ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
azadi ka amrit mahotsav

ವಿಕಸಿತ ಭಾರತ ಸಂಕಲ್ಪ ಯಾತ್ರೆ


995 ಗ್ರಾಮ ಪಂಚಾಯ್ತಿಗಳಲ್ಲಿ 5,470 ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗಿದ್ದು, 7,82,000ಕ್ಕೂ ಅಧಿಕ ಜನರು ಭಾಗಿ

ಶಿಬಿರಗಳಲ್ಲಿ 9,35,970ಕ್ಕೂ ಅಧಿಕ ಆಯುಷ್ಮಾನ್ ಕಾರ್ಡ್ ಹಳ ಸೃಷ್ಟಿ ಮತ್ತು 1,07,000 ಭೌತಿಕ ಕಾರ್ಡ್ ಗಳ ವಿತರಣೆ

1,95,000 ಕ್ಕೂ ಅಧಿಕ ಜನರಿಗೆ ಕ್ಷಯರೋಗ ತಪಾಸಣೆ ಮತ್ತು ಸುಮಾರು 19,500 ಜನರಿಗೆ ಉನ್ನತ ಸಾರ್ವಜನಿಕ ಆರೋಗ್ಯ ಸೌಕರ್ಯಗಳಿಗೆ ದಾಖಲು

ಸುಮಾರು 5,51,000 ಜನರಿಗೆ ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ತಪಾಸಣೆ ಮತ್ತು 48,500ಕ್ಕೂ ಅಧಿಕ ಮಂದಿಗೆ ಉನ್ನತ ಸಾರ್ವಜನಿಕ ಆರೋಗ್ಯ ಸೌಕರ್ಯಗಳಿಗೆ ದಾಖಲು

Posted On: 27 NOV 2023 1:20PM by PIB Bengaluru

 

ಕೇಂದ್ರ ಸರ್ಕಾರದ ಯೋಜನೆಗಳ ಪ್ರಯೋಜನಗಳನ್ನು ಗರಿಷ್ಠ ಪ್ರಮಾಣದಲ್ಲಿ ಜನರಿಗೆ ತರಲುಪಿಸಲು ಗೌರವಾನ್ವಿತ ಪ್ರಧಾನಮಂತ್ರಿ ನವೆಂಬರ್ 15 ರಂದು ಜಾರ್ಖಂಡ್‌ನ ಕಂತಿಯಿಂದ ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿದ್ದರು. ವಿಕಸಿತ ಭಾರತ ಸಂಕಲ್ಪ ಯಾತ್ರೆಯಡಿ ರಾಷ್ಟ್ರದಾದ್ಯಂತ ಸ್ಥಳದಲ್ಲಿಯೇ ಸೇವೆ ನೀಡುವ (ಆನ್-ಸ್ಪಾಟ್) ಭಾಗವಾಗಿ, ಗ್ರಾಮ ಪಂಚಾಯತ್‌ಗಳಲ್ಲಿ ಐಇಸಿ ಸಂಚಾರಿ ವಾಹನ ನಿಲುಗಡೆಯ ಸ್ಥಳಗಳಲ್ಲಿ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ.

2023ರ ನವೆಂಬರ್ 26ರವರೆಗೆ, 995 ಗ್ರಾಮ ಪಂಚಾಯ್ತಿಗಳಲ್ಲಿ 5,470 ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗಿದ್ದು, 7,82,000ಕ್ಕೂ ಅಧಿಕ ಜನರು ಆ ಶಿಬಿರಗಳಲ್ಲಿ ಭಾಗವಹಿಸಿದ್ದಾರೆಂದು ವರದಿಯಾಗಿದೆ.
 

ರೂಪ್ ನಗರ, ಪಂಜಾಬ್

 

ಸುಂದರ್ ಗಢ್ , ಒಡಿಶಾ

 

ಚಂಬಾ, ಹಿಮಾಚಲ ಪ್ರದೇಶ

 

ಕೃಷ್ಣಾ, ಆಂಧ್ರಪ್ರದೇಶ

ನಾಸಿಕ್, ಮಹಾರಾಷ್ಟ್ರ

 

ತೀನ್ ಸುಖಿಯಾ, ಅಸ್ಸಾಂ

 

