ಪ್ರಧಾನ ಮಂತ್ರಿಯವರ ಕಛೇರಿ

ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಫಲಾನುಭವಿಗಳೊಂದಿಗೆ ಪ್ರಧಾನಮಂತ್ರಿಯವರ ಸಂವಾದ   


ಅತ್ಯಲ್ಪ ಸಮಯದಲ್ಲಿಯೇ 1.25 ಕೋಟಿಗೂ ಹೆಚ್ಚು ಜನರು 'ಮೋದಿ ಕಿ ಗ್ಯಾರಂಟಿ' ವಾಹನದೊಂದಿಗೆ ಸಂಪರ್ಕ ಹೊಂದಿದ್ದಾರೆ"
 
"ವಿಕಸಿತ ಭಾರತ ಸಂಕಲ್ಪ ಯಾತ್ರೆಯು ಸರ್ಕಾರದ ಸವಲತ್ತುಗಳ ಪರಿಪೂರ್ಣತೆಯತ್ತ ಗಮನ ಕೇಂದ್ರೀಕರಿಸುತ್ತದೆ, ಅವುಗಳು ಭಾರತದಾದ್ಯಂತ ನಾಗರಿಕರನ್ನು ತಲುಪುವುದನ್ನು ಖಚಿತಪಡಿಸಿಕೊಳ್ಳುತ್ತದೆ"
 
"ಮೋದಿ ಕಿ ಗ್ಯಾರಂಟಿ ಎಂದರೆ ಈಡೇರುವ ಭರವಸೆ ಎಂದು ಜನರು ವಿಶ್ವಾಸವಿಟ್ಟಿದ್ದಾರೆ"
 
"ಇದುವರೆಗೆ ಸರ್ಕಾರದ ಯೋಜನೆಗಳೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗದ ಜನರನ್ನು ತಲುಪಲು ವಿಕಸಿತ ಭಾರತ ಸಂಕಲ್ಪ ಯಾತ್ರೆ ಒಂದು ಉತ್ತಮ ಮಾಧ್ಯಮವಾಗಿದೆ"
 
"ನಮ್ಮ ಸರ್ಕಾರ ಮೈ-ಬಾಪ್ ಸರ್ಕಾರವಲ್ಲ, ಬದಲಿಗೆ ಇದು ತಂದೆ-ತಾಯಂದಿರ ಸೇವೆ ಮಾಡುವ ಸರ್ಕಾರ"
 
"ಪ್ರತಿಯೊಬ್ಬ ಬಡವ, ಮಹಿಳೆ, ಯುವಕ ಮತ್ತು ರೈತ ನನಗೆ ವಿಐಪಿ"
 
"ನಾರಿ ಶಕ್ತಿ, ಯುವ ಶಕ್ತಿ, ರೈತರು ಅಥವಾ ಬಡವರು ಯಾರೇ ಆಗಲಿ, ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ ಅವರ ಬೆಂಬಲ ಅದ್ಭುತವಾಗಿದೆ"

Posted On: 09 DEC 2023 3:42PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ವಿಕಸಿತ ಭಾರತ ಸಂಕಲ್ಪ ಯಾತ್ರೆಯ (ವಿ ಬಿ ಎಸ್‌ ವೈ) ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು. ವಿಕಸಿತ ಭಾರತ ಸಂಕಲ್ಪ ಯಾತ್ರೆಯನ್ನು ದೇಶದಾದ್ಯಂತ ಕೈಗೊಳ್ಳಲಾಗುತ್ತಿದ್ದು, ಈ ಯೋಜನೆಗಳ ಸವಲತ್ತುಗಳು ಎಲ್ಲಾ ಉದ್ದೇಶಿತ ಫಲಾನುಭವಿಗಳಿಗೆ ಕಾಲಮಿತಿಯಲ್ಲಿ ತಲುಪುವುದನ್ನು ಖಾತ್ರಿಪಡಿಸುವ ಮೂಲಕ ಸರ್ಕಾರದ ಪ್ರಮುಖ ಯೋಜನೆಗಳ ಪರಿಪೂರ್ಣತೆಯನ್ನು ಸಾಧಿಸಲು ಪ್ರಯತ್ನಿಸುತ್ತಿದೆ.

