ವಾರ್ತಾ ಮತ್ತು ಪ್ರಸಾರ ಸಚಿವಾಲಯ

54ನೇ ಐಎಫ್ಎಫ್ಐಗೆ ತನ್ನ 10 ಶಿಫಾರಸು ಚಲನಚಿತ್ರಗಳನ್ನು ಪ್ರಕಟಿಸಿದ ಫಿಲ್ಮ್ ಬಜಾರ್


ಈ ವರ್ಷ 6 ಭಾಷೆಗಳಲ್ಲಿನ ಬಹು ಪ್ರಕಾರಗಳ ಚಲನಚಿತ್ರಗಳ ಆಯ್ಕೆ

Posted On: 11 NOV 2023 1:36PM by PIB Bengaluru

ಫಿಲ್ಮ್ ಬಜಾರ್ ಶಿಫಾರಸು ಮಾಡಿದ ಚಲನಚಿತ್ರಗಳ ಬಹುನಿರೀಕ್ಷಿತ ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ವರ್ಷದ ಆಯ್ಕೆಯು ಕಾಲ್ಪನಿಕ, ಡಾಕ್ಯುಮೆಂಟರಿ ಕಿರುಚಿತ್ರಗಳು, ಸಾಕ್ಷ್ಯಚಿತ್ರಗಳು, ಹಾರರ್(ಭಯಾನಕ) ಚಲನಚಿತ್ರ ಮತ್ತು ಅನಿಮೇಟೆಡ್ ವೈಶಿಷ್ಟ್ಯಗಳ ವೈವಿಧ್ಯಮಯ ಮಿಶ್ರಣ ಹೊಂದಿದೆ. ಇದು ಭಾರತ ಮತ್ತು ವಿದೇಶಗಳಲ್ಲಿನ ಸಮುದಾಯಗಳಿಗೆ ಸಂಬಂಧಿಸಿದ ವಿಷಯಗಳು ಒಳಗೊಂಡಿವೆ. ಪಿತೃಪ್ರಭುತ್ವ(ಪುರುಷ ಪ್ರಧಾನ), ನಗರ ತಲ್ಲಣ, ತೀವ್ರ ಬಡತನ, ಹವಾಮಾನ ಬಿಕ್ಕಟ್ಟುಗಳು, ರಾಷ್ಟ್ರೀಯತೆ ಮತ್ತು ಕ್ರೀಡೆ, ಫಿಟ್ನೆಸ್ ಮತ್ತಿತರ ವಿಷಯ ವಸ್ತುಗಳಿಗೆ ಸಂಬಧಿಸಿವೆ. ಚಲನಚಿತ್ರಗಳು ಇಂಗ್ಲಿಷ್, ಹಿಂದಿ, ಬೆಂಗಾಲಿ, ಮಾರ್ವಾಡಿ, ಕನ್ನಡ ಮತ್ತು ಮಾವೋರಿ (ನ್ಯೂಜಿಲೆಂಡ್ ಭಾಷೆ) ಮತ್ತು ವಿಷಯಗಳ ಸಾರಸಂಗ್ರಹಿ ಮಿಶ್ರಣವನ್ನು ಒಟ್ಟಿಗೆ ತರುತ್ತವೆ. ಚಲನಚಿತ್ರಗಳ ಸ್ಥಿರಚಿತ್ರ(ಸ್ಟಿಲ್‌)ಗಳನ್ನು ಈ ಲಿಂಕ್‌ನಲ್ಲಿ ಕಾಣಬಹುದು:

ಪಟ್ಟಿಯು ಈ ಕೆಳಗಿನ ಚಲನಚಿತ್ರಗಳನ್ನು ಒಳಗೊಂಡಿದೆ:

 

ಕಾಲ್ಪನಿಕ ಕಿರುಚಿತ್ರಗಳು:

 

