ವಾರ್ತಾ ಮತ್ತು ಪ್ರಸಾರ ಸಚಿವಾಲಯ

ರಾಷ್ಟ್ರೀಯ ಚಲನಚಿತ್ರ ಪರಂಪರೆ ಅಭಿಯಾನದಡಿ 4ಕೆ ಡಿಜಿಟಲ್ ಫಾರ್ಮ್ಯಾಟ್ ನ ವಿವಿಧ ಭಾಷೆಗಳ 5,000 ಹೆಚ್ಚು ಚಲನಚಿತ್ರಗಳ ಮರುಸ್ಥಾಪನೆ : ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವರು


54ನೇ ಐ ಎಫ್ ಎಫ್ ಐ ನಲ್ಲಿ ಗಮನಾರ್ಹ ಪ್ರಥಮಗಳು ಮತ್ತು ಅನನ್ಯ ಸಾಧನೆಗಳ ಅನಾವರಣ : ಅನುರಾಗ್ ಸಿಂಗ್ ಠಾಕೂರ್

54ನೇ ಐಎಫ್ಎಫ್ಐ ನಲ್ಲಿ ಸತ್ಯಜಿತ್ ರೇ ಜೀವಮಾನಸಾಧನೆ ಪ್ರಶಸ್ತಿ ಸ್ವೀಕರಿಸಿದ ಚಲನಚಿತ್ರ ಖ್ಯಾತನಾಮರಾದ ಮೈಕೆಲ್ ಡಗ್ಲಾಸ್ ಅವರನ್ನು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವರು ಅಭಿನಂದಿಸಿದ್ದಾರೆ

Posted On: 28 NOV 2023 7:27PM by PIB Bengaluru

ಗೋವಾ, 28 ನವೆಂಬರ್ 2023

 

 
ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ 54ನೇ ಆವೃತ್ತಿ (ಐಎಫ್ಎಫ್ಐ -54)ಯು “ವಸುಧೈವ ಕುಟುಂಬಕಂ- ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ” ತತ್ವದೊಂದಿಗೆ ವಿವಿಧತೆಯಲ್ಲಿ ಏಕತೆಯ ಸಂಭ್ರಮಾಚರಣೆಯಾಗಿತ್ತು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ, ಕ್ರೀಡೆ ಮತ್ತು ಯುವಜನ ವ್ಯವಹಾರಗಳ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಹೇಳಿದ್ದಾರೆ. ಇದು ವಿಶ್ವದಾದ್ಯಂತ ಇರುವ ಸೃಜನಾತ್ಮಕ ಮನಸ್ಸುಳನ್ನು, ಚಲನಚಿತ್ರ ನಿರ್ಮಾತೃಗಳನ್ನು, ಸಿನಿ ಪ್ರಿಯರನ್ನು  ಮತ್ತು ಸಾಂಸ್ಕೃತಿಕ ಉತ್ಸಾಹಿಗಳನ್ನು ಒಂದೇ ವೇದಿಕೆಗೆ ತಂದಿದೆ. ಸನ್ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು “ವಸುಧೈವ ಕುಟುಂಬಕಂ” ತತ್ವವನ್ನು ಅಪ್ಪಿಕೊಳ್ಳುವಂತೆ ನೀಡಿದ ಸ್ಪಷ್ಟ ಕರೆಯನ್ನು ಐಎಫ್ಎಫ್ಐ ನಲ್ಲಿ ಅಳವಡಿಸಿಕೊಳ್ಳಲಾಗಿತ್ತು. ಐಎಫ್ಎಫ್ಐನ ಈ ಆವೃತ್ತಿ ಅಭೂತಪೂರ್ವವಾಗಿತ್ತು, ಗಮನಾರ್ಹ ಮೊದಲುಗಳಿಗೆ ವೇದಿಕೆಯಾಗಿತ್ತು, ಅಷ್ಟೇ ಅಲ್ಲ ಚಿತ್ರ ನಿರ್ಮಾಣದ ಅತ್ಯುತ್ತಮಗಳನ್ನು, ಕ್ರಾಂತಿಯನ್ನು ಪ್ರದರ್ಶಿಸಿತು ಎಂದು ಅವರು ಐಎಫ್ಎಫ್ಐ ನ ಸಮಾರೋಪ ಸಮಾರಂಭದಲ್ಲಿ ನೀಡಿದ ವಿಡಿಯೋ ಸಂದೇಶದಲ್ಲಿ ಹೇಳಿದ್ದಾರೆ. 