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ‘ಮೋದಿ ಕಿ ಗ್ಯಾರಂಟಿ’ವಾಹನಕ್ಕೆ ಪ್ರತಿ ಹಳ್ಳಿಯಲ್ಲಿಯೂ ಕಂಡುಬರುತ್ತಿರುವ ಅದ್ಭುತ ಉತ್ಸಾಹದ ಬಗ್ಗೆ ಗಮನ ಸೆಳೆದರು. ಸ್ವಲ್ಪ ಸಮಯದ ಹಿಂದೆ ಫಲಾನುಭವಿಗಳೊಂದಿಗೆ ನಡೆಸಿದ ತಮ್ಮ ಸಂವಾದವನ್ನು ಪ್ರಸ್ತಾಪಿಸಿದ ಪ್ರಧಾನಿ, ಈ ಪ್ರಯಾಣದಲ್ಲಿ 1.5 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳು ತಮ್ಮ ಅನುಭವಗಳನ್ನು ದಾಖಲಿಸಿದ್ದಾರೆ ಎಂದು ತಿಳಿಸಿದರು. ಶಾಶ್ವತ ಮನೆ, ನಲ್ಲಿ ನೀರಿನ ಸಂಪರ್ಕ, ಶೌಚಾಲಯ, ಉಚಿತ ಚಿಕಿತ್ಸೆ, ಉಚಿತ ಪಡಿತರ, ಗ್ಯಾಸ್ ಸಂಪರ್ಕ, ವಿದ್ಯುತ್ ಸಂಪರ್ಕ, ಬ್ಯಾಂಕ್ ಖಾತೆ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ, ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ, ಪ್ರಧಾನ ಮಂತ್ರಿ ಸ್ವನಿಧಿ ಯೋಜನೆ ಮತ್ತು ಪ್ರಧಾನ ಮಂತ್ರಿ ಸ್ವಾಮಿತ್ವ ಆಸ್ತಿ ಕಾರ್ಡ್‌ ಮತ್ತಿತರ ಸವಲತ್ತುಗಳನ್ನು ಅವರು ಪ್ರಸ್ತಾಪಿಸಿದರು. ದೇಶದಾದ್ಯಂತ ಹಳ್ಳಿಗಳ ಕೋಟ್ಯಂತರ ಕುಟುಂಬಗಳು ಯಾವುದೇ ಸರ್ಕಾರಿ ಕಚೇರಿಗೆ ಪದೇ ಪದೇ ಅಲೆಯದೇ ಸರ್ಕಾರದ ಯೋಜನೆಗಳ ಪ್ರಯೋಜನವನ್ನು ಪಡೆದಿವೆ ಎಂದು ಅವರು ಹೇಳಿದರು. ಸರಕಾರವು ಫಲಾನುಭವಿಗಳನ್ನು ಗುರುತಿಸಿ ನಂತರ ಅವರಿಗೆ ಸವಲತ್ತು ನೀಡಲು ಕ್ರಮಕೈಗೊಂಡಿದೆ ಎಂದು ಒತ್ತಿ ಹೇಳಿದರು. ಅದಕ್ಕಾಗಿಯೇ ಜನರು, ಮೋದಿ ಕಿ ಗ್ಯಾರಂಟಿ ಎಂದರೆ ಈಡೇರುವ ಭರವಸೆ ಎಂದು ಹೇಳುತ್ತಾರೆ ಎಂದರು. 

