ಕಲ್ಲಿದ್ದಲು ಸಚಿವಾಲಯ
2027 ರ ವೇಳೆಗೆ 1404 ಮಿಲಿಯನ್ ಟನ್ ಉತ್ಪಾದನೆಯ ಗುರಿಯನ್ನು ಯೋಜಿಸಿದ ಕೇಂದ್ರ ಕಲ್ಲಿದ್ದಲು ಸಚಿವಾಲಯ
ಪ್ರಸ್ತುತ ಒಟ್ಟಾರೆ 73.56 ಮಿಲಿಯನ್ ಟನ್ ಕಲ್ಲಿದ್ದಲು ಸಂಗ್ರಹವಿದೆ
ಅಕ್ಟೋಬರ್ 16 ರಿಂದ ವಿದ್ಯುತ್ ಸ್ಥಾವರಗಳು ಮತ್ತು ಗಣಿಗಳ ಹಂತದಲ್ಲಿ ಸ್ಥಿರವಾಗಿ ಹೆಚ್ಚುತ್ತಿರುವ ಸಂಗ್ರಹಣೆ
Posted On:
13 NOV 2023 4:18PM by PIB Bengaluru
ಕೇಂದ್ರ ಕಲ್ಲಿದ್ದಲು ಸಚಿವಾಲಯವು 2027 ರ ವೇಳೆಗೆ 1404 ಮಿಲಿಯನ್ ಟನ್ ಕಲ್ಲಿದ್ದಲನ್ನು ಮತ್ತು 2030 ರ ವೇಳೆಗೆ 1577 ಮಿಲಿಯನ್ ಟನ್ ಕಲ್ಲಿದ್ದಲನ್ನು ಉತ್ಪಾದಿಸಲು ಯೋಜಿಸಿದೆ. ಪ್ರಸ್ತುತ, ರಾಷ್ಟ್ರೀಯ ಮಟ್ಟದಲ್ಲಿ ವಾರ್ಷಿಕ ಸುಮಾರು ಒಂದು ಬಿಲಿಯನ್ ಟನ್ ಉತ್ಪಾದನೆಯಾಗುತ್ತಿದೆ. ಪ್ರಸಕ್ತ ವರ್ಷ ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳಿಗೆ ದೇಶೀಯ ಮಟ್ಟದಲ್ಲಿ ಸುಮಾರು 821 ಮಿಲಿಯನ್ ಟನ್ ಕಲ್ಲಿದ್ದಲು ಪೂರೈಕೆಯಾಗಿದೆ.
ಕೇಂದ್ರ ಕಲ್ಲಿದ್ದಲು ಸಚಿವಾಲಯವು 2030 ರ ವೇಳೆಗೆ ದೇಶದಲ್ಲಿ ಹೆಚ್ಚುವರಿ 80 ಗಿಗಾ ವಾಟ್ ಥರ್ಮಲ್ ಸಾಮರ್ಥ್ಯ ಹೊಂದುವ ಮಟ್ಟಕ್ಕೆ ತಲಪುವುದಕ್ಕಾಗಿ, ಬೇಕಾದ ಹೆಚ್ಚುವರಿ ಕಲ್ಲಿದ್ದಲು ಅಗತ್ಯವನ್ನು ಸಚಿವಾಲಯ ಗುರುತಿಸಿದೆ. ಹೆಚ್ಚುವರಿ ಉಷ್ಣ ಸಾಮರ್ಥ್ಯಕ್ಕಾಗಿ 85% ಪಿ.ಎಲ್.ಎಫ್. ನಲ್ಲಿ ಸುಮಾರು 400 ಮಿಲಿಯನ್ ಟನ್ ಲಭ್ಯವಿದೆ, ಹಾಗೂ ನವೀಕರಿಸಬಹುದಾದ ಮೂಲಗಳಿಂದ ಲಭ್ಯ ಇಂಧನಗಳ ಹೆಚ್ಚುವರಿ ಕೊಡುಗೆಗಳ ಕಾರಣದಿಂದಾಗಿ ಮುಂಬರುವ ದಿನಗಳಲ್ಲಿ ಕಲ್ಲಿದ್ದಲು ಅವಶ್ಯಕತೆಯು ಕಡಿಮೆಯಾಗಬಹುದು.
ಉಷ್ಣ ವಿದ್ಯುತ್ ಸ್ಥಾವರಗಳಿಗೆ ದೇಶೀಯ ಕಲ್ಲಿದ್ದಲಿನ ಸಾಕಷ್ಟು ಲಭ್ಯತೆಯನ್ನು ಖಚಿತಪಡಿಸಿಕೊಳ್ಳುತ್ತಾ, ತನ್ನ ಉತ್ಪಾದನಾ ವರ್ಧನೆಯ ಯೋಜನೆಯಲ್ಲಿ ಹೆಚ್ಚುವರಿ ಪ್ರಮಾಣದ ಕಲ್ಲಿದ್ದಲನ್ನು ಉತ್ಪಾದಿಸುವ ಯೋಜನೆಯನ್ನು ಕೇಂದ್ರ ಕಲ್ಲಿದ್ದಲು ಸಚಿವಾಲಯವು ಹೊಂದಿದೆ.