54ನೇ ಐಎಫ್ಎಫ್ಐನಲ್ಲಿ ಸುಮಾರು 250 ಚಲನಚಿತ್ರಗಳು ಪ್ರದರ್ಶಿತವಾಗಿದ್ದು, ಒಟ್ಟು ಸುಮಾರು 30 ಸಾವಿರ ನಿಮಿಷಗಳ ವೀಕ್ಷಣೆ ಇತ್ತು. 78 ವಿವಿಧ ದೇಶಗಳ 68 ಅಂತಾರಾಷ್ಟ್ರೀಯ ಮತ್ತು 17 ಭಾರತೀಯ ಭಾಷೆಗಳ ಚಲನಚಿತ್ರಗಳು ಪ್ರದರ್ಶಿತಗೊಂಡವು ಎಂದು  ಶ್ರೀ ಠಾಕೂರ್ ಅವರು ತಿಳಿಸಿದ್ದಾರೆ. 

“ಈ ಹಬ್ಬ 23 ಮಾಸ್ಟರ್ ಕ್ಲಾಸಸ್, ಇನ್-ಕಾನ್ವರ್ಸೇಷನ್ ಸೆಷನ್ಸ್ ಅಂದರೆ ಕೆಲವು ಮುಖತಃ ಭೇಟಿಯಾಗಿ ನಡೆಸುವ ಸಂವಹನ ಕಾರ್ಯಕ್ರಮಗಳು ಮತ್ತು ಇನ್ನು ಕೆಲವು ವರ್ಚುಯಲ್ ಮಾಧ್ಯಮದ ಸೆಷನ್ ಗಳಿಗೆ ಸಾಕ್ಷಿಯಾಯಿತು. ಉತ್ಸವದಲ್ಲಿ ಆಯೋಜಿಸಲಾದ ಸುಮಾರು 50 ಗಾಲಾ ಕೆಂಪು ಹಾಸಿನ ಸ್ವಾಗತಗಳು ಇಡೀ ಸಂಭ್ರಮಾಚರಣೆಗೆ ಇನ್ನಷ್ಟು ಮೆರಗು ನೀಡಿದವು” ಎಂದು ಅವರು ಹೇಳಿದರು. 
ಮಾನ್ಯ ತೀರ್ಪುಗಾರರ ಬೆಂಬಲವನ್ನೂ ಉಲ್ಲೇಖಿಸಿದ ಸಚಿವರು, ಅವರ ಅಮೂಲ್ಯ ಸಮಯ, ಬದ್ಧ ಪ್ರಯತ್ನಗಳು ಈ ಉತ್ಸವಕ್ಕೆ ವಿಶಿಷ್ಟ ರೂಪ ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು ಎಂದರು.

ಐಎಫ್ಎಫ್ಐ ನ ಒಳಗೊಳ್ಳುವಿಕೆ ಮತ್ತು ಲಭ್ಯತೆ ಪ್ರಯತ್ನಗಳ ಬಗ್ಗೆ ಬೆಳಕು ಚೆಲ್ಲಿದ ಸಚಿವರು, ದಿವ್ಯಾಂಗ ಸಿನಿಪ್ರಿಯರು ದೊಡ್ಡ ದೊಡ್ಡ ತೆರೆಗಳ ಮೇಲೆ ಸಿನಿಮಾ ಸೌಂದರ್ಯ ಆಸ್ವಾದಿಸಲು ಸಂಕೇತ ಭಾಷೆ ಮತ್ತು ಶ್ರವ್ಯ ವಿವರಣೆಗಳ ಸಹಿತ ವಿಶೇಷ ಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು ಎಂದರು. ಇನ್ನು ಮಹಿಳೆಯರ ಪ್ರತಿಭೆ ಅನಾವರಣಕ್ಕಾಗಿ ಮಹಿಳಾ ನಿರ್ದೇಶನದ 40 ಕ್ಕೂ ಹೆಚ್ಚು ಚಲನಚಿತ್ರಗಳು ಈ ಉತ್ಸವದಲ್ಲಿ ಪ್ರದರ್ಶಿತಗೊಂಡವು” ಎಂದು ಅವರು ಹೇಳಿದರು. 

