ಕೂಲರ್ ಗಳನ್ನು ಅಳವಡಿಸಲಾಗಿದೆ ಹಾಗೂ ಇದರಿಂದ ರೈತರಿಗೆ ಮಾರುಕಟ್ಟೆ ಲಭ್ಯವಾಗುವುದಲ್ಲದೆ, ಹಾಲು ಹಾಳಾಗುವುದು ತಗ್ಗಲಿದೆ.
  • ಹಾಲು ಪರೀಕ್ಷೆ ಮತ್ತು ರೈತರಿಗೆ ಹಣ ಪಾವತಿಯಲ್ಲಿ ಪಾರದರ್ಶಕತೆಯನ್ನು ತರಲು 5205 ಗ್ರಾಮ ಮಟ್ಟದ ಹಾಲು ಉತ್ಪಾದನಾ ಸಹಕಾರ ಸಂಘಗಳಲ್ಲಿ ವಿದ್ಯುನ್ಮಾನ ಹಾಲು ಕಲಬೆರಕೆ ಪರೀಕ್ಷಾ ಯಂತ್ರಗಳನ್ನು ಅಳವಡಿಸಲಾಗಿದೆ ಮತ್ತು 30074 ಸ್ವಯಂಚಾಲಿತ ಹಾಲು ಸಂಗ್ರಹಣಾ ಘಟಕ ಮತ್ತು ದತ್ತಾಂಶ ಸಂಸ್ಕರಣೆ ಮತ್ತು ಹಾಲು ಸಂಸ್ಕರಣಾ ಘಟಕಗಳನ್ನು ಅಳವಡಿಸಲಾಗಿದೆ.
  • ಈ ಕಾರ್ಯಕ್ರಮದಡಿ 233 ಡೈರಿ ಘಟಕ ಪ್ರಯೋಗಾಲಯಗಳನ್ನು(ಸೌಕರ್ಯ ಇಲ್ಲದಿರುವಂತಹವು) ಅವುಗಳಿಗೆ ಕಲಬೆರಕೆಯನ್ನು ಪತ್ತೆಹಚ್ಚಲು ಸಜ್ಜುಗೊಳಿಸಲಾಗಿದೆ ಮತ್ತು 15 ರಾಜ್ಯಗಳಲ್ಲಿ ತಲಾ ಒಂದೊಂದು ರಾಜ್ಯ ಕೇಂದ್ರೀಯ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿದೆ.

ಎನ್ ಪಿಡಿಡಿಎ ಅಂಶ-ಬಿ: ಸಹಕಾರ ಸಂಘಗಳ ಮೂಲಕ ಹೈನುಗಾರಿಕೆ (ಡಿಟಿಸಿ) :

ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟವನ್ನು ಹೆಚ್ಚಿಸಲು, ಆ ಮೂಲಕ ರೈತರಿಗೆ ಸಂಘಟಿತ ಮಾರುಕಟ್ಟೆ ಲಭ್ಯವಾಗುವಂತೆ ಮಾಡಲು ಡೈರಿ ಸಂಸ್ಕರಣಾ ಚಟುವಟಿಕೆಗಳನ್ನು ಉನ್ನತೀಕರಿಸಿಸುವುದು ಮತ್ತು ಮಾರುಕಟ್ಟೆ ಮೂಲಸೌಕರ್ಯಗಳನ್ನು ವೃದ್ಧಿಸುವ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದರಿಂದ ಹಾಲು ಉತ್ಪಾದಕರ ಮಾಲಿಕತ್ವದ ಸಂಸ್ಥೆಗಳ ಸಾಮರ್ಥ್ಯವನ್ನು ವೃದ್ಧಿಸಲಾಗಿದೆ ಹಾಗೂ ಯೋಜನಾ ವಲಯದಲ್ಲಿ ಹಾಲು ಉತ್ಪಾದಕರಿಗೆ ಸಿಗುತ್ತಿರುವ ಲಾಭದ ಪ್ರಮಾಣ ಹೆಚ್ಚಾಗಿದೆ.