1. ಅನು (14 ನಿಮಿಷಗಳು), ಪುಲ್ಕಿತ್ ಅರೋರಾ (ಇಂಗ್ಲಿಷ್, ಹಿಂದಿ, ಮಾವೋರಿ): ಇತ್ತೀಚೆಗೆ ವಿಧವೆಯೊಬ್ಬಳು ನ್ಯೂಜಿಲೆಂಡ್‌ನಿಂದ ಭಾರತಕ್ಕೆ ಹೋದಾಗ, ಅವಳು ಸುಮಾರು 1 ವರ್ಷದ ಹಿಂದೆ ಕಳೆದುಕೊಂಡ ಸಂಗಾತಿಯ ಕುರುಹುಗಳಿಗೆ ಅಂಟಿಕೊಳ್ಳುತ್ತಾಳೆ. ಆದರೆ ದೂರದ ಬಿಕ್ಕಟ್ಟು ತನ್ನ ದುಃಖವನ್ನು ಅಸಾಮಾನ್ಯ ಸನ್ನಿವೇಶದಲ್ಲಿ ಸಾಮಾನ್ಯ ಆಚರಣೆಯೊಂದಿಗೆ ಎದುರಿಸಲು ಒತ್ತಾಯಿಸುತ್ತದೆ: ಕ್ವಾರಂಟೈನ್.

 

 

https://static.pib.gov.in/WriteReadData/userfiles/image/image001PNY7.png

 

2. ROTI KOON BANASI ಅಥವಾ WHO WILL BAKE THE BREAD (25 ನಿಮಿಷಗಳು) ಚಂದನ್ ಸಿಂಗ್ ಶೆಖಾವತ್ (ಮಾರ್ವಾರಿ) ನಿರ್ದೇಶಿಸಿದ್ದಾರೆ: ರಾಜಸ್ಥಾನದ ಗ್ರಾಮೀಣ ಕುಟುಂಬದಲ್ಲಿ ಸೆಟ್ ರೂಪಿಲಾಗಿದೆ. 'ರೊಟ್ಟಿಯನ್ನು ಯಾರು ಬೇಯಿಸುತ್ತಾರೆ?' ಸಂತೋಷ್ ಕುರಿತ ಚಿತ್ರವಾಗಿದೆ. ರೂಪಳ ಪತಿ ಮತ್ತು ರಂಜೀತ್‌ ನ ಹಿರಿಯ ಮಗ ಸಂತೋಷ್ ಪಿತೃಪ್ರಭುತ್ವ ಮತ್ತು ಪುರುಷ ಪ್ರಧಾನವಾದ ಸಾಂಪ್ರದಾಯಿಕ ಕಲ್ಪನೆಗಳಲ್ಲಿ ಸಿಕ್ಕಿಬಿದ್ದ ಪಾತ್ರ. ಅವನು ತನ್ನ ವೈಫಲ್ಯಗಳು ಮತ್ತು ಅವನ ತಂದೆಯ ಅನರ್ಹತೆಗಳನ್ನು ಸದಾ ನೆನಪಿಸಿಕೊಳ್ಳುತ್ತಾನೆ. ಮಹಿಳೆಯರನ್ನು ಮನೆಯಲ್ಲೇ ಉಳಿಸುವ ಅವನ ತಂದೆಯ ನಂಬಿಕೆಯ ವ್ಯವಸ್ಥೆಗೆ ವಿರುದ್ಧವಾಗಿ ಅವನು, ಸರ್ಕಾರಿ ಉದ್ಯೋಗ ಪರೀಕ್ಷೆಯಲ್ಲಿ ಕೊನೆಯ ಅವಕಾಶಕ್ಕಾಗಿ ಹೋಗಲು ತನ್ನ ಪತ್ನಿ ರೂಪಾಗೆ ಬೆಂಬಲ ನೀಡಲು ಬಯಸುತ್ತಾನೆ ಚಿತ್ರವು ನೂರಾರು ವರ್ಷಗಳ ಪಿತೃಪ್ರಭುತ್ವದ ವಿಚಾರಗಳನ್ನು ಪರಿಶೋಧಿಸುತ್ತದೆ. ಅದು ತಂದೆ/ಮಗನ ಸಂಬಂಧಗಳ ಮೂಲಕ ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಹೇಗೆ ಹರಡುತ್ತದೆ. ಈ ಚಲನಚಿತ್ರವು ರಾಜಸ್ಥಾನದಲ್ಲಿ ಮಹಿಳೆಯರ ದೈನಂದಿನ ಹೋರಾಟಗಳನ್ನು ನೇರವಾಗಿ ಹೇಳುತ್ತದೆ ಮತ್ತು ಇಡೀ ಸಮಾಜವು ಅಸಮಾನತೆ, ಪುರುಷತ್ವದ ತಪ್ಪು ಕಲ್ಪನೆಗಳು ಮತ್ತು ಪುರುಷ ಪ್ರಧಾನ ಆಚರಣೆಗಳಿಂದ ಪುರುಷ ಮತ್ತು ಮಹಿಳೆ ಇಬ್ಬರೂ ತುಳಿತಕ್ಕೊಳಗಾದ ವಿವಿಧ ವರ್ಗಗಳ ಕಳವಳಗಳನ್ನು ಎತ್ತಿ ಸಾರುತ್ತದೆ.

