ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಕಾಶಿ ತಮಿಳು ಸಂಗಮಂ ವೇದಿಕೆಯು ಭಾರತದ ಏಕತೆ ಮತ್ತು ವೈವಿಧ್ಯತೆಗೆ ಸಾಕ್ಷಿಯಾಗಿದೆ: ಪ್ರಧಾನಿ

ಪ್ರಕಟಣಾ ದಿನಾಂಕ: 14 DEC 2023 9:35PM by PIB Bengaluru

ಕಾಶಿ ತಮಿಳು ಸಂಗಮಂ ವೇದಿಕೆಯು ಭಾರತದ ಏಕತೆ ಮತ್ತು ವೈವಿಧ್ಯತೆಗೆ ಸಾಕ್ಷಿಯಾಗಿದೆ. ಇದು 'ಏಕ್ ಭಾರತ್ ಶ್ರೇಷ್ಠ ಭಾರತ'ದ ಮನೋಭಾವವನ್ನು ಬಲಪಡಿಸುತ್ತದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಿಳಿಸಿದರು

ಶ್ರೀಮಂತ ಸಂಸ್ಕೃತಿಗಳ ಆಚರಣೆಯಲ್ಲಿ ಕಾಶಿ ತಮಿಳು ಸಂಗಮಕ್ಕೆ ಜನರನ್ನು ಸ್ವಾಗತಿಸಲು ಕಾಶಿ ಮತ್ತೊಮ್ಮೆ ತಯಾರಿ ನಡೆಸುತ್ತಿದೆ ಎಂದು ಶ್ರೀ ಮೋದಿ ಹೇಳಿದರು.

ಕಾಶಿ ತಮಿಳು ಸಂಗಮಂ 2023 ರ ಡಿಸೆಂಬರ್ 17 ರಿಂದ 30 ರವರೆಗೆ ವಾರಣಾಸಿಯಲ್ಲಿ ನಡೆಯಲಿದೆ.

ಕಾಶಿ ತಮಿಳು ಸಂಗಮಂನ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಪ್ರಧಾನಿ, ಸಂದೇಶ ನೀಡಿದ್ದಾರೆ.

ಶ್ರೀಮಂತ ಸಂಸ್ಕೃತಿಗಳ ಆಚರಣೆಯಾದ @KTSangamam ಗೆ ಜನರನ್ನು ಸ್ವಾಗತಿಸಲು ಕಾಶಿ ಮತ್ತೊಮ್ಮೆ ಸಿದ್ಧವಾಗುತ್ತಿದ್ದಂತೆ. ಇದು ಅಪಾರ ಉತ್ಸಾಹದಿಂದ ಕೂಡಿರುತ್ತದೆ. ಈ ವೇದಿಕೆಯು ಭಾರತದ ಏಕತೆ ಮತ್ತು ವೈವಿಧ್ಯತೆಗೆ ಸಾಕ್ಷಿಯಾಗಿದೆ, ಇದು 'ಏಕ್ ಭಾರತ್ ಶ್ರೇಷ್ಠ ಭಾರತ'ದ ಮನೋಭಾವವನ್ನು ಬಲಪಡಿಸುತ್ತದೆ ಎಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ಸಂದೇಶ ನೀಡಿದ್ದಾರೆ.

***


(ಪ್ರಕಟಣೆ ಐ.ಡಿ.: 1986657) ವಿಸಿಟರ್ ಕೌಂಟರ್ : 107