ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಅಬ್ಬಾಸ್ ಅಮಿನಿ ಅವರ ಪರ್ಷಿಯನ್ ಚಲನಚಿತ್ರ 'ಎಂಡ್ಲೆಸ್ ಬಾರ್ಡರ್ಸ್' IFFI54 ರ ಅತ್ಯುತ್ತಮ ಚಿತ್ರಕ್ಕಾಗಿ ಗೋಲ್ಡನ್ ಪೀಕಾಕ್ ಪ್ರಶಸ್ತಿ ಪಡೆದುಕೊಂಡಿದೆ; ಈ ಚಿತ್ರವು ಪೂರ್ವಾಗ್ರಹಗಳ ಮುಖಾಂತರ ರಾಜಕೀಯ ಮತ್ತು ಭಾವನಾತ್ಮಕ ಗಡಿಗಳನ್ನು ಮೀರಿದ ಪ್ರೀತಿಯ ಶಕ್ತಿಯನ್ನು ನಿರೂಪಿಸುತ್ತದೆ


ಬಲ್ಗೇರಿಯನ್ ನಿರ್ದೇಶಕ ಸ್ಟೀಫನ್ ಕೊಮಾಂಡರೇವ್ ಅವರು ‘ಬ್ಲಾಗಾಸ್ ಲೆಸನ್ಸ್’ಚಿತ್ರಕ್ಕಾಗಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಸಿಲ್ವರ್ ಪೀಕಾಕ್ ಗೆ ಭಾಜನರಾದರು

'ಎಂಡ್ಲೆಸ್ ಬಾರ್ಡರ್ಸ್' ಚಿತ್ರದಲ್ಲಿನ ಅವರ ಸೂಕ್ಷ್ಮ ಮತ್ತು ಶ್ರೀಮಂತ ನಟನೆಗಾಗಿ ಪೌರಿಯಾ ರಹಿಮಿ ಸ್ಯಾಮ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಸಿಲ್ವರ್ ಪೀಕಾಕ್ ನೀಡಿ ಗೌರವಿಸಲಾಯಿತು

'ಪಾರ್ಟಿ ಆಫ್ ಫೂಲ್ಸ್' ನಲ್ಲಿ ಭಾವನೆಗಳ ವ್ಯಾಪಕವಾದ ಅಭಿವ್ಯಕ್ತಿಗೆ ಮೆಲಾನಿ ಥಿಯೆರಿ ಅತ್ಯುತ್ತಮ ನಟಿ  ಪ್ರಶಸ್ತಿ ಸಿಲ್ವರ್ ಪೀಕಾಕ್ ಪ್ರಶಸ್ತಿಯನ್ನು ಪಡೆದರು

ಭಾರತೀಯ ಚಲನಚಿತ್ರ ನಿರ್ದೇಶಕ ರಿಷಬ್ ಶೆಟ್ಟಿ ಅವರು 'ಕಾಂತಾರ' ಚಿತ್ರಕ್ಕಾಗಿ ವಿಶೇಷ ತೀರ್ಪುಗಾರರ ಪ್ರಶಸ್ತಿಯನ್ನು ಪಡೆದರು; ಈ ಚಿತ್ರವು ಮನುಷ್ಯರು ಮತ್ತು ಪ್ರಕೃತಿಯ ನಡುವಿನ ಸೈದ್ಧಾಂತಿಕ ಸಂಘರ್ಷವನ್ನು ಪರಿಶೋಧಿಸುತ್ತದೆ

ರೆಗರ್ ಆಜಾದ್ ಕಾಯಾ ಅವರು 'ವೆನ್ ದಿ ಸೀಡ್‌ಲಿಂಗ್ಸ್ ಗ್ರೋ' ಗಾಗಿ ನಿರ್ದೇಶಕರ ಅತ್ಯುತ್ತಮ ಚೊಚ್ಚಲ ಚಲನಚಿತ್ರಕ್ಕಾಗಿ ಪ್ರಶಸ್ತಿಯನ್ನು ಪಡೆದರು

Posted On: 28 NOV 2023 7:06PM by PIB Bengaluru

54 ನೇ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (IFFI) ಚಲನಚಿತ್ರದ ವಿವಿಧ ವಿಭಾಗಗಳಲ್ಲಿ ಶ್ರೇಷ್ಠತೆಯನ್ನು ಗುರುತಿಸುವ, ತನ್ನ ಪ್ರತಿಷ್ಠಿತ ಗೋಲ್ಡನ್ ಪೀಕಾಕ್ ಪ್ರಶಸ್ತಿಯನ್ನು ಇಂದು ಪ್ರಕಟಿಸಿತು. ಇಂದು ಗೋವಾದ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಕ್ರೀಡಾಂಗಣದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಚಲನಚಿತ್ರ ರಂಗದ ದಿಗ್ಗಜರನ್ನು ಒಳಗೊಂಡ ಅಂತಾರಾಷ್ಟ್ರೀಯ ತೀರ್ಪುಗಾರರ ಸಮಿತಿಯು ಪ್ರಶಸ್ತಿಯನ್ನು ಘೋಷಿಸಿತು. ಗೋವಾದಲ್ಲಿ ನಡೆದ ಉತ್ಸವದಲ್ಲಿ 12 ಅಂತಾರಾಷ್ಟ್ರೀಯ ಮತ್ತು 3 ಭಾರತೀಯ ಚಲನಚಿತ್ರಗಳನ್ನು ಒಳಗೊಂಡ 15 ಅಸಾಧಾರಣ ಚಲನಚಿತ್ರಗಳು ಪ್ರತಿಷ್ಠಿತ ಗೋಲ್ಡನ್ ಪೀಕಾಕ್ ಪ್ರಶಸ್ತಿಗಾಗಿ ಸ್ಪರ್ಧಿಸಿದ್ದವು. ಪ್ರಶಸ್ತಿಯು 40 ಲಕ್ಷ ರೂ. ನಗದು, ಪ್ರಮಾಣಪತ್ರ ಮತ್ತು ಗೋಲ್ಡನ್ ಪೀಕಾಕ್ ಪದಕವನ್ನು ಒಳಗೊಂಡಿದೆ.