ಉತ್ಪಾದನಾ ಯೋಜನೆಯು ಹೊಸ ಗಣಿಗಳನ್ನು ಪ್ರಾರಂಭಿಸುವುದು, ಗಣಿಗಳ ಸಾಮರ್ಥ್ಯದ ವಿಸ್ತರಣೆ ಮಾಡುವುದು ಮತ್ತು ಕ್ಯಾಪ್ಟಿವ್/ ಸ್ವಂತ ಬಳಕೆಯ /ವಾಣಿಜ್ಯ ಗಣಿಗಳಿಂದ ಉತ್ಪಾದನೆಯನ್ನು ಹೆಚ್ಚಿಸುವುದು ಮಂತಾದ ವಿಷಯಗಳು ಒಳಗೊಂಡಿರುತ್ತದೆ. ಈ ಎಲ್ಲಾ ಮೂರು ಕಾರ್ಯಾಚರಣೆಯ ಘಟಕಗಳು ಒಟ್ಟಾರೆ ಕೊಡುಗೆ ನೀಡುತ್ತಿವೆ ಮತ್ತು ಮತ್ತಷ್ಟು ವರ್ಧನೆಗಾಗಿ ಸ್ಪಷ್ಟ ಯೋಜನೆಗಳನ್ನು ಹೊಂದಿವೆ. 2027 ಮತ್ತು 2030 ರ ಉತ್ಪಾದನಾ ಯೋಜನೆಗಳು ದೇಶದ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳ ಸಂಭಾವ್ಯ ದೇಶೀಯ ಅಗತ್ಯವನ್ನು ಮೀರುತ್ತದೆ, ಹಾಗೂ ಹೆಚ್ಚುವರಿ ಸಾಮರ್ಥ್ಯ ಹೊಂದುವ ಸಾಧ್ಯತೆ ಇದೆ.
ಪ್ರಸಕ್ತ ವರ್ಷದ ಕಲ್ಲಿದ್ದಲು ಪರಿಸ್ಥಿತಿಗೆ ಸಂಬಂಧಿಸಿದಂತೆ, ದಾಸ್ತಾನುಗಳು ಸಂಗ್ರಹಗೊಳ್ಳಲು ಪ್ರಾರಂಭಿಸಿವೆ ಮತ್ತು ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ಸಂಗ್ರಹವು ಈಗ ಸುಮಾರು 20 ಮಿಲಿಯನ್ ಟನ್ ಮತ್ತು ಗಣಿಗಳಲ್ಲಿ 41.59 ಮಿಲಿಯನ್ ಟನ್ ರಷ್ಟು ಆಗಿದೆ. ಕಳೆದ ವರ್ಷದ 65.56 ಮಿಲಿಯನ್ ಟನ್ ಉತ್ಪಾದನೆಗೆ ಹೋಲಿಸಿದರೆ, ಈ ವರ್ಷದ ಒಟ್ಟು ಸಂಗ್ರಹಣೆ (ಸಾರಿಗೆ ಮತ್ತು ಕ್ಯಾಪ್ಟಿವ್/ ಸ್ವಂತ ಬಳಕೆಯ /ವಾಣಿಜ್ಯ ಗಣಿಗಳನ್ನು ಒಳಗೊಂಡಂತೆ) 73.56 ಮಿಲಿಯನ್ ಟನ್ ಆಗಿದೆ, ಇದು ವರ್ಷದಿಂದ ವರ್ಷಕ್ಕೆ 12% ರಷ್ಟು ಬೆಳವಣಿಗೆಯನ್ನು ತೋರಿಸುತ್ತದೆ.
ಕೇಂದ್ರ ಕಲ್ಲಿದ್ದಲು, ವಿದ್ಯುತ್ ಮತ್ತು ರೈಲ್ವೆ ಸಚಿವಾಲಯಗಳು ಪರಸ್ಪರ ನಿಕಟ ಸಮನ್ವಯದಿಂದ ಕೆಲಸ ಮಾಡುತ್ತಿವೆ. ಅದರಂತೆ ಸುಗಮ ಕಲ್ಲಿದ್ದಲು ಪೂರೈಕೆಯನ್ನು ನಿರ್ವಹಿಸಲಾಗಿದೆ. ಈ ವರ್ಷ ಕಡಿಮೆ ಟಿ.ಪಿ.ಪಿ. ಸಂಗ್ರಹ ದಿನಾಂಕ 16.10.23 ರಂದು ಆಗಿತ್ತು, ನಂತರ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಮತ್ತು ಗಣಿ ಹಂತದಲ್ಲಿ ಸಂಗ್ರಹಣೆ ಹೆಚ್ಚಳವಾಗಲು ಪ್ರಾರಂಭವಾಯಿತು. ದೇಶೀಯ ಮಟ್ಟದಲ್ಲಿ ಕಲ್ಲಿದ್ದಲು ಆಧಾರಿತ ಸ್ಥಾವರಕ್ಕೆ ವಿದ್ಯುತ್ ಉತ್ಪಾದನೆಯ ಬೆಳವಣಿಗೆಯು 8.99% ಆಗಿದ್ದರೆ, ಕಲ್ಲಿದ್ದಲು ಉತ್ಪಾದನೆಯಲ್ಲಿ ವಾರ್ಷಿಕ ಆಧಾರದ ಮೇಲೆ 13.02% ರಷ್ಟು (ಇಲ್ಲಿಯವರೆಗೆ) ಬೆಳವಣಿಗೆ ಕಂಡಿದೆ. ಕಳೆದ ಮೂರು ತಿಂಗಳ ಅವಧಿಯಲ್ಲಿ, ಉಷ್ಣ ವಿದ್ಯುತ್ ನ ಬೇಡಿಕೆಯು ಕಳೆದ ವರ್ಷಕ್ಕಿಂತ 20% ಕ್ಕಿಂತ ಹೆಚ್ಚಿದೆ ಎಂಬುದು ಇಲ್ಲಿ ಗಮನಾರ್ಹ ವಿಷಯವಾಗಿದೆ.
*****
(Release ID: 1976694)
Visitor Counter : 127