ಪ್ರಗತಿ:

  • ಡಿಟಿಸಿ ಎನ್ ಪಿ ಡಿಡಿ  ಬಿ ಅಂಶದಡಿ ಒಟ್ಟು 1130.63 ಕೋಟಿ ರೂ. ವೆಚ್ಚದ 705.53 ಕೋಟಿ ರೂ. ಸಾಲದ ಭಾಗವಿರುವ ಒಟ್ಟು 22 ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು, ಅದರಲ್ಲಿ ಅನುದಾನದ ಪಾಲು 329.70 ಕೋಟಿ ರೂ. ಮತ್ತು ಉತ್ಪಾದನಾ ಸಂಸ್ಥೆಗಳ ಪಾಲು 95.40 ಕೋಟಿ ರೂ. ಈ ಯೋಜನೆಗಳ ಅನುಷ್ಠಾನಕ್ಕೆ ಉತ್ಪಾದನಾ ಸಂಸ್ಥೆಗಳಿಗೆ ರಾಷ್ಟ್ರೀಯ ಡೈರಿ ಅಭಿವೃದ್ಧಿ ನಿಗಮದಿಂದ ಒಟ್ಟು 74.025 ಕೋಟಿ ರೂ. ಅನುದಾನ ಮತ್ತು 10.00 ಕೋಟಿ ರೂ. ಸಾಲ ಬಿಡುಗಡೆ ಮಾಡಲಾಗಿದೆ.
  • ಯೋಜನಾ ಅವಧಿ ಮುಕ್ತಾಯದ ವೇಳೆಗೆ 7703 ಹೊಸ ಹಾಲು ಸಂಗ್ರಹಾ ಸೊಸೈಟಿಗಳನ್ನು ಸೃಷ್ಟಿಸಲಾಗಿದ್ದು, ಅವುಗಳಲ್ಲಿ ಹೆಚ್ಚುವರಿಯಾಗಿ 279,000 ರೈತರು ನೋಂದಣಿಯಾಗಿದ್ದಾರೆ.(ಶೇ.50ರಷ್ಟು ಮಹಿಳೆಯರು) ಇದರಿಂದ ಪ್ರತಿ ದಿನ ಹೆಚ್ಚುವರಿಯಾಗಿ 13.41 ಲಕ್ಷ ಲೀಟರ್ ಹಾಲು ಖರೀದಿ ಸೃಷ್ಟಿಯಾಗಿದೆ. ಮೌಲ್ಯವರ್ಧಿತ ಉತ್ಪನ್ನಗಳ ಸಾಮರ್ಥ್ಯ ಕೂಡ 350 ಎಂಟಿಪಿಡಿ ಹಾಗೂ ಪಶು ಆಹಾರ ಉತ್ಪಾದನಾ ಸಾಮರ್ಥ್ಯ 486 ಎಂಟಿಪಿಡಿ ಹೆಚ್ಚುವರಿಯಾಗಿ ಸೇರ್ಪಡೆಯಾಗಿದೆ.

 

ಡೈರಿ ಚಟುವಟಿಕೆಗಳಲ್ಲಿ ತೊಡಗಿರುವ ಹಾಲು ಉತ್ಪಾದನಾ ಸಹಕಾರ ಸಂಘಗಳು ಮತ್ತು ರೈತ ಉತ್ಪಾದಕ ಸಂಸ್ಥೆಗಳಿಗೆ ಬೆಂಬಲ (SDCFPO):

ಪ್ರಗತಿ/ಸಾಧನೆ(30.11.2023ರವರೆಗೆ) :

  • ಒಟ್ಟಾರೆ ಬಡ್ಡಿ ವಿನಾಯಿತಿ ಮೊತ್ತ ಶೇ.2ರಷ್ಟು ಬಿಡುಗಡೆ: 619.43 ಕೋಟಿ ರೂ.
  • ಸಹಕಾರಿಗಳು / ಎಫ್ ಪಿಒಗಳಿಗೆ ನೀಡಲಾಗಿರುವ ಒಟ್ಟು ದುಡಿಯುವ ಬಂಡವಾಳದ ಸಾಲ: 47183.76 ಕೋಟಿ ರೂ.
  • ಒಟ್ಟು ಸಹಕಾರಿಗಳು ಮತ್ತು ಉತ್ಪಾದಕರ ಸಂಸ್ಥೆಗಳಿಗೆ ನೆರವು ನೀಡಿರುವುದು: 62ಕ್ಕೆ
  • ಬಡ್ಡಿ ವಿನಾಯಿತಿ ಮೊತ್ತು ಒಟ್ಟು ಬಿಡುಗಡೆ: 453.74 ಕೋಟಿ ರೂ.(243.74 ಕೋಟಿ ರೂ. ಮಾಮೂಲಿ ಬಡ್ಡಿ ವಿನಾಯಿತಿ ಮತ್ತು 210.00 ಕೋಟಿ ರೂ. ಹೆಚ್ಚುವರಿ ಬಡ್ಡಿ ವಿನಾಯಿತಿ ಮೊತ್ತ)

 

ಡೈರಿ ಸಂಸ್ಕರಣೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಧಿ (ಡಿಐಡಿಎಫ್):

ಡೈರಿ ಸಂಸ್ಕರಣೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಧಿ(ಡಿಐಡಿಎಫ್) ಕುರಿತ  ಈವರೆಗಿನ ಮಾಹಿತಿ

ಸಾಧನೆ : 2023ರ ಸೆಪ್ಟೆಂಬರ್ ವೇಳೆಗೆ 12 ರಾಜ್ಯಗಳ 37 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಅದರ ಹಣಕಾಸು ಭೌತಿಕ ವಿವರಗಳು ಈ ಕೆಳಗಿನಂತಿವೆ.

ಎ. ಹಣಕಾಸು (2023ರ ಸೆಪ್ಟಂಬರ್ ವರೆಗೆ ):

  1. ಒಟ್ಟು ಅನುಮೋದಿಸಿರುವ ಯೋಜನಾ ಮೊತ್ತ: 6776.87 ಕೋಟಿ ರೂ.
  2. ಸಾಲ ಮಂಜೂರು: 4575.22 ಕೋಟಿ ರೂ.
  3. ಇಇಬಿ ಗಳಿಗೆ ಸಾಲ ಸಂಸ್ಥೆಗಳಿಂದ ಸಾಲ ಮಂಜೂರು: 2513.38
  4. ಭಾರತ ಸರ್ಕಾರ ನಬಾರ್ಡ್ ಗೆ ಬಿಡುಗಡೆ ಮಾಡಿರುವ ಬಡ್ಡಿ ವಿನಾಯಿತಿ: 88.11 ಕೋಟಿ ರೂ.

ಬಿ. ಭೌತಿಕ (2023ರ ಸೆಪ್ಟಂಬರ್ ವರೆಗೆ):

  1. ಹಾಲು ಸಂಸ್ಕರಣಾ ಸಾಮರ್ಥ್ಯ ಸ್ಥಾಪನೆ:: 69.95 ಎಲ್ ಎಲ್ ಪಿಡಿ
  2. ಹಾಲು ಶೀಥಲ ಸಾಮರ್ಥ್ಯ ಸ್ಥಾಪನೆ 3.40 ಎಲ್ ಎಲ್ ಪಿಡಿ
  3. ಡೈರಿ ಸಾಮರ್ಥ್ಯ ಸ್ಥಾಪನೆ: 265ಎಂಟಿಪಿಡಿ
  4. ವಿಎಪಿ ಸಾಮರ್ಥ್ಯ ಸ್ಥಾಪನೆ: 11.74 ಎಲ್ ಎಲ್ ಪಿಡಿ (ಹಾಲಿಗೆ ಸಮನಾದ)

ರಾಷ್ಟ್ರೀಯ ಜಾನುವಾರು ಮಿಷನ್ :