ಮಾಹಿತಿ ಮತ್ತು ಪ್ರಸಾರ, ಕ್ರೀಡೆ ಮತ್ತು ಯುವಜನ ವ್ಯವಹಾರಗಳ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್, ಐಎಫ್ಎಫ್ಐ ಸಮಾರೋಪ ಸಮಾರಂಭದಲ್ಲಿ ಅವರ ವಿಡಿಯೋ ಸಂದೇಶ


ಹಳೆಯ ಅತ್ಯುತ್ತಮ ಚಿತ್ರಗಳನ್ನು (ಕ್ಲಾಸಿಕಲ್ ಚಿತ್ರಗಳನ್ನು) ಮರುಸ್ಥಾಪಿಸುವ ರಾಷ್ಟ್ರೀಯ ಚಲನಚಿತ್ರ ಪಾರಂಪರಿಕ ಅಭಿಯಾನದ ಪ್ರಯತ್ನಗಳಿಗೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಮಹಾನ್ ಕಾರ್ಯಗಳನ್ನು ಭಾರತದ ಭವಿಷ್ಯದ ಪೀಳಿಗೆ ಮೆಚ್ಚಿ, ಆನಂದಿಸಿ ಮತ್ತು ಪ್ರೇರಣೆ ಪಡೆಯುವಂತಾಗಲು 4ಕೆ ಫಾರ್ಮ್ಯಾಟ್ ನ ವಿವಿಧ ಭಾಷೆಗಳ 5,000 ಕ್ಕೂ ಹೆಚ್ಚು ಚಲನಚಿತ್ರಗಳು ಮತ್ತು ಡಾಕ್ಯುಮೆಂಟರಿಗಳನ್ನು ಮರುಸ್ಥಾಪಿಸಲಾಗುತ್ತಿದೆ ಎಂದು ಸಚಿವರು ಹೇಳಿದರು. 

54ನೇ ಐಎಫ್ಎಫ್ಐ ನ ವಿಶೇಷ ವಿಭಾಗದಡಿ ಪ್ರದರ್ಶಿಸಲಾದ ರಾಷ್ಟ್ರೀಯ ಸಿನಿಮಾ ಪರಂಪರೆ ಮಿಷನ್ ಅಡಿಯಲ್ಲಿ ಸಂರಕ್ಷಿಸಲಾದ 7 ಚಲನಚಿತ್ರಗಳಿಗೆ ಸಿನಿಮಾ ಪ್ರೇಮಿಗಳಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ ಎಂದು ಶ್ರೀ ಠಾಕೂರ್ ಬಣ್ಣಿಸಿದ್ದಾರೆ.

ಹಳೆಯ ಚಲನಚಿತ್ರಗಳ ಸಂರಕ್ಷಣೆಯ ಜೊತೆಜೊತೆಗೇ ಹೊಸ ಚಲನಚಿತ್ರಗಳಿಗೆ ಉತ್ತೇಜನ ನೀಡುವ ಉಭಯ ಅಭಿಯಾನದ ಬಗ್ಗೆ ಸಚಿವರು ಒತ್ತಿ ಹೇಳಿದರು. “75 ಕ್ರಿಯೇಟಿವ್ ಮೈಂಡ್ಸ್ ಆಫ್ ಟುಮಾರೋ” ಅಡಿ ಪ್ರದರ್ಶಿತವಾದ “ದಿ ಫಿಲಂ ಚಾಲೆಂಜ್” ಯುವಜನರ ಪ್ರತಿಭೆ ಪ್ರದರ್ಶಿಸಿದೆ. ಯಂಗ್ ಕ್ರಿಯೇಟಿವ್ ಮೈಂಡ್ಸ್ ಪ್ರಸ್ತುತ ಪಡಿಸಿದ ಚಲನಚಿತ್ರಗಳು, ಜನರು ಗಂಭೀರವಾಗಿ ಆಲೋಚನೆ ಮಾಡಲು ಪ್ರೇರೇಪಿಸುವಂತಹ ಚಿತ್ರವಾಗಿತ್ತು. ಅದು ಪರಿಸರವನ್ನು ಸಂರಕ್ಷಿಸುವ ಪ್ರಮುಖ ವಿಷಯಾಧಾರಿತವಾಗಿತ್ತು. 75 ಕ್ರಿಯೇಟಿವ್ ಮೈಂಡ್ ಗಳ ಪೈಕಿ 45 ಯುವಪ್ರತಿಭೆಗಳಿಗೆ ಈ ವಲಯದ ಮುಂಚೂಣಿ ಕಂಪೆನಿಗಳು ತಮ್ಮ ಆಲೋಚನೆಗಳನ್ನು ಪ್ರಸ್ತುತಪಡಿಸಲು ಅವಕಾಶ ನೀಡಿರುವುದು ಗಮನಾರ್ಹ ಸಂಗತಿಯಾಗಿದೆ. ಎನ್ ಎಫ್ ಡಿ ಸಿ ಫಿಲಂ ಬಜಾರ್, ತನ್ನ ವ್ಯಾಪ್ತಿ ವಿಸ್ತರಿಸಿಕೊಂಡಿದ್ದು, ವೈವಿಧ್ಯಮಯ ಅಂತಾರಾಷ್ಟ್ರೀಯ ಪ್ರೇಕ್ಷಕರನ್ನೂ ಸ್ವಾಗತಿಸುತ್ತಾ, ಅಂತರ-ಸಾಂಸ್ಕೃತಿಕ ಸಹಯೋಗಗಳನ್ನು ಪೋಷಿಸುತ್ತಿದೆ. “ವಿಎಫ್ಎಕ್ಸ್ & ಟೆಕ್ ಪೆವಿಲಿಯನ್” ಮತ್ತು ಡಾಕ್ಯುಮೆಂಟರಿ ವಿಭಾಗ ಆರಂಭಿಸಿದ್ದು, ನಾವಿನ್ಯತೆ ಮತ್ತು ಕಾಲ್ಪನಿಕವಲ್ಲದ ಕಥೆ ಹೇಳುವಿಕೆಯನ್ನು ಪ್ರದರ್ಶಿಸಿದೆ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.

