ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ

ನವೀಕರಿಸಿದ ಮಾಧ್ಯಮ ಸಂಕ್ಷಿಪ್ತ (21/11/2023)


ಸಿಲ್ಕ್ಯಾರಾ ಸುರಂಗ ಕುಸಿತದ ಸ್ಥಳದಲ್ಲಿ ತೀವ್ರಗೊಂಡ ರಕ್ಷಣಾ ಕಾರ್ಯಾಚರಣೆ

Posted On: 21 NOV 2023 4:47PM by PIB Bengaluru

41 ಮಂದಿ ಕಾರ್ಮಿಕರು ಸಿಲುಕಿರುವ ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಯಲ್ಲಿ ಜೀವ ಉಳಿಸುವ ತನ್ನ ಅಚಲ ಬದ್ಧತೆಯಲ್ಲಿ ಸರ್ಕಾರವು ಸಕ್ರಿಯವಾಗಿ ತೊಡಗಿಸಿಕೊಂಡಿದೆ.

ಕಾಂಕ್ರೀಟ್ ಕೆಲಸ ಪೂರ್ಣಗೊಂಡಿರುವ ಸುರಂಗದ 2 ಕಿ.ಮೀ ವಿಭಾಗವು ಕಾರ್ಮಿಕರ ಸುರಕ್ಷತೆಯನ್ನು ಖಾತ್ರಿಪಡಿಸುತ್ತದೆ, ಇದು ರಕ್ಷಣಾ ಪ್ರಯತ್ನಗಳ ಕೇಂದ್ರಬಿಂದುವಾಗಿದೆ. ಸುರಂಗದ ಈ ಸುರಕ್ಷಿತ ಭಾಗದಲ್ಲಿ, ವಿದ್ಯುಚ್ಛಕ್ತಿ ಮತ್ತು ನೀರು ಪೂರೈಕೆಯು ಕಾರ್ಯನಿರ್ವಹಿಸುತ್ತಿದೆ ಮತ್ತು ಆಹಾರ ಮತ್ತು ಔಷಧಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ಮೀಸಲಾದ 4-ಇಂಚಿನ ಕಂಪ್ರೆಸರ್ ಪೈಪ್‌‌ ಲೈನ್ ಮೂಲಕ ತಲುಪಿಸಲಾಗುತ್ತಿದೆ.

ವಿವಿಧ ಸರ್ಕಾರಿ ಏಜೆನ್ಸಿಗಳನ್ನು ಸಜ್ಜುಗೊಳಿಸಲಾಗಿದೆ, ಪ್ರತಿಯೊಬ್ಬ ಕಾರ್ಮಿಕರ ಸುರಕ್ಷಿತ ಸ್ಥಳಾಂತರಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ನಿರ್ದಿಷ್ಟ ಕಾರ್ಯಗಳನ್ನು ನಿಯೋಜಿಸಲಾಗಿದೆ. ಸುರಂಗದೊಳಗೆ ಸಿಲುಕಿರುವವರ ಆತ್ಮಸ್ಥೈರ್ಯವನ್ನು ಹೆಚ್ಚಿಸಲು ಸರ್ಕಾರವು ನಿರಂತರ ಸಂವಹನವನ್ನು ಮಾಡುತ್ತಿದೆ.

ರಕ್ಷಣಾ ಕಾರ್ಯಾಚರಣೆಗಳ ಪ್ರಮುಖ ಮಾಹಿತಿಗಳು:

