ಗ್ರಾಮೀಣಾಭಿವೃದ್ಧಿ ಸಚಿವಾಲಯ
azadi ka amrit mahotsav

​​​​​​​ವಿಕ್ಷಿತ್ ಭಾರತ್ ಸಂಕಲ್ಪ ಯಾತ್ರೆಯ ಮೊದಲ ಹಂತದಲ್ಲಿ ಬುಡಕಟ್ಟು ಜಿಲ್ಲೆಗಳ ಗ್ರಾಮ ಪಂಚಾಯಿತಿಗಳಿಗೆ ಅಭಿನಂದನಾ ಪತ್ರ ಪ್ರದಾನ


​​​​​​​ಆಧುನಿಕ, ಸಮಗ್ರ ಮತ್ತು ಪಾರದರ್ಶಕ ಭೂ ದಾಖಲೆ ನಿರ್ವಹಣಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು ಡಿಜಿಟಲ್ ಇಂಡಿಯಾ ಭೂ ದಾಖಲೆಗಳ ಆಧುನೀಕರಣ ಕಾರ್ಯಕ್ರಮದ ಉದ್ದೇಶವಾಗಿದೆ

ಯೋಜನೆಗಳ ಸಂಪೂರ್ಣ ಯಶಸ್ಸು ಸಾಧನೆಗಾಗಿ ಔಟ್ ರೀಚ್ ಕಾರ್ಯಚಟುವಟಿಕೆಗಳ ಮೂಲಕ ಜಾಗೃತಿಯನ್ನು ಮೂಡಿಸಲು ಭಾರತ ಸರ್ಕಾರವು 2023 ರ ನವೆಂಬರ್ 15 ರಿಂದ 2024 ರ ಜನವರಿ 26 ರವರೆಗೆ ವಿಕ್ಷಿತ್ ಭಾರತ್ ಸಂಕಲ್ಪ ಯಾತ್ರೆಯನ್ನು ಆಯೋಜಿಸುತ್ತಿದೆ

ವಿಕ್ಷಿತ್ ಭಾರತ್ ಸಂಕಲ್ಪ ಯಾತ್ರೆಯಡಿ ಅರ್ಹ ಗ್ರಾಮಗಳಿಗೆ ಅಭಿನಂದನಾ ಪತ್ರ ವಿತರಣೆ ಮತ್ತು ಗ್ರಾಮ ಪಂಚಾಯಿತಿಗಳನ್ನು  ಸನ್ಮಾನಿಸಲು ಭೂ ಸಂಪನ್ಮೂಲ ಇಲಾಖೆ ಯೋಜಿಸಿದೆ

