ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಕಾರ್ಯಕ್ರಮದ ಟಾಪರ್ : ಯಾತ್ರೆ ಮುಂದುವರಿದಿರುವಾಗ ರೈತ ಸ್ನೇಹಿ ಡ್ರೋಣ್ ಹೇಗೆ ಸಾವಿರಾರು ಜನರನ್ನು ಆಕರ್ಷಿಸುತ್ತಿದೆ
“ಸಾವಿರಾರು ಮಹಿಳಾ ಸ್ವ ಸಹಾಯ ಗುಂಪುಗಳಿಗೆ ಭಾರತ ಸರ್ಕಾರ ಡ್ರೋಣ್ ಗಳ ಒದಗಿಸುತ್ತಿದೆ. ದ್ರೋಣ್ ನಮ್ಮ ಕೃಷಿ ಕೆಲಸ ಕಾರ್ಯಗಳಿಗೆ ಲಭ್ಯವಾಗುವ ಉಪಕ್ರಮ ಕೈಗೊಳ್ಳಲಾಗುತ್ತಿದೆ’’
“ಮೊದಲಿಗೆ ನಾವು 15 ಸಾವಿರ ಮಹಿಳಾ ಸ್ವ ಸಹಾಯ ಗುಂಪುಗಳನ್ನು ರಚಿಸಲು ಆರಂಭಿಸುತ್ತೇವೆ, ಅದು ಉತ್ಕೃಷ್ಟ ದ್ರೋಣ್ ತರಬೇತಿ ಅಭಿಯಾನ ಸಕ್ರಿಯಗೊಳಿಸುವ ಕನಸಿಗೆ ರೆಕ್ಕೆ ನೀಡುತ್ತದೆ’’
Posted On:
12 DEC 2023 2:32PM by PIB Bengaluru
ಪ್ರಧಾನಮಂತ್ರಿ ನರೇಂದ್ರ ಮೋದಿ
(ಸ್ವಾತಂತ್ರ್ಯದಿನದ ಭಾಷಣ 2023)
ಜನಜಾತೀಯ ಗೌರವ ದಿನದ ಶುಭ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜಾರ್ಖಂಡ್ ನ ಕುಂಟಿಯಲ್ಲಿ ಭಗವಾನ್ ಬಿರ್ಸಾ ಮುಂಡಾ ಅವರ ಜಯಂತಿ ಕಾರ್ಯಕ್ರಮದ ವೇಳೆ ವಿಕಸಿತ ಭಾರತ ಸಂಕಲ್ಪ ಯಾತ್ರೆ (ವಿಬಿಎಸ್ ವೈ) ಗೆ ಚಾಲನೆ ನೀಡಿದ್ದರು. ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳನ್ನು ತಳ ಮಟ್ಟದ ಜನರಿಗೆ ತಲುಪಿಸುವ ರಾಷ್ಟ್ರವ್ಯಾಪಿ ಉಪಕ್ರಮವಾಗಿ ಆರಂಭವಾದದ್ದು ಇದೀಗ ವಿನೂತನ ತಿರುವು ಪಡೆದುಕೊಂಡಿದೆ, ಕೃಷಿ ಮತ್ತು ಅದರ ಸಂಬಂಧಿ ಚಟುವಟಿಕೆಗಳಲ್ಲಿ ಡ್ರೋಣ್ ತಂತ್ರಜ್ಞಾನದ ಪರಿವರ್ತಕ ಶಕ್ತಿಯನ್ನು ಪ್ರದರ್ಶಿಸುತ್ತದೆ.
ಈ ವಿಬಿಎಸ್ ವೈ ಕಾರ್ಯಕ್ರಮ 2.60ಲಕ್ಷಕ್ಕೂ ಅಧಿಕ ಗ್ರಾಮ ಪಂಚಾಯ್ತಿಗಳು ಮತ್ತು 4,000ಕ್ಕೂ ಅಧಿಕ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಂಚರಿಸಿ ಬೃಹತ್ ಜನಸಂಪರ್ಕ ಕಾರ್ಯಕ್ರಮವಾಗಿದ್ದು, ಅದು ಪ್ರಗತಿ ಮತ್ತು ಎಲ್ಲರನ್ನೂ ಒಳಗೊಳ್ಳುವ ಸಂಕೇತವಾಗಿದೆ.
