ಪ್ರಧಾನ ಮಂತ್ರಿಯವರ ಕಛೇರಿ

2047 ರ ವಿಕಸಿತ ಭಾರತ ಸಂದೇಶವು ಅರುಣಾಚಲ ಪ್ರದೇಶದ ಗ್ರಾಮದಲ್ಲಿ ಪ್ರತಿಧ್ವನಿಸುತ್ತದೆ


ಅರುಣಾಚಲ ಪ್ರದೇಶದ ಫಲಾನುಭವಿಗಳೊಂದಿಗೆ ಪ್ರಧಾನಮಂತ್ರಿ ಸಂವಾದ

Posted On: 30 NOV 2023 1:26PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಕಸಿತ ಭಾರತ್ ಸಂಕಲ್ಪ ಯಾತ್ರೆಯ ಫಲಾನುಭವಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು. ಇದೇ ವೇಳೆ ಪ್ರಧಾನ ಮಂತ್ರಿ ಮಹಿಳಾ ಕಿಸಾನ್ ಡ್ರೋನ್ ಕೇಂದ್ರಕ್ಕೂ ಚಾಲನೆ ನೀಡಲಾಯಿತು.

ಪ್ರಧಾನಮಂತ್ರಿಯವರು ದಿಯೋಘರ್‌ನ ಏಮ್ಸ್‌ನಲ್ಲಿ ಹೆಗ್ಗುರುತಾಗಿರುವ 10,000ನೇ ಜನೌಷದಿ ಕೇಂದ್ರವನ್ನು ಸಮರ್ಪಿಸಿದರು. ಶ್ರೀ ಮೋದಿ ಅವರು ದೇಶದಲ್ಲಿ ಜನೌಷಧಿ ಕೇಂದ್ರಗಳ ಸಂಖ್ಯೆಯನ್ನು 10,000 ರಿಂದ 25,000 ಕ್ಕೆ ಹೆಚ್ಚಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮಹಿಳಾ ಸ್ವಸಹಾಯ ಗುಂಪುಗಳಿಗೆ ಡ್ರೋನ್‌ಗಳನ್ನು ಒದಗಿಸುವುದು ಮತ್ತು ಜನೌಷಧಿ ಕೇಂದ್ರಗಳ ಸಂಖ್ಯೆಯನ್ನು 10,000 ರಿಂದ 25,000 ಕ್ಕೆ ಹೆಚ್ಚಿಸುವ ಉಪ ಕ್ರಮಗಳನ್ನು ಪ್ರಧಾನಮಂತ್ರಿಯವರು ಘೋಷಿಸಿದರು. ಈ ವರ್ಷದ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಈ ಕಾರ್ಯಕ್ರಮಗಳ ಬಗ್ಗೆ ಭರವಸೆಯನ್ನು ನೀಡಿದ್ದರು.

ಸರ್ಕಾರದ ನೆರವಿನಿಂದ ನಿರ್ಮಿಸಿದ ಪಕ್ಕಾ ಮನೆಯ ಬಗ್ಗೆ ಅರುಣಾಚಲ ಪ್ರದೇಶದ ನಮ್ಸಾಯಿಯಿಂದ ಶ್ರೀ ಲಕರ್ ಪಾಲೆಂಗ್ ಅವರು  ಪ್ರಧಾನಿಗೆ ಮಾಹಿತಿ ನೀಡಿದರು. ಜಲ ಜೀವನ್ ಮಿಷನ್ ತಂದಿರುವ ಪರಿವರ್ತನೆಯ ಬಗ್ಗೆಯೂ ತಿಳಿಸಿದರು.

ಶ್ರೀ ಲಕರ್ ಅವರು ಪ್ರಧಾನಮಂತ್ರಿಯವರಿಗೆ ‘ಜೈ ಹಿಂದ್’ ಎಂದು ಸ್ವಾಗತಿಸಿದಾಗ, ಪ್ರಧಾನಮಂತ್ರಿ ಅವರು ಅದೇ ರೀತಿ ಉತ್ತರಿಸಿದರು. 
ಅರುಣಾಚಲದಲ್ಲಿ ಜೈ ಹಿಂದ್ ಬಹಳ ಜನಪ್ರಿಯವಾದ ಶುಭಾಶಯವಾಗಿದೆ ಮತ್ತು ಅರುಣಾಚಲ ಪ್ರದೇಶದ ಜನರೊಂದಿಗೆ ಸಂವಹನ ಮಾಡುವುದು ಯಾವಾಗಲೂ ಸಂತೋಷವಾಗಿದೆ ಎಂದು ಹೇಳಿದರು.

ಗ್ರಾಮ ಪಂಚಾಯತ್‌ನಿಂದ ವಿಕಸಿತ್ ಭಾರತ್ ಸಂಕಲ್ಪ ಯಾತ್ರೆಯ ಬಗ್ಗೆ ಶ್ರೀ ಲಕರ್ ತಿಳಿಸಿದರು. 2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಸಂದೇಶವು ಬಹಳ ಸ್ಪಷ್ಟವಾಗಿತ್ತು. 

5 ತಂಡಗಳನ್ನು ರಚಿಸಿ ಐದು ಗ್ರಾಮಗಳಿಗೆ ತೆರಳಿ ವಿಬಿಎಸ್‌ವೈ ‘ಮೋದಿ ಕಿ ಗ್ಯಾರಂಟಿ’ ವಾಹನ ಬರಲಿದೆ  ಗ್ರಾಮಸ್ಥರಿಗೆ ತಿಳಿಸುವಂತೆ ಪ್ರಧಾನಿ ಹೇಳಿದರು.

***



(Release ID: 1981210) Visitor Counter : 82