2023ರ ಸತ್ಯಜಿತ್ ರೇ ಜೀವಮಾನ ಸಾಧನೆ ಪ್ರಶಸ್ತಿ ಸ್ವೀಕರಿಸಿದ ಮಿಸ್ಟರ್.ಮೈಕಲ್ ಡೌಗ್ಲಾಸ್ ಅವರನ್ನು ಕೇಂದ್ರ ಸಚಿವ ಠಾಕೂರ್ ಅಭಿನಂದಿಸಿದ್ದಾರೆ. ಹಾಗೇ ಅವರ ಜೊತೆಯಾಗಿ ಐಎಫ್ಎಫ್ಐಗೆ ವಿಶೇಷ ಮೆರಗು ನೀಡಿದ ಮಿಸ್ ಕ್ಯಾಥರಿನ್ ಝೀಟಾ ಜೋನ್ಸ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಐಎಫ್ಎಫ್ಐನಲ್ಲಿ ಪ್ರಶಸ್ತಿ ಸ್ವೀಕರಿಸಿದ ಗೋಲ್ಡನ್ ಪೀಕಾಕ್ ಅವಾರ್ಡ್ಸ್ ಹಾಗೂ ಮೊಟ್ಟಮೊದಲ ಬೆಸ್ಟ್ ವೆಬ್ ಸೀರೀಸ್ (ಒಟಿಟಿ) ಅವಾರ್ಡ್ ಪಡೆದವರನ್ನೂ ಸಚಿವರು ಅಭಿನಂದಿಸಿದ್ದಾರೆ. 

ಈ ಉತ್ಸವವನ್ನು ಯಶಸ್ವಿಗೊಳಿಸಿದ ರಾಷ್ಟ್ರೀಯ ಸಿನಿಮಾ ಅಭಿವೃದ್ಧಿ ನಿಗಮ (ಎನ್ ಎಫ್ ಡಿ ಸಿ ) ತಂಡ, ಮುಖ್ಯಮಂತ್ರಿ ಡಾ||ಪ್ರಮೋದ್ ಸಾವಂತ್ ನೇತೃತ್ವದ ಗೋವಾ ರಾಜ್ಯ ಸರ್ಕಾರದ ಬದ್ಧ ಪ್ರಯತ್ನಗಳಿಗೆ ಸಚಿವರು ಸಮಾರೋಪ ಸಮಾರಂಭದಲ್ಲಿ ಕೃತಜ್ಞತೆ ಸಲ್ಲಿಸಿದರು.  ಎಲ್ಲಾ ಚಲನಚಿತ್ರ ನಿರ್ಮಾತೃಗಳು, ನಟರು ಮತ್ತು ಚಿತ್ರ ಸೃಷ್ಟಿಕರ್ತರನ್ನು ಅಭಿನಂದಿಸಿದ ಸಚಿವರು, ಕಥೆ ಹೇಳುವ ಉತ್ಸಾಹವನ್ನು ಮುಂದುವರಿಸುವಂತೆಯೂ ತಿಳಿಸಿದರು. ಏಕತೆಯ ಭಾವ ಹಾಗೂ ಐಎಫ್ಎಫ್ಐ ಮೀರಿದ ಸೃಜನಶೀಲತೆಯ ಸ್ಫೂರ್ತಿ ಇನ್ನಷ್ಟು ಎತ್ತರಕ್ಕೇರಲಿ ಎಂದು ಸಚಿವರು ಹಾರೈಸಿದರು. 


* * *
 



(Release ID: 1980626) Visitor Counter : 78