ವಾರ್ತಾ ಮತ್ತು ಪ್ರಸಾರ ಸಚಿವಾಲಯ
ದಿಲ್ಲಿಯಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯ ಚಟುವಟಿಕೆಗಳು
ಸಫ್ದರ್ಜಂಗ್ ಎನ್ಕ್ಲೇವ್ ಬಳಿಯ ಹುಮಾಯುಪುರದಲ್ಲಿ ಫಲಾನುಭವಿಗಳೊಂದಿಗೆ ಮಾಹಿತಿ ಮತ್ತು ಪ್ರಸಾರ (ಐ ಮತ್ತು ಬಿ) ಕಾರ್ಯದರ್ಶಿ ಅಪೂರ್ವ ಚಂದ್ರ ಸಂವಾದ
Posted On:
06 DEC 2023 4:17PM by PIB Bengaluru
ವಿಕಸಿತ ಭಾರತ ಸಂಕಲ್ಪ ಯಾತ್ರೆಯ ನಗರ ಪ್ರದೇಶದ ಪ್ರಚಾರಾಂದೋಲನಗಳು ದಿಲ್ಲಿ ಮತ್ತು ಇತರ ನಗರಗಳ ವಿವಿಧ ಸ್ಥಳಗಳಲ್ಲಿ ನಡೆಯುತ್ತಿವೆ. ಜಾಗೃತಿ ಮೂಡಿಸಲು ಮತ್ತು ಕೇಂದ್ರವು ಪ್ರಾರಂಭಿಸಿದ ವಿವಿಧ ಕಲ್ಯಾಣ ಕಾರ್ಯಕ್ರಮಗಳ ಪರಿಪೂರ್ಣತೆಯನ್ನು ಸಾಧಿಸಲು ನಗರ ಅಭಿಯಾನಗಳನ್ನು ಔಟ್ರೀಚ್ ಚಟುವಟಿಕೆಗಳ ಮೂಲಕ ನಡೆಸಲಾಗುತ್ತಿದೆ. ವಿಕಸಿತ್ ಭಾರತ್ ಐಇಸಿ ವಾಹನಗಳು (ವ್ಯಾನ್ ಗಳು) ಇದುವರೆಗೆ ದಿಲ್ಲಿಯ ವಿವಿಧ ಜಿಲ್ಲೆಗಳ 85 ಸ್ಥಳಗಳಿಗೆ ತೆರಳಿ ಪಿಎಂ ಸ್ವನಿಧಿ, ಮುದ್ರಾ ಸಾಲಗಳು, ಸ್ಟ್ಯಾಂಡ್ ಅಪ್ ಇಂಡಿಯಾ ಮತ್ತು ಸ್ಟಾರ್ಟ್ ಅಪ್ ಇಂಡಿಯಾ, ಡಿಜಿಟಲ್ ಪಾವತಿ ಕ್ರಾಂತಿ, ಪಿಎಂ ಇ-ಬಸ್ ಸೇವಾ, ಆಯುಷ್ಮಾನ್ ಭಾರತ್, ಪಿಎಂ ಆವಾಸ್ (ನಗರ) ಪಿಎಂ ಉಜ್ವಲ ಯೋಜನೆ ಮುಂತಾದ ಕಲ್ಯಾಣ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಿವೆ.
