ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

 ಶ್ರೀ ಗುರು ತೇಗ್ ಬಹದ್ದೂರ್ ಜಿ ಅವರ ಹುತಾತ್ಮ ದಿನದಂದು ಅವರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಮಂತ್ರಿ

Posted On: 17 DEC 2023 1:24PM by PIB Bengaluru

ಶ್ರೀ ಗುರು ತೇಗ್ ಬಹದ್ದೂರ್ ಜಿ ಅವರ ಹುತಾತ್ಮ ದಿನದಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅವರಿಗೆ ಗೌರವ ಸಲ್ಲಿಸಿದ್ದಾರೆ. ಸ್ವಾತಂತ್ರ್ಯ ಮತ್ತು ಮಾನವ ಘನತೆಗಾಗಿ ಶ್ರೀ ಗುರು ತೇಗ್ ಬಹದ್ದೂರ್ ಜಿಯವರ ಅಪ್ರತಿಮ ತ್ಯಾಗವು ಕಾಲಾಂತರದಲ್ಲೂ ಪ್ರತಿಧ್ವನಿಸುತ್ತದೆ, ಅವರ ಮಾನವೀಯತೆಯು ಸಮಗ್ರತೆ ಮತ್ತು ಸಹಾನುಭೂತಿಯಿಂದ ಬದುಕಲು ನಮ್ಮನ್ನು  ಪ್ರೇರೇಪಿಸುತ್ತದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ತಿಳಿಸಿದ್ದಾರೆ;

“ಧೈರ್ಯ ಮತ್ತು ಶಕ್ತಿಯ ದಾರಿದೀಪವಾದ ಶ್ರೀ ಗುರು ತೇಗ್ ಬಹದ್ದೂರ್ ಜಿಯವರ ಹುತಾತ್ಮತೆಯನ್ನು ಇಂದು ನಾವು ಸ್ಮರಿಸಿಕೊಳ್ಳುತ್ತೇವೆ. ಸ್ವಾತಂತ್ರ್ಯ ಮತ್ತು ಮಾನವ ಘನತೆಗಾಗಿ ಅವರ ಅಪ್ರತಿಮ ತ್ಯಾಗವು ಪ್ರತಿ ಕಾಲಘಟ್ಟದಲ್ಲೂ ಪ್ರತಿಧ್ವನಿಸುತ್ತದೆ, ಅವರ ಮಾನವೀಯತೆಯು ಸಮಗ್ರತೆ ಮತ್ತು ಸಹಾನುಭೂತಿಯಿಂದ ಬದುಕಲು ಪ್ರೇರೇಪಿಸುತ್ತದೆ.  ಅವರ ಬೋಧನೆಗಳು, ಏಕತೆ ಮತ್ತು ಸದಾಚಾರವನ್ನು ಒತ್ತಿಹೇಳುತ್ತವೆ, ಸಹೋದರತ್ವ ಮತ್ತು ಶಾಂತಿಯ ಅನ್ವೇಷಣೆಯಲ್ಲಿ ನಮ್ಮ ದಾರಿಯನ್ನು ಬೆಳಗಿಸುತ್ತವೆ."

“ਅੱਜ, ਅਸੀਂ ਸਾਹਸ ਅਤੇ ਸ਼ਕਤੀ ਦੇ ਪ੍ਰਤੀਕ ਸ੍ਰੀ ਗੁਰੂ ਤੇਗ਼ ਬਹਾਦਰ ਜੀ ਦੀ ਸ਼ਹਾਦਤ ਨੂੰ ਯਾਦ ਕਰ ਰਹੇ ਹਾਂ। ਸੁਤੰਤਰਤਾ ਅਤੇ ਮਾਨਵੀ ਮਾਣ- ਸਨਮਾਨ ਲਈ ਉਨ੍ਹਾਂ ਦੀ ਬੇਮਿਸਾਲ ਕੁਰਬਾਨੀ ਸਦਾ ਗੂੰਜਦੀ ਰਹਿੰਦੀ ਹੈ, ਜੋ ਮਾਨਵਤਾ ਨੂੰ ਇਮਾਨਦਾਰੀ ਅਤੇ ਦਇਆ ਨਾਲ ਰਹਿਣ ਲਈ ਪ੍ਰੇਰਿਤ ਕਰਦੀ ਹੈ।  ਏਕਤਾ ਅਤੇ ਸਚਾਈ 'ਤੇ ਜ਼ੋਰ ਦੇਣ ਵਾਲੀਆਂ ਉਨ੍ਹਾਂ ਦੀਆਂ ਸਿੱਖਿਆਵਾਂ, ਭਾਈਚਾਰੇ ਅਤੇ ਸ਼ਾਂਤੀ ਦੀ ਤਲਾਸ਼ ਵਿੱਚ ਸਾਡਾ ਮਾਰਗਦਰਸ਼ਨ ਕਰਦੀਆਂ ਹਨ।”

***


(Release ID: 1987453) Visitor Counter : 102