"ವಿಕಸಿತ ಭಾರತ ಸಂಕಲ್ಪ ಯಾತ್ರೆಯು ಇಲ್ಲಿಯವರೆಗೆ ಸರ್ಕಾರದ ಯೋಜನೆಗಳೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗದ ಜನರನ್ನು ತಲುಪಲು ಉತ್ತಮ ಮಾಧ್ಯಮವಾಗಿದೆ" ಎಂದು ಪ್ರಧಾನಮಂತ್ರಿ ಹೇಳಿದರು. ವಿ ಬಿ ಎಸ್‌ ವೈ ಪ್ರಯಾಣವು ಒಂದು ತಿಂಗಳೊಳಗೆ 40 ಸಾವಿರಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳು ಮತ್ತು ಅನೇಕ ನಗರಗಳನ್ನು ತಲುಪಿದೆ. ಅಲ್ಲಿ 1.25 ಕೋಟಿಗೂ ಹೆಚ್ಚು ಜನರು ‘ಮೋದಿ ಕಿ ಗ್ಯಾರಂಟಿ’ ವಾಹನದೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಅವರು ಹೇಳಿದರು. ‘ಮೋದಿ ಕಿ ಗ್ಯಾರಂಟಿ’ವಾಹನವನ್ನು ಸ್ವಾಗತಿಸಿದ್ದಕ್ಕಾಗಿ ಜನರಿಗೆ ಕೃತಜ್ಞತೆಯನ್ನು ತಳಿಸಿದರು. ಕಾರ್ಯಕ್ರಮದ ಆರಂಭಕ್ಕೂ ಮುನ್ನ ನಡೆಯುತ್ತಿರುವ ಹಲವಾರು ಚಟುವಟಿಕೆಗಳನ್ನು ಗಮನಿಸಿದ ಪ್ರಧಾನಿ ಮೋದಿ, ಸ್ವಚ್ಛತಾ ಅಭಿಯಾನ ಆಯೋಜಿಸಲಾಗಿದೆ, ಜಾಗೃತಿ ಮೂಡಿಸಲು ಪ್ರಭಾತ್ ಪೇರಿಗಳನ್ನು ಮಾಡಲಾಗಿದೆ, ಶಾಲೆಗಳಲ್ಲಿ, ಪ್ರಾರ್ಥನಾ ಸಭೆಗಳಲ್ಲಿ ಅಭಿವೃದ್ಧಿ ಹೊಂದಿದ ಭಾರತದ ಕುರಿತು ಮಕ್ಕಳು ಚರ್ಚಿಸುವುದು, ರಂಗೋಲಿ ಹಾಕುವುದು, ಪ್ರತಿ ಮನೆಯ ಬಾಗಿಲಲ್ಲಿ ದೀಪ ಬೆಳಗಿಸುತ್ತಿರುವುದನ್ನು ಅವರು ಪ್ರಸ್ತಾಪಿಸಿದರು. ಪಂಚಾಯತಿಗಳು ವಿಶೇಷ ಸಮಿತಿಗಳನ್ನು ರಚಿಸಿ ವಿ ಬಿ ಎಸ್‌ ವೈ ಸ್ವಾಗತಿಸುವ ಪ್ರಮುಖ ಪಾತ್ರವನ್ನು ವಹಿಸಿಕೊಂಡಿವೆ ಎಂದು ಶ್ರೀ ಮೋದಿ ಸಂತಸ ವ್ಯಕ್ತಪಡಿಸಿದರು. ಶಾಲಾ ಮಕ್ಕಳು ಹಾಗೂ ವಯೋವೃದ್ಧರು ಭಾಗವಹಿಸುತ್ತಿರುವುದನ್ನು ಶ್ಲಾಘಿಸಿದ ಅವರು, ವಿ ಬಿ ಎಸ್ ವೈ  ದೇಶದ ಮೂಲೆ ಮೂಲೆಗೆ ತಲುಪುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಒಡಿಶಾದ ವಿವಿಧ ಸ್ಥಳಗಳಲ್ಲಿ ಸಾಂಪ್ರದಾಯಿಕ ಬುಡಕಟ್ಟು ನೃತ್ಯದೊಂದಿಗೆ ಯಾತ್ರೆಯನ್ನು ಸ್ವಾಗತಿಸಲಾಗುತ್ತಿರುವುದನ್ನು ಗಮನಿಸಿದ ಪ್ರಧಾನಿ, ಪಶ್ಚಿಮ ಖಾಸಿ ಹಿಲ್‌ ನ ರಾಂಬ್ರಾಯ್‌ ನಲ್ಲಿ ಸ್ಥಳೀಯ ಜನರು ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ನೃತ್ಯವನ್ನು ಆಯೋಜಿಸಿದ್ದ ಕಾರ್ಯಕ್ರಮವನ್ನು ಪ್ರಸ್ತಾಪಿಸಿದರು. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಲಕ್ಷದ್ವೀಪ ಮತ್ತು ಕಾರ್ಗಿಲ್‌ ನಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅವರು ಪ್ರಸ್ತಾಪಿಸಿದರು, ಅಲ್ಲಿ ವಿ ಬಿ ಎಸ್ ವೈ  ಸ್ವಾಗತಿಸಲು 4,000 ಕ್ಕೂ ಹೆಚ್ಚು ಜನರು ಸೇರಿದ್ದರು. ವಿ ಬಿ ಎಸ್ ವೈ  ಆಗಮನದ ಮೊದಲು ಮತ್ತು ನಂತರದ ಪ್ರಗತಿಯನ್ನು ಅಳೆಯಲು ಕೈಪಿಡಿಯನ್ನು ಸಿದ್ಧಪಡಿಸುವಂತೆ ಪ್ರಧಾನ ಮಂತ್ರಿ ಸಲಹೆ ನೀಡಿದರು. "ಈ ಗ್ಯಾರಂಟಿ ವಾಹನವು ಇನ್ನೂ ತಲುಪಬೇಕಾದ ಪ್ರದೇಶಗಳ ಜನರಿಗೆ ಸಹಾಯ ಮಾಡುತ್ತದೆ" ಎಂದು ಅವರು ಹೇಳಿದರು.

