ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರದಲ್ಲಿ ಸಿಎಂಒಟಿ, ಯುವಜನರಿಗೆ ಅಪ್ರತಿಮ ಅವಕಾಶಗಳನ್ನು ಒದಗಿಸುತ್ತದೆ: ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್
54ನೇ ಐಎಫ್‌ಎಫ್‌ಐನಲ್ಲಿ '48 ತಾಸುಗಳ ಚಲನಚಿತ್ರ ಸವಾಲು' ಪ್ರಾರಂಭ
ಗೋವಾ, 21 ನವೆಂಬರ್ 2023
ಉದ್ಯೋಗ ಸೃಷ್ಟಿ, ಸೃಜಸನಶೀಲ ಆರ್ಥಿಕತೆ ಉತ್ತೇಜಿಸಲು, ಅತ್ಯುತ್ತಮ ಕಲಾವಿದರಿಗೆ ಮಾರ್ಗದರ್ಶನ ನೀಡಲು ಮತ್ತು ಚಲನಚಿತ್ರ ಕ್ಷೇತ್ರದಲ್ಲಿ ಶ್ರೇಷ್ಠತೆ ಸಾಧಿಸಲು ಯುವಕರನ್ನು ಪ್ರೋತ್ಸಾಹಿಸಲು ಭಾರತ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ, ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಹೇಳಿದರು. '75 ಕ್ರಿಯೇಟಿವ್ ಮೈಂಡ್ಸ್ ಆಫ್ ಟುಮಾರೊ'(ಸಿಎಂಒಟಿ) ಉಪಕ್ರಮದ ವಿಜೇತರಿಗೆ 48-ತಾಸುಗಳ ಚಲನಚಿತ್ರ ನಿರ್ಮಾಣದ ಸವಾಲು' ಕಾರ್ಯಕ್ರಮ ಉದ್ಘಾಟಿಸಿ, ಅವರು ಮಾತನಾಡಿದರು. ಬಲಿಷ್ಠ ಭಾವನೆ ಮತ್ತು ನಂಬಿಕೆ ಹೊಂದಿರುವ ವ್ಯಕ್ತಿಗಳ ಬಲಿಷ್ಠ ಸೃಜನಶೀಲ ಸಮುದಾಯ ಬೆಳೆಸುವಲ್ಲಿ 'ನಾಳಿನ ಸೃಜನಶೀಲ ಮನಸ್ಸು' ಹೊಂದಿರುವ ಪಾತ್ರವನ್ನು ಶ್ಲಾಘಿಸಿದ ಸಚಿವರು, ಕಠಿಣ ತೀರ್ಪುಗಾರರ ಪ್ರಕ್ರಿಯೆ ಮೂಲಕ ಆಯ್ಕೆಯಾದ ಉಪಕ್ರಮದ ಪ್ರಮುಖ 75 ಪ್ರತಿನಿಧಿಗಳನ್ನು ಅಥವಾ ಸ್ಪರ್ಧಿಗಳನ್ನು ಅಭಿನಂದಿಸಿದರು.
ದೇಶದ ದೂರದ ಮೂಲೆಗಳಲ್ಲಿರುವ ಯುವ ಮನಸ್ಸುಗಳನ್ನು ಪ್ರೋತ್ಸಾಹಿಸುವ ಮತ್ತು ಮಾರ್ಗದರ್ಶನ ನೀಡುವ ಸಿಎಂಒಟಿ, ಸರ್ಕಾರದ ಪ್ರಯತ್ನಗಳ ಒಂದು ಭಾಗವಾಗಿದೆ. "ಈ ವರ್ಷದ 75 ಕ್ರಿಯೇಟಿವ್ ಮೈಂಡ್ಸ್ ಆಫ್ ಟುಮಾರೊಗೆ, ಬಿಷ್ಣುಪುರ (ಮಣಿಪುರ), ಜಗತ್‌ಸಿಂಗ್‌ಪುರ(ಒಡಿಶಾ) ಮತ್ತು ಸರ್ದಾರ್‌ಪುರ(ಮಧ್ಯಪ್ರದೇಶ) ಸೇರಿದಂತೆ ಭಾರತದ 19 ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಬಂದವರಾಗಿದ್ದಾರೆ. ಈ ಉಪಕ್ರಮವು ಅವರಿಗೆ ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರದಲ್ಲಿ ಸರಿಸಾಟಿಯಿಲ್ಲದ ಅವಕಾಶಗಳನ್ನು ಒದಗಿಸುವ ಗುರಿ ಹೊಂದಿದೆ ಎಂದು ಅವರು ಹೇಳಿದರು.