1. ಅತ್ಯುತ್ತಮ ಚಿತ್ರ: ಪರ್ಷಿಯನ್ ಚಿತ್ರ ‘ಎಂಡ್ಲೆಸ್ ಬಾರ್ಡರ್ಸ್’

ಅತ್ಯುತ್ತಮ ಚಲನಚಿತ್ರಕ್ಕಾಗಿ ಪ್ರತಿಷ್ಠಿತ 'ಗೋಲ್ಡನ್ ಪೀಕಾಕ್' ಪ್ರಶಸ್ತಿಯನ್ನು ಅಬ್ಬಾಸ್ ಅಮಿನಿ ನಿರ್ದೇಶನದ 'ಎಂಡ್ಲೆಸ್ ಬಾರ್ಡರ್ಸ್' ಪರ್ಷಿಯನ್ ಚಿತ್ರಕ್ಕೆ ನೀಡಲಾಯಿತು. ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಉದಯದಿಂದ ಉಂಟಾದ ಪ್ರಕ್ಷುಬ್ಧತೆಯ ನಡುವೆ ಇರಾನಿನ ಶಿಕ್ಷಕನ ಪಯಣದ ಹಿನ್ನೆಲೆಯಲ್ಲಿ ಭಾವನಾತ್ಮಕವಾಗಿ ನಿರೂಪಿಸಿರುವ ಚಲನಚಿತ್ರವು ಪೂರ್ವಾಗ್ರಹ, ನೈತಿಕ ಸಂದಿಗ್ಧತೆಗಳು ಮತ್ತು ಪ್ರೀತಿಯ ಸಂಕೀರ್ಣತೆಗಳನ್ನು ಹೇಳುತ್ತದೆ. ನಿರ್ದೇಶಕ ಅಬ್ಬಾಸ್ ಅಮಿನಿ ಅವರ ಧೈರ್ಯಶಾಲಿ ಕಥಾಹಂದರವನ್ನು ಪ್ರಶಂಸಿಸಿದ ತೀರ್ಪುಗಾರರು ಚಲನಚಿತ್ರದ ಭೌತಿಕ ಮತ್ತು ಭಾವನಾತ್ಮಕ ಗಡಿಗಳನ್ನು ಮೀರಿದ ಸಾಮರ್ಥ್ಯವನ್ನು ಶ್ಲಾಘಿಸಿದರು.

 “ಈ ಚಲನಚಿತ್ರವು ಭೌತಿಕ ಗಡಿಗಳು ಎಷ್ಟು ಸಂಕೀರ್ಣವಾಗಿವೆ ಎಂಬುದನ್ನು ಕುರಿತು ಹೇಳುತ್ತದೆ, ಆದರೆ ನೀವು ನಿಮ್ಮ ಮೇಲೆ ಹೇರಿಕೊಳ್ಳುವ ಭಾವನಾತ್ಮಕ ಮತ್ತು ನೈತಿಕ ಗಡಿಗಳಿಗಿಂತ ಅದು ಹೆಚ್ಚು ಜಟಿಲವಾಗಿರುವುದಿಲ್ಲ ಎನ್ನುವುದನ್ನೂ ಹೇಳುತ್ತದೆ. ಅಷ್ಟಕ್ಕೂ ಚಲನಚಿತ್ರೋತ್ಸವಗಳು ಎಲ್ಲಾ ಗಡಿಗಳನ್ನು ದಾಟುವ ಬಗ್ಗೆಯೇ ಆಗಿವೆ ಮತ್ತು ಈ ಚಿತ್ರದ ಸಂದರ್ಭದಲ್ಲಿ, ನಿರ್ದೇಶಕರು ತಮ್ಮ ಸ್ವಂತ ಸ್ವಾತಂತ್ರ್ಯವನ್ನು ಬಲಿಕೊಟ್ಟು ರಾಜಕೀಯ ಗಡಿಗಳನ್ನು ದಾಟಿದ್ದಾರೆ.” ಎಂದು ತೀರ್ಪುಗಾರರು ಹೇಳಿದ್ದಾರೆ.