 ‘ಮೋದಿ ಕಿ ಗ್ಯಾರಂಟಿ’ವಾಹನ ಬಂದಾಗ ಗ್ರಾಮದ ಪ್ರತಿಯೊಬ್ಬ ವ್ಯಕ್ತಿಯೂ ಅದನ್ನು ತಲುಪಬೇಕು ಎಂಬುದನ್ನು ಖಚಿತಪಡಿಸಿಕೊಳ್ಳುವ ಸರ್ಕಾರದ ಪ್ರಯತ್ನವನ್ನು ಪ್ರಧಾನಮಂತ್ರಿ ಒತ್ತಿ ಹೇಳಿದರು, ಇದರಿಂದ ಸರ್ಕಾರದ ಯೋಜನೆಗಳ ಪರಿಪೂರ್ಣತೆಯ ಸಂಕಲ್ಪವನ್ನು ಪೂರೈಸಬಹುದು. ಸರ್ಕಾರದ ಪ್ರಯತ್ನದ ಪರಿಣಾಮ ಪ್ರತಿ ಹಳ್ಳಿಯಲ್ಲೂ ಕಂಡುಬರುತ್ತಿದೆ ಎಂದು ಹೇಳಿದ ಶ್ರೀ ಮೋದಿ, ಉಜ್ವಲ ಯೋಜನೆಯಡಿ ಸುಮಾರು 1 ಲಕ್ಷ ಹೊಸ ಫಲಾನುಭವಿಗಳು ಉಚಿತ ಅನಿಲ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ, 35 ಲಕ್ಷಕ್ಕೂ ಹೆಚ್ಚು ಆಯುಷ್ಮಾನ್ ಕಾರ್ಡ್‌ಗಳನ್ನು ಸ್ಥಳದಲ್ಲೇ ನೀಡಲಾಗಿದೆ, ಲಕ್ಷಂಆತರ ಜನರ ಆರೋಗ್ಯ ತಪಾಸಣೆ ನಡೆಸಲಾಗುತ್ತಿದ್ದು, ಹೆಚ್ಚಿನ ಸಂಖ್ಯೆಯ ಜನರು ಈಗ ಆಯುಷ್ಮಾನ್ ಆರೋಗ್ಯ ಮಂದಿರಗಳಿಗೆ ಮತ್ತು ವಿವಿಧ ಪರೀಕ್ಷೆಗಳಿಗೆ ಹೋಗುತ್ತಿದ್ದಾರೆ ಎಂದು ಅವರು ಹೇಳಿದರು.