ಕಳೆದ ವರ್ಷ ಸಿಎಂಒಟಿಯಲ್ಲಿ ಭಾಗವಹಿಸಿದ್ದ ತಮಿಳುನಾಡಿನ ಯುವ ಮಹತ್ವಾಕಾಂಕ್ಷಿಯೊಬ್ಬರ ಕಟುವಾದ ಕಥೆಯನ್ನು ಶ್ರೀ ಠಾಕೂರ್ ವಿವರಿಸಿದರು. "ಆರಂಭದಲ್ಲಿ ಆಕೆಯ ಪೋಷಕರು ಅವಳನ್ನು ಗೋವಾಕ್ಕೆ ಕಳುಹಿಸುವುದು ಖಚಿತವಾಗಿರಲಿಲ್ಲ. ಸಿಎಂಒಟಿಯ ಕಠಿಣ ಆಯ್ಕೆ ಪ್ರಕ್ರಿಯೆಯಲ್ಲಿ ಆಕೆ ಆಯ್ಕೆಯಾಗಿದ್ದಳು. ಈ ನಂಬಲಾಗದ ಅವಕಾಶ ಅರ್ಥ ಮಾಡಿಕೊಂಡ ನಂತರ, ಆಕೆಯ ಪೋಷಕರು ಅವಳ ಕನಸುಗಳನ್ನು ಬೆನ್ನಟ್ಟಲು ಅವಕಾಶ ನೀಡಿ ರೋಮಾಂಚನಗೊಂಡರು. ಈ ಹುಡುಗಿ ಮತ್ತು ಅವಳ ತಂಡವು ಮುಂದುವರೆಯಿತು. ಕಳೆದ ವರ್ಷ 2,25,000 ರೂ.ನಗದು ಬಹುಮಾನದೊಂದಿಗೆ 53-ತಾಸುಗಳ ಚಾಲೆಂಜ್ ಅನ್ನು ಗೆಲ್ಲಲು ವಿಜೇತ ಚಿತ್ರ “ಡಿಯರ್ ಡೈರಿ” ಭವಿಷ್ಯದಲ್ಲಿ ಮಹಿಳಾ ಸುರಕ್ಷತೆಯು ಹೇಗೆ ಹೊಸ ಸಾಮಾನ್ಯವಾಗಿರುತ್ತದೆ ಎಂಬುದನ್ನು ಎತ್ತಿ ತೋರಿಸಿದೆ. ಈ ರೀತಿಯ ಯಶಸ್ಸಿನ ಕಥೆಗಳು ಈ ವೇದಿಕೆಯ ಆಶಯವಾಗಿದೆ ಎಂದು ಅವರು ವಿವರಿಸಿದರು.
ಸ್ಪರ್ಧಿಗಳ ವೃತ್ತಿ ಜೀವನದ ಮೇಲೆ ಉಪಕ್ರಮದ ಪ್ರಭಾವ ಪ್ರದರ್ಶಿಸಿದ ಸಿಎಂಒಟಿಯ ಹಿಂದಿನ ಆವೃತ್ತಿಗಳ ಸಾಧನೆಗಳನ್ನು ಸಚಿವರು ಹಂಚಿಕೊಂಡರು. 2023ರ ಟೊರೊಂಟೊ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಅನಿಮೇಟೆಡ್ ಚಲನಚಿತ್ರ ಒಳಗೊಂಡಿರುವ ಸುವರ್ಣ ಡ್ಯಾಶ್ ಮತ್ತು ಈ ವರ್ಷ ಐಎಫ್ಎಫ್ಐನ ಭಾರತೀಯ ಪನೋರಮಾದಲ್ಲಿ ಒಳಗೊಂಡಿರುವ ಚಲನಚಿತ್ರಗಳ ಸಹ-ಸಂಪಾದನೆ ಮತ್ತು ಸಂಪಾದನೆ ಮಾಡಿದ ಭಾಸ್ಕರ್ ವಿಶ್ವನಾಥನ್ ಮತ್ತು ದಿಗಂತ್ರ ಬೋಸ್ ಅವರಂತಹ ಯುವಕರ ಗಮನಾರ್ಹ ಉಲ್ಲೇಖಗಳು ಒಳಗೊಂಡಿವೆ.
ಚಲನಚಿತ್ರ ನಿರ್ಮಾಣವು ಕೇವಲ ವಿಷಯ ವಸ್ತುವಿನ ಸೃಷ್ಟಿ ಮಾತ್ರವಾಗಿರದೆ, ಅದನ್ನು ಹೆಚ್ಚಿನ ಪ್ರೇಕ್ಷಕರಿಗೆ ಮಾರಾಟ ಮಾಡುವುದು ಮತ್ತು ವಿತರಿಸುವುದಾಗಿದೆ. ನಮ್ಮ ಯುವ ಮನಸ್ಸುಗಳು ಮತ್ತು ಉದ್ಯಮದ ನಡುವೆ ಜಾಲ ಮತ್ತು ಸಹಯೋಗ ಉತ್ತೇಜಿಸಲು ಮತ್ತು ಸಕ್ರಿಯಗೊಳಿಸಲು ಈ ವರ್ಷ, ಐಎಫ್‌ಎಫ್‌ಐ ಪ್ರತಿಭಾ ಶಿಬಿರ ಆಯೋಜಿಸುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು, ಅಲ್ಲಿ 75 ಕ್ರಿಯೇಟಿವ್ ಮೈಂಡ್‌ಗಳು ಹಲವಾರು ಪ್ರಸಿದ್ಧ ಸಿನಿಮಾ ತಯಾರಿಕೆಯ ಪ್ರತಿನಿಧಿಗಳನ್ನು, ಸಂಸ್ಥೆಗಳನ್ನು, ಸ್ಟುಡಿಯೋಗಳನ್ನು ಮತ್ತು ಒಟಿಟಿ ವೇದಿಕೆಗಳನ್ನು ಭೇಟಿಯಾಗಲು, ಸಂವಾದ ನಡೆಸಲು ಮತ್ತು ಸಂಪರ್ಕ ಸಾಧಿಸಲು ಸಾಧ್ಯವಾಗುತ್ತದೆ.
ಸ್ಟಾರ್ಟಪ್‌ಗಳಿಗೆ ಸರ್ಕಾರ ನೀಡಿರುವ ಬೆಂಬಲದ ಮೇಲೆ ಗಮನ ಕೇಂದ್ರೀಕರಿಸಿದ ಸಚಿವರು, ಹೊಸ ಸ್ಟಾರ್ಟಪ್ ನೀತಿಯೊಂದಿಗೆ, ದೇಶದಲ್ಲಿ 1 ಲಕ್ಷಕ್ಕೂ ಹೆಚ್ಚಿನ ಸ್ಟಾರ್ಟಪ್‌ಗಳೊಂದಿಗೆ ಭಾರತವು ವಿಶ್ವದ 3ನೇ ಅತಿದೊಡ್ಡ ಸ್ಟಾರ್ಟಪ್ ಪರಿಸರ ವ್ಯವಸ್ಥೆಯಾಗಿ ಹೊರಹೊಮ್ಮಿದೆ. “ಪ್ರತಿದಿನವೂ ಹೊಸ ಸ್ಟಾರ್ಟಪ್ ಬರುತ್ತಿವೆ. ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ದೊಡ್ಡ ಕಂಪನಿಗಳೇ ಹೆಣಗಾಡುತ್ತಿದ್ದ ಸಂದರ್ಭದಲ್ಲಿ, ಭಾರತದಲ್ಲಿ 50 ಸ್ಟಾರ್ಟಪ್‌ಗಳು ಯೂನಿಕಾರ್ನ್‌ಗಳ ಮಟ್ಟಕ್ಕೆ ಏರಿದ್ದವು, ಇದು ಭಾರತೀಯ ಯುವಕರ ನೈಜಶಕ್ತಿಯನ್ನು ಪ್ರದರ್ಶಿಸುತ್ತದೆ ಎಂದರು. ಅಲ್ಲದೆ, 75 ಕ್ರಿಯೇಟಿವ್ ಮೈಂಡ್ಸ್ ಆಫ್ ಟುಮಾರೊದಲ್ಲಿ ಭಾಗವಹಿಸಿದ ಪ್ರತಿನಿಧಿಗಳಿಗೆ ಸಚಿವರು ಪ್ರಮಾಣಪತ್ರ ವಿತರಿಸಿದರು.
ಕಾರ್ಯಕ್ರಮದಲ್ಲಿ ಶಾರ್ಟ್ಸ್ ಟಿವಿಯ ಸಿಇಒ ಮತ್ತು ಸಂಸ್ಥಾಪಕ ಕಾರ್ಟರ್ ಪಿಲ್ಚರ್, ಯುರೋಪಿಯನ್ ಫಿಲ್ಮ್ ಮಾರ್ಕೆಟ್‌ನ ನಿರ್ದೇಶಕ ಡೆನ್ನಿಸ್ ರುಹ್, ಆರ್ಚೀಸ್‌ನ ಕಾರ್ಯ ನಿರ್ವಾಹಕ ನಿರ್ಮಾಪಕ ಜಾನ್ ಗೋಲ್ಡ್‌ವಾಟರ್, ವಾರ್ತಾ ಮತ್ತು ಪ್ರಸಾರ ಖಾತೆ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ನೀರ್ಜಾ ಶೇಖರ್, ವಾರ್ತಾ ಮತ್ತು ಪ್ರಸಾರ ಖಾತೆ ಸಚಿವಾಲಯದ ಜಂಟಿ ಕಾರ್ಯದರ್ಶಿ (ಚಲನಚಿತ್ರಗಳು) ಮತ್ತು ಎನ್ಎಫ್ ಡಿಸಿ ವ್ಯವಸ್ಥಾಪಕ ನಿರ್ದೇಶಕ ಪೃಥುಲ್ ಕುಮಾರ್ ಸೇರಿದಂತೆ ಅನೇಕ ಗೌರವಾನ್ವಿತ ಅತಿಥಿಗಳು ಉಪಸ್ಥಿತರಿದ್ದರು. ಶಾರ್ಟ್ಸ್ ಟಿವಿ ಸಹಯೋಗದಲ್ಲಿ ನ್ಯಾಷನಲ್ ಫಿಲ್ಮ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಸಿಎಂಒಟಿ ಭಾಗವಾಗಿ '48 ತಾಸುಗಳ ಸವಾಲು' ಉಪಕ್ರಮವನ್ನು ಆಯೋಜಿಸಲಾಗಿದೆ.
ಫಿಲ್ಮ್ ಚಾಲೆಂಜ್‌ನ ಭಾಗವಾಗಿ, 75 ಸಿಎಂಒಟಿ ಪ್ರತಿನಿಧಿಗಳನ್ನು 5 ತಂಡಗಳಾಗಿ ವಿಂಗಡಿಸಲಾಗಿದೆ, ಅವರು 48 ತಾಸುಗಳಲ್ಲಿ 'ಮಿಷನ್ ಲೈಫ್' ವಿಷಯ ಕುರಿತು ಕಿರುಚಿತ್ರಗಳನ್ನು ನಿರ್ಮಿಸುತ್ತಾರೆ. ಚಲನಚಿತ್ರೋತ್ಸವದಲ್ಲಿ ಸಿಎಂಒಟಿ ಪ್ರತಿನಿಧಿಗಳು ಅಥವಾ ಸ್ಪರ್ಧಿಗಳು ವರ್ಲ್ಡ್ ಸಿನಿಮಾದ ಮಾಸ್ಟರ್‌ಗಳು ನಿರ್ವಹಿಸುವ ಕಾರ್ಯಾಗಾರಗಳು ಮತ್ತು ಮಾಸ್ಟರ್‌ಕ್ಲಾಸ್ ಕಲಾಪಗಳಿಗೂ ಸಹ ಹಾಜರಾಗುತ್ತಾರೆ.
* * *
(Release ID: 1978522)
Visitor Counter : 108