ಅಫ್ಘಾನ್ ಗಡಿಗೆ ಸಮೀಪವಿರುವ ಇರಾನ್‌ ನ ಬಡ ಹಳ್ಳಿಯ ದೇಶಭ್ರಷ್ಟ ಶಿಕ್ಷಕ ಅಹ್ಮದ್ ಅವರ ಪ್ರಯಾಣವನ್ನು ಚಲನಚಿತ್ರವು ವಿವರಿಸುತ್ತದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಉದಯವು ಜನಾಂಗೀಯ ಮತ್ತು ಬುಡಕಟ್ಟು ಯುದ್ಧಗಳಿಗೆ ಮತ್ತೆ ಬೆಂಕಿ ಹಾಕಿದೆ. ತಾಲಿಬಾನ್‌ ನಿಂದ ತಕ್ಷಣದ ಬೆದರಿಕೆಗೆ ಒಳಗಾಗಿರುವ ಹಜಾರಾ ಆಫ್ಘನ್ನರು ಅಕ್ರಮವಾಗಿ ಇರಾನ್‌ ಗೆ ಪ್ರವೇಶಿಸುತ್ತಾರೆ. ಅಹ್ಮದ್ ಅಫ್ಘಾನಿಸ್ತಾನದ ಹಜಾರಾ ಕುಟುಂಬದೊಂದಿಗೆ ಪರಿಚಯವಾದಾಗ, ಅವರು ಆ ಪ್ರದೇಶದಲ್ಲಿ ಪೂರ್ವಾಗ್ರಹ ಮತ್ತು ಧರ್ಮಾಂಧತೆಯ ನಿಜವಾದ ಮುಖವನ್ನು ನೋಡುತ್ತಾರೆ. ನಿಷೇಧಿತ ಪ್ರೀತಿಯು ಅವರನ್ನು ಕಾರ್ಯತತ್ಪರವಾಗುವಂತೆ ಮಾಡುತ್ತದೆ ಮತ್ತು ಅವನ ಸ್ವಂತ ಜೀವನದಲ್ಲಿ ಪ್ರೀತಿ ಮತ್ತು ಧೈರ್ಯದ ಕೊರತೆಯನ್ನು ಕಂಡುಕೊಳ್ಳುತ್ತದೆ.

https://static.pib.gov.in/WriteReadData/userfiles/image/28-5-11SOI.jpg

ಎಂಡ್ಲೆಸ್ ಬಾರ್ಡರ್ಸ್ ಚಲನಚಿತ್ರದ ಒಂದು ಚಿತ್ರ

 

2. ಅತ್ಯುತ್ತಮ ನಿರ್ದೇಶಕ: ಬಲ್ಗೇರಿಯನ್ ಚಿತ್ರ ಬ್ಲಾಗಸ್ ಲೆಸನ್ಸ್‌ ನಿರ್ದೇಶಕ ಸ್ಟೀಫನ್ ಕೊಮಾಂಡರೇವ್ ಅವರಿಗೆ 'ಸಿಲ್ವರ್ ಪೀಕಾಕ್' ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ

ಬಲ್ಗೇರಿಯನ್ ನಿರ್ದೇಶಕ ಸ್ಟೀಫನ್ ಕೊಮಾಂಡರೇವ್ ಅವರು 'ಬ್ಲಾಗಾಸ್ ಲೆಸನ್ಸ್' ಚಿತ್ರಕ್ಕಾಗಿ ಅತ್ಯುತ್ತಮ ನಿರ್ದೇಶಕ 'ಸಿಲ್ವರ್ ಪೀಕಾಕ್' ಅನ್ನು ಮುಡಿಗೇರಿಸಿಕೊಂಡರು, ಇದು ಮೋಸದ ಎದುರಿಗೆ ನೈತಿಕ ರಾಜಿಗಳ ಪ್ರಬಲ ಅನ್ವೇಷಣೆಯಾಗಿದೆ. ಟೆಲಿಫೋನ್ ಸ್ಕ್ಯಾಮರ್‌ ಗಳಿಗೆ ಬಲಿಯಾದ ನಂತರ ನೈತಿಕತೆಯೇ ಅಲ್ಲಾಡುವ ವಿಧವೆ ಬ್ಲಾಗಾ ಮೇಲೆ ಚಲನಚಿತ್ರವು ಕೇಂದ್ರೀಕೃತವಾಗಿದೆ, ಇದು ಕಮ್ಯುನಿಸ್ಟ್ ನಂತರದ ಬಲ್ಗೇರಿಯಾದಲ್ಲಿ ಇಂದಿನ ಹಿರಿಯ ನಾಗರಿಕರ ದುರ್ಬಲ ಜೀವನವನ್ನು ಎತ್ತಿ ತೋರಿಸುತ್ತದೆ.

ಸ್ಟೀಫನ್ ಕೊಮಾಂಡರೇವ್ ತನ್ನ ಗುರಿಗಳನ್ನು ಸಾಧಿಸಲು ನಿರ್ಧರಿಸುವ ಮತ್ತು ಹಾಗೆ ಮಾಡುವಲ್ಲಿ ತನ್ನ ಮೌಲ್ಯಗಳೊಂದಿಗೆ ರಾಜಿ ಮಾಡಿಕೊಳ್ಳುವ ಮಹಿಳೆಯ ಪಾತ್ರದ ಮೂಲಕ ಶಕ್ತಿಯುತ ಮತ್ತು ಆಘಾತಕಾರಿ ಪಾಠವನ್ನು ಹೇಳುತ್ತಾರೆ. ಈ ಚಲನಚಿತ್ರವು ಶ್ರೇಷ್ಠ ಕಲಾವಿದರಿಂದ ಅದ್ಭುತವಾಗಿ ಸಾಕಾರಗೊಂಡಿದೆ ಎಂದು ಶ್ರೀಮತಿ ಎಲಿ ಸ್ಕೋರ್ಚೆವಾ ಅವರು ತೀರ್ಪುಗಾರರ ಉಲ್ಲೇಖವನ್ನು ಓದಿದರು. ಪ್ರಶಸ್ತಿಯು 15 ಲಕ್ಷ ರೂಪಾಯಿ, ಪ್ರಮಾಣಪತ್ರ ಮತ್ತು ಸಿಲ್ವರ್ ಪೀಕಾಕ್ ಪದಕವನ್ನು ಒಳಗೊಂಡಿದೆ.