ಇಂದು ದಕ್ಷಿಣ ದಿಲ್ಲಿಯ ಸಫ್ದರ್ಜಂಗ್ ಎನ್ಕ್ಲೇವ್ ನ ಹುಮಾಯುಪುರದಲ್ಲಿ ವಿಕ್ಷಿತ್ ಭಾರತ್ ಸಂಕಲ್ಪ ಯಾತ್ರೆಯ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಅಪೂರ್ವ ಚಂದ್ರ ಅವರು ಭಾಗವಹಿಸಿದ್ದರು. ಅವರು ವಿಕ್ಷಿತ್ ಭಾರತ್ ಪ್ರತಿಜ್ಞೆಯನ್ನು ಬೋಧಿಸಿದರು ಮತ್ತು ಈ ಸಂದರ್ಭದಲ್ಲಿ ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು. ಕೇಂದ್ರ ಸರ್ಕಾರದ ಯೋಜನೆಗಳ ಪ್ರಯೋಜನಗಳನ್ನು ಜನರಿಗೆ ಅವರ ಮನೆ ಬಾಗಿಲಿಗೆ ತಲುಪಿಸುವುದು ಯಾತ್ರೆಯ ಉದ್ದೇಶವಾಗಿದೆ ಎಂದು ಕಾರ್ಯದರ್ಶಿ ಹೇಳಿದರು. ಜನವರಿ ಅಂತ್ಯದ ವೇಳೆಗೆ 2.60 ಲಕ್ಷ ಗ್ರಾಮ ಪಂಚಾಯಿತಿಗಳು ಮತ್ತು 3,600 ನಗರ ಸ್ಥಳೀಯಾಡಳಿತ ಸಂಸ್ಥೆಗಳನ್ನು ತಲುಪುವ ಅಭಿಯಾನದ ಭಾಗವಾಗಿ ದೇಶಾದ್ಯಂತ ಎರಡು ಸಾವಿರಕ್ಕೂ ಹೆಚ್ಚು ವ್ಯಾನ್ ಗಳು ಕಾರ್ಯನಿರ್ವಹಿಸುತ್ತಿವೆ ಎಂದು ಅವರು ಹೇಳಿದರು.
ಈ ಅಭಿಯಾನದ ಅಂಗವಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ 5 ಐಇಸಿ (ಮಾಹಿತಿ, ಶಿಕ್ಷಣ, ಸಂವಹನ) ವ್ಯಾನ್ ಗಳು ದಿಲ್ಲಿಯ 11 ಜಿಲ್ಲೆಗಳಲ್ಲಿ ಸಂಚರಿಸುತ್ತಿದ್ದು, 600 ಕ್ಕೂ ಹೆಚ್ಚು ಸ್ಥಳಗಳನ್ನು ಅವುಗಳು ತಮ್ಮ ಸಂಚಾರದಲ್ಲಿ ಸಂದರ್ಶಿಸಲಿವೆ.
ವಿಕಸಿತ್ ಭಾರತ್ ಕಾರ್ಯಕ್ರಮದ ಸ್ಥಳಗಳಲ್ಲಿ ಪಿಎಂ ಸ್ವನಿಧಿ ಶಿಬಿರ, ಆರೋಗ್ಯ ಶಿಬಿರ, ಆಯುಷ್ಮಾನ್ ಕಾರ್ಡ್ ಶಿಬಿರ, ಆಧಾರ್ ನವೀಕರಣ ಶಿಬಿರ, ಪಿಎಂ ಉಜ್ವಲ ಸೌಲಭ್ಯ ಶಿಬಿರಗಳನ್ನು ಆಯೋಜಿಸಿ ಸ್ಥಳದಲ್ಲೇ ಸೇವೆಗಳನ್ನು ಒದಗಿಸಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು, ಅದರಲ್ಲೂ ವಿಶೇಷವಾಗಿ ಮಹಿಳೆಯರು ಸ್ಥಳದಲ್ಲೇ ಸೇವೆಗಳನ್ನು ಪಡೆಯಲು ಈ ಶಿಬಿರಗಳಿಗೆ ಭೇಟಿ ನೀಡುತ್ತಿದ್ದಾರೆ.
ಜಾರ್ಖಂಡ್ ನ ಖುಂಟಿಯಲ್ಲಿ ನವೆಂಬರ್ 15 ರಂದು ಜನಜಾತೀಯ ಗೌರವ್ ದಿವಸ್ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿಕಸಿತ್ ಭಾರತ್ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿದ್ದರು. ದಿಲ್ಲಿಯ ನಗರ ಅಭಿಯಾನವನ್ನು ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ ಅವರು ನವೆಂಬರ್ 28 ರಂದು ಆರಂಭ ಮಾಡಿದ್ದರು.
******
(Release ID: 1983189)
Visitor Counter : 89