ಈ ಯೋಜನೆಯಡಿ ಉದ್ಯೋಗ ಸೃಷ್ಟಿ, ಉದ್ಯಮಶೀಲತೆ ಅಭಿವೃದ್ಧಿ ಪ್ರತಿ ಪ್ರಾಣಿಯ ಫಲವತ್ತತೆ ಹೆಚ್ಚಳಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಮತ್ತು ಆ ಮೂಲಕ ಮಾಂಸ, ಮೇಕೆ ಹಾಲು, ಮೊಟ್ಟೆ ಮತ್ತು ಉಣ್ಣೆ ಉತ್ಪಾದನೆಯನ್ನು ಹೆಚ್ಚಿಸುವ ಗುರಿ ಹೊಂದಲಾಗಿದೆ. ರಾಷ್ಟ್ರೀಯ ಜಾನುವಾರು ಮಿಷನ್ ಅಡಿ ಇದೆ ಮೊದಲ ಬಾರಿಗೆ ಕೇಂದ್ರ ಸರ್ಕಾರ ಸಾರ್ವಜನಿಕರು, ಎಸ್ಎಚ್ ಜಿಗಳು, ಜೆಎಲ್ ಜಿಗಳು, ಎಫ್ ಪಿಒಗಳು, ಸೆಕ್ಷನ್ 8 ಕಂಪನನಿಗಳು, ಎಫ್ ಸಿಒಗಳಿಗೆ ಪೌಲ್ಟ್ರಿ ಫಾರಂಗಳು ಹಾಗೂ ಹ್ಯಾಚರಿಗಳಿಗಳು ಮತ್ತು ಬ್ರೂದರ್ ಮದರ್ ಘಟಕಗಳನ್ನು ತೆರೆಯಲು, ಕುರಿ ಮತ್ತು ಮೇಕೆ ತಳಿ ವೃದ್ಧಿ, ಹಂದಿ ಫಾರಂ ಮತ್ತು ಆಹಾರ ಹಾಗೂ ಮೇವು ಘಟಕಗಳು ಶೇ.50ರಷ್ಟು ನೇರ ಸಬ್ಸಿಡಿಯನ್ನು ನೀಡುತ್ತಿದೆ. ಈವರೆಗೆ ಡಿಎಎಚ್ ಡಿ ಅಡಿ 1160 ಅರ್ಜಿಗಳಿಗೆ ಅನುಮೋದನೆ ನೀಡಲಾಗಿದೆ ಮತ್ತು 498 ಫಲಾನುಭವಿಗಳಿಗೆ 105.99 ಕೋಟಿ ರೂ.ಗಳ ಸಬ್ಸಿಡಿ ಬಿಡುಗಡೆ ಮಾಡಲಾಗಿದೆ.  

ಪಶು ಸಂಗೋಪನೆ ಮೂಲಸೌಕರ್ಯ ಅಭಿವೃದ್ಧಿ ನಿಧಿ:

ವೈಯಕ್ತಿಕ ಉದ್ದಿಮೆದಾರರು, ಖಾಸಗಿ ಕಂಪನಿಗಳು, ಎಂಎಸ್ಎಂಇಗಳು, ರೈತ ಉತ್ಪಾದನಾ ಸಂಸ್ಥೆಗಳು(ಎಫ್ ಪಿಒಗಳು) ಮತ್ತು ಸೆಕ್ಷನ್ 8 ಕಂಪನಿಗಳಿಗೆ ಹೂಡಿಕೆಯನ್ನು ಪ್ರೋತ್ಸಾಹಿಸಲಾಗುತ್ತಿದೆ. ಅವುಗಳಿಗೆ (i) ಡೈರಿ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಮೂಲಸೌಕರ್ಯ (ii) ಮಾಂಸ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಮೂಲಸೌಕರ್ಯ (iii) ಪ್ರಾಣಿ ಆಹಾರ ಘಟಕ (iv) ಸುಧಾರಿತ ತಳಿ ತಂತ್ರಜ್ಞಾನ ಮತ್ತು ಜಾನುವಾರು/ಕೋಣ/ಕುರಿ/ಮೇಕೆ/ಹಂದಿ ತಳಿಗಳ ವೃದ್ಧಿ ಮತ್ತು ತಾಂತ್ರಿಕವಾಗಿ ಪೌಲ್ಟ್ರಿ ಫಾರಂಗಳಿಗೆ ನೆರವಾಗಲು ಈವರೆಗೆ ಬ್ಯಾಂಕ್ ಗಳಿಂದ 8666.72 ಕೋಟಿ ರೂ. ಮೌಲ್ಯದ ಯೋಜನಾ ವೆಚ್ಚದ 343 ಯೋಜನೆಗಳಿಗೆ ಬ್ಯಾಂಕ್ ಗಳು ಅನುಮೋದನೆ ನೀಡಿವೆ. ಮತ್ತು ಒಟ್ಟಾರೆ ವೆಚ್ಚದಲ್ಲಿ 5713.64 ಕೋಟಿ ರೂ. ಅವಧಿ ಸಾಲವಾಗಿದೆ. 2023-24ನೇ ಸಾಲಿನಲ್ಲಿ 50.11 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಲಾಗಿದೆ.