https://static.pib.gov.in/WriteReadData/userfiles/image/28-5-2(2)MYPS.jpg

ಬ್ಲಾಗಾ ಚಲನಚಿತ್ರದ ಒಂದು ಚಿತ್ರ

3. ಅತ್ಯುತ್ತಮ ನಟ, ಸಿಲ್ವರ್ ಪೀಕಾಕ್ ಗೌರವ: ಪೌರಿಯಾ ರಹಿಮಿ ಸ್ಯಾಮ್

ಅಬ್ಬಾಸ್ ಅಮಿನಿ ನಿರ್ದೇಶನದ ಪರ್ಷಿಯನ್ ಚಲನಚಿತ್ರ ಎಂಡ್‌ಲೆಸ್ ಬಾರ್ಡರ್ಸ್‌ ನ ಪಾತ್ರಕ್ಕಾಗಿ ನಟ ಪೌರಿಯಾ ರಹಿಮಿ ಸ್ಯಾಮ್ ಅವರು ಅತ್ಯುತ್ತಮ ನಟರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. "ನಟನೆಯ ಶ್ರೀಮಂತಿಕೆಗಾಗಿ ಮತ್ತು ಸವಾಲಿನ ಶೂಟಿಂಗ್ ಪರಿಸ್ಥಿತಿಗಳಲ್ಲಿ ಅವರು ಪಾಲುದಾರರು, ಮಕ್ಕಳು ಮತ್ತು ವಯಸ್ಕರೊಂದಿಗೆ ನಡೆಸಿದ ಸಂವಹನ ನಡೆಸಿರುವುದಕ್ಕಾಗಿ" ಆಯ್ಕೆ ಮಾಡಲಾಗಿದೆ ಎಂದು ಜ್ಯೂರಿ ಹೇಳಿದೆ.

ಜನಾಂಗೀಯ ಉದ್ವಿಗ್ನತೆಗಳು ಮತ್ತು ಪ್ರೀತಿಯನ್ನು ಹುಡುಕುವ ದೇಶಭ್ರಷ್ಟ ಇರಾನಿನ ಶಿಕ್ಷಕ ಅಹ್ಮದ್ ಪಾತ್ರದಲ್ಲಿ ಅವರ ಸೂಕ್ಷ್ಮವಾದ ಅಭಿನಯವು ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಯಿತು. ಸವಾಲಿನ ಶೂಟಿಂಗ್ ಪರಿಸ್ಥಿತಿಗಳನ್ನು ಜ್ಯೂರಿಯು ಪ್ರಶಂಸಿಸಿತು.

ಎಂಡ್ಲೆಸ್ ಬಾರ್ಡರ್ಸ್ ಅಫ್ಘಾನ್ ಗಡಿಗೆ ಸಮೀಪವಿರುವ ಇರಾನ್‌ ನ ಬಡ ಹಳ್ಳಿಯಲ್ಲಿ ದೇಶಭ್ರಷ್ಟ ಶಿಕ್ಷಕ ಅಹ್ಮದ್ ಅವರ ಪ್ರಯಾಣವನ್ನು ವಿವರಿಸುತ್ತದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ನ ಉದಯವು ಜನಾಂಗೀಯ ಮತ್ತು ಬುಡಕಟ್ಟು ಯುದ್ಧಗಳ ಮತ್ತೆ ಬೆಂಕಿ ಹಚ್ಚುತ್ತದೆ. ತಾಲಿಬಾನ್‌ನಿಂದ ತಕ್ಷಣದ ಬೆದರಿಕೆಗೆ ಒಳಗಾಗಿರುವ ಹಜಾರಾ ಆಫ್ಘನ್ನರು ಅಕ್ರಮವಾಗಿ ಇರಾನ್‌ ಗೆ ಪ್ರವೇಶಿಸುತ್ತಾರೆ. ಅಹ್ಮದ್ ಅಫ್ಘಾನಿಸ್ತಾನದ ಹಜಾರಾ ಕುಟುಂಬದೊಂದಿಗೆ ಪರಿಚಯವಾದಾಗ, ಅವರು ಆ ಪ್ರದೇಶದಲ್ಲಿ ಪೂರ್ವಾಗ್ರಹ ಮತ್ತು ಧರ್ಮಾಂಧತೆಯ ನಿಜವಾದ ಮುಖವನ್ನು ನೋಡುತ್ತಾರೆ. ನಿಷೇಧಿತ ಪ್ರೀತಿಯು ಅವನನ್ನು ಕಾರ್ಯಪ್ರವೃತ್ತವಾಗುವಂತೆ ಮಾಡುತ್ತದೆ ಮತ್ತು ಅವನ ಜೀವನದಲ್ಲಿ ಪ್ರೀತಿ ಮತ್ತು ಧೈರ್ಯದ ಕೊರತೆಯನ್ನು ಕಂಡುಕೊಳ್ಳುತ್ತದೆ.