ಯಾತ್ರೆಯು ವೇಗ ಪಡೆಯುತ್ತಿರುವಂತೆಯೇ, ಎಲ್ಲರ ಗಮನವನ್ನು ಸೆಳೆದಿರುವ ಒಂದು ಗಮನಾರ್ಹ ಅಂಶವೆಂದರೆ ಕೃಷಿ ಚಟುವಟಿಕೆಗಳಲ್ಲಿ ಡ್ರೋಣ್ ಗಳು ಒಗ್ಗೂಡಿಸುತ್ತಿರುವುದು. ಈ ಉಪಕ್ರಮವು ರೈತರಿಗೆ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಸಬಲರನ್ನಾಗಿ ಮಾಡುವ ಗುರಿಯನ್ನು ಹೊಂದಿದೆ, ಅವರಿಗೆ ಉತ್ಪಾದಕತೆ ಮತ್ತು ಸುಸ್ಥಿರ ಪದ್ದತಿಗಳನ್ನು ಹೆಚ್ಚು ಹೆಚ್ಚಾಗಿ ಬಳಸಲು ಸಾಧನಗಳನ್ನು ಒದಗಿಸುತ್ತದೆ.
ಡ್ರೋಣ್ :ಆಕರ್ಷಣೆಯ ಕೇಂದ್ರ ಬಿಂದು
ವಿಬಿಎಸ್‌ವೈ ಐಇಸಿ ವ್ಯಾನ್‌ಗಳು ಮತ್ತು ಕಾರ್ಯಕ್ರಮದ ಸ್ಟಾರ್ ಗಳಾಗಿರುವ ಡ್ರೋಣ್ ಗಳ ಪ್ರದರ್ಶನಕ್ಕಾಗಿ ಜನರು ಕುತೂಹಲದಿಂದ ಕಾಯುತ್ತಿದ್ದಾರೆ. ಝೇಂಕರಿಸುವ ಧ್ವನಿಯೊಂದಿಗೆ ಹಾರುವ ಯಂತ್ರಗಳು ಪ್ರೇಕ್ಷಕರನ್ನು ಆಕರ್ಷಿಸುತ್ತಿವೆ, ವಿಶೇಷವಾಗಿ ರೈತರು ಪ್ರಚಾರದ ಉದ್ದಕ್ಕೂ ನೇರ ಪ್ರದರ್ಶನಗಳನ್ನು ನಡೆಸುತ್ತಿದ್ದಾರೆ. ಈ ಪ್ರದರ್ಶನಗಳು ಕೃಷಿಯನ್ನು ಕ್ರಾಂತಿಗೊಳಿಸುವಲ್ಲಿ ಡ್ರೋನ್‌ಗಳ ಸಾಮರ್ಥ್ಯವನ್ನು ವಿವರಿಸುತ್ತದೆ. ಇದು ದಕ್ಷತೆ ಹೆಚ್ಚಳ ಮಾತ್ರವಲ್ಲದೆ, ರೈತರನ್ನು ಜ್ಞಾನ ಮತ್ತು ಸಾಧನಗಳೊಂದಿಗೆ ಸಬಲೀಕರಣಗೊಳಿಸುವುದರ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಿದೆ.