ಜಾನುವಾರು ಆರೋಗ್ಯ ಮತ್ತು ರೋಗ ನಿಯಂತ್ರಣ ಕಾರ್ಯಕ್ರಮ:

ಜಾನುವಾರುಗಳ ರೋಗ ನಿಯಂತ್ರಣ ಮುನ್ನೆಚ್ಚರಿಕೆ ಮತ್ತು ಕಂಟೈನ್ ಮೆಂಟ್ ಕಾರ್ಯಗಳಿಗೆ ಆರ್ಥಿಕ ಮತ್ತು  ಝುನೋಟಿಕ್‌  ಪ್ರಾಣಿಗಳ ಲಸಿಕೀಕರಣಕ್ಕೆ ಪ್ರಾಮುಖ್ಯತೆ ನೀಡಲಾಗಿದೆ. ಈವರೆಗೆ ಒಟ್ಟಾರೆ ಸುಮಾರು 25.46 ಕೋಟಿ ಜಾನುವಾರುಗಳ ಕಿವಿಗಳಿಗೆ ಟ್ಯಾಗ್ ಹಾಕಲಾಗಿದೆ. ಈವರೆಗೆ ಎಫ್ಎಂಡಿ(ಕಾಲುಬಾಯಿ ಜ್ವರ)ಕ್ಕೆ 24.18 ಕೋಟಿ ಜಾನುವಾರುಗಳಿಗೆ  ಎರಡನೇ ಸುತ್ತಿನ ಲಸಿಕೆ ಹಾಕಲಾಗಿದೆ. ಕಾಲುಬಾಯಿ ಜ್ವರ ಲಸಿಕೀಕರಣದ ಮೂರು ಮತ್ತು ನಾಲ್ಕನೇ ಹಂತ ಸದ್ಯ ಪ್ರಗತಿಯಲ್ಲಿದೆ ಈವರೆಗೆ ಮೂರು ಮತ್ತು ನಾಲ್ಕನೇ ಹಂತದಲ್ಲಿ ಕ್ರಮವಾಗಿ 12.61 ಮತ್ತು 1.80 ಕೋಟಿ ಪ್ರಾಣಿಗಳಿಗೆ ಲಸಿಕೆ ಹಾಕಲಾಗಿದೆ. ಈವರೆಗೆ ಬ್ರುಸೆಲಾ ವಿರುದ್ಧ 2.71 ಕೋಟಿ ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ ಹಾಗೂ 3.32 ಕೋಟಿ ಕುರಿ ಮತ್ತು ಮೇಕೆಗಳಿಗೆ ಪಿಪಿಆರ್ ಲಸಿಕೆ ಹಾಕಲಾಗಿದೆ ಹಾಗೂ 28.16 ಲಕ್ಷ ಹಂದಿಗಳಿಗೆ ಸಿಎಸ್ಎಫ್ ವಿರುದ್ಧ ಲಸಿಕೆ ಹಾಕಲಾಗಿದೆ 26 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗಾಗಿ 2896 ಸಂಚಾರಿ ಪಶುವೈದ್ಯಕೀಯ ಘಟಕಗಳ(ಎಂವಿಯುಗಳು)ಅನ್ನು ಖರೀದಿಸಲಾಗಿದ್ದು, ಆ ಪೈಕಿ 14 ರಾಜ್ಯಗಳಲ್ಲಿ 2237 ಎಂವಿಯುಗಳು ಕಾರ್ಯಾರಂಭ ಮಾಡಿವೆ.