"ನಾವು ಕೇಂದ್ರ ಸರ್ಕಾರ ಮತ್ತು ದೇಶದ ಜನರ ನಡುವೆ ನೇರ ಸಂಪರ್ಕವನ್ನು, ಭಾವನಾತ್ಮಕ ಸಂಬಂಧವನ್ನು ಸ್ಥಾಪಿಸಿದ್ದೇವೆ" ಎಂದು ಶ್ರೀ ಮೋದಿ ಹೇಳಿದರು. "ನಮ್ಮ ಸರ್ಕಾರವು ಮೈ-ಬಾಪ್ ಸರ್ಕಾರವಲ್ಲ, ಬದಲಿಗೆ ಇದು ತಂದೆ-ತಾಯಂದಿರ ಸೇವೆ ಮಾಡುವ ಸರ್ಕಾರ" ಎಂದು ಅವರು ಹೇಳಿದರು, "ಮೋದಿಯ ವಿಐಪಿಗಳು ಬಡವರು, ವಂಚಿತರು ಮತ್ತು ಯಾರಿಗೆ ಸರ್ಕಾರಿ ಕಚೇರಿಗಳ ಬಾಗಿಲುಗಳು ಮುಚ್ಚಿವೆಯೋ ಅವರು, ದೇಶದ ಪ್ರತಿಯೊಬ್ಬ ಬಡವರನ್ನು ವಿಐಪಿ ಎಂದು ಪರಿಗಣಿಸಲಾಗಿದೆ” ಎಂದು ಅವರು ಒತ್ತಿ ಹೇಳಿದರು. “ದೇಶದ ಪ್ರತಿಯೊಬ್ಬ ತಾಯಿ, ಸಹೋದರಿ ಮತ್ತು ಮಗಳು ನನಗೆ ವಿಐಪಿ. ದೇಶದ ಪ್ರತಿಯೊಬ್ಬ ರೈತನೂ ನನಗೆ ವಿಐಪಿ. ದೇಶದ ಪ್ರತಿಯೊಬ್ಬ ಯುವಕನೂ ನನಗೆ ವಿಐಪಿ” ಎಂದು ಪ್ರಧಾನಿ ಹೇಳಿದರು.

ಇತ್ತೀಚೆಗಷ್ಟೇ ಮುಕ್ತಾಯಗೊಂಡ ವಿಧಾನಸಭೆ ಚುನಾವಣೆಗಳನ್ನು ಪ್ರಸ್ತಾಪಿಸಿದ ಪ್ರಧಾನಿ, ಚುನಾವಣಾ ಫಲಿತಾಂಶಗಳು ಮೋದಿಯವರ ಖಾತರಿಯ ಸಿಂಧುತ್ವದ ಸ್ಪಷ್ಟ ಸೂಚನೆಯನ್ನು ನೀಡಿವೆ ಎಂದು ಹೇಳಿದರು. ಮೋದಿಯವರ ಭರವಸೆಯನ್ನು ನಂಬಿದ ಎಲ್ಲ ಮತದಾರರಿಗೆ ಅವರು ಕೃತಜ್ಞತೆ ಸಲ್ಲಿಸಿದರು.

ಸರ್ಕಾರದ ವಿರುದ್ಧ ನಿಂತಿರುವವರ ಕುರಿತು ನಾಗರಿಕರ ಅಪನಂಬಿಕೆಯ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ, ಸುಳ್ಳುಗಳ ವಿರುದ್ಧ ಜನರ ಒಲವನ್ನು ಎತ್ತಿ ತೋರಿಸಿದರು. ಚುನಾವಣೆ ಗೆಲ್ಲಬೇಕಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಅಲ್ಲ, ಜನರನ್ನು ತಲುಪುವ ಮೂಲಕ ಎಂದರು. "ಚುನಾವಣೆಗಳನ್ನು ಗೆಲ್ಲುವ ಮೊದಲು, ಜನರ ಹೃದಯವನ್ನು ಗೆಲ್ಲುವುದು ಅವಶ್ಯಕ" ಎಂದರು. ವಿರೋಧ ಪಕ್ಷಗಳು ರಾಜಕೀಯ ಹಿತಾಸಕ್ತಿಗೆ ಬದಲಾಗಿ ಸೇವಾ ಮನೋಭಾವವನ್ನು ಪ್ರಮುಖವಾಗಿ ಇಟ್ಟುಕೊಂಡಿದ್ದರೆ, ದೇಶದ ಬಹುತೇಕ ಜನಸಂಖ್ಯೆಯು ಬಡತನದಲ್ಲಿ ಇರುತ್ತಿರಲಿಲ್ಲ ಮತ್ತು 50 ವರ್ಷಗಳ ಹಿಂದೆಯೇ ಮೋದಿಯವರ ಇಂದಿನ ಭರವಸೆಗಳು ಈಡೇರುತ್ತಿದ್ದವು ಎಂದು ಅವರು ಹೇಳಿದರು.

