ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ದೆಹಲಿಯ ಕೆಂಪು ಕೋಟೆಯಲ್ಲಿ ಮೊದಲ ಭಾರತೀಯ ಕಲೆ, ವಾಸ್ತುಶಿಲ್ಪ ಮತ್ತು ವಿನ್ಯಾಸದ ದ್ವೈವಾರ್ಷಿಕ ವಸ್ತುಪ್ರದರ್ಶನ ಅಥವಾ ಉತ್ಸವ-2023 ಉದ್ಘಾಟಿಸಿದ ಪ್ರಧಾನ ಮಂತ್ರಿ


ಆತ್ಮನಿರ್ಭರ್ ಭಾರತ್ ಸೆಂಟರ್ ಫಾರ್ ಡಿಸೈನ್ (ಎಬಿಸಿಡಿ) ಮತ್ತು ಸಮುನ್ನತಿ – ವಿದ್ಯಾರ್ಥಿಗಳ ದ್ವೈವಾರ್ಷಿಕ ವಸ್ತುಪ್ರದರ್ಶನ ಉದ್ಘಾಟನೆ

ಕಾರ್ಯಕ್ರಮದ 7 ವಿಷಯ ಆಧರಿಸಿದ 7 ಪ್ರಕಟಣೆಗಳ ಅನಾವರಣ

ವಸ್ತುಪ್ರದರ್ಶನದ ಸ್ಮರಣಾರ್ಥ ಅಂಚೆಚೀಟಿ ಬಿಡುಗಡೆ

"ಭಾರತದ ಕಲೆ, ವಾಸ್ತುಶಿಲ್ಪ ಮತ್ತು ವಿನ್ಯಾಸ ವಸ್ತುಪ್ರದರ್ಶನವು, ರಾಷ್ಟ್ರದ ವೈವಿಧ್ಯಮಯ ಪರಂಪರೆ ಮತ್ತು ರೋಮಾಂಚಕ ಸಂಸ್ಕೃತಿಯ ಆಚರಣೆಯಾಗಿದೆ"

“ಪುಸ್ತಕಗಳು ಪ್ರಪಂಚದ ಕಿಟಕಿಗಳಂತೆ ಕಾರ್ಯ ನಿರ್ವಹಿಸುತ್ತವೆ. ಕಲೆಯು ಮಾನವನ ಮನಸ್ಸಿನ ದೊಡ್ಡ ಪಯಣವಾಗಿದೆ"

"ಮಾನವ ಮನಸ್ಸನ್ನು ಆಂತರಿಕ ಆತ್ಮದೊಂದಿಗೆ ಸಂಪರ್ಕಿಸಲು ಮತ್ತು ಅದರ ಸಾಮರ್ಥ್ಯವನ್ನು ಗುರುತಿಸಲು ಕಲೆ ಮತ್ತು ಸಂಸ್ಕೃತಿ ಅತ್ಯಗತ್ಯ"

"ಆತ್ಮನಿರ್ಭರ್ ಭಾರತ್ ಸೆಂಟರ್ ಫಾರ್ ಡಿಸೈನ್ ಭಾರತದ ಅನನ್ಯ ಮತ್ತು ಅಪರೂಪದ ಕರಕುಶಲಗಳನ್ನು ಉತ್ತೇಜಿಸಲು ವೇದಿಕೆ ಒದಗಿಸುತ್ತದೆ"

"ದೆಹಲಿ, ಕೋಲ್ಕತ್ತಾ, ಮುಂಬೈ, ಅಹಮದಾಬಾದ್ ಮತ್ತು ವಾರಾಣಸಿಗಳಲ್ಲಿ ನಿರ್ಮಿಸಲಾಗುವ ಸಾಂಸ್ಕೃತಿಕ ಸ್ಥಳಗಳು ಈ ನಗರಗಳನ್ನು ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸುತ್ತವೆ"

"ಕಲೆ, ರುಚಿ ಮತ್ತು ಬಣ್ಣಗಳನ್ನು ಭಾರತದಲ್ಲಿ ಜೀವನಕ್ಕೆ ಸಮಾನಾರ್ಥಕವೆಂದು ಪರಿಗಣಿಸಲಾಗಿದೆ"

Posted On: 08 DEC 2023 7:40PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೆಹಲಿಯ ಕೆಂಪುಕೋಟೆಯಲ್ಲಿಂದು ನಡೆಯುತ್ತಿರುವ ಮೊದಲ ಭಾರತೀಯ ಕಲೆ, ವಾಸ್ತುಶಿಲ್ಪ ಮತ್ತು ವಿನ್ಯಾಸದ ದ್ವೈವಾರ್ಷಿಕ ವಸ್ತುಪ್ರದರ್ಶನ(ಐಎಎಡಿಬಿ) ಅಥವಾ ಉತ್ಸವ-2023 ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಅವರು ಕೆಂಪುಕೋಟೆಯಲ್ಲಿ 'ಆತ್ಮನಿರ್ಭರ್ ಭಾರತ್ ಸೆಂಟರ್ ಫಾರ್ ಡಿಸೈನ್' ಮತ್ತು ವಿದ್ಯಾರ್ಥಿಗಳ ವಸ್ತುಪ್ರದರ್ಶನ-ಸಮುನ್ನತಿಯನ್ನು ಸಹ ಉದ್ಘಾಟಿಸಿದರು. ಕಾರ್ಯಕ್ರಮದ ಸ್ಮರಣಾರ್ಥ ಅಂಚೆಚೀಟಿ ಬಿಡುಗಡೆ ಮಾಡಿದರು. ನಂತರ ಅವರು ವಸ್ತುಪ್ರದರ್ಶನ ವೀಕ್ಷಿಸಿದರು. ಭಾರತೀಯ ಕಲೆ, ವಾಸ್ತುಶಿಲ್ಪ ಮತ್ತು ವಿನ್ಯಾಸ ವಸ್ತುಪ್ರದರ್ಶನ((ಐಎಎಡಿಬಿ)ವು ದೆಹಲಿಯ ಸಾಂಸ್ಕೃತಿಕ ಸ್ಥಳಕ್ಕೆ ಪೀಠಿಕೆಯಾಗಿ ಕಾರ್ಯ ನಿರ್ವಹಿಸುತ್ತದೆ.

ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ, ವಿಶ್ವ ಪರಂಪರೆಯ ತಾಣ ಕೆಂಪುಕೋಟೆಗೆ ಎಲ್ಲರನ್ನು ಸ್ವಾಗತಿಸಿದರು. ಭಾರತದ ಸ್ವಾತಂತ್ರ್ಯದ ಮೊದಲು ಮತ್ತು ನಂತರ ಹಲವು ತಲೆಮಾರುಗಳು ಉರುಳಿದ್ದರೂ, ಅಚಲವಾದ ಮತ್ತು ಅಳಿಸಲಾಗದ ಕೆಂಪುಕೋಟೆಯ ಅಂಗಣವು ಐತಿಹಾಸಿಕ ಮಹತ್ವವನ್ನು ಸಾರುತ್ತಿದೆ ಎಂದರು.

ಪ್ರತಿಯೊಂದು ರಾಷ್ಟ್ರವೂ ತನ್ನದೇ ಆದ ಸಂಕೇತ ಮತ್ತು ಕುರುಹುಗಳನ್ನು ಹೊಂದಿದ್ದು, ಅದು ದೇಶದ ಭೂತಕಾಲ ಮತ್ತು ಅದರ ಬೇರುಗಳನ್ನು ಜಗತ್ತಿಗೆ ಪರಿಚಯಿಸುತ್ತದೆ. ಈ ಸಂಕೇತಗಳೊಂದಿಗೆ ಸಂಪರ್ಕ ಬೆಸೆಯುವಲ್ಲಿ ಕಲೆ, ಸಂಸ್ಕೃತಿ ಮತ್ತು ವಾಸ್ತುಶಿಲ್ಪದ ಪಾತ್ರ ಮಹತ್ವದ್ದು. ರಾಜಧಾನಿ ದೆಹಲಿಯು ಭಾರತದ ಶ್ರೀಮಂತ ವಾಸ್ತುಶಿಲ್ಪ ಪರಂಪರೆಯ ಒಂದು ನೋಟ ನೀಡುವ ಹಲವು ಸಂಕೇತಗಳ ನಿಧಿ ಎಂದು ಉಲ್ಲೇಖಿಸಿದ ಪ್ರಧಾನಿ, ದೆಹಲಿಯಲ್ಲಿ ಭಾರತೀಯ ಕಲೆ, ವಾಸ್ತುಶಿಲ್ಪ ಮತ್ತು ವಿನ್ಯಾಸದ ದ್ವೈವಾರ್ಷಿಕ ವಸ್ತುಪ್ರದರ್ಶನ(ಐಎಎಡಿಬಿ) ಸಂಸ್ಥೆಯು ಒಂದಕ್ಕಿಂತ ಹೆಚ್ಚಾಗಿ, ಅದನ್ನು ವಿಶೇಷ ರೀತಿಯಲ್ಲಿ ಮಾಡುತ್ತಿದೆ. ವಸ್ತು ಪ್ರದರ್ಶನದ ಕಲಾಕೃತಿಗಳನ್ನು ಶ್ಲಾಘಿಸಿದ ಅವರು, ಇದು ಬಣ್ಣಗಳು, ಸೃಜನಶೀಲತೆ, ಸಂಸ್ಕೃತಿ ಮತ್ತು ಸಮುದಾಯದ ಸಂಪರ್ಕಗಳ ಸಮ್ಮಿಲನವಾಗಿದೆ. ಐಎಎಡಿಬಿಯ ಯಶಸ್ವಿ ಸಂಘಟನೆಗಾಗಿ ಅವರು ಸಂಸ್ಕೃತಿ ಸಚಿವಾಲಯ, ಅದರ ಅಧಿಕಾರಿಗಳು, ಭಾಗವಹಿಸಿರುವ ರಾಷ್ಟ್ರಗಳು ಸೇರಿದಂತೆ  ಪ್ರತಿಯೊಬ್ಬರನ್ನು ಅಭಿನಂದಿಸಿದರು. “ಪುಸ್ತಕಗಳು ವಿಶಅವದ ಕಿಟಕಿಗಳಂತೆ ಕಾರ್ಯ ನಿರ್ವಹಿಸುತ್ತವೆ. ಕಲೆಯು ಮಾನವ ಮನಸ್ಸಿನ ಮಹಾನ್ ಪಯಣವಾಗಿದೆ” ಎಂದು ಪ್ರಧಾನ ಮಂತ್ರಿ ಬಣ್ಣಿಸಿದರು.

