ಪ್ರಧಾನ ಮಂತ್ರಿಯವರ ಕಛೇರಿ
ಮಾಜಿ ರಾಷ್ಟ್ರಪತಿ ಶ್ರೀ ಪ್ರಣಬ್ ಮುಖರ್ಜಿಯವರ ಜನ್ಮ ಜಯಂತಿಯಂದು ಪ್ರಧಾನಮಂತ್ರಿಯವರು ಅವರಿಗೆ ಗೌರವ ನಮನ ಸಲ್ಲಿಸಿದರು
Posted On:
11 DEC 2023 10:41AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ಮಾಜಿ ರಾಷ್ಟ್ರಪತಿ ಶ್ರೀ ಪ್ರಣಬ್ ಮುಖರ್ಜಿಯವರ ಜನ್ಮ ಜಯಂತಿಯಂದು ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.
ಪ್ರಧಾನಮಂತ್ರಿಯವರು X ನಲ್ಲಿ ಹೀಗೆ ಪೋಸ್ಟ್ ಮಾಡುತ್ತಾ;
"ಶ್ರೀ ಪ್ರಣಬ್ ಮುಖರ್ಜಿಯವರ ಜನ್ಮ ದಿನಾಚರಣೆಯಂದು, ಅವರಿಗೆ ಗೌರವ ಸಲ್ಲಿಸುತ್ತೇನೆ. ಅವರ ರಾಜನೀತಿ ಮತ್ತು ಬೌದ್ಧಿಕ ಆಳವು ನಮ್ಮ ರಾಷ್ಟ್ರದ ಹಾದಿಯನ್ನು ಆಳವಾಗಿ ಬೇರೂರಿಸಿದೆ. ಅವರ ಒಳನೋಟ ಮತ್ತು ನಾಯಕತ್ವ ಅಮೂಲ್ಯವಾದದ್ದು. ವೈಯಕ್ತಿಕ ಮಟ್ಟದಲ್ಲಿ, ನಮ್ಮ ಸಂವಹನ-ಸಂವಾದಗಳು ಸದಾ ಸಮೃದ್ಧವಾಗಿದ್ದವು. ಅವರ ಸಮರ್ಪಣೆ ಮತ್ತು ಬುದ್ಧಿವಂತಿಕೆ ನಮ್ಮ ಪ್ರಗತಿಯ ಪ್ರಯಾಣದಲ್ಲಿ ಸದಾ ಚಿರಚೇತನ ಮಾರ್ಗದರ್ಶಕ ಶಕ್ತಿಯಾಗಿದೆ" ಎಂದು ಟ್ವೀಟ್ ಮಾಡಿದ್ದಾರೆ.
***
(Release ID: 1984919)
Visitor Counter : 95
Read this release in:
English
,
Urdu
,
Hindi
,
Marathi
,
Bengali
,
Manipuri
,
Assamese
,
Bengali-TR
,
Punjabi
,
Gujarati
,
Odia
,
Tamil
,
Telugu
,
Malayalam