 

 

https://static.pib.gov.in/WriteReadData/userfiles/image/image0029MT9.jpg

 

 

3. ಮಂಗಳವಾರದ ಮಹಿಳೆಯರು (29 ನಿಮಿಷಗಳು), ಇಮಾದ್ ಷಾ ನಿರ್ದೇಶಿಸಿದ್ದಾರೆ (ಇಂಗ್ಲಿಷ್): ಒಂದು ಸುಂದರ ಮುಂಜಾನೆ, ಒಲೆಯ ಮೇಲೆ ಶಾವಿಗೆಯ ಗುಳ್ಳೆಗಳು ಮೂಡುತ್ತಿರುವಾಗ ರೇಡಿಯೊದಲ್ಲಿ ಶಾಸ್ತ್ರೀಯ ಸಂಗೀತ ನುಡಿಯುತ್ತಿರುತ್ತದೆ. ಆಗ ನಾಯಕ ಮಡಕೆಯನ್ನು ಶಾಂತವಾಗಿ ಬೆರೆಸುತ್ತಿದ್ದಾಗ ದೂರವಾಣಿ ಕರೆ ಬರುತ್ತದೆ. ಅವನು ಅಂತಿಮವಾಗಿ ಉತ್ತರಿಸುವಾಗ, ಅವನು ಗುರುತಿಸದ ಮೃದುವಾದ ಧ್ವನಿಯನ್ನು ಕೇಳುತ್ತಾನೆ. ನನಗೆ ಕೇವಲ 10 ನಿಮಿಷ ಬೇಕು ಎಂದು ಆಕೆ ದೂರವಾಣಿಯಲ್ಲಿ ಹೇಳುತ್ತಾಳೆ. ತಿಳುವಳಿಕೆಗೆ ಬರಲು 10 ನಿಮಿಷಗಳು ಬೇಕೆ? ಒಂದು ತಿಳುವಳಿಕೆಗೆ ಬನ್ನಿ? ಎಂದು ಹೇಳುತ್ತಾನೆ. ತಮ್ಮ ಭಾವನೆಗಳಿಂದ. ಅವರು ಫೋನ್ ಕೆಳಗೆ ಇಡಲು ಬಯಸುತ್ತಾರೆ ಆದರೆ ಸಾಧ್ಯವಾಗುತ್ತಿಲ್ಲ. ಅವನು ಕೇಳುತ್ತಾನೆ ಮತ್ತು ಅವಳು ಯಾರೆಂದು ಕಂಡುಹಿಡಿಯಲು ಪ್ರಯತ್ನಿಸುತ್ತಾನೆ, ಆ ನಿಗೂಢ ಮಹಿಳೆ ಸುತ್ತ ಆತ ಚಿತ್ತ ನೆಡುತ್ತದೆ. ಅಷ್ಟೊತ್ತಿಗೆ ಒಲೆಯ ಮೇಲೆ ಶಾವಿಗೆ(ಸ್ಪಾಗೆಟ್ಟಿ) ಅತಿಯಾಗಿ ಬೆಂದು ಹೋಗಿರುತ್ತದೆ. ಈ ನಿರುಪದ್ರವಿ ಸಂಭಾಷಣೆಯು ಅತಿವಾಸ್ತವಿಕ ದಿನವನ್ನು ರೂಪಿಸುತ್ತದೆ, ಅಲ್ಲಿ ಅವನು ತನ್ನ ದಿನಚರಿಯಲ್ಲಿ ಬರೆಯಲು ಬಯಸುತ್ತಾನೆ, ಆದರೆ ಫೋನ್ ರಿಂಗಿಂಗ್ ಆಗುತ್ತಲೇ ಇರುತ್ತದೆ. ಆ ನಿಗೂಢತೆ, ಆಕರ್ಷಕ ಮಹಿಳೆ ಅವನ ಮನೆಯ ದಿನಚರಿಯನ್ನು ಅಡ್ಡಿಪಡಿಸುತ್ತಾಳೆ. ಅವನ ಜೀವನದ ಬಗ್ಗೆ ವಿಚಿತ್ರವಾದ ಆಳವಾದ ಒಳನೋಟಗಳನ್ನು ನೀಡುತ್ತದೆ. ಈ ಚಿತ್ರದ ಮೂಲಕ ನಾವು ಬರವಣಿಗೆಯ ಸುಂದರವಾದ ವಿಚಿತ್ರತೆಯನ್ನು ಪ್ರತಿಬಿಂಬಿಸುವ ಜಗತ್ತನ್ನು ಸೃಷ್ಟಿಸಲು ಮತ್ತು ಅದನ್ನು ಭಾರತೀಯ ಸನ್ನಿವೇಶದಲ್ಲಿ ಅನ್ವಯಿಸಲು ಆಶಿಸಿದ್ದೇವೆ. ಇದು ಹರುಕಿ ಮುರಕಾಮಿಯ ಮೂರು ಸಣ್ಣ ಕಥೆಗಳ ರೂಪಾಂತರವಾಗಿದೆ. ನಾಯಕನ ಜೀವನದಲ್ಲಿ ಒಂದು ದಿನವನ್ನು ರೂಪಿಸಲು ಒಟ್ಟಿಗೆ ಹೆಣೆಯಲಾಗಿದೆ. ಅವನು ಕೆಲಸ ಕಳೆದುಕೊಂಡು ಚಿಂತಾಕ್ರಾಂತರಾಗಿದ್ದಾರೆ. ಭಾಷೆ ಮತ್ತು ಸಂಗೀತದೊಂದಿಗೆ ಆಡುವ ನಮ್ಮ ಪ್ರಯತ್ನಗಳು ಈ ಪ್ರೀತಿಯ ಜಪಾನೀ ಲೇಖಕರ ವೇಗ, ಸ್ವರ ಮತ್ತು ಕಥೆ ಹೇಳುವ ಶೈಲಿಯ ಸಿನಿಮೀಯ ಚಿತ್ರಣವನ್ನು ಹುಡುಕುವ ಪ್ರಯತ್ನವಾಗಿದೆ. ಈ ಚಲನಚಿತ್ರವು ಏಕಾಂಗಿಯಾಗಿ ನಿಲ್ಲುವ ಆಶಯ ಹೊಂದಿದೆ. ಅದು ಭಾರತೀಯ ಸಂದರ್ಭವನ್ನು ಹೊಂದಿಸುತ್ತದೆ.