ಭಾರತದ ಆರ್ಥಿಕ ಸಮೃದ್ಧಿಯ ಬಗ್ಗೆ ವಿಶ್ವಾದ್ಯಂತ ಚರ್ಚೆಯಾದಾಗ ಅದರ ವೈಭವದ ಗತಕಾಲವನ್ನು ನೆನಪಿಸಿಕೊಳ್ಳಬೇಕು. ಅದರ ಸಂಸ್ಕೃತಿ ಮತ್ತು ಪರಂಪರೆ ಇಂದಿಗೂ ವಿಶ್ವದ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಕಲೆ ಮತ್ತು ವಾಸ್ತುಶಿಲ್ಪ ಕ್ಷೇತ್ರಗಳಿಗೆ ಸಂಬಂಧಿಸಿದ ಯಾವುದೇ ಕೆಲಸದಲ್ಲಿ ಸ್ವಾಭಿಮಾನದ ಭಾವನೆ ಹುಟ್ಟುಹಾಕಿದ ಅವರು, ತಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಪಡುವ ಮೂಲಕ ಮುಂದುವರಿಯುವ ನಂಬಿಕೆಯನ್ನು ಪುನರುಚ್ಚರಿಸಿದರು. ಕೇದಾರನಾಥ ಮತ್ತು ಕಾಶಿಯ ಸಾಂಸ್ಕೃತಿಕ ಕೇಂದ್ರಗಳ ಅಭಿವೃದ್ಧಿ ಮತ್ತು ಮಹಾಕಲ್ ಲೋಕದ ಪುನರಾಭಿವೃದ್ಧಿಯ ಉದಾಹರಣೆಗಳನ್ನು ನೀಡಿದರು, ರಾಷ್ಟ್ರೀಯ ಪರಂಪರೆ ಮತ್ತು ಸಂಸ್ಕೃತಿಯ ಕಡೆಗೆ ಆಜಾದಿ ಕಾ ಅಮೃತ ಕಾಲದಲ್ಲಿ ಹೊಸ ಆಯಾಮಗಳನ್ನು ರೂಪಿಸುವ ಸರ್ಕಾರದ ಪ್ರಯತ್ನಗಳಿಗೆ ಒತ್ತು ನೀಡಿದರು. ಐಎಎಡಿಬಿ, ಈ ದಿಕ್ಕಿನಲ್ಲಿ ಹೊಸ ಹೆಜ್ಜೆಯಾಗಿದೆ. ಆಧುನೀಕೃತ ವ್ಯವಸ್ಥೆಗಳೊಂದಿಗೆ ಭಾರತದಲ್ಲಿ ಜಾಗತಿಕ ಸಾಂಸ್ಕೃತಿಕ ಉಪಕ್ರಮಗಳನ್ನು ಸಾಂಸ್ಥಿಕಗೊಳಿಸುವ ಉದ್ದೇಶದಿಂದ 2023 ಮೇನಲ್ಲಿ ಅಂತಾರಾಷ್ಟ್ರೀಯ ಮ್ಯೂಸಿಯಂ ಎಕ್ಸ್‌ಪೋ ಮತ್ತು 2023 ಆಗಸ್ಟ್ ನಲ್ಲಿ ಗ್ರಂಥಾಲಯ ಉತ್ಸವವನ್ನು ಆಯೋಜಿಸಿದ್ದನ್ನು ಪ್ರಧಾನಮಂತ್ರಿ ಪ್ರಸ್ತಾಪಿಸಿದರು. ವೆನಿಸ್, ಸಾವೊ ಪಾಲೊ, ಸಿಂಗಾಪುರ್, ಸಿಡ್ನಿ ಮತ್ತು ಶಾರ್ಜಾ ಬಿನಾಲೆಸ್ ಮತ್ತು ದುಬೈ ಮತ್ತು ಲಂಡನ್ ಕಲಾ ಮೇಳಗಳಂತಹ ಜಾಗತಿಕ ಉಪಕ್ರಮಗಳಂತೆ, ಐಎಎಡಿಬಿಯಂತಹ ಭಾರತೀಯ ಸಾಂಸ್ಕೃತಿಕ ಉಪಕ್ರಮವು ಸಹ  ಹೆಸರು ಮಾಡಬೇಕು. ಹೆಚ್ಚು ತಂತ್ರಜ್ಞಾನ ಅವಲಂಬಿತ ಸಮಾಜದ ಏರಿಳಿತಗಳ ನಡುವೆ ಜೀವನ ಶೈಲಿ ರೂಢಿಸಿಕೊಳ್ಳುವ ಕಲೆ ಮತ್ತು ಸಂಸ್ಕೃತಿ ಇಂತಹ ಸಂಘಟನೆಗಳ ಅಗತ್ಯವಿದೆ. "ಮನುಷ್ಯನ ಮನಸ್ಸನ್ನು ಆಂತರಿಕ ಆತ್ಮದೊಂದಿಗೆ ಸಂಪರ್ಕಿಸಲು ಮತ್ತು ಅದರ ಸಾಮರ್ಥ್ಯವನ್ನು ಗುರುತಿಸಲು ಕಲೆ ಮತ್ತು ಸಂಸ್ಕೃತಿ ಅತ್ಯಗತ್ಯ" ಎಂದು ಪ್ರಧಾನ ಮಂತ್ರಿ ಪ್ರತಿಪಾದಿಸಿದರು.

ಆತ್ಮನಿರ್ಭರ್ ಭಾರತ್ ವಿನ್ಯಾಸ ಮಾರುಕಟ್ಟೆ ಕೇಂದ್ರದ ಉದ್ಘಾಟನೆ ಕುರಿತು ಮಾತನಾಡಿದ ಪ್ರಧಾನ ಮಂತ್ರಿ, ಇದು ಭಾರತದ ವಿಶಿಷ್ಟ ಮತ್ತು ಅಪರೂಪದ ಕರಕುಶಲಗಳನ್ನು ಉತ್ತೇಜಿಸುವ ವೇದಿಕೆ ಸೃಷ್ಟಿಸಲು ಮತ್ತು ಹೊಸತನ ಪ್ರದರ್ಶಿಸಲು ಕುಶಲಕರ್ಮಿಗಳು ಮತ್ತು ವಿನ್ಯಾಸಕಾರರನ್ನು ಒಟ್ಟುಗೂಡಿಸುತ್ತದೆ. "ಕುಶಲಕರ್ಮಿಗಳು ವಿನ್ಯಾಸ ಅಭಿವೃದ್ಧಿಯ ಬಗ್ಗೆ ಜ್ಞಾನ ಪಡೆಯುತ್ತಾರೆ, ಡಿಜಿಟಲ್ ಕ್ಷೇತ್ರದಲ್ಲಿ ಪ್ರವೀಣರಾಗುತ್ತಾರೆ", ಆಧುನಿಕ ಜ್ಞಾನ ಮತ್ತು ಸಂಪನ್ಮೂಲಗಳನ್ನು ಬಳಸಿಕೊಂಡು, ಭಾರತೀಯ ಕುಶಲಕರ್ಮಿಗಳು ಇಡೀ ವಿಶ್ವದ ಮೇಲೆ ತಮ್ಮ ಛಾಪು ಮೂಡಿಸಬಹುದು ಎಂಬ ವಿಶ್ವಾಸ ಹೊರಹಾಕಿದರು.