ಜಾನುವಾರು ಗಣತಿ & ಸಮಗ್ರ ಮಾದರಿ ಸಮೀಕ್ಷೆ ಯೋಜನೆ:

ಸಮಗ್ರ ಮಾದರಿ ಸಮೀಕ್ಷೆ : ಹಾಲು, ಮೊಟ್ಟೆ, ಮಾಂಸ ಮತ್ತು ಉಣ್ಣೆಯಂತಹ ಪ್ರಮುಖ ಜಾನುವಾರು ಉತ್ಪನ್ನಗಳ (ಎಂಎಲ್ ಪಿ) ಅಂದಾಜುಗಳನ್ನು ಹೊರತರಲಾಗುತ್ತಿದದೆ. ಅಂದಾಜುಗಳನ್ನು ಇಲಾಖೆಯ ಮೂಲ ಜಾನುವಾರು ಪಶುಸಂಗೋಪನೆ ಸಾಂಖ್ಯಿಕ (ಬಿಎಎಚ್ ಎಸ್) ವಾರ್ಷಿಕ ಪ್ರಕಟಣೆಯಲ್ಲಿ ಪ್ರಕಟಿಸಲಾಗಿದೆ. ಇತ್ತೀಚಿಗೆ 2022-23 ರ ಅವಧಿಗೆ ಮೂಲ ಪ್ರಾಣಿ ಸಂಗೋಪನಾ ಅಂಕಿಅಂಶಗಳು (ಬಿಎಎಚ್ ಎಸ್)-2023 ಅನ್ನು ಪ್ರಕಟಿಸಲಾಗಿದೆ

ಜಾನುವಾರು ಗಣತಿ : ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕುಟುಂಬದ ಮಟ್ಟದಲ್ಲಿ ಜಾನುವಾರುಗಳ ಸಂಖ್ಯೆ, ಜಾತಿವಾರು ಮತ್ತು ತಳಿಗಳ ಪ್ರಕಾರ ವಯಸ್ಸು, ಲಿಂಗ-ಸಂಯೋಜನೆ ಇತ್ಯಾದಿಗಳ ಮಾಹಿತಿಯನ್ನು ಒದಗಿಸುವುದು. 20ನೇ ಜಾನುವಾರು ಗಣತಿಯನ್ನು 2019 ರಲ್ಲಿ ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಪಶುಸಂಗೋಪನಾ ಇಲಾಖೆಯ ಭಾಗವಹಿಸುವಿಕೆಯೊಂದಿಗೆ ನಡೆಸಲಾಯಿತು. ಜಾನುವಾರುಗಳ ಜಾತಿವಾರು ಮತ್ತು ರಾಜ್ಯವಾರು ಜನಸಂಖ್ಯೆಯನ್ನು ಒಳಗೊಂಡಿರುವ “20ನೇ ಜಾನುವಾರು ಗಣತಿ-2019” ಎಂಬ ಅಖಿಲ ಭಾರತ ವರದಿಯನ್ನು ಪ್ರಕಟಿಸಲಾಗಿದೆ.

ಈ ಮೇಲೆ ಉಲ್ಲೇಖಿಸುವುದರ ಜೊತೆಗೆ, ಇಲಾಖೆಯು ಜಾನುವಾರು ಮತ್ತು ಕೋಳಿ (20 ನೇ ಜಾನುವಾರು ಗಣತಿಯನ್ನು ಆಧರಿಸಿ) ತಳಿವಾರು ವರದಿಯನ್ನು ಪ್ರಕಟಿಸಿದೆ. ಮುಂದಿನ ಜಾನುವಾರು ಗಣತಿಯು 2024 ರಲ್ಲಿ ನಡೆಯಲಿದೆ.

ಹಾಲು ಉತ್ಪಾದಕ ಸಹಕಾರ ಸಂಘಗಳು ಮತ್ತು ಹಾಲು ಉತ್ಪಾದನಾ ಕಂಪನಿಗಳಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ)ಗಳು : ಎಎಚ್ ಡಿ ರೈತರಿಗಾಗಿ 10.11.2023 ರವರೆಗೆ 29.87 ಲಕ್ಷ ಹೊಸ ಕೆಸಿಸಿ ಕಾರ್ಡ್ ಗಳನ್ನು ವಿತರಿಸಲಾಗಿದೆ.

*****


 

 



(Release ID: 1989012) Visitor Counter : 130