ದೇಶದ ಎಲ್ಲಾ ಮೂಲೆ ಮೂಲೆಗಳಲ್ಲಿ ಡ್ರೋಣ್ ಪ್ರದರ್ಶನಗಳು ರೈತ ಸಮುದಾಯದಿಂದ, ವಿಶೇಷವಾಗಿ ಮಹಿಳಾ ರೈತರಿಂದ ಅಪಾರ ಮೆಚ್ಚುಗೆಯನ್ನು ಸಂಪಾದಿಸಿವೆ. ಕೇರಳದಿಂದ ಹಿಮಾಚಲ ಪ್ರದೇಶದವರೆಗೆ, ಗುಜರಾತ್‌ನಿಂದ ತ್ರಿಪುರದವರೆಗೆ, ಸಂದೇಶವು ಸ್ಪಷ್ಟವಾಗಿತ್ತು ಅದೆಂದರೆ- ಡ್ರೋಣ್ ಗಳು ಕೃಷಿಯಲ್ಲಿ ಸಕಾರಾತ್ಮಕ ಬದಲಾವಣೆಗೆ ವೇಗವರ್ಧಕವಾಗಿದೆ ಎಂಬುದು.
ನೇರ ಪ್ರಾತ್ಯಕ್ಷಿಕೆಯಲ್ಲಿ ಸಮತೋಲಿತ ರಸಗೊಬ್ಬರಗಳ ಬಳಕೆ, ಅಧಿಕ ರಾಸಾಯನಿಕ ರಸಗೊಬ್ಬರ ಬಳಕೆಯನ್ನು ತಪ್ಪಿಸಲು ಆದ್ಯತೆ ನೀಡುವುದನ್ನು ತೋರಿಸಲಾಗುತ್ತಿದೆ. ಡ್ರೋಣ್ ಗಳಿಂದ ನ್ಯಾನೋ ಯುರಿಯಾ ಸಿಂಪಡಣೆ, ನ್ಯಾನೋ ಡಿಎಪಿ (ಡೈ -ಅಮೋನಿಯಂ ಫ್ಲಾಸ್ಪೆಟ್) ಮತ್ತು ಇತರ ಮೈಕ್ರೋ ನ್ಯೂಟ್ರಿಯೆಂಟ್ ರಸಗೊಬ್ಬರಗಳು, ಹೇಗೆ ನಿಖರತೆ ಮತ್ತು ದಕ್ಷತೆಯನ್ನು ಕೃಷಿ ಕ್ಷೇತ್ರದಿಂದ ತಂತ್ರಜ್ಞಾನ ತಂದಿದೆ ಎಂಬುದನ್ನು ಪ್ರದರ್ಶಿಸಲಾಗುತ್ತಿದೆ. ಡ್ರೋಣ್ ಗಳ ಮೂಲಕ ಕೀಟನಾಶಕ ಸಿಂಪಡಿಸುವಿಕೆಯ ನೇರ ಪ್ರಾತ್ಯಕ್ಷಿಕೆಯು ಪರಿಣಾಮಕಾರಿ ಕೀಟ ನಿರ್ವಹಣೆಯಲ್ಲಿ ಈ ತಂತ್ರಜ್ಞಾನದ ಸಾಮರ್ಥ್ಯವನ್ನು ಮತ್ತಷ್ಟು ಎತ್ತಿ ತೋರಿಸುತ್ತದೆ. ದ್ರವರೂಪದ ರಸಗೊಬ್ಬರಗಳು ಮತ್ತು ಕೀಟನಾಶಕಗಳ ವೈಮಾನಿಕ ಸಿಂಪಡಿಸುವಿಕೆಯ ನೇರ ಪ್ರದರ್ಶನವು ಸೀಮಿತ ಸಮಯದ ಮಿತಿಯಲ್ಲಿ ಅತಿಯಾದ ರಸಗೊಬ್ಬರ ಬಳಕೆ ನಿಯಂತ್ರಿಸುವ ವಿಧಾನವನ್ನು ಉತ್ತೇಜಿಸುತ್ತದೆ.
