ವಾರ್ತಾ ಮತ್ತು ಪ್ರಸಾರ ಸಚಿವಾಲಯ
iffi banner

ಮಧ್ಯಭಾಗ ತಲುಪಿದ 54ನೇ ಐಎಫ್ಎಫ್ಐ : ಮಿಡ್ ಫೆಸ್ಟ್ ಫಿಲ್ಮ್ ಆಗಿ ನಾಳೆ ಟರ್ಕಿ ಚಿತ್ರ “ಅಬೌಟ್ ಡ್ರೈ ಗ್ರಾಸೆಸ್” ಪ್ರದರ್ಶನ  

ಗೋವಾ, ನವೆಂಬರ್ 23;

ಗೋವಾದಲ್ಲಿ ನಡೆಯುತ್ತಿರುವ 54ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ನಾಳೆ ಮಧ್ಯಭಾಗ ತಲುಪಲಿದ್ದು, ಮಿಡ್ ಫೆಸ್ಟ್ ಚಲನಚಿತ್ರವಾಗಿ ಟರ್ಕಿ ಭಾಷೆಯ ನೂರಿ ಬಿಲ್ಗೆ ಸೆಯ್ಲಾನ್ ಅವರ ನಿರ್ದೇಶನದ ಮೇರು ಚಲನಚಿತ್ರ “ಅಬೌಟ್ ಡ್ರೈ ಗ್ರಾಸೆಸ್” ಪ್ರದರ್ಶನವಾಗಲಿದೆ. ಆಕರ್ಷಕ ಕಥಾ ಹಂದರ ಮತ್ತು ಮನೋಜ್ಞ ಅಭಿನಯಕ್ಕೆ ಈ ಚಿತ್ರ ಖ್ಯಾತಿ ಪಡೆದಿದ್ದು, ಜಾಗತಿಕ ಮೆಚ್ಚುಗೆಗೆ ಕಾರಣವಾಗಿದೆ. ಕ್ಯಾನಸ್ ಚಿತ್ರೋತ್ಸವ 2023ರಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಗೆ ಈ ಚಿತ್ರ ಪಾತ್ರವಾಗಿದೆ. 

ಕ್ಯಾನಸ್ ಚಲನಚಿತ್ರೋತ್ಸವ – 2023, ಟೊರೆಂಟೋ ಅಂತರರಾಷ್ಟ್ರೀಯ ಚಿತ್ರೋತ್ಸವ – 2023, ಕರ್ಲೋವಿ ವರಿ ಚಲನಚಿತ್ರೋತ್ಸವ – 2023, ಬೂಸಾನ್ ಅಂತರರಾಷ್ಟ್ರೀಯ ಚಿತ್ರೋತ್ಸವ – 2023 ಸೇರಿ ಜಗತ್ತಿನ ಪ್ರಮುಖ ಚಿತ್ರೋತ್ಸವಗಳಲ್ಲಿ ಡ್ರೈ ಗ್ರಾಸೆಸ್ ಚಿತ್ರ ಪ್ರದರ್ಶನ ಕಂಡಿದೆ. ಬಲವಾದ ನಿರೂಪಣೆಯಿಂದಾಗಿ ಜಾಗತಿಕ ಪ್ರೇಕ್ಷಕರನ್ನು ಈ ಚಿತ್ರ ಸೆಳೆದಿದ್ದು, ಇದು ಸಿನೆಮಾದ ಭೂ ದೃಶ್ಯಗಳಲ್ಲಿ ಅತ್ಯುತ್ತಮ ಚಿತ್ರವಾಗಿದೆ.  

ಅಬೌಟ್ ಡ್ರೈ ಗ್ರಾಸೆಸ್ ಚಿತ್ರ ಪಣಜಿಯ ಐನಾಕ್ಸ್ ಸ್ಕ್ರೀನ್ – 1 ರಲ್ಲಿ ನಾಳೆ ಸಂಜೆ 5.30 ಕ್ಕೆ (24.11.2023) ಪ್ರದರ್ಶನವಾಗಲಿದೆ. ಈ ಸಂದರ್ಭದಲ್ಲಿ ಚಿತ್ರದ ಪಾತ್ರವರ್ಗ ಮತ್ತು ಸಿಬ್ಬಂದಿಯನ್ನು ಗೌರವಿಸಲಾಗುತ್ತದೆ. 
 