1. NHIDCL ಲೈಫ್‌ ಲೈನ್ ಪ್ರಯತ್ನಗಳು:

  • ಅಗತ್ಯ ವಸ್ತುಗಳ ಪೂರೈಕೆಗಾಗಿ ಹೆಚ್ಚುವರಿ ಲೈಫ್‌ ಲೈನ್-6-ಇಂಚಿನ ವ್ಯಾಸದ ಪೈಪ್‌ ಲೈನ್‌-ಕೊರೆಯುವಿಕೆಯನ್ನು NHIDCL ಪೂರ್ಣಗೊಳಿಸಿದ್ದರಿಂದ ನಿನ್ನೆ ಮಹತ್ವದ ಪ್ರಗತಿ ಸಾಧಿಸಲಾಗಿದೆ.
  • ಸಿಕ್ಕಿಬಿದ್ದಿರುವ ಕಾರ್ಮಿಕರೊಂದಿಗೆ ವೀಡಿಯೊ ಸಂವಹನವನ್ನು ಸ್ಥಾಪಿಸಲಾಗಿದೆ ಮತ್ತು ಕಂಪ್ರೆಸರ್ ಗಾಳಿ ಮತ್ತು ನೀರಿನ ಒತ್ತಡವನ್ನು ಬಳಸಿಕೊಂಡು ಪೈಪ್‌‌ ಲೈನ್‌ ಒಳಗಿನ ಅವಶೇಷಗಳನ್ನು ತೆರವುಗೊಳಿಸಲು ಪ್ರಯತ್ನಿಸಲಾಗಿದೆ.

2. NHIDCL ನಿಂದ ಅಡ್ಡವಾಗಿ ಕೊರೆಯುವಿಕೆ:

  • NHIDCL ಸಿಲ್ಕ್ಯಾರಾ ತುದಿಯಿಂದ ಆಗುರ್ ಬೋರಿಂಗ್ ಯಂತ್ರವನ್ನು ಬಳಸಿಕೊಂಡು ಕಾರ್ಮಿಕರನ್ನು ರಕ್ಷಿಸಲು ಅಡ್ಡವಾಗಿ ಕೊರೆಯುವಿಕೆಯನ್ನು ಪುನರಾರಂಭಿಸಿದೆ.
  • ಕೊರೆಯುವ ಯಂತ್ರಕ್ಕೆ ರಕ್ಷಣಾತ್ಮಕ ಮೇಲಾವರಣದ ತಯಾರಿಕೆಯು ನಡೆಯುತ್ತಿದೆ, ಆಗರ್ ವ್ಯಾಸಕ್ಕೆ ಮಾರ್ಪಾಡುಗಳು ಮತ್ತು ಪೈಪ್‌ ಲೈನ್‌ ನ ವೆಲ್ಡಿಂಗ್ ಪ್ರಗತಿಯಲ್ಲಿದೆ.

3. SJVNL ನಿಂದ  ರಕ್ಷಣಾ ಕಾರ್ಯಕ್ಕಾಗಿ ಲಂಬವಾದ ಡ್ರಿಲ್ಲಿಂಗ್:

  • ಲಂಬ ರಕ್ಷಣಾ ಸುರಂಗ ನಿರ್ಮಾಣಕ್ಕಾಗಿ SJVNL ನ ಯಂತ್ರವು ಸ್ಥಳಕ್ಕೆ ಆಗಮಿಸಿದೆ, ಪ್ರಸ್ತುತ ಅದರ ಸ್ಥಾಪನೆಯು ನಡೆಯುತ್ತಿದೆ. ಇದಕ್ಕಾಗಿ ಗುಜರಾತ್ ಮತ್ತು ಒಡಿಶಾದಿಂದ ಯಂತ್ರಗಳನ್ನು ಸಾಗಿಸಲಾಗುತ್ತಿದೆ.

4. THDCL ನಿಂದ ಬಾರ್ಕೋಟ್ ಕಡೆಯಿಂದ ಅಡ್ಡವಾಗಿ ಡ್ರಿಲ್ಲಿಂಗ್:

  • THDC ಬಾರ್ಕೋಟ್ ತುದಿಯಿಂದ ರಕ್ಷಣಾ ಸುರಂಗದ ನಿರ್ಮಾಣವನ್ನು ಪ್ರಾರಂಭಿಸಿದೆ, ಎರಡು ಸ್ಫೋಟಗಳು ಈಗಾಗಲೇ ಪೂರ್ಣಗೊಂಡಿವೆ, ಇದರ ಪರಿಣಾಮವಾಗಿ 6.4-ಮೀಟರ್ ಡ್ರಿಫ್ಟ್ ಆಗಿದೆ. ದಿನಕ್ಕೆ ಮೂರು ಸ್ಫೋಟಗಳನ್ನು ಯೋಜಿಸಲಾಗಿದೆ.