ಐ ಎಫ್‌ ಎಫ್‌ ಐ ನಲ್ಲಿ ಸುಮಾರು 15 ಚಲನಚಿತ್ರಗಳ ನಟರ ಪೈಕಿ ಅಂತಾರಾಷ್ಟ್ರೀಯ ತೀರ್ಪುಗಾರರಿಂದ ಆಯ್ಕೆಯಾದ ಅತ್ಯುತ್ತಮ ನಟನಿಗೆ ಪ್ರಶಸ್ತಿಯನ್ನು ನೀಡಲಾಗಿದೆ. ಪ್ರಶಸ್ತಿಯು 10 ಲಕ್ಷ ರೂ. ಪ್ರಮಾಣಪತ್ರ ಮತ್ತು ಸಿಲ್ವರ್‌ ಪೀಕಾಕ್ ಪದಕವನ್ನು ಒಳಗೊಂಡಿದೆ.

4. ಅತ್ಯುತ್ತಮ ನಟಿ, ಸಿಲ್ವರ್ ಪೀಕಾಕ್ ಗೌರವ: ಪಾರ್ಟಿ ಆಫ್ ಫೂಲ್ಸ್‌ ಚಿತ್ರಕ್ಕಾಗಿ ಮೆಲಾನಿ ಥಿಯೆರಿ

ಫ್ರೆಂಚ್ ನಟಿ, ಮೆಲಾನಿ ಥಿಯೆರಿ ಅವರು ಪಾರ್ಟಿ ಆಫ್ ಫೂಲ್ಸ್‌ ಚಿತ್ರದ ನಟನೆಗಾಗಿ ಅತ್ಯುತ್ತಮ ನಟಿ ಸಿಲ್ವರ್ ಪೀಕಾಕ್ ಗೌರವವನ್ನು ಪಡೆದರು. ತೀರ್ಪುಗಾರರು "ಅಭಿವ್ಯಕ್ತಿಗಳ ವ್ಯಾಪ್ತಿಯಲ್ಲಿ - ಸೂಕ್ಷ್ಮತೆಯೊಂದಿಗೆ - ಭರವಸೆಯಿಂದ ಹತಾಶೆಯವರೆಗಿನ ಎಲ್ಲಾ ಭಾವನೆಗಳನ್ನು ತನ್ನ ಪಾತ್ರದ ಹುಚ್ಚು ಪ್ರಯಾಣದಲ್ಲಿ ಎದುರಿಸಿರುವ ನಟಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ" ಎಂದು ಹೇಳಿದ್ದಾರೆ. ಅವರ ನಟನೆಯು ಭಾವನೆಗಳ ಮಹಾಪೃವನ್ನು ಹರಿಸಿದೆ, ಅವರ ಪಾತ್ರದ ಪ್ರಕ್ಷುಬ್ಧ ಪ್ರಯಾಣದಲ್ಲಿ ಭರವಸೆ ಮತ್ತು ಹತಾಶೆಯನ್ನು ಸಂಕೀರ್ಣವಾಗಿ ನೇಯ್ಗೆ ಮಾಡಿದೆ, ಸೂಕ್ಷ್ಮತೆ ಮತ್ತು ಆಳದೊಂದಿಗೆ ಪ್ರೇಕ್ಷಕರನ್ನು ಆಕರ್ಷಿಸುತ್ತದೆ.

ಐ ಎಫ್‌ ಎಫ್‌ ಐ ನಲ್ಲಿ ಸುಮಾರು 15 ಅಂತರರಾಷ್ಟ್ರೀಯ ಸ್ಪರ್ಧೆಯ ನಟಿಯರ ಪೈಕಿ ಅಂತಾರಾಷ್ಟ್ರೀಯ ತೀರ್ಪುಗಾರರಿಂದ ಆಯ್ಕೆಯಾದ ಅತ್ಯುತ್ತಮ ಮಹಿಳಾ ನಟಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಇದು 10 ಲಕ್ಷ ರೂ., ಪ್ರಮಾಣಪತ್ರ ಮತ್ತು ಸಿಲ್ವರ್‌ ಪೀಕಾಕ್ ಪದಕವನ್ನು ಒಳಗೊಂಡಿದೆ.‌

5. ವಿಶೇಷ ತೀರ್ಪುಗಾರರ ಪ್ರಶಸ್ತಿ: ಕಾತಾರ ಚಿತ್ರಕ್ಕಾಗಿ ಭಾರತೀಯ ಚಲನಚಿತ್ರ ನಿರ್ದೇಶಕ ರಿಷಬ್ ಶೆಟ್ಟಿ

