ಪ್ರಧಾನ ಮಂತ್ರಿಯವರ ಕಛೇರಿ

ಐಟಿಐ ಪ್ರಮಾಣೀಕೃತ ರೈತರಾದ ಗುಜರಾತಿನ ಭರೂಚ್ ನ ವಿ.ಬಿ.ಎಸ್.ವೈ.  ಫಲಾನುಭವಿ ಶ್ರೀ ಅಲ್ಪೇಶ್ ಭಾಯ್ ಚಂದುಭಾಯಿ ನಿಜಾಮಾ ಅವರೊಂದಿಗೆ ಪ್ರಧಾನಮಂತ್ರಿಯವರ ಸಂವಾದ 


"ಶಿಕ್ಷಿತ ಯುವಕರು ಕೃಷಿ ಕ್ಷೇತ್ರಕ್ಕೆ ಪ್ರವೇಶಿಸುವುದು ರೈತರಿಗೆ ಹೊಲದಿಂದ ಮಾರುಕಟ್ಟೆಯವರೆಗೆ ಉತ್ತಮ ವಾತಾವರಣವನ್ನು ಒದಗಿಸುವ ಸಂಕಲ್ಪಕ್ಕೆ ಬಲ ನೀಡುತ್ತದೆ: ಪ್ರಧಾನಮಂತ್ರಿ"

Posted On: 09 DEC 2023 3:05PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ವಿಕಸಿತ ಭಾರತ ಸಂಕಲ್ಪ ಯಾತ್ರೆಯ (ವಿ.ಬಿ.ಎಸ್.ವೈ) ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು. ಈ ಯೋಜನೆಗಳ ಪ್ರಯೋಜನಗಳು ಎಲ್ಲಾ ಉದ್ದೇಶಿತ ಫಲಾನುಭವಿಗಳಿಗೆ ಸಮಯಕ್ಕೆ ಅನುಗುಣವಾಗಿ ತಲುಪುವುದನ್ನು ಖಚಿತಪಡಿಸಿಕೊಳ್ಳಲು ವಿಕಸಿತ ಭಾರತ ಸಂಕಲ್ಪ ಯಾತ್ರೆಯನ್ನು ದೇಶಾದ್ಯಂತ  ಕೈಗೊಳ್ಳಲಾಗುತ್ತಿದೆ.

ಐಟಿಐ ಪ್ರಮಾಣೀಕೃತ ರೈತರು ಮತ್ತು ಹಾರ್ಡ್ ವೇರ್ ಎಂಜಿನಿಯರಿಂಗ್ ನಲ್ಲಿ ಡಿಪ್ಲೊಮಾ ಹೊಂದಿರುವವರು, ಗುಜರಾತಿನ ಭರೂಚ್ ನ ವಿ.ಬಿ.ಎಸ್.ವೈ ಫಲಾನುಭವಿಯಾದ ಶ್ರೀ ಅಲ್ಪೇಶ್ ಭಾಯ್ ಚಂದುಭಾಯಿ ನಿಜಾಮಾ ಅವರೊಂದಿಗಿನ ಸಂವಾದದಲ್ಲಿ ಪ್ರಧಾನ ಮಂತ್ರಿಯವರು ಕೃಷಿ ಕ್ಷೇತ್ರಕ್ಕೆ ಸೇರುವ ಅವರ ನಿರ್ಧಾರದ ಬಗ್ಗೆ ಕೇಳಿದರು. ಅದಕ್ಕೆ ಉತ್ತರಿಸಿದ ಅಲ್ಪೇಶಭಾಯ್, ತಾನು ಕೆಲಸ ಬಿಟ್ಟು ತನ್ನ ಪೂರ್ವಿಕರ 40 ಎಕರೆ ಜಮೀನಿನಲ್ಲಿ ಕೃಷಿಕನಾಗಲು ನಿರ್ಧರಿಸಿದ್ದೇನೆ. ತಾನು ಸಬ್ಸಿಡಿ ಬೆಲೆಯಲ್ಲಿ ಕೃಷಿ ಉಪಕರಣಗಳನ್ನು ಖರೀದಿಸಿದ ರಾಜ್ಯ ಮತ್ತು ಕೇಂದ್ರ ಸರ್ಕಾರದ ಪ್ರಯೋಜನಗಳನ್ನು ಪಡೆದುಕೊಂಡಿದ್ದೇನೆ ಎಂದು ಅವರು ಪ್ರಧಾನಮಂತ್ರಿಯವರಿಗೆ ತಿಳಿಸಿದರು. ಹನಿ ನೀರಾವರಿ ತಂತ್ರಗಳಲ್ಲಿ 3 ಲಕ್ಷ ರೂ.ಗಳ ಸಹಾಯಧನವನ್ನು ಪಡೆದುಕೊಂಡಿದ್ದೇನೆ ಎಂದೂ ಅವರು ಹೇಳಿದರು. “ನಿಮ್ಮ ವಯಸ್ಸಿನಲ್ಲಿ ಲಕ್ಷ ರೂಪಾಯಿ ಹೇಗಿರುತ್ತೆ ಎಂದು ನನಗೆ ಗೊತ್ತಿರಲಿಲ್ಲ ಮತ್ತು ನೀವು ಲಕ್ಷದ ಬಗ್ಗೆ ಮಾತನಾಡುತ್ತಿದ್ದೀರ. ಇದನ್ನೇ ಬದಲಾವಣೆ ಎನ್ನುವುದು”ಎಂದು ಪ್ರಧಾನಮಂತ್ರಿಯವರು ಹೇಳಿದರು.