ಆರೋಗ್ಯ ಶಿಬಿರಗಳಲ್ಲಿ ಈ ಕೆಳಗಿನ ಚಟುವಟಿಕೆಗಳನ್ನು ನಡೆಸಲಾಯಿತು. ಅವುಗಳೆಂದರೆ,

ಆಯುಷ್ಕಾನ್ ಭಾರತ್ –ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ(ಎಬಿ-ಪಿಎಂಜೆಎವೈ)- ವಿಕಸಿತ ಭಾರತ ಸಂಕಲ್ಪ ಯಾತ್ರೆಗಾಗಿ ಎಂಒಎಚ್ ಎಫ್ ಡಬ್ಲೂ ನ ಮಹತ್ವಾಕಾಂಕ್ಷೆಯ ಯೋಜನೆಯಡಿ, ಆಯುಷ್ಮಾನ್ ಅಪ್ಲಿಕೇಷನ್ ಅನ್ನು ಬಳಸಿಕೊಂಡು ಆಯುಷ್ಮಾನ್ ಕಾರ್ಡ್‌ಗಳನ್ನು ಸೃಷ್ಟಿಸಲಾಗುತ್ತಿದೆ ಮತ್ತು ಫಲಾನುಭವಿಗಳಿಗೆ ಭೌತಿಕ ಕಾರ್ಡ್‌ಗಳನ್ನು ವಿತರಿಸಲಾಗುತ್ತಿದೆ. ಹನ್ನೆರಡನೇ ದಿನದ ಅಂತ್ಯದ ವೇಳೆಗೆ, ಶಿಬಿರಗಳಲ್ಲಿ 9,35,970ಕ್ಕೂ ಅಧಿಕ ಆಯುಷ್ಮಾನ್ ಕಾರ್ಡ್‌ಗಳನ್ನು ಸೃಷ್ಟಿಸಲಾಗಿದೆ ಮತ್ತು 1,07,000ಕ್ಕೂ ಅಧಿಕ ಭೌತಿಕ ಕಾರ್ಡ್‌ಗಳನ್ನು ವಿತರಿಸಲಾಗಿದೆ.

ಕ್ಷಯರೋಗ(ಟಿಬಿ): ರೋಗಲಕ್ಷಣಗಳಾದ ಕಫ ಪರೀಕ್ಷೆ ಮತ್ತು ಸಾದ್ಯವಿದ್ದ ಕಡೆಗಳಲ್ಲೆಲ್ಲಾ ಎನ್ ಎಎಟಿ ಯಂತ್ರಗಳನ್ನು ಬಳಸುವ ಮೂಲಕ ಕ್ಷಯರೋಗ ಪತ್ತೆಗಾಗಿ ರೋಗಿಗಳ ತಪಾಣೆ ಕೈಗೊಳ್ಳಲಾಗುತ್ತದೆ. ಟಿಬಿ ಇರುವ ಶಂಕಿತ ಪ್ರಕರಣಗಳನ್ನು ಉನ್ನತ ಸೌಲಭ್ಯಗಳಿಗೆ ದಾಖಲು ಮಾಡಲಾಗುತ್ತದೆ. ಹನ್ನೆರಡನೇ ದಿನದ ಅಂತ್ಯದ ವೇಳೆಗೆ, 1,95,000ಕ್ಕೂ ಅಧಿಕ ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಅದರಲ್ಲಿ 19,500 ಕ್ಕೂ ಅಧಿಕ ಜನರನ್ನು ಉನ್ನತ ಸಾರ್ವಜನಿಕ ಆರೋಗ್ಯ ಸೌಲಭ್ಯಗಳಿಗೆ ದಾಖಲು ಮಾಡಲಾಗಿದೆ.

ಪ್ರಧಾನಮಂತ್ರಿ ಟಿಬಿ ಮುಕ್ತ ಭಾರತ ಅಭಿಯಾನ (ಪಿಎಂಟಿಬಿಎಂಎ) ಅಡಿ, ನಿಕ್ಷಯ ಮಿತ್ರರಿಂದ ಸಹಾಯವನ್ನು ಪಡೆದುಕೊಳ್ಳಲು ಟಿಬಿಯಿಂದ ಬಳಲುತ್ತಿರುವ ರೋಗಿಗಳಿಂದ ಒಪ್ಪಿಗೆಯನ್ನು ಪಡೆದುಕೊಳ್ಳಲಾಗಿದೆ. ನಿಕ್ಷಯ ಮಿತ್ರರಾಗಲು ಬಯಸುವವರಿಗೆ ಸ್ಥಳದಲ್ಲಿಯೇ ನೋಂದಣಿ ಮಾಡಿಕೊಳ್ಳಲಾಯಿತು. 12ನೇ ದಿನದ ಅಂತ್ಯಕ್ಕೆ ಪಿಎಂಟಿಬಿಎಂಬಿಎ ಅಡಿ 11,500 ರೋಗಿಗಳು ಒಪ್ಪಿಗೆಯನ್ನು ನೀಡಿದ್ದಾರೆ ಮತ್ತು 5,500 ಕ್ಕೂ ಅದಿಕ ನಿಕ್ಷಯ ಮಿತ್ರರು ನೋಂದಣಿ ಮಾಡಿಕೊಂಡಿದ್ದಾರೆ.

ನಿಕ್ಷಯ ಪೋಷಣ್ ಯೋಜನಾ (ಎನ್ ಪಿವೈ) ಅಡಿಯಲ್ಲಿ, ನೇರ ನಗದು ವರ್ಗಾವಣೆಯ ಮೂಲಕ ಟಿಬಿ ರೋಗಿಗಳಿಗೆ ಆರ್ಥಿಕ ನೆರವು ನೀಡಲಾಗುತ್ತದೆ. ಈ ಉದ್ದೇಶಕ್ಕಾಗಿ ಬಾಕಿ ಇರುವ ಫಲಾನುಭವಿಗಳ ಬ್ಯಾಂಕ್ ಖಾತೆಯ ವಿವರಗಳನ್ನು ಸಂಗ್ರಹಿಸಿ, ಖಾತೆಗಳಿಗೆ ಆಧಾರ್ ಜೋಡಣೆ ಮಾಡಲಾಗುತ್ತಿದೆ. ಹನ್ನೆರಡನೇ ದಿನದ ಅಂತ್ಯದ ವೇಳೆಗೆ, ಅಂತಹ 3,371 ಫಲಾನುಭವಿಗಳ ವಿವರಗಳನ್ನು ಸಂಗ್ರಹಿಸಲಾಗಿದೆ.