ವಿಮರ್ಶಕರಿಂದ ಮೆಚ್ಚುಗೆ ಪಡೆದ ಭಾರತೀಯ ಚಲನಚಿತ್ರ ನಿರ್ದೇಶಕ ರಿಷಬ್ ಶೆಟ್ಟಿ ಅವರು ಕಾಂತಾರ ಚಿತ್ರಕ್ಕಾಗಿ ವಿಶೇಷ ತೀರ್ಪುಗಾರರ ಪ್ರಶಸ್ತಿಯನ್ನು ಪಡೆದರು. ಭಾರತೀಯ ನಿರ್ದೇಶಕರ ಬಗ್ಗೆ ತೀರ್ಪುಗಾರರ ಉಲ್ಲೇಖವು ಹೀಗೆ ಹೇಳುತ್ತದೆ, "ಬಹಳ ಮುಖ್ಯವಾದ ಕಥೆಯನ್ನು ಹೇಳುವ ನಿರ್ದೇಶಕನ ಸಾಮರ್ಥ್ಯಕ್ಕಾಗಿ. ಚಿತ್ರವು ತನ್ನದೇ ಆದ ಕಾಡು ಭೂತಗಳ ಸಂಸ್ಕೃತಿಯಲ್ಲಿ ಬೇರೂರಿದೆಯಾದರೂ, ಸಂಸ್ಕೃತಿ ಮತ್ತು ಸಾಮಾಜಿಕ ಸ್ಥಾನಮಾನವನ್ನು ಲೆಕ್ಕಿಸದೆ ಪ್ರೇಕ್ಷಕರನ್ನು ತಲುಪುತ್ತದೆ.” ಶೆಟ್ಟಿಯವರ ಚಲನಚಿತ್ರವು ಕಾಲ್ಪನಿಕ ಹಳ್ಳಿಯಲ್ಲಿ ಮನುಷ್ಯರು ಮತ್ತು ಪ್ರಕೃತಿಯ ನಡುವಿನ ಸೈದ್ಧಾಂತಿಕ ಸಂಘರ್ಷವನ್ನು ಪರಿಶೋಧಿಸುತ್ತದೆ, ಸಂಪ್ರದಾಯಗಳು ಮತ್ತು ಆಧುನಿಕತೆಯ ಘರ್ಷಣೆಯ ನಡುವೆ ಕಟುವಾದ ಸಂದೇಶವನ್ನು ನೀಡುತ್ತದೆ.

ರಿಷಬ್ ಶೆಟ್ಟಿ ಕನ್ನಡ ಚಿತ್ರರಂಗದಲ್ಲಿ ನಟ ಮತ್ತು ನಿರ್ದೇಶಕ. ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಬ್ಲಾಕ್‌ ಬಸ್ಟರ್, ‘ಕಾಂತಾರʼಕ್ಕೆ ಹೆಸರುವಾಸಿಯಾದ ಅವರು, ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು, ಕೊಡುಗೆ: ರಾಮಣ್ಣ ರೈ’ಚಿತ್ತಕ್ಕಾಗಿ 66 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಮಕ್ಕಳ ಚಲನಚಿತ್ರ ಸೇರಿದಂತೆ ಹಲವಾರು ಪುರಸ್ಕಾರಗಳನ್ನು ಪಡೆದಿದ್ದಾರೆ. ಅವರ ಚೊಚ್ಚಲ ನಿರ್ದೇಶನದ ಚಿತ್ರ ‘ಕಿರಿಕ್ ಪಾರ್ಟಿʼ.

ಈ ಪ್ರಶಸ್ತಿಯನ್ನು ಚಲನಚಿತ್ರಕ್ಕೆ ಅವನ/ಅವಳ ಕಲಾತ್ಮಕ ಕೊಡುಗೆಯನ್ನು ಗುರುತಿಸಲು/ಪ್ರಶಸ್ತಿ ನೀಡಲು ತೀರ್ಪುಗಾರರು ಬಯಸುವ ಯಾವುದೇ ಚಲನಚಿತ್ರಕ್ಕೆ ನೀಡಲಾಗುತ್ತದೆ. ಪ್ರಶಸ್ತಿಯು ಬಸಿಲ್ವರ್‌ ಪೀಕಾಕ್‌ ಪದಕ, ರೂ 15 ಲಕ್ಷ ಮತ್ತು ಪ್ರಮಾಣಪತ್ರವನ್ನು ಒಳಗೊಂಡಿದೆ.   