ಕೋಲ್ಕತ್ತಾ, ಮುಂಬೈ, ಅಹಮದಾಬಾದ್ ಮತ್ತು ವಾರಾಣಸಿಯಂತಹ 5 ನಗರಗಳಲ್ಲಿ ಸಾಂಸ್ಕೃತಿಕ ಸ್ಥಳಗಳನ್ನು ಸ್ಥಾಪಿಸುವುದು ಐತಿಹಾಸಿಕ ಹೆಜ್ಜೆಯಾಗಿದೆ. ಈ ನಗರಗಳನ್ನು ಸಾಂಸ್ಕೃತಿಕವಾಗಿ ದೆಹಲಿಯಂತೆ ಹೆಚ್ಚು ಶ್ರೀಮಂತಗೊಳಿಸಲಾಗಿದೆ. ಸ್ಥಳೀಯ ಕಲೆಯನ್ನು ಶ್ರೀಮಂತಗೊಳಿಸಲು ಈ ಕೇಂದ್ರಗಳು ವಿನೂತನ ಚಿಂತನೆಗಳನ್ನು ಸಹ ಮುಂದಿಡಲಿವೆ ಎಂಬ ಮಾಹಿತಿ ನೀಡಲಾಗಿದೆ. ಮುಂದಿನ 7 ದಿನಗಳ ಕಾಲ ನಡೆಯುವ 7 ಪ್ರಮುಖ ವಿಷಯಗಳನ್ನು ಗಮನಿಸಿದ ಪ್ರಧಾನ ಮಂತ್ರಿ, ‘ದೇಶಜ್ ಭಾರತ್ ವಿನ್ಯಾಸ: ಸ್ವದೇಶಿ ವಿನ್ಯಾಸಗಳು’ ಮತ್ತು ‘ಸಮತ್ವ: ನಿರ್ಮಿತವನ್ನು ರೂಪಿಸುವುದು’ ಅಂತಹ ವಿಷಯಗಳನ್ನು ಮುಂದಕ್ಕೆ ಕೊಂಡೊಯ್ಯಬೇಕು ಎಂದು ಪ್ರತಿಯೊಬ್ಬರನ್ನು ಒತ್ತಾಯಿಸಿದರು. ಯುವಕರು ಅದನ್ನು ಮತ್ತಷ್ಟು ಪುಷ್ಟೀಕರಿಸಲು ದೇಶೀಯ ವಿನ್ಯಾಸವನ್ನು ಅಧ್ಯಯನ ಮತ್ತು ಸಂಶೋಧನೆಯ ಭಾಗವಾಗಿಸುವ ಮಹತ್ವವಿದೆ. ಸಮಾನ ವಿಷಯವು ವಾಸ್ತುಶಿಲ್ಪ ಕ್ಷೇತ್ರದಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸುತ್ತದೆ. ಈ ಕ್ಷೇತ್ರವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಮಹಿಳೆಯರ ಕಲ್ಪನೆ ಮತ್ತು ಕಾರ್ಯಕ್ಷಮತೆಯ ಬಗ್ಗೆ ವಿಶ್ವಾಸವಿದೆ.

"ಕಲೆ, ಅಭಿರುಚಿ ಮತ್ತು ಬಣ್ಣಗಳನ್ನು ಭಾರತದಲ್ಲಿ ಜೀವನಕ್ಕೆ ಸಮಾನಾರ್ಥಕವೆಂದು ಪರಿಗಣಿಸಲಾಗಿದೆ". ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಪ್ರಮುಖ ವ್ಯತ್ಯಾಸವೆಂದರೆ ಸಾಹಿತ್ಯ, ಸಂಗೀತ ಮತ್ತು ಕಲೆ ಎಂದು ಅವರು ಪೂರ್ವಜರ ಸಂದೇಶ ಪುನರುಚ್ಚರಿಸಿದರು. "ಕಲೆ, ಸಾಹಿತ್ಯ ಮತ್ತು ಸಂಗೀತವು ಮಾನವ ಜೀವನಕ್ಕೆ ಪರಿಮಳ ನೀಡುತ್ತದೆ, ಅದು ಅದರ ವಿಶೇಷ ಗುಣವಾಗಿದೆ". ಚತುಷಷ್ಟ ಕಲೆ ಅಂದರೆ 64 ಕಲೆಗಳಿಗೆ ಸಂಬಂಧಿಸಿದ ಜೀವನದ ವಿವಿಧ ಅಗತ್ಯಗಳು ಮತ್ತು ಜವಾಬ್ದಾರಿಗಳನ್ನು ಸ್ಪರ್ಶಿಸಿದ ಪ್ರಧಾನ ಮಂತ್ರಿ, ‘ಉದಕ ವಾದ್ಯಂ’ ಅಥವಾ ಸಂಗೀತ ವಾದ್ಯಗಳ ಅಡಿ ನೀರಿನ ಅಲೆಗಳ ಆಧಾರದ ಮೇಲೆ ವಾದ್ಯಗಳು, ನೃತ್ಯ ಮತ್ತು ಹಾಡುಗಳು, ಕಲೆಗಳಿಗೆ ಹಾಡುವ ಕಲೆಗಳಂತಹ ನಿರ್ದಿಷ್ಟ ಕಲೆಗಳು, ಗಂಧ ಅಥವಾ ಸುಗಂಧ ದ್ರವ್ಯಗಳ ನಂತರ 'ಗಂಧ ಯುಕ್ತಿ', ದಂತಕವಚ ಮತ್ತು ಕೆತ್ತನೆಗಾಗಿ 'ತಕ್ಷಕರ್ಮ' ಕಲೆ ಮತ್ತು ಕಸೂತಿ ಮತ್ತು ನೇಯ್ಗೆಯಲ್ಲಿ 'ಸುಚಿವನ್ ಕರ್ಮಣಿ' ಕಲೆ,  ಭಾರತದಲ್ಲಿ ತಯಾರಿಸಿದ ಪ್ರಾಚೀನ ಬಟ್ಟೆಗಳ ಕೌಶಲ್ಯ ಮತ್ತು ಕರಕುಶಲತೆ, ಉಂಗುರದ ಮೂಲಕ ಹಾದುಹೋಗುವ ಮಸ್ಲಿನ್ ಬಟ್ಟೆ,  ಕತ್ತಿಗಳು, ಗುರಾಣಿಗಳು ಮತ್ತು ಈಟಿಗಳಂತಹ ಯುದ್ಧ ಸಾಮಗ್ರಿಗಳ ಮೇಲೆ ಅದ್ಭುತ ಕಲಾಕೃತಿಯ ಸರ್ವವ್ಯಾಪಿತ್ವ ಹೊಂದಿವೆ ಎಂದು ಅವರು ಪ್ರಸ್ತಾಪಿಸಿದರು.