5. RVNL ನಿಂದ ಲಂಬ-ಅಡ್ಡ ಕೊರೆಯುವಿಕೆ:

  • ಕಾರ್ಮಿಕರನ್ನು ರಕ್ಷಿಸಲು ಅಡ್ಡ ಕೊರೆಯುವಿಕೆಯ ಮೂಲಕ ಸೂಕ್ಷ್ಮ ಸುರಂಗ ಮಾರ್ಗಕ್ಕಾಗಿ RVNL ಯಂತ್ರೋಪಕರಣಗಳನ್ನು ಸಾಗಿಸುತ್ತಿದೆ. ಒಡಿಶಾದಿಂದ ಹೆಚ್ಚುವರಿ ಯಂತ್ರಗಳನ್ನು ತರಲಾಗುತ್ತಿದೆ.

6. ONGC ಮೂಲಕ ಬಾರ್ಕೋಟ್ ಕಡೆಗೆ ಲಂಬವಾಗಿ ಕೊರೆಯುವಿಕೆ:

  • ಲಂಬವಾಗಿ ಕೊರೆಯುವಿಕೆಗಾಗಿ ONGC ಯುಎಸ್ಎ, ಮುಂಬೈ ಮತ್ತು ಗಾಜಿಯಾಬಾದ್‌ ನಿಂದ ಯಂತ್ರೋಪಕರಣಗಳನ್ನು ಸಜ್ಜುಗೊಳಿಸುತ್ತಿದೆ.

7. THDCL/ಆಸೇನೆ/ಕೋಲ್ ಇಂಡಿಯಾ ಮತ್ತು NHIDCL ನ ಜಂಟಿ ತಂಡದಿಂದ ಮಾನವ- ಅರೆ ಯಾಂತ್ರಿಕ ವಿಧಾನದಲ್ಲಿ ಡ್ರಿಫ್ಟ್ ಟನಲ್:

  • ಸುರಂಗದ ಒಳಗೆ ಡ್ರಿಫ್ಟ್ ಸೃಷ್ಟಿಸುವ ಕೆಲಸ ನಡೆಯುತ್ತಿದ್ದು, 180 ಮೀಟರ್ ನಿಂದ 150 ಮೀಟರ್ ವರೆಗೆ ಸುರಕ್ಷಿತ ಚಾನಲ್ ಸ್ಥಾಪಿಸಲಾಗಿದೆ. ಈ ಉದ್ದೇಶಕ್ಕಾಗಿ ಸೇನೆಯು ಬಾಕ್ಸ್ ಕಲ್ವರ್ಟ್‌ ಗಳನ್ನು ಸಜ್ಜುಗೊಳಿಸುತ್ತಿದೆ.

8. ಬಿ ಆರ್‌ ಒ ದಿಂದ ರಸ್ತೆ ಕತ್ತರಿಸುವುದು ಮತ್ತು ಬೆಂಬಲದ ಕೆಲಸ:

  • BRO 48 ಗಂಟೆಗಳ ಒಳಗೆ SJVNL ನಿಂದ ಲಂಬವಾಗಿ ಕೊರೆಯುವಿಕೆಗಾಗಿ ಮಾರ್ಗವನ್ನು ತ್ವರಿತವಾಗಿ ನಿರ್ಮಿಸಿದೆ. ಒ ಎನ್‌ ಜಿ ಸಿ ನಡೆಸಿದ ಭೂವೈಜ್ಞಾನಿಕ ಸಮೀಕ್ಷೆಯೊಂದಿಗೆ, ಒ ಎನ್‌ ಜಿ ಸಿ ತಂಡ ತಲುಪಲು ರಸ್ತೆ ಕೆಲಸ ನಡೆಯುತ್ತಿದೆ.

ಹಿನ್ನೆಲೆ

ನವೆಂಬರ್ 12, 2023 ರಂದು, ಸಿಲ್ಕ್ಯಾರಾದಿಂದ ಬಾರ್ಕೋಟ್‌ವಗೆ ನಿರ್ಮಾಣ ಹಂತದಲ್ಲಿರುವ ಸುರಂಗದ ಸಿಲ್ಕ್ಯಾರಾ ಭಾಗದಲ್ಲಿ 60 ಮೀಟರ್ ಪ್ರದೇಶದಲ್ಲಿ ಅವಶೇಷಗಳು ಬಿದ್ದಿದ್ದರಿಂದ ಕುಸಿತ ಸಂಭವಿಸಿದೆ. ಸಿಕ್ಕಿಬಿದ್ದ 41 ಕಾರ್ಮಿಕರನ್ನು ರಕ್ಷಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ತಕ್ಷಣದ ಸಂಪನ್ಮೂಲಗಳನ್ನು ಕ್ರೋಢೀಕರಿಸಲಾಯಿತು.

ಆರಂಭದಲ್ಲಿ ಅವಶೇಷಗಳ ಮೂಲಕ 900 ಎಂಎಂ ಪೈಪ್ ಅನ್ನು ತೂರಿಸುವ ಆಯ್ಕೆಯು, ಏಕಕಾಲದಲ್ಲಿ ಬಹು ರಕ್ಷಣಾ ಆಯ್ಕೆಗಳ ಅನ್ವೇಷಣೆಗೆ ಕಾರಣವಾಯಿತು. 8.5 ಮೀಟರ್ ಎತ್ತರ ಮತ್ತು 2 ಕಿಲೋಮೀಟರ್ ಉದ್ದದ ಎಂಟ್ರಾಪ್ಮೆಂಟ್ ಪ್ರದೇಶವು ಸುರಂಗದ ನಿರ್ಮಿತ ಭಾಗವಾಗಿದೆ, ಲಭ್ಯವಿರುವ ವಿದ್ಯುತ್ ಮತ್ತು ನೀರಿನ ಪೂರೈಕೆಯೊಂದಿಗೆ ಕಾರ್ಮಿಕರಿಗೆ ಸುರಕ್ಷತೆಯನ್ನು ನೀಡುತ್ತದೆ.

ಐದು ಏಜೆನ್ಸಿ-ONGC, SJVN, RVNL, NHIDCL ಮತ್ತು THDC-ಗಳಿಗೆ ನಿರ್ದಿಷ್ಟ ಜವಾಬ್ದಾರಿಗಳನ್ನು ನಿಯೋಜಿಸಲಾಗಿದೆ, ಕಾರ್ಯಾಚರಣೆಯ ದಕ್ಷತೆಗಾಗಿ ಸಾಂದರ್ಭಿಕ ಕೆಲಸದ ಹೊಂದಾಣಿಕೆಗಳೊಂದಿಗೆ ಸಹಯೋಗದಲ್ಲಿ ಕಾರ್ಯನಿರ್ವಹಿಸುತ್ತಿವೆ.

ಗಮನಿಸಿ: ತಾಂತ್ರಿಕ ದೋಷಗಳು, ಸವಾಲಿನ ಹಿಮಾಲಯದ ಭೂಪ್ರದೇಶ ಮತ್ತು ಅನಿರೀಕ್ಷಿತ ತುರ್ತುಸ್ಥಿತಿಗಳ ಕಾರಣದಿಂದಾಗಿ ನೀಡಲಾಗಿರುವ ಟೈಮ್‌ ಲೈನ್‌ ಗಳು ಬದಲಾಗಬಹುದು.

*****

 

 



(Release ID: 1978535) Visitor Counter : 66