 

ಚಿತ್ರದ ನಿರೂಪಣೆಯ ಒಂದು ನೋಟ

ಹಳ್ಳಿಯೊಂದರಲ್ಲಿ ಯುವ ಶಿಕ್ಷಕರೊಬ್ಬರು ಕಡ್ಡಾಯ ಕರ್ತವ್ಯದ ಅವಧಿಯ ನಿರ್ವಹಣೆ ನಂತರ ತನ್ನ ಆಕಾಂಕ್ಷೆಗಳ ಸುತ್ತುವ ಕಥಾ ಹಂದರವನ್ನು ಹೊಂದಿದೆ. ನೀರಸ ಜೀವನದ ಹತಾಶೆಯಲ್ಲಿರುವ ನಾಯಕನ ದೃಷ್ಟಿಕೋನವನ್ನು ಸಹೋದ್ಯೋಗಿ ನುರೇ ಸಹಾಯದಿಂದ ಚಿತ್ರ ಅನಿರೀಕ್ಷಿತ ತಿರುವು ಪಡೆಯುತ್ತದೆ. 

ನಿರ್ದೇಶಕ ನುರಿ ಬಿಲ್ಗೆ ಸೆಯ್ಲಾನ್

ನೂರಿ ಬಿಲ್ಗೆ ಸೆಯ್ಲಾನ್ ಅವರು 1959 ರಲ್ಲಿ ಇಸ್ತಾಂಬುಲ್ ನಲ್ಲಿ ಜನಿಸಿದರು. ಚಿತ್ರ ನಿರ್ಮಾಣದಲ್ಲಿ ಅವರು ಪ್ರಮುಖರಾಗಿ ಹೊರ ಹೊಮ್ಮಿದ್ದಾರೆ. 1995 ರಲ್ಲಿ ಅವರು ಕೋಝಾ ಎಂಬ ಕಿರು ಚಿತ್ರ ನಿರ್ಮಾಣದ ಮೂಲಕ ತನ್ನ ಯಾನ ಆರಂಭಿಸಿದ್ದು, ಇದು ಕ್ಯಾನೆಸ್ ಚಲನ ಚಿತ್ರೋತ್ಸವದಲ್ಲಿ ಸ್ಪರ್ಧಿಸಿತ್ತು. 1998ರಲ್ಲಿ ಕಸಬಾದಲ್ಲಿ ಬರ್ಲಿನ್ ನಲ್ಲಿ ಚಲನ ಚಿತ್ರೋತ್ಸವದಲ್ಲಿ ಕಾಲಿಗರಿ ಪ್ರಶಸ್ತಿಯನ್ನು ಗಳಿಸಿತ್ತು. ಕ್ಯಾನೆಸ್ 2023 ಉಜಾಕ್  ಗ್ರ್ಯಾಂಡ್ ಫ್ರಿಕ್ಸ್ ಮತ್ತು ಉತ್ತಮ ನಟ ಪ್ರಶಸ್ತಿಯನ್ನು ಗಳಿಸಿತು. ಅವರ ವಿಂಟರ್ ಸ್ಲೀಪ್ ಚಿತ್ರ 2014ರಲ್ಲಿ ನಡೆದ 67ನೇ ಕ್ಯಾನೆಸ್ ಚಿತ್ರೋತ್ಸವದಲ್ಲಿ ಪಾಲ್ಮೆ ಡಿ ಓರ್ ಪ್ರಶಸ್ತಿ ಗಳಿಸಿತ್ತು. ಅಬೌಟ್ ಡ್ರೈ ಗ್ರಾಸೆಸ್, ಸಿಲಾನ್ ಸೇರಿದಂತೆ ಆರು ಚಲನಚಿತ್ರಗಳನ್ನು ಅತ್ಯುತ್ತಮ ಅಂತರರಾಷ್ಟ್ರೀಯ ಚಲನಚಿತ್ರಕ್ಕಾಗಿ ಅಕಾಡೆಮಿ ಪ್ರಶಸ್ತಿಗಾಗಿ ಪ್ರವೇಶ ಪಡೆದಿದೆ. 
ಹೆಚ್ಚಿನ ಮಾಹಿತಿಗಾಗಿ : https://iffigoa.org/best-of-iffi-midfest-film-2023/en 

****
 

iffi reel

(Release ID: 1979103) Visitor Counter : 120