ಕಾಶಿಯ ಅವಿನಾಶಿ ಸಂಸ್ಕೃತಿ ಪ್ರಸ್ತಾಪಿಸಿದ ಅವರು, ಆ ನಗರವು ಸಾಹಿತ್ಯ, ಸಂಗೀತ ಮತ್ತು ಕಲೆಗಳ ಅಮರ ನಾಡಾಗಿದೆ. "ಕಾಶಿ ತನ್ನ ಕಲೆಯಿಂದಲೇ ಶಿವನನ್ನು ಪ್ರತಿಷ್ಠಾಪಿಸಿದೆ, ಅಲ್ಲಿನ ಆಧ್ಯಾತ್ಮಿಕ ಕಲೆಗಳ ಮೂಲವನ್ನು ಪರಿಗಣಿಸಲಾಗಿದೆ". “ಕಲೆ, ಕರಕುಶಲ ಮತ್ತು ಸಂಸ್ಕೃತಿ ಮಾನವ ನಾಗರಿಕತೆಗೆ ಶಕ್ತಿಯ ಹರಿವಿನಂತೆ, ಶಕ್ತಿಯು ಅಮರವಾಗಿದೆ, ಆದುದರಿಂದ ಕಾಶಿಯೂ ಅವಿನಾಶಿಯಾಗಿದೆ. ಕಾಶಿಯಿಂದ ಅಸ್ಸಾಂಗೆ ಪ್ರಯಾಣಿಕರನ್ನು ಕೊಂಡೊಯ್ದ ಗಂಗಾ ವಿಲಾಸ್ ಕ್ರೂಸ್‌ಗಳು ಗಂಗಾ ನದಿಯ ದಡದಲ್ಲಿರುವ ಅನೇಕ ನಗರಗಳು ಮತ್ತು ಪ್ರದೇಶಗಳ ಪ್ರವಾಸವನ್ನು ಒದಗಿಸುವ ಮೂಲಕ ಇತ್ತೀಚೆಗೆ ಪ್ರಾರಂಭಿಸಲಾದ ಗಂಗಾ ವಿಲಾಸ್ ಕ್ರೂಸ್‌ಗಳನ್ನು ಪ್ರಧಾನ ಮಂತ್ರಿ ಉಲ್ಲೇಖಿಸಿದರು.

“ಕಲೆ ಯಾವುದೇ ರೂಪವಾಗಿರಬಹುದು, ಅದು ಪ್ರಕೃತಿಗೆ ಹತ್ತಿರದಲ್ಲಿದೆ. ಆದ್ದರಿಂದ ಕಲೆಯು ಪ್ರಕೃತಿಯ ಪರ, ಪರಿಸರ ಮತ್ತು ಹವಾಮಾನದ ಪರವಾಗಿದೆ”. ವಿಶ್ವಾದ್ಯಂತ ನದಿ ತೀರದ ಸಂಸ್ಕೃತಿಯ ಮೇಲೆ ಬೆಳಕು ಚೆಲ್ಲುವ ಮೂಲಕ, ಶ್ರೀ ಮೋದಿ ಅವರು ಭಾರತದಲ್ಲಿ ಸಾವಿರಾರು ವರ್ಷಗಳಿಂದ ನದಿಗಳ ದಡದಲ್ಲಿರುವ ಘಟ್ಟಗಳ  ಸಂಪ್ರದಾಯ ಸಾದೃಶ್ಯ ತೋರಿದರು. ಅನೇಕ ಹಬ್ಬಗಳು ಮತ್ತು ಆಚರಣೆಗಳು ಈ ಘಟ್ಟಗಳೊಂದಿಗೆ ಭಾರತದ ಸಂಬಂಧಗಳನ್ನು ಹೊಂದಿವೆ. ಅದೇ ರೀತಿ, ನಮ್ಮ ದೇಶದ ಬಾವಿಗಳು, ಕೊಳಗಳು ಮತ್ತು ಮೆಟ್ಟಿಲು ಬಾವಿಗಳ ಶ್ರೀಮಂತಿಕೆಯೇ ಇದೆ. ಗುಜರಾತ್‌, ರಾಜಸ್ಥಾನ ಮತ್ತು ದೆಹಲಿಯ ಹಲವಾರು ಸ್ಥಳಗಳಲ್ಲಿ ರಾಣಿ ಕಿ ವಾವ್ನ ಉದಾಹರಣೆ ನೀಡಿದ ಅವರು,  ಈ ಮೆಟ್ಟಿಲು ಬಾವಿಗಳು ಮತ್ತು ಭಾರತದ ಕೋಟೆಗಳ ವಿನ್ಯಾಸ ಮತ್ತು ವಾಸ್ತುಶಿಲ್ಪವನ್ನು ಶ್ಲಾಘಿಸಿದರು. ಕೆಲವು ದಿನಗಳ ಹಿಂದೆ ಸಿಂಧುದುರ್ಗ ಕೋಟೆಗೆ ಭೇಟಿ ನೀಡಿದ್ದನ್ನೂ ನೆನಪಿಸಿಕೊಂಡರು. ಜೈಸಲ್ಮೇರ್‌ನಲ್ಲಿರುವ ಪಟ್ವಾ ಕಿ ಹವೇಲಿಯು ನೈಸರ್ಗಿಕ ಹವಾನಿಯಂತ್ರಣದ ರೀತಿಯಲ್ಲಿ ಕಾರ್ಯ ನಿರ್ವಹಿಸುವ ರೀತಿಯಲ್ಲಿ ನಿರ್ಮಿಸಲಾದ 5 ಮಹಲುಗಳ ಸಮೂಹವಾಗಿದೆ. "ಈ ಎಲ್ಲಾ ವಾಸ್ತುಶೈಲಿಯು ಸಮರ್ಥನೀಯವಾಗಿವೆ" ಭಾರತದ ಕಲೆ ಮತ್ತು ಸಂಸ್ಕೃತಿಯಿಂದ ಇಡೀ ಜಗತ್ತು ಕಲಿಯಲು ಮತ್ತು ತಿಳಿದುಕೊಳ್ಳಲು ಅವಕಾಶವಿದೆ ಎಂದು ಪ್ರಧಾನಿ ತಿಳಿಸಿದರು.