 https://static.pib.gov.in/WriteReadData/userfiles/image/28-5-2RJC2.jpg

ಕಾಂತಾರ ಚಲನಚಿತ್ರದ ಒಂದು ಚಿತ್ರ

ದಕ್ಷಿಣ ಕನ್ನಡದ ಕಾಲ್ಪನಿಕ ಹಳ್ಳಿಯೊಂದರಲ್ಲಿ ನಡೆಯುವ ಈ ಚಿತ್ರವು ಮನುಷ್ಯರು ಮತ್ತು ಪ್ರಕೃತಿಯ ನಡುವಿನ ಸೈದ್ಧಾಂತಿಕ ಸಂಘರ್ಷವನ್ನು ಪರಿಶೋಧಿಸುತ್ತದೆ. ಬುಡಕಟ್ಟು ಜನಾಂಗದವರು ಅನುಸರಿಸುವ ಕೆಲವು ಆಚರಣೆಗಳು ಮತ್ತು ಸಂಪ್ರದಾಯಗಳು ಪ್ರಕೃತಿ ಮಾತೆಗೆ ಅಪಾಯವನ್ನುಂಟುಮಾಡುತ್ತವೆ ಎಂದು ಭಾವಿಸುವ ಅರಣ್ಯ ಅಧಿಕಾರಿಯಿಂದ ಕಾಡಿನೊಂದಿಗೆ ವಾಸಿಸುವ ಬುಡಕಟ್ಟುಗಳ ಸಹಬಾಳ್ವೆಗೆ ಅಡ್ಡಿಯಾಗುತ್ತದೆ. ಭೂಮಿಗೆ ಸಂಬಂಧಿಸಿದ ಸಂಪ್ರದಾಯಗಳು ಮತ್ತು ಸಂಸ್ಕೃತಿಯ ಜೊತೆಗೆ ಅವರ ದೈವದ ಅಸ್ತಿತ್ವವನ್ನು ಅವನು ಪ್ರಶ್ನಿಸುತ್ತಾನೆ. ನಾಯಕ ಶಿವ ಕಂಬಳ ಉತ್ಸವದಲ್ಲಿ ಅಗ್ರ ರೇಸರ್ ಆಗಿದ್ದು, ಬೇಟೆಯಾಡುವುದು, ಅಕ್ರಮವಾಗಿ ಬೆಲೆಬಾಳುವ ಕಾಡು ಮರಗಳನ್ನು ಕಡಿಯುವುದು ಮತ್ತು ಮಾರಾಟ ಮಾಡುವುದನ್ನು ಮುಂದುವರಿಸುವುದರಿಂದ ಅರಣ್ಯ ಇಲಾಖೆಗೆ ಗಂಭೀರ ಬೆದರಿಕೆಯನ್ನು ಒಡ್ಡುತ್ತಾನೆ. ಅರಣ್ಯವನ್ನು ಧ್ವಂಸ ಮಾಡಿದ್ದಕ್ಕಾಗಿ ಅರಣ್ಯ ಇಲಾಖೆಯು ಶಿವ ಮತ್ತು ಅವನ ಸಂಗಾತಿಗಳನ್ನು ವಿಚಾರಣೆಗೆ ಒಳಪಡಿಸುತ್ತದೆ. ಈ ಅರಣ್ಯವನ್ನು ಹಿಂದೆ ರಾಜನಿಂದ ದಾನವಾಗಿ ನೀಡಲಾಯಿತು ಎಂದು ಬುಡಕಟ್ಟು ಜನರು ನಂಬುತ್ತಾರೆ. ಶಿವ ತನ್ನ ಅಸ್ತಿತ್ವವನ್ನು ಗ್ರಹಿಸಿ ಗ್ರಾಮದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಮರುಸ್ಥಾಪಿಸಲು ಸಾಧ್ಯವಾಗುತ್ತದೆಯೇ ಎಂಬುದು ಚಿತ್ರದ ತಿರುಲಾಗಿದೆ.

6. ನಿರ್ದೇಶಕರ ಅತ್ಯುತ್ತಮ ಚೊಚ್ಚಲ ಚಲನಚಿತ್ರ ಪ್ರಶಸ್ತಿ: ರೆಗರ್ ಆಜಾದ್ ಕಾಯಾ ಅವರ ವೆನ್ ದಿ ಸೀಡ್ಲಿಂಗ್ಸ್‌ ಗ್ರೋ

ಭರವಸೆಯ ನಿರ್ದೇಶಕ ರೆಗರ್ ಆಜಾದ್ ಕಾಯಾ ಅವರು ವೆನ್ ದಿ ಸೀಡ್ಲಿಂಗ್ಸ್‌ ಗ್ರೋ ಚಿತ್ರಕ್ಕಾಗಿ ನಿರ್ದೇಶಕರ ಅತ್ಯುತ್ತಮ ಚೊಚ್ಚಲ ಚಲನಚಿತ್ರ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಸಣ್ಣ ಘಟನೆಗಳ ಮೂಲಕ ತಂದೆ, ಮಗಳು ಮತ್ತು ಕಳೆದುಹೋದ ಹುಡುಗನ ಜೀವನದಲ್ಲಿ ನಮಗೆ ಒಂದು ದಿನವನ್ನು ತೋರಿಸುವಲ್ಲಿ ಯಶಸ್ವಿಯಾಗುವ ಕಥೆಯನ್ನು ಚಲನಚಿತ್ರವು ವಿವರಿಸುತ್ತದೆ ಎಂದು ತೀರ್ಪುಗಾರರು ಉಲ್ಲೇಖಿಸಿದ್ದಾರೆ. ಪಾತ್ರಗಳು ಮತ್ತು ಒಂದು ದೇಶ ಮತ್ತು ಅದರ ಕ್ಷೋಭೆಗಳ ನಿಕಟವಾದ ಕಥೆ ಇದಾಗಿದೆ. ಈ ಚಿತ್ರವು ತಂದೆ, ಮಗಳು ಮತ್ತು ಕಳೆದುಹೋದ ಹುಡುಗನ ಜೀವನದಲ್ಲಿನ ಒಂದು ದಿನದ ತೀಕ್ಷ್ಣವಾದ ಚಿತ್ರಣವಾಗಿದೆ, ಇದು ದೇಶದ ಕ್ಷೋಭೆಗಳ ನಡುವೆ ಒಂದು ಆತ್ಮೀಯ ಕಥೆಯನ್ನು ಸಂಕೀರ್ಣವಾಗಿ ಹೆಣೆಯುತ್ತದೆ.  

ಅಂತಾರಾಷ್ಟ್ರೀಯ ತೀರ್ಪುಗಾರರಿಂದ ಆಯ್ಕೆಯಾದ ಚೊಚ್ಚಲ ನಿರ್ದೇಶಕರಿಗೆ ನೀಡಲಾದ ಈ ಪ್ರಶಸ್ತಿಯು ವಿಶ್ವ ಸಿನಿಮಾದಲ್ಲಿನ ಅತ್ಯಂತ ಭರವಸೆಯ ಹೊಸ ನಿರ್ದೇಶಕ ಪ್ರತಿಭೆಗಳನ್ನು ಗುರುತಿಸುವ ಮತ್ತು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ.