ಮಹಿಳಾ ನೇತೃತ್ವದ ಅಭಿವೃದ್ಧಿಗೆ ನೀಡುತ್ತಿರುವ ಗಮನದ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ವಿಕಸಿತ ಭಾರತ ಸಂಕಲ್ಪ ಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರು ಭಾಗವಹಿಸುತ್ತಿದ್ದಾರೆ ಎಂದರು. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನಿರ್ಮಿಸಲಾದ 4 ಕೋಟಿ ಮನೆಗಳಲ್ಲಿ 70 ಪ್ರತಿಶತ ಮಹಿಳಾ ಫಲಾನುಭವಿಗಳಿದ್ದಾರೆ ಎಂದು ಅವರು ಉಲ್ಲೇಖಿಸಿದರು. 10 ಮುದ್ರಾ ಫಲಾನುಭವಿಗಳಲ್ಲಿ 7 ಮಹಿಳೆಯರು ಮತ್ತು ಸುಮಾರು 10 ಕೋಟಿ ಮಹಿಳೆಯರು ಸ್ವಸಹಾಯ ಗುಂಪುಗಳ ಭಾಗವಾಗಿದ್ದಾರೆ. ಕೌಶಲ್ಯಾಭಿವೃದ್ಧಿ ಮೂಲಕ 2 ಕೋಟಿ ಮಹಿಳೆಯರನ್ನು ಲಖ್ಪತಿ ದೀದಿಗಳನ್ನಾಗಿ ಮಾಡಲಾಗುತ್ತಿದೆ ಮತ್ತು 15 ಸಾವಿರ ಸ್ವಸಹಾಯ ಗುಂಪುಗಳು ನಮೋ ಡ್ರೋನ್ ದೀದಿ ಅಭಿಯಾನದ ಅಡಿಯಲ್ಲಿ ಡ್ರೋನ್‌ ಗಳನ್ನು ಪಡೆಯುತ್ತಿವೆ ಎಂದು ಅವರು ಹೇಳಿದರು.

ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ ಮಹಿಳಾ ಶಕ್ತಿ, ಯುವ ಶಕ್ತಿ, ರೈತರು ಮತ್ತು ಬಡವರು ನೀಡುತ್ತಿರುವ ಬೆಂಬಲವನ್ನು ಪ್ರಧಾನಿ ಮೋದಿ ಶ್ಲಾಘಿಸಿದರು. ಯುವ ಆಟಗಾರರಿಗೆ ಮತ್ತಷ್ಟು ಉತ್ತೇಜನ ನೀಡಲಿರುವ ಈ ಪಯಣದಲ್ಲಿ ಒಂದು ಲಕ್ಷಕ್ಕೂ ಅಧಿಕ ಕ್ರೀಡಾಪಟುಗಳಿಗೆ ಬಹುಮಾನ ಲಭಿಸಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು. ‘ಮೈ ಭಾರತ್‌ ಸ್ವಯಂಸೇವಕʼಎಂದು ತಮ್ಮನ್ನು ನೋಂದಾಯಿಸಿಕೊಳ್ಳುವಲ್ಲಿ ಯುವಕರ ಅಗಾಧ ಉತ್ಸಾಹವನ್ನು ಗಮನಿಸಿದ ಪ್ರಧಾನಮಂತ್ರಿಯವರು ಇದು ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪವನ್ನು ಬಲಪಡಿಸುತ್ತದೆ ಎಂದು ಹೇಳಿದರು. "ಈ ಎಲ್ಲಾ ಸ್ವಯಂಸೇವಕರು ಈಗ ಫಿಟ್ ಇಂಡಿಯಾದ ಮಂತ್ರವನ್ನು ಮುಂದುವರಿಸುತ್ತಾರೆ, ನೀರು, ಪೋಷಣೆ, ವ್ಯಾಯಾಮ ಅಥವಾ ಸದೃಢತೆ ಮತ್ತು ಕೊನೆಯದಾಗಿ ಸಾಕಷ್ಟು ನಿದ್ರೆ ಎಂಬ ನಾಲ್ಕು ವಿಷಯಗಳಿಗೆ ಆದ್ಯತೆ ನೀಡುವಂತೆ ಯುವಜನರನ್ನು ಒತ್ತಾಯಿಸುತ್ತೇನೆ” ಎಂದು ಪ್ರಧಾನಿ ಹೇಳಿದರು. “ಆರೋಗ್ಯಕರ ದೇಹಕ್ಕೆ ಈ ನಾಲ್ಕು ಬಹಳ ಅವಶ್ಯಕ. ಈ ನಾಲ್ಕರ ಬಗ್ಗೆ ನಾವು ಗಮನಿಸಿದರೆ, ನಮ್ಮ ಯುವಜನರು ಆರೋಗ್ಯವಾಗಿರುತ್ತಾರೆ ಮತ್ತು ನಮ್ಮ ಯುವಜನಬತೆ ಆರೋಗ್ಯವಾಗಿದ್ದರೆ ದೇಶವು ಆರೋಗ್ಯವಾಗಿರುತ್ತದೆ” ಎಂದು ಪ್ರಧಾನಿ ಹೇಳಿದರು.