"ಕಲೆ, ವಾಸ್ತುಶಿಲ್ಪ ಮತ್ತು ಸಂಸ್ಕೃತಿಯು ಮಾನವ ನಾಗರಿಕತೆಗೆ ವೈವಿಧ್ಯತೆ ಮತ್ತು ಏಕತೆಯ ಮೂಲವಾಗಿದೆ". ಭಾರತವು ವಿಶ್ವದ ಅತ್ಯಂತ ವೈವಿಧ್ಯಮಯ ರಾಷ್ಟ್ರವಾಗಿದ್ದು, ವೈವಿಧ್ಯತೆಯು ನಮ್ಮನ್ನು ಒಟ್ಟಿಗೆ ಸೇರಿಸುತ್ತದೆ. ಭಾರತದ ಪ್ರಜಾಸತ್ತಾತ್ಮಕ ಸಂಪ್ರದಾಯಕ್ಕೆ ವೈವಿಧ್ಯತೆಯ ಮೂಲವೇ ಪ್ರಜಾಪ್ರಭುತ್ವದ ತಾಯಿ. ಸಮಾಜದಲ್ಲಿ ಆಲೋಚನಾ ಸ್ವಾತಂತ್ರ್ಯ ಮತ್ತು ಸ್ವಂತ ರೀತಿಯಲ್ಲಿ ಕೆಲಸ ಮಾಡುವ ಸ್ವಾತಂತ್ರ್ಯ ಇದ್ದಾಗ ಮಾತ್ರ ಕಲೆ, ವಾಸ್ತುಶಿಲ್ಪ, ಸಂಸ್ಕೃತಿ ಬೆಳೆಯುತ್ತದೆ.  “ಚರ್ಚೆ ಮತ್ತು ಸಂವಾದದ ಈ ಸಂಪ್ರದಾಯದೊಂದಿಗೆ, ವೈವಿಧ್ಯತೆಯು ಸ್ವಯಂಚಾಲಿತವಾಗಿ ಪ್ರವರ್ಧಮಾನಕ್ಕೆ ಬರುತ್ತದೆ. ಪ್ರತಿಯೊಂದು ರೀತಿಯ ವೈವಿಧ್ಯತೆಯನ್ನು ನಾವು ಸ್ವಾಗತಿಸುತ್ತೇವೆ ಮತ್ತು ಬೆಂಬಲಿಸುತ್ತೇವೆ”, ಈ ವೈವಿಧ್ಯತೆಯನ್ನು ಜಗತ್ತಿಗೆ ಪ್ರದರ್ಶಿಸಲು ದೇಶದ ವಿವಿಧ ರಾಜ್ಯಗಳು ಮತ್ತು ನಗರಗಳಲ್ಲಿ ಜಿ-20 ಶೃಂಗವು ಎತ್ತಿ ತೋರಿಸಿದೆ ಎಂದು ಪ್ರಧಾನಮಂತ್ರಿ ಹೇಳಿದರು.

ಇಂದು ಭಾರತವು ವಿಶ್ವದ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮುತ್ತಿರುವಾಗ, ಪ್ರತಿಯೊಬ್ಬರೂ ಅದರಲ್ಲಿ ಉತ್ತಮ ಭವಿಷ್ಯ ನೋಡಬಹುದು. "ಭಾರತದ ಆರ್ಥಿಕ ಬೆಳವಣಿಗೆಯು ಇಡೀ ವಿಶ್ವದ ಪ್ರಗತಿಯೊಂದಿಗೆ ಸಂಬಂಧ ಹೊಂದಿದೆ, 'ಆತ್ಮನಿರ್ಭರ ಭಾರತ'ದ ದೃಷ್ಟಿಕೋನವು ಹೊಸ ಅವಕಾಶಗಳನ್ನು ತರುತ್ತದೆ". ಅದೇ ರೀತಿ, ಕಲೆ ಮತ್ತು ವಾಸ್ತುಶಿಲ್ಪ ಕ್ಷೇತ್ರದಲ್ಲಿ ಭಾರತದ ಪುನರುಜ್ಜೀವನವು ರಾಷ್ಟ್ರದ ಸಾಂಸ್ಕೃತಿಕ ಉನ್ನತಿಗೆ ಕೊಡುಗೆ ನೀಡುತ್ತಿದೆ. ಯೋಗ ಆಯುರ್ವೇದ ಪರಂಪರೆಯು ಸಹ ಇದಕ್ಕೆ ಸಾಕ್ಷಿಯಾಗಿದೆ. ಭಾರತದ ಸಾಂಸ್ಕೃತಿಕ ಮೌಲ್ಯಗಳನ್ನು ಗಮನದಲ್ಲಿಟ್ಟುಕೊಂಡು ಸುಸ್ಥಿರ ಜೀವನಶೈಲಿಗಾಗಿ ಮಿಷನ್ ಲೈಫ್‌ ಹೊಸ ಉಪಕ್ರಮ ಆರಂಭಿಸಲಾಗಿದೆ ಎಂದರು.

ನಾಗರಿಕತೆಗಳ ಏಳಿಗೆಗಾಗಿ ಪರಸ್ಪರ ಸಹಕಾರದ ಪ್ರಾಮುಖ್ಯತೆಯಿದೆ. ಇಲ್ಲಿ ಭಾಗವಹಿಸಿರುವ ದೇಶಗಳು ಪಾಲುದಾರಿಕೆ ಹೊಂದಿರುವುದು ಸ್ವಾಗತಾರ್ಹ ಎಂದರಲ್ಲದೆ, ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು. ಇನ್ನು ಹೆಚ್ಚು ಹೆಚ್ಚು ದೇಶಗಳು ಇಲ್ಲಿ ಒಗ್ಗೂಡಲಿವೆ. ಐಎಎಡಿಬಿ ಈ ದಿಕ್ಕಿನಲ್ಲಿ ಪ್ರಮುಖ ಆರಂಭವಾಗಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿ, ತಮ್ಮ ಭಾಷಣ ಮುಕ್ತಾಯಗೊಳಿಸಿದರು.