ಐದು ಅಂತಾರಾಷ್ಟ್ರೀಯ ಮತ್ತು ಎರಡು ಭಾರತೀಯ ಚಲನಚಿತ್ರಗಳು ಈ ವಿಭಾಗದಲ್ಲಿ ಸಿಲ್ವರ್‌ ಪೀಕಾಕ್‌ ಪದಕ, 10 ಲಕ್ಷ ರೂ. ನಗದು ಮತ್ತು ಪ್ರಮಾಣಪತ್ರಕ್ಕಾಗಿ ಸ್ಪರ್ಧೆಯಲ್ಲಿದ್ದವು.

https://static.pib.gov.in/WriteReadData/userfiles/image/28-5-4M461.jpg

ವೆನ್ ದಿ ಸೀಡ್ಲಿಂಗ್ಸ್‌ ಗ್ರೋ ಚಲನಚಿತ್ರದ ಒಂದು ಚಿತ್ರ

ಚಲನಚಿತ್ರ ನಿರ್ಮಾಣದಲ್ಲಿನ ಶ್ರೇಷ್ಠತೆಯನ್ನು ಗುರುತಿಸುವ ಗೋಲ್ಡನ್ ಪೀಕಾಕ್ ಪ್ರಶಸ್ತಿಯು ವಿಶ್ವದ ಗೌರವಾನ್ವಿತ ಚಲನಚಿತ್ರ ಗೌರವಗಳಲ್ಲಿ ಒಂದಾಗಿದೆ. ಈ ವರ್ಷದ ತೀರ್ಪುಗಾರರಲ್ಲಿ ಭಾರತೀಯ ಚಲನಚಿತ್ರ ನಿರ್ದೇಶಕ, ನಿರ್ಮಾಪಕ ಶೇಖರ್ ಕಪೂರ್, ಜ್ಯೂರಿಯ ಅಧ್ಯಕ್ಷರಾಗಿದ್ದರು. ಸ್ಪ್ಯಾನಿಷ್ ಸಿನಿಮಾಟೋಗ್ರಾಫರ್ ಜೋಸ್ ಲೂಯಿಸ್ ಅಲ್ಕೇನ್, ಫ್ರೆಂಚ್ ಚಲನಚಿತ್ರ ನಿರ್ಮಾಪಕರಾದ ಜೆರೋಮ್ ಪೈಲಾರ್ಡ್ ಮತ್ತು ಕ್ಯಾಥರೀನ್ ಡಸ್ಸಾರ್ಟ್ ಮತ್ತು ಆಸ್ಟ್ರೇಲಿಯಾದ ಚಲನಚಿತ್ರ ನಿರ್ಮಾಪಕಿ ಹೆಲೆನ್ ಲೀಕ್ ಅವರಂತಹ ಅನುಭವಿಗಳು ಜ್ಯೂರಿಯಲ್ಲಿದ್ದರು.

ಸ್ಪರ್ಧಾತ್ಮಕ ಚಲನಚಿತ್ರಗಳಲ್ಲಿ WOMAN OF (ಮೂಲ ಶೀರ್ಷಿಕೆ- Kobieta Z), ದಿ ಅದರ್ ವಿಡೋ (ಮೂಲ ಶೀರ್ಷಿಕೆ- Pilegesh), ದಿ ಪಾರ್ಟಿ ಆಫ್ ಫೂಲ್ಸ್ (ಮೂಲ ಶೀರ್ಷಿಕೆ- ಕ್ಯಾಪ್ಟಿವ್ಸ್), ಮೆಷರ್ಸ್ ಆಫ್ ಮೆನ್ (ಮೂಲ ಶೀರ್ಷಿಕೆ- ಡೆರ್ ವರ್ಮೆಸ್ಸೆನೆ ಮೆನ್ಷ್), ಲುಬೊ, ಹಾಫ್ಮನ್ಸ್ ಫೇರಿ ಟೇಲ್ಸ್‌ (ಮೂಲ ಶೀರ್ಷಿಕೆ: ಸ್ಕಾಜ್ಕಿ ಗೋಫ್ಮಾನಾ), ಎಂಡ್ಲೆಸ್‌ ಬಾರ್ಡರ್ಸ್‌ (ಮೂಲ ಶೀರ್ಷಿಕೆ: ಮರ್ಜಾಯೆ ಬೈ ಪಯಾನ್), ಡೈ ಬಿಫೋರ್‌ ಡೆತ್‌ (ಮೂಲ ಶೀರ್ಷಿಕೆ: ಉಮ್ರಿ ಪ್ರಿಜೆ ಸ್ಮೃತಿ), ಬೋಸ್ನಿಯನ್ ಪಾಟ್ (ಮೂಲ ಶೀರ್ಷಿಕೆ: ಬೊಸಾನ್ಸ್ಕಿ ಲೊನಾಕ್), ಬ್ಲಾಗಾಸ್ ಲೆಸನ್ಸ್: ಮೂಲ ಶೀರ್ಷಿಕೆ ಉರೊಟ್ಸಿಟ್‌ ನಾ ಬ್ಲಾಗಾ), ಅಸೋಗ್, ಆಂಡ್ರಾಗೋಗಿ (ಮೂಲ ಶೀರ್ಷಿಕೆ: ಬುಡಿ ಪೆಕೆರ್ತಿ) ಮತ್ತು ಮೂರು ಭಾರತೀಯ ಚಲನಚಿತ್ರಗಳಾದ ಕಾಂತಾರಾ, ಸನಾ ಮತ್ತು ಮಿರ್ಬೀನ್ ಇದ್ದವು.

****

               



(Release ID: 1980630) Visitor Counter : 94