Posted On: 15 NOV 2023 4:54PM by PIB Bengaluru

ಡಿಜಿಟಲ್ ಇಂಡಿಯಾ ಭೂ ದಾಖಲೆಗಳ  ಆಧುನೀಕರಣ ಕಾರ್ಯಕ್ರಮ (ಡಿಐಎಲ್ಆರ್ ಎಂ ಪಿ)ವು  ಕೇಂದ್ರ ವಲಯದ ಯೋಜನೆಯಾಗಿದ್ದು, ಭಾರತ ಸರ್ಕಾರದ 100% ಧನಸಹಾಯದೊಂದಿಗೆ ಭೂ ಸಂಪನ್ಮೂಲ ಇಲಾಖೆ (ಡಿಒಎಲ್ಆರ್) ಜಾರಿಗೆ ತರುತ್ತಿದೆ. ಆಧುನಿಕ, ಸಮಗ್ರ ಮತ್ತು ಪಾರದರ್ಶಕ ಭೂ ದಾಖಲೆ ನಿರ್ವಹಣಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು ಡಿಐಎಲ್ಆರ್ ಎಂ ಪಿ.ಯ  ಉದ್ದೇಶವಾಗಿದೆ. ಜಿಲ್ಲೆಗಳ ನಡುವೆ ಆರೋಗ್ಯಕರ ಸ್ಪರ್ಧೆ ಮತ್ತು ಮೇಲ್ವಿಚಾರಣೆಯ ಒಂದು ಹೆಜ್ಜೆಯಾಗಿ, ಈ ಇಲಾಖೆ ಜಿಲ್ಲೆಗಳ ನಡುವೆ ಶ್ರೇಣೀಕರಣವನ್ನು ಪ್ರಾರಂಭಿಸಿದೆ. ಆರು ಮೂಲಭೂತ ಘಟಕಗಳಲ್ಲಿ 99% ಮತ್ತು ಅದಕ್ಕಿಂತ ಹೆಚ್ಚಿನ ಕೆಲಸವನ್ನು ಪೂರ್ಣಗೊಳಿಸಿದ ಜಿಲ್ಲೆಗಳಿಗೆ ಪ್ಲಾಟಿನಂ ಗ್ರೇಡಿಂಗ್ (ಶ್ರೇಣಿ)  ನೀಡಲಾಗುತ್ತದೆ. 26.10.2023 ರ ವೇಳೆಗೆ , ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ನೀಡಿದ  ಡಿಐಎಲ್ಆರ್ ಎಂ ಪಿ ಎಂಐಎಸ್ ಪ್ರಕಾರ, 14 ರಾಜ್ಯಗಳ 157 ಜಿಲ್ಲೆಗಳು ಕೆಳಗಿನ ಮೂಲಭೂತ ಆರು ಘಟಕಗಳಲ್ಲಿ 99% ಮತ್ತು ಅದಕ್ಕಿಂತ ಹೆಚ್ಚಿನ ಕೆಲಸವನ್ನು ಪೂರ್ಣಗೊಳಿಸಿವೆ: 

i. ಭೂ ದಾಖಲೆಗಳ ಕಂಪ್ಯೂಟರೀಕರಣ (ಆರ್.ಒ.ಆರ್)

ii. ಕ್ಯಾಡಾಸ್ಟ್ರಲ್ ನಕ್ಷೆಗಳು / ಎಫ್ ಎಂಬಿಗಳ ಡಿಜಿಟಲೀಕರಣ

iii. ಕ್ಯಾಡಾಸ್ಟ್ರಲ್ ನಕ್ಷೆಗಳೊಂದಿಗೆ ಆರ್.ಒ.ಆರ್.  ಜೋಡಣೆ

iv. ಭೂದಾಖಲೆಗಳ  ನೋಂದಣಿಯ ಕಂಪ್ಯೂಟರೀಕರಣ

v. ಭೂದಾಖಲೆಗಳ ನೋಂದಣಿಯ  (ಎಸ್ ಆರ್ ಒ) ಏಕೀಕರಣ (ಕಂದಾಯ ಕಚೇರಿ)

vi. ಆಧುನಿಕ ದಾಖಲೆಗಳ ಕೊಠಡಿ (ರೆಕಾರ್ಡ್ ರೂಮ್)

ಆರು ಘಟಕಗಳ ಅನುಷ್ಠಾನವು ಭೂಮಿಗೆ ಸಂಬಂಧಿಸಿದಂತೆ ಸಕಾಲಿಕ ಮತ್ತು ಆ ಕ್ಷಣದವರೆಗಿನ  ನೈಜ ಸಮಯದ ಮಾಹಿತಿಯ ಸುಧಾರಣೆಗೆ ಅನುಕೂಲವಾಗುತ್ತದೆ; ಭೂ ಸಂಪನ್ಮೂಲಗಳ ಬಳಕೆಯನ್ನು ಉತ್ತಮಗೊಳಿಸುತ್ತದೆ; ಭೂಮಾಲೀಕರು ಮತ್ತು ಭೂ ನಿರೀಕ್ಷಕರಿಗೆ (ಪ್ರಾಸ್ಪೆಕ್ಟರ್ ಗಳು) - ಇಬ್ಬರಿಗೂ ಪ್ರಯೋಜನಕಾರಿಯಾಗುತ್ತದೆ; ನೀತಿ ಮತ್ತು ಯೋಜನೆಯಲ್ಲಿ ಸಹಾಯ  ಮಾಡುತ್ತದೆ. ಭೂ ವಿವಾದಗಳನ್ನು ಕಡಿಮೆ ಮಾಡುತ್ತದೆ; ಮೋಸದ / ಬೇನಾಮಿ ವಹಿವಾಟುಗಳನ್ನು ನಿಯಂತ್ರಿಸುತ್ತದೆ; ಕಂದಾಯ / ನೋಂದಣಿ ಕಚೇರಿಗಳಿಗೆ ಭೌತಿಕ ಹಾಜರಾತಿ/ಭೇಟಿಗಳ ಅಗತ್ಯವನ್ನು ನಿವಾರಿಸುತ್ತದೆ ಮತ್ತು ವಿವಿಧ ಸಂಸ್ಥೆಗಳು / ಏಜೆನ್ಸಿಗಳೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ.