ಸಿಕಲ್ ಸೆಲ್ ರೋಗ: ಹೆಚ್ಚಿನ ಸಂಖ್ಯೆಯ ಬುಡಕಟ್ಟು ಜನಸಂಖ್ಯೆಯಿರುವ ಪ್ರದೇಶಗಳಲ್ಲಿ, ಸಿಕಲ್ ಸೆಲ್ ರೋಗ ಪತ್ತೆಗಾಗಿ ಪಾಯಿಂಟ್ ಆಫ್ ಕೇರ್ (ಪಿಒಸಿ) ಪರೀಕ್ಷೆಗಳ ಮೂಲಕ ಅಥವಾ ಸೊಲ್ಯುಬಿಲಿಟಿ ಟೆಸ್ಟ್ ಮೂಲಕ ಎಸ್ ಸಿಡಿ ಪತ್ತೆಗೆ ಅರ್ಹ ಜನಸಂಖ್ಯೆಯ (40 ವರ್ಷ ವಯಸ್ಸಿನವರೆಗೆ) ತಪಾಸಣೆ ಮಾಡಲಾಗುತ್ತಿದೆ. ಪಾಸಿಟಿವ್ ಪರೀಕ್ಷೆಯ ಪ್ರಕರಣಗಳನ್ನು ನಿರ್ವಹಣೆಗಾಗಿ ಉನ್ನತ ಕೇಂದ್ರಗಳಿಗೆ ಕಳುಹಿಸಲಾಗುತ್ತಿದೆ. ಹನ್ನೆರಡನೇ ದಿನದ ಅಂತ್ಯದ ವೇಳೆಗೆ, 54,750 ಕ್ಕೂ ಹೆಚ್ಚು ಜನರನ್ನು ಪರೀಕ್ಷಿಸಲಾಗಿದ್ದು, ಆ ಪೈಕಿ 2,930 ಜನರು ಪಾಸಿಟಿವ್ ಇದ್ದು ಮತ್ತು ಅವರನ್ನು ಉನ್ನತ ಸಾರ್ವಜನಿಕ ಆರೋಗ್ಯ ಸೌಲಭ್ಯಗಳಿಗೆ ಕಳುಹಿಸಲಾಗಿದೆ.

ಅಸಾಂಕ್ರಾಮಿಕ ರೋಗಗಳು(ಎನ್ ಸಿಡಿಎಸ್): ಅಧಿಕ ರಕ್ತದೊತ್ತಡ ಮತ್ತು ಮಧುಮೇಹಕ್ಕಾಗಿ ಅರ್ಹ ಜನಸಂಖ್ಯೆಯ (30 ವರ್ಷ ಮತ್ತು ಅದಕ್ಕೂ ಮೇಲ್ಪಟ್ಟವರ) ತಪಾಸಣೆ ಮಾಡಲಾಗುತ್ತಿದೆ ಮತ್ತು ಪಾಸಿಟಿವ್ ಎಂದು ಶಂಕಿತ ಪ್ರಕರಣಗಳನ್ನು ಉನ್ನತ ಕೇಂದ್ರಗಳಿಗೆ ಕಳುಹಿಸಲಾಗುತ್ತಿದೆ. 12ನೇ ದಿನದ ಅಂತ್ಯಕ್ಕೆ, ಸುಮಾರು 5,51,000 ಜನರನ್ನು ಅಧಿಕ ರಕ್ತದೊತ್ತಡ ಮತ್ತು ಮಧುಮೇಹಕ್ಕಾಗಿ ಪರೀಕ್ಷಿಸಲಾಗಿದೆ. 31,000ಕ್ಕೂ ಅಧಿಕ ಜನರು ಅಧಿಕ ರಕ್ತದೊತ್ತಡವಿರುವುದ ಕಂಡು ಬಂದಿದೆ ಮತ್ತು 24,000ಕ್ಕಿಂತ ಅಧಿಕ ಜನರಲ್ಲಿ ಮಧುಮೇಹವಿರುವುದು ದೃಢಪಟ್ಟಿದೆ. ಮತ್ತು 48,500 ಕ್ಕೂ ಅಧಿಕ ಜನರನ್ನು ಉನ್ನತ ಸಾರ್ವಜನಿಕ ಆರೋಗ್ಯ ಸೌಲಭ್ಯಗಳಿಗೆ ಕಳುಹಿಸಲಾಗಿದೆ.

****


(Release ID: 1980169) Visitor Counter : 157