ಈ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಸಂದರ್ಭದಲ್ಲಿ ಕೈಗೊಂಡ ಪ್ರಮಾಣ ವಚನಗಳು ಜೀವನ ಮಂತ್ರಗಳಾಗಬೇಕು ಎಂದು ಪ್ರಧಾನಿ ಒತ್ತಿ ಹೇಳಿದರು. ಸರಕಾರಿ ನೌಕರರಾಗಲಿ, ಸಾರ್ವಜನಿಕ ಪ್ರತಿನಿಧಿಗಳಾಗಲಿ, ನಾಗರಿಕರಾಗಲಿ ಎಲ್ಲರೂ ಸಂಪೂರ್ಣ ಶ್ರದ್ಧೆಯಿಂದ ಒಂದಾಗಬೇಕು. ಭಾರತವು ಸಬ್ಕಾ ಪ್ರಯಾಸ್‌ ನಿಂದ ಮಾತ್ರ ಅಭಿವೃದ್ಧಿ ಹೊಂದುತ್ತದೆ” ಎಂದು ಹೇಳಿದ ಪ್ರಧಾನಿಯವರು ತಮ್ಮ ಮಾತು ಮುಗಿಸಿದರು.


ಹಿನ್ನೆಲೆ

ದೇಶಾದ್ಯಂತದ ಸಾವಿರಾರು ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಫಲಾನುಭವಿಗಳು ಕಾರ್ಯಕ್ರಮಕ್ಕೆ ವರ್ಚುವಲ್‌ ಮಾದರಿಯಲ್ಲಿ ಸೇರಿಕೊಂಡರು. ಕಾರ್ಯಕ್ರಮದ ಸಮಯದಲ್ಲಿ ದೇಶಾದ್ಯಂತ 2,000 ಕ್ಕೂ ಹೆಚ್ಚು ವಿ ಬಿ ಎಸ್‌ ವೈ ವಾಹನಗಳು, ಸಾವಿರಾರು ಕೃಷಿ ವಿಜ್ಞಾನ ಕೇಂದ್ರಗಳು (ಕೆವಿಕೆ) ಮತ್ತು ಸಾಮಾನ್ಯ ಸೇವಾ ಕೇಂದ್ರಗಳು (ಸಿ ಎಸ್‌ ಸಿ) ಈ ಕಾರ್ಯಕ್ರಮದೊಂದಿಗೆ ಸಂಪರ್ಕಗೊಂಡವು. ಕೇಂದ್ರ ಸಚಿವರು, ಸಂಸದರು, ಶಾಸಕರು ಮತ್ತು ಸ್ಥಳೀಯ ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

Viksit Bharat Sankalp Yatra focuses on saturating government benefits, making sure they reach citizens across India. https://t.co/24KMA2DSac

— Narendra Modi (@narendramodi) December 9, 2023

विकसित भारत संकल्प यात्रा, ऐसे लोगों तक पहुंचने का बहुत बड़ा माध्यम बनी है, जो अब तक सरकार की योजनाओं से नहीं जुड़ पाए। pic.twitter.com/d2TReubUHU

— PMO India (@PMOIndia) December 9, 2023

देश का हर गरीब मेरे लिए VIP है।

देश की हर माता-बहन-बेटी मेरे लिए VIP है।

देश का हर किसान मेरे लिए VIP है।

देश का हर युवा मेरे लिए VIP है: PM @narendramodi pic.twitter.com/dnJbssGrVx

— PMO India (@PMOIndia) December 9, 2023

Be it Nari Shakti, Yuva Shakti, farmers or the poor, their support towards Vikas Bharat Sankalp Yatra is remarkable. pic.twitter.com/qxnvbzZ8KR

— PMO India (@PMOIndia) December 9, 2023

Be it Nari Shakti, Yuva Shakti, farmers or the poor, their support towards Vikas Bharat Sankalp Yatra is remarkable. pic.twitter.com/qxnvbzZ8KR

— PMO India (@PMOIndia) December 9, 2023

 

***



(Release ID: 1984511) Visitor Counter : 79