ಭಾರತ ಸರ್ಕಾರವು 2023 ರ ನವೆಂಬರ್ 15 ರಿಂದ 2024 ರ ಜನವರಿ 26 ರವರೆಗೆ ವಿಕ್ಷಿತ್ ಭಾರತ್ ಸಂಕಲ್ಪ ಯಾತ್ರೆಯನ್ನು ಆಯೋಜಿಸುತ್ತಿದೆ. ಕಟ್ಟಕಡೆಯ ಹಂತದವರೆಗೂ ಯೋಜನೆಯ ಸಂಪೂರ್ಣ ಯಶಸ್ಸಿಗಾಗಿ ಔಟ್ ರೀಚ್ ಕಾರ್ಯಕ್ರಮಗಳ ಮೂಲಕ ಜಾಗೃತಿಯನ್ನು ಹೆಚ್ಚಿಸಲು ಈ ಮೂಲಕ ಪ್ರಯತ್ನಗಳನ್ನು ಮಾಡುತ್ತಿದೆ.  ಇದು ಅತ್ಯಂತ ದುರ್ಬಲರನ್ನು ಪರಿಣಾಮಕಾರಿಯಾಗಿ ತಲುಪುವುದನ್ನು ಖಚಿತಪಡಿಸಿಕೊಳ್ಳಲು ವ್ಯಾಪಕವಾದ  ಸಂಘಟಿತ ಪ್ರಯತ್ನಗಳು ಮತ್ತು ಸಕ್ರಿಯ ಜನ ಭಾಗೀದಾರಿ ಅಗತ್ಯವಿದೆ. ವಿಕ್ಷಿತ್ ಭಾರತ್ ಸಂಕಲ್ಪ ಯಾತ್ರೆಯ ಉದ್ದೇಶಗಳು ಕೆಳಗಿನಂತಿವೆ: ಎ. ವಿವಿಧ ಯೋಜನೆಗಳ ಅಡಿಯಲ್ಲಿ ಅರ್ಹರಾಗಿರುವ ಆದರೆ ಇಲ್ಲಿಯವರೆಗೆ ಪ್ರಯೋಜನಗಳನ್ನು ಪಡೆಯದ ದುರ್ಬಲರನ್ನು/ ಯೋಜನೆಗಳು ತಲುಪದವರನ್ನು  ತಲುಪುವುದು ಬಿ. ಮಾಹಿತಿಯ ಪ್ರಸಾರ ಮತ್ತು ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುವುದು. ಸಿ. ನಾಗರಿಕರಿಂದ ಕಲಿಯುವುದು- ವೈಯಕ್ತಿಕ ಕಥೆಗಳು / ಅನುಭವ ಹಂಚಿಕೆಯ ಮೂಲಕ ಸರ್ಕಾರಿ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಹನ.  ಡಿ. ಯಾತ್ರೆಯ ಸಮಯದಲ್ಲಿ ಖಚಿತಪಡಿಸಿದ ವಿವರಗಳ ಮೂಲಕ ಸಂಭಾವ್ಯ/ಅರ್ಹ  ಫಲಾನುಭವಿಗಳ ನೋಂದಣಿ.

ವಿಕ್ಷಿತ್ ಭಾರತ್ ಸಂಕಲ್ಪ ಯಾತ್ರೆಯ ಅಡಿಯಲ್ಲಿ, ಅರ್ಹ ಗ್ರಾಮಗಳಿಗೆ ಅಭಿನಂದನ  ಪತ್ರ / ಪ್ರಮಾಣಪತ್ರವನ್ನು ವಿತರಿಸಲು ಮತ್ತು ಗ್ರಾಮ ಪಂಚಾಯತ್ ಗಳನ್ನು/ ಗ್ರಾಮ ಮಟ್ಟದ ಪಟ್ವಾರಿ/ಲೇಖಪಾಲ್/ಮಂಡಲ್ ಇತ್ಯಾದಿಯವರನ್ನು  ಸನ್ಮಾನಿಸಲು ಭೂ ಸಂಪನ್ಮೂಲಗಳ ಇಲಾಖೆಯು  ಯೋಜನೆ ಹಾಕಿಕೊಂಡಿದೆ. ವಿಕ್ಷಿತ್ ಭಾರತ್ ಸಂಕಲ್ಪ ಯಾತ್ರೆಯ ವೇಳಾಪಟ್ಟಿಯ ಪ್ರಕಾರ ಭೂ ದಾಖಲೆಗಳ ಡಿಜಿಟಲೀಕರಣದಲ್ಲಿ 99% ಅಥವಾ ಅದಕ್ಕಿಂತ ಹೆಚ್ಚಿನ ಸಾಧನೆ ಮಾಡಿದ ಗ್ರಾಮ ಪಂಚಾಯತ್ / ಗ್ರಾಮ ಮಟ್ಟದ ಅಧಿಕಾರಿಗಳಾದ ಪಟ್ವಾರಿ / ಲೇಖ್ಪಾಲ್ / ಮಂಡಲ್ ಇತ್ಯಾದಿಗಳನ್ನು ಮತ್ತು ಸರಪಂಚ್ ಅವರಂತಹ ಗ್ರಾಮ ಪಂಚಾಯತ್ ಕಾರ್ಯಕರ್ತರನ್ನು ಭೂ ಸಂಪನ್ಮೂಲ ಇಲಾಖೆ ಸನ್ಮಾನಿಸಲಿದೆ. ಅನುಮೋದಿತ ಪ್ರಮಾಣಪತ್ರದ ಡಿಜಿಟಲ್ ಆವೃತ್ತಿಯನ್ನು ಡಿಒಎಲ್ಆರ್ ಕಾರ್ಯದರ್ಶಿ ಅವರು ಅಧಿಕೃತ ಮಾಹಿತಿಯ  ಮೂಲಕ 103 ಜಿಲ್ಲೆಗಳನ್ನು ಒಳಗೊಂಡ 11 ರಾಜ್ಯಗಳ ಜೊತೆ ಹಂಚಿಕೊಂಡಿದ್ದಾರೆ.

ವಿಕ್ಷಿತ್ ಭಾರತ್ ಸಂಕಲ್ಪ ಯಾತ್ರೆ ಮೊದಲ ಹಂತದ ಕಾರ್ಯಕ್ರಮ ಮತ್ತು ಅಭಿನಂದನಾ  ಪತ್ರ ವಿತರಣೆಗೆ ಆಯೋಜಿಸಲಾದ ಕಾರ್ಯಕ್ರಮ.

ಗುಜರಾತ್ ನರ್ಮದಾ ಜಿಲ್ಲೆಯಲ್ಲಿ ಅಭಿನಂದನಾ ಪತ್ರ ವಿತರಣೆ

  

ಗುಜರಾತ್ ಡಾಂಗ್ ಜಿಲ್ಲೆಯ ವಾಘೈ ಗ್ರಾಮದಲ್ಲಿ ಅಭಿನಂದನಾ  ಪತ್ರ ವಿತರಣೆ

ಪಶ್ಚಿಮ ತ್ರಿಪುರಾ ಜಿಲ್ಲೆಯ ಜಿರಾನಿಯಾ ಬ್ಲಾಕ್ ನಲ್ಲಿ ಜಾಗೃತಿ ಶಿಬಿರ

****

 


(Release ID: 1977440) Visitor Counter : 139