ನಾರಿಶಕ್ತಿ: ದ್ರೋಣ್ ಗಳ ಸಾಮರ್ಥ್ಯ ಆನಾವರಣ
ಮಹಿಳಾ ನೇತೃತ್ವದ ಅಭಿವೃದ್ಧಿಯನ್ನು ಖಾತ್ರಿಪಡಿಸಿಕೊಳ್ಳಲು ಇದು ಪ್ರಧಾನಮಂತ್ರಿ ಅವರ ನಿರಂತರ ಪ್ರಯತ್ನವಾಗಿದೆ. ಈ ದಿಸೆಯಲ್ಲಿ ಮತ್ತೊಂದು ಹೆಜ್ಜೆಯಾಗಿ ಪ್ರಧಾನಮಂತ್ರಿ ಅವರು ಪ್ರಧಾನ ಮಂತ್ರಿ ಮಹಿಳಾ ಕಿಸಾನ್ ಡ್ರೋನ್ ಕೇಂದ್ರವನ್ನು ಆರಂಭಿಸಿದರು.
ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಸ್ವಸಹಾಯ ಸಂಘದ ಸದಸ್ಯರಾಗಿರುವ ಶ್ರೀಮತಿ. ಕೊಮ್ಲಪಾಟಿ ವೆಂಕಟ ರಾವಣಮ್ಮ ಅವರು ಕೇವಲ 12 ದಿನಗಳಲ್ಲಿ ಕೃಷಿ ಉದ್ದೇಶಗಳಿಗಾಗಿ ಡ್ರೋಣ್ ಹಾರಾಟದ ಕೌಶಲ್ಯವನ್ನು ಪಡೆದರು ಮತ್ತು ನವೆಂಬರ್ 30 ರಂದು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಪ್ರಧಾನಮಂತ್ರಿ ಅವರೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಗ್ರಾಮಗಳಲ್ಲಿ ಕೃಷಿ ಉದ್ದೇಶಗಳಿಗಾಗಿ ಡ್ರೋಣ್ ಗಳನ್ನು ಬಳಸಿಕೊಳ್ಳುವುದರ ಪರಿಣಾಮಗಳ ಬಗ್ಗೆ ಪ್ರಧಾನ ಮಂತ್ರಿ ಅವರು ವಿಚಾರಿಸಿದಾಗ, ಇದು ನೀರಿನ ಸಂಬಂಧಿತ ಸವಾಲುಗಳನ್ನು ಎದುರಿಸಲು ಸಹಾಯ ಮಾಡುತ್ತದೆ ಮತ್ತು ಸಮಯವನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳಲು ನೆರವಾಗುತ್ತದೆ ಎಂದು ಅವರು ದೃಢಪಡಿಸಿದರು.
ಶ್ರೀಮತಿ ವೆಂಕಟ ಅವರಂತಹ ಮಹಿಳೆಯರು ಭಾರತದ ನಾರಿ ಶಕ್ತಿಯ ಬಗ್ಗೆ ಅನುಮಾನ ಪಡುವವವರಿಗೆ ಉದಾಹರಣೆಯಾಗಿ ನಿಲ್ಲುತ್ತಾರೆ ಎಂದು ಪ್ರಧಾನಮಂತ್ರಿ ಅವರು ಬಲವಾಗಿ ಪ್ರತಿಪಾದಿಸಿದರು. ಮುಂದಿನ ದಿನಗಳಲ್ಲಿ ಕೃಷಿಯಲ್ಲಿ ಡ್ರೋಣ್ ಗಳ ಬಳಕೆಯು ಮಹಿಳೆಯರ ನೇತೃತ್ವದ ಅಭಿವೃದ್ಧಿಯ ಸಂಕೇತವಾಗಲಿದೆ ಎಂದು ಅವರು ಹೇಳಿದರು. ಅಲ್ಲದೆ, ವಿಕಸಿತ ಭಾರತ ಸಂಕಲ್ಪ ಯಾತ್ರೆಯಲ್ಲಿ ಮಹಿಳೆಯರ ಭಾಗವಹಿಸುವಿಕೆಯ ಮಹತ್ವವನ್ನು ಅವರು ಒತ್ತಿ ಹೇಳಿದರು.
******
(Release ID: 1985445)
Visitor Counter : 109