ಅಲ್ಪೇಶಭಾಯ್ ಅವರು ಪಡೆದ ಸಬ್ಸಿಡಿಗಳ ಬಗ್ಗೆ ಪ್ರಧಾನಮಂತ್ರಿಯವರು ತೃಪ್ತಿ ವ್ಯಕ್ತಪಡಿಸಿದರು ಮತ್ತು ಇತ್ತೀಚಿನ ಕೃಷಿ ತಂತ್ರಗಳು ಮತ್ತು ಆಧುನಿಕ ಸಲಕರಣೆಗಳ ಬಗ್ಗೆ  ಇತರ ರೈತರಿಗೆ ಸಲಹೆ ನೀಡುವಂತೆ ಹೇಳಿದರು. ಶ್ರೀ ಅಲ್ಪೇಶಭಾಯ್ ಅವರು ಎಟಿಎಂಎ (ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆ) ಯೋಜನೆಗಳೊಂದಿಗೆ 2008 ರಿಂದ ಇರುವ ತಮ್ಮ ಒಡನಾಟದ ಬಗ್ಗೆ ಮಾತನಾಡಿದರು, ಅಲ್ಲಿ ಅವರು ಇತರ ಪ್ರದೇಶಗಳು ಮತ್ತು ರಾಜ್ಯಗಳ ಕೃಷಿ ತಂತ್ರಗಳ ಬಗ್ಗೆ ಜ್ಞಾನವನ್ನು ಪಡೆದಿರುವುದನ್ನು ಹಾಗು ಭರೂನಲ್ಲಿ ಪ್ರಧಾನ ಮಂತ್ರಿಯವರ ಸಮ್ಮುಖದಲ್ಲಿ ಎಟಿಎಂಎಯಿಂದ ‘ಅತ್ಯುತ್ತಮ ರೈತ ಪ್ರಶಸ್ತಿ’ ಸ್ವೀಕರಿಸಿರುವುದಾಗಿ ತಿಳಿಸಿದರು.

ಈ ಹಿನ್ನೆಲೆಯಲ್ಲಿ ಮಗಳ ನಗುತ್ತಿರುವ ಮುಖವನ್ನು ಗಮನಿಸಿದ ಪ್ರಧಾನಮಂತ್ರಿಯವರು, ಆಕೆಯೊಂದಿಗೆ ಸಂವಾದ ನಡೆಸಿ, ‘ಭಾರತ್ ಮಾತಾ ಕಿ ಜೈʼಘೋಷಣೆಯನ್ನು ಹೇಳುವಂತೆ ಕೇಳಿದರು. ಪರಿಣಾಮವಾಗಿ, ಇಡೀ ಜನಸಮೂಹವು  ಚಪ್ಪಾಳೆ ತಟ್ಟಲು ಅದು ಪ್ರಧಾನಮಂತ್ರಿಯವರಿಗೆ ಅಪಾರ ಸಂತೋಷವನ್ನು ತಂದಿತು.

ಶ್ರೀ ಅಲ್ಪೇಶಭಾಯಿಯಂತಹವರು ಕೃಷಿಯತ್ತ ಮುಖ ಮಾಡುತ್ತಿರುವ ಯುವಜನತೆಗೆ ಸ್ಪೂರ್ತಿಯಾಗಿದ್ದಾರೆ ಎಂದು ತಿಳಿಸಿ ಪ್ರಧಾನಮಂತ್ರಿಯವರು ಮಾತು ಮುಗಿಸಿದರು. ಆಧುನೀಕರಿಸಿದ ತಂತ್ರಗಳು, ಆವಿಷ್ಕಾರಗಳು ಮತ್ತು ಹೊಸ ಚಿಂತನೆಯೊಂದಿಗೆ ಹೊಲಗಳಿಂದ ಮಾರುಕಟ್ಟೆಗೆ (ಬೀಜದಿಂದ ಮಾರುಕಟ್ಟೆಗೆ)  ಉತ್ತಮ ವಾತಾವರಣವನ್ನು ಒದಗಿಸುವ ಭರವಸೆಯನ್ನು ಅವರು ರೈತರಿಗೆ ನೀಡಿದರು. ವಿದ್ಯಾವಂತ ಯುವಕರು ಬೇಸಾಯಕ್ಕೆ ತೊಡಗಿರುವುದು ಈ ನಿರ್ಣಯಕ್ಕೆ ಬಲ ನೀಡುತ್ತದೆ ಎಂದು ಅವರು ಹೇಳಿದರು. ಕೃಷಿಯಲ್ಲಿ ಡ್ರೋನ್  ಗಳನ್ನು   ಬಳಸುವತ್ತ ಗಮನಹರಿಸುವಂತೆ ಪ್ರಧಾನಮಂತ್ರಿ ರೈತರನ್ನು ಉತ್ತೇಜಿಸಿದರು. ಮುಂದಿನ 5 ಗ್ರಾಮಗಳಲ್ಲಿ ‘ಮೋದಿ ಕಿ ಗ್ಯಾರಂಟಿ’ ವಾಹನದ ಭವ್ಯ ಸ್ವಾಗತಕ್ಕೆ ರೈತರು ಸಿದ್ಧರಾಗುವಂತೆ ಶ್ರೀ ಮೋದಿಯವರು ವಿನಂತಿಸಿದರು.  


***



(Release ID: 1984517) Visitor Counter : 64