ಕೇಂದ್ರ ಸಂಸ್ಕೃತಿ ಸಚಿವ ಶ್ರೀ ಜಿ ಕಿಶನ್ ರೆಡ್ಡಿ, ಕೇಂದ್ರ ಸಂಸ್ಕೃತಿ ಖಾತೆ ರಾಜ್ಯ ಸಚಿವ ಶ್ರೀ ಅರ್ಜುನ್ ರಾಮ್ ಮೇಘವಾಲ್ ಮತ್ತು ಶ್ರೀಮತಿ ಮೀನಾಕ್ಷಿ ಲೇಖಿ ಮತ್ತು ಡಯಾನಾ ಕೆಲ್ಲಾಗ್ ಆರ್ಕಿಟೆಕ್ಟ್ಸ್‌ನ ಪ್ರಧಾನ ವಾಸ್ತುಶಿಲ್ಪಿ, ಶ್ರೀಮತಿ ಡಯಾನಾ ಕೆಲ್ಲಾಗ್ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ವೆನಿಸ್, ಸಾವೊ ಪಾಲೊ, ಸಿಂಗಾಪುರ, ಸಿಡ್ನಿ ಮತ್ತು ಶಾರ್ಜಾ ಮುಂತಾದವುಗಳಲ್ಲಿ ಅಂತಾರಾಷ್ಟ್ರೀಯ ವಸ್ತುಪ್ರದರ್ಶನಗಳಂತಹ ಪ್ರಮುಖ ಜಾಗತಿಕ ಸಾಂಸ್ಕೃತಿಕ ಉಪಕ್ರಮವನ್ನು ದೇಶದಲ್ಲಿ ಅಭಿವೃದ್ಧಿಪಡಿಸುವುದು ಮತ್ತು ಸಾಂಸ್ಥಿಕಗೊಳಿಸುವುದು ಪ್ರಧಾನ ಮಂತ್ರಿ ಅವರ ದೂರದೃಷ್ಟಿಯಾಗಿತ್ತು. ಈ ದೂರದೃಷ್ಟಿಗೆ ಅನುಗುಣವಾಗಿ, ವಸ್ತುಸಂಗ್ರಹಾಲಯಗಳನ್ನು ಮರುಶೋಧಿಸಲು, ಮರುಬ್ರಾಂಡ್ ಮಾಡಲು, ನವೀಕರಿಸಲು ಮತ್ತು ಮರುಸ್ಥಾಪನೆ ಮಾಡಲು ರಾಷ್ಟ್ರವ್ಯಾಪಿ ಅಭಿಯಾನ ಪ್ರಾರಂಭಿಸಲಾಯಿತು. ಇದಲ್ಲದೆ, ಭಾರತದ 5 ನಗರಗಳಾದ ಕೋಲ್ಕತ್ತಾ, ದೆಹಲಿ, ಮುಂಬೈ, ಅಹಮದಾಬಾದ್ ಮತ್ತು ವಾರಾಣಸಿಗಳಲ್ಲಿ ಸಾಂಸ್ಕೃತಿಕ ಸ್ಥಳಗಳ ಅಭಿವೃದ್ಧಿ ಸಹ ಘೋಷಿಸಲಾಯಿತು. ಭಾರತೀಯ ಕಲೆ, ವಾಸ್ತುಶಿಲ್ಪ ಮತ್ತು ವಿನ್ಯಾಸದ ದ್ವೈವಾರ್ಷಿಕ ವಸ್ತುಪ್ರದರ್ಶನ(ಐಎಎಡಿಬಿ)ವು ದೆಹಲಿಯ ಸಾಂಸ್ಕೃತಿಕ ತಾಣದಲ್ಲಿ ಪೀಠಿಕೆಯಾಗಿ ಕಾರ್ಯ ನಿರ್ವಹಿಸುತ್ತಿದೆ.

ಐಎಎಡಿಬಿಯನ್ನು 2023 ಡಿಸೆಂಬರ್ 9ರಿಂದ 15ರ ವರೆಗೆ ನವದೆಹಲಿಯ ಕೆಂಪುಕೋಟೆಯಲ್ಲಿ ಆಯೋಜಿಸಲಾಗಿದೆ. ಇದು ಇತ್ತೀಚೆಗೆ ಆಯೋಜಿಸಲಾದ ಇಂಟರ್ ನ್ಯಾಷನಲ್ ಮ್ಯೂಸಿಯಂ ಎಕ್ಸ್ ಫೋ(ಮೇ 2023) ಮತ್ತು ಗ್ರಂಥಾಲಯಗಳ ಉತ್ಸವ (ಆಗಸ್ಟ್ 2023) ನಂತಹ ಪ್ರಮುಖ ಉಪಕ್ರಮಗಳನ್ನು ಅನುಸರಿಸುತ್ತದೆ. ಸಾಂಸ್ಕೃತಿಕ ಸಂವಾದ ಬಲಪಡಿಸಲು ಕಲಾವಿದರು, ವಾಸ್ತುಶಿಲ್ಪಿಗಳು, ವಿನ್ಯಾಸಕರು, ಛಾಯಾಗ್ರಾಹಕರು, ಸಂಗ್ರಾಹಕರು, ಕಲಾ ವೃತ್ತಿಪರರು ಮತ್ತು ಸಾರ್ವಜನಿಕರ ನಡುವೆ ಸಮಗ್ರ ಸಂಭಾಷಣೆ ಪ್ರಾರಂಭಿಸಲು ಐಎಎಡಿಬಿಯನ್ನು ವಿನ್ಯಾಸಗೊಳಿಸಲಾಗಿದೆ. ವಿಕಸನಗೊಳ್ಳುತ್ತಿರುವ ಆರ್ಥಿಕತೆಯ ಭಾಗವಾಗಿ ಕಲೆ, ವಾಸ್ತುಶಿಲ್ಪ ಮತ್ತು ವಿನ್ಯಾಸದ ಸೃಷ್ಟಿಕರ್ತರೊಂದಿಗೆ ವಿಸ್ತರಿಸಲು ಮತ್ತು ಸಹಭಾಗಿತ್ವ ಏರ್ಪಡಿಸಲು ಇದು ಹಲವು ಮಾರ್ಗಗಳು ಮತ್ತು ಅವಕಾಶಗಳನ್ನು ಒದಗಿಸುತ್ತದೆ.