 

4. GIDDH (25 ನಿಮಿಷಗಳು), ಮನೀಷ್ ಸೈನಿ (ಹಿಂದಿ) ನಿರ್ದೇಶಿಸಿದ್ದಾರೆ: ಒಬ್ಬ ಮುದುಕ ತನ್ನ ಜೀವನ ನಡೆಸಲು ಹೆಣಗಾಡುತ್ತಾನೆ. ಶೀಘ್ರದಲ್ಲೇ ಸಾಯುವ ಸ್ಥಿತಿಯಲ್ಲಿರುವ ಆತ ಬದುಳಿಯುವಲ್ಲಿ ವಿಫಲನಾಗುತ್ತಾನೆ, ಅವನ ಜೇಬಿನಲ್ಲಿ ಕೆಲವೇ ರೂಪಾಯಿಗಳಿದ್ದರೆ ಅವನು ಔಷಧಿ ಅಥವಾ ಆಹಾರ ತರಬಹುದು, ಆದರೆ ಅದೆರಡು ಅವನಿಗೆ ಸಾಧ್ಯವಾಗಲಿಲ್ಲ. ಹಸಿವಿನಿಂದ ಬಳಲುತ್ತಿರುವ ಮುದುಕನಿಗೆ ಕೆಲಸ ಮಾಡುವುದು ಕಷ್ಟ, ಆತ ಒಬ್ಬ ಸಮರ್ಥ ಕೆಲಸಗಾರನಂತೆ ಕಾಣುವುದಿಲ್ಲ. ಬದುಕುಳಿಯುವ ಅಸಂಭವ ವಿಧಾನದಲ್ಲಿ ಅವನು ಎಡವಿ ಬೀಳುವವರೆಗೂ ವಿಷಯಗಳು ಕಠೋರವಾಗಿರುತ್ತವೆ, ಆದರೆ ಇದು ವೆಚ್ಚದಲ್ಲಿ ಬರುತ್ತದೆ. ಅವನು ತನ್ನ ಆತ್ಮಸಾಕ್ಷಿಯನ್ನು ಪಣಕ್ಕಿಡುವ ಅಗತ್ಯವಿದೆ. ಒಂದು ವಿಪತ್ತು ಬರುತ್ತದೆ ಮತ್ತು ಮುದುಕನು ಅದರಿಂದ ಪ್ರಯೋಜನ ಪಡೆಯಬಹುದು. ಅಸಹಾಯಕತೆ ಮತ್ತು ಹತಾಶೆಯು ಸರಿ ತಪ್ಪುಗಳನ್ನು ತಿಳಿದಿರುವುದಿಲ್ಲ. ಆದರೆ ಸರಿ ಮತ್ತು ತಪ್ಪು ವ್ಯಕ್ತಿನಿಷ್ಠವಾಗಿರುವುದಿಲ್ಲ. ಆಂತರಿಕ ಜಗಳ ಉಂಟಾಗುತ್ತದೆ ಮತ್ತು ಶೀಘ್ರದಲ್ಲೇ ಹಸಿವು ಅಪರಾಧಿ ಪ್ರಜ್ಞೆಯೊಂದಿಗೆ ಘರ್ಷಿಸುತ್ತದೆ. ತಟ್ಟೆಯಲ್ಲಿ ಆಹಾರ, ಮೈಮೇಲೆ ಬಟ್ಟೆ ಇವೆರಡೂ ಮನುಷ್ಯನ ಮೂಲಭೂತ ಅಗತ್ಯಗಳು. ಆದಾಗ್ಯೂ, ಕೆಲವು ದುರದೃಷ್ಟವಂತರು ದಿನದಿಂದ ದಿನಕ್ಕೆ ಎಲ್ಲಾ ಮೂರು ಅಗತ್ಯಗಳನ್ನು ಪೂರೈಸಿಕೊಳ್ಳಲು ಹೆಣಗಾಡುತ್ತಾರೆ. ಈ ಕಥೆಯು ಬಟ್ಟೆ ಮತ್ತು ಆಹಾರ ಅಗತ್ಯದ ಅಸ್ತಿತ್ವದ ