ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

370ನೇ ವಿಧಿ ರದ್ದತಿ ಕುರಿತು ಸುಪ್ರೀಂ ಕೋರ್ಟ್ ತೀರ್ಪು ಐತಿಹಾಸಿಕ: ಪ್ರಧಾನಿ


ಜಮ್ಮು -ಕಾಶ್ಮೀರ ಮತ್ತು ಲಡಾಖ್ನ ದಿಟ್ಟ ಜನತೆಗೆ ಪ್ರಧಾನಿ ಭರವಸೆ

Posted On: 11 DEC 2023 12:48PM by PIB Bengaluru

370ನೇ ವಿಧಿಯನ್ನು ರದ್ದುಪಡಿಸುವ ಕುರಿತು ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಐತಿಹಾಸಿಕವಾದುದು. 2019ರ ಆಗಸ್ಟ್ 5ರಂದು ಭಾರತದ ಸಂಸತ್ತು ಕೈಗೊಂಡ ನಿರ್ಧಾರವನ್ನು ಈ ತೀರ್ಪು ಸಾಂವಿಧಾನಿಕವಾಗಿ ಎತ್ತಿ ಹಿಡಿಯುತ್ತದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ.

ನ್ಯಾಯಾಲಯವು ತನ್ನ ಗಹನವಾದ ಪಾಂಡಿತ್ಯದೊಂದಿಗೆ, ಭಾರತೀಯರಾದ ನಾವು ಎಲ್ಲಕ್ಕಿಂತ ಹೆಚ್ಚಾಗಿ ಪ್ರೀತಿಸುವ ಮತ್ತು ಗೌರವಿಸುವ ಏಕತೆಯ ಮೂಲತತ್ವವನ್ನು ಬಲಪಡಿಸಿದೆ ಎಂದು ಶ್ರೀ ಮೋದಿ ಹೇಳಿದ್ದಾರೆ.

ಈ ಕುರಿತು ಪ್ರಧಾನಮಂತ್ರಿಯವರು ʻXʼ ವೇದಿಕೆಯಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:

"370ನೇ ವಿಧಿಯನ್ನು ರದ್ದುಗೊಳಿಸುವ ಬಗ್ಗೆ ಇಂದಿನ ಸುಪ್ರೀಂ ಕೋರ್ಟ್ ತೀರ್ಪು ಐತಿಹಾಸಿಕವಾದುದು. 2019ರ ಆಗಸ್ಟ್ 5ರಂದು ಭಾರತದ ಸಂಸತ್ತು ಕೈಗೊಂಡ ನಿರ್ಧಾರವನ್ನು ಸಾಂವಿಧಾನಿಕವಾಗಿ ಎತ್ತಿಹಿಡಿಯುತ್ತದೆ. ಇದು ಜಮ್ಮು-ಕಾಶ್ಮೀರ ಮತ್ತು ಲಡಾಖ್ನ ನಮ್ಮ ಸಹೋದರ ಸಹೋದರ ಪಾಲಿಗೆ ಭರವಸೆ, ಪ್ರಗತಿ ಮತ್ತು ಏಕತೆಯ ಸ್ಪಷ್ಟ ಘೋಷಣೆಯಾಗಿದೆ. ನ್ಯಾಯಾಲಯವು ತನ್ನ ಗಹನವಾದ ಪಾಂಡಿತ್ಯದ ಮೂಲಕ, ಭಾರತೀಯರಾದ ನಾವು ಎಲ್ಲಕ್ಕಿಂತ ಹೆಚ್ಚಾಗಿ ಪ್ರೀತಿಸುವ ಮತ್ತು ಗೌರವಿಸುವ ಏಕತೆಯ ಮೂಲತತ್ವವನ್ನು ಬಲಪಡಿಸಿದೆ.

ನಿಮ್ಮ ಕನಸುಗಳನ್ನು ಈಡೇರಿಸುವ ನಮ್ಮ ಬದ್ಧತೆ ಅಚಲವಾಗಿ ಉಳಿದಿದೆ ಎಂದು ಜಮ್ಮು- ಕಾಶ್ಮೀರ ಮತ್ತು ಲಡಾಖ್‌ನ ದಿಟ್ಟ ಜನತೆಗೆ ನಾನು ಭರವಸೆ ನೀಡಲು ಬಯಸುತ್ತೇನೆ. ಪ್ರಗತಿಯ ಫಲಗಳು ನಿಮಗೆ ತಲುಪುವುದಲ್ಲದೆ, 370ನೇ ವಿಧಿಯಿಂದ ತೊಂದರೆ ಅನುಭವಿಸಿದ್ದ ನಮ್ಮ ಸಮಾಜದ ಅತ್ಯಂತ ದುರ್ಬಲ ಮತ್ತು ಅಂಚಿನಲ್ಲಿರುವ ವರ್ಗಗಳಿಗೆ ಅವುಗಳ ಪ್ರಯೋಜನಗಳನ್ನು ವಿಸ್ತರಿಸಲು ನಾವು ನಿರ್ಧರಿಸಿದ್ದೇವೆ.

ಇಂದಿನ ತೀರ್ಪು ಕೇವಲ ಕಾನೂನು ತೀರ್ಪು ಅಲ್ಲ; ಇದೊಂದು ಭರವಸೆಯ ದೀಪವಾಗಿದೆ. ಉಜ್ವಲ ಭವಿಷ್ಯದ ಭರವಸೆಯಾಗಿದೆ. ಬಲವಾದ ಮತ್ತು ಹೆಚ್ಚು ಏಕೀಕೃತ ಭಾರತವನ್ನು ನಿರ್ಮಿಸುವ ನಮ್ಮ ಸಾಮೂಹಿಕ ಸಂಕಲ್ಪಕ್ಕೆ ಸಾಕ್ಷಿಯಾಗಿದೆ. #NayaJammuKashmir"

***


(Release ID: 1984979) Visitor Counter : 171