ಐಎಎಡಿಬಿ ವಾರದ ಪ್ರತಿ ದಿನ ವಿಭಿನ್ನ ವಸ್ತು ವಿಷಯ ಆಧಾರಿತ ವಸ್ತುಪ್ರದರ್ಶನಗಳನ್ನು ಜನರ ವೀಕ್ಷಣೆಗೆ ಒದಗಿಸುತ್ತದೆ:

ದಿನ 1: ಪ್ರವೇಶ- ಅಂಗೀಕಾರದ ವಿಧಿ: ಭಾರತದ ಬಾಗಿಲುಗಳು

ದಿನ 2: ಬಾಗ್ ಇ ಬಹಾರ್: ಗಾರ್ಡನ್ಸ್ ಆಸ್ ಯೂನಿವರ್ಸ್: ಗಾರ್ಡನ್ಸ್ ಆಫ್ ಇಂಡಿಯಾ

ದಿನ 3: ಸಂಪ್ರವಾ: ಸಮುದಾಯಗಳ ಸಂಗಮ: ಬಾವೊಲಿಸ್ ಆಫ್ ಇಂಡಿಯಾ

ದಿನ 4: ಸ್ಥಾಪತ್ಯ: ವಿರೋಧಿ ದುರ್ಬಲ ಅಲ್ಗಾರಿದಮ್: ಭಾರತದ ದೇವಾಲಯಗಳು

ದಿನ 5: ವಿಸ್ಮಯ: ಕ್ರಿಯೇಟಿವ್ ಕ್ರಾಸ್ಒವರ್: ಸ್ವತಂತ್ರ ಭಾರತದ ವಾಸ್ತುಶಿಲ್ಪದ ಅದ್ಭುತಗಳು

ದಿನ 6: ದೇಶಜ್ ಭಾರತ್ ವಿನ್ಯಾಸ: ಸ್ಥಳೀಯ ವಿನ್ಯಾಸಗಳು

ದಿನ 7: ಸಮತ್ವ: ನಿರ್ಮಾಣ ರೂಪಿಸುವುದು: ವಾಸ್ತುಶಿಲ್ಪದಲ್ಲಿ ಮಹಿಳೆಯರನ್ನು ಉತ್ತೇಜಿಸುವುದು.

ಐಎಎಡಿಬಿ ಮೇಲಿನ ವಿಷಯಗಳು, ಸಂವಾದ ಚರ್ಚೆಗಳು, ಕಲಾ ಕಾರ್ಯಾಗಾರಗಳು, ಕಲಾ ಬಜಾರ್, ಹೆರಿಟೇಜ್ ವಾಕ್‌ಗಳು ಮತ್ತು ಸಮಾನಾಂತರ ವಿದ್ಯಾರ್ಥಿಗಳ ವಸ್ತುಪ್ರದರ್ಶನಗಳ ಆಧಾರದ ಮೇಲೆ ಮಂಟಪಗಳು ಒಳಗೊಂಡಿರುತ್ತದೆ. ಲಲಿತ ಕಲಾ ಅಕಾಡೆಮಿಯ ವಿದ್ಯಾರ್ಥಿಗಳ ವಸ್ತುಪ್ರದರ್ಶನ(ಸಮುನ್ನತಿ)ವು ವಿದ್ಯಾರ್ಥಿಗಳಿಗೆ ತಮ್ಮ ಕೆಲಸ ಪ್ರದರ್ಶಿಸಲು, ಗೆಳೆಯರೊಂದಿಗೆ ಮತ್ತು ವೃತ್ತಿಪರರೊಂದಿಗೆ ಸಂವಹನ ನಡೆಸಲು ಮತ್ತು ವಿನ್ಯಾಸ ಸ್ಪರ್ಧೆಗಳು, ಪರಂಪರೆಯ ಪ್ರದರ್ಶನ, ಅನುಸ್ಥಾಪನ ವಿನ್ಯಾಸಗಳು, ಕಾರ್ಯಾಗಾರಗಳು ಇತ್ಯಾದಿಗಳ ಮೂಲಕ ವಾಸ್ತುಶಿಲ್ಪ ಸಮುದಾಯದೊಳಗೆ ಅಮೂಲ್ಯವಾದ ಮಾನ್ಯತೆ ಪಡೆಯಲು ಅವಕಾಶ ಒದಗಿಸುತ್ತದೆ. ಐಎಎಡಿಬಿ 23 ದೇಶಗಳ ಕಲಾಕೃತಿಗಳನ್ನು ಪ್ರದರ್ಶಿಸಲು ಇರುವ ಒಂದು ಅದ್ಭುತ ಕ್ಷಣವಾಗಿದೆ.

‘ಲೋಕಲ್ ಫಾರ್ ವೋಕಲ್’ ಎಂಬ ಪ್ರಧಾನ ಮಂತ್ರಿ ಅವರ ದೂರದೃಷ್ಟಿಗೆ ಅನುಗುಣವಾಗಿ, ಕೆಂಪುಕೋಟೆಯಲ್ಲಿ ‘ಆತ್ಮನಿರ್ಭರ್ ಭಾರತ್ ಸೆಂಟರ್ ಫಾರ್ ಡಿಸೈನ್’ ಸ್ಥಾಪಿಸಲಾಗುತ್ತಿದೆ. ಇದು ಭಾರತದ ಅನನ್ಯ ಮತ್ತು ಸ್ಥಳೀಯ ಕರಕುಶಲಗಳನ್ನು ಪ್ರದರ್ಶಿಸುತ್ತದೆ ಮತ್ತು ಕಲೆಗಾರರು ಮತ್ತು ವಿನ್ಯಾಸಕರ ನಡುವೆ ಸಹಯೋಗದ ಜಾಗ  ಒದಗಿಸುತ್ತದೆ. ಸುಸ್ಥಿರ ಸಾಂಸ್ಕೃತಿಕ ಆರ್ಥಿಕತೆಯ ಹಾದಿಯನ್ನು ಸುಗಮಗೊಳಿಸುತ್ತದೆ. ಇದು ಕುಶಲಕರ್ಮಿ ಸಮುದಾಯಗಳನ್ನು ಹೊಸ ವಿನ್ಯಾಸಗಳು ಮತ್ತು ಆವಿಷ್ಕಾರಗಳೊಂದಿಗೆ ಸಬಲಗೊಳಿಸುತ್ತದೆ.

 

***


(Release ID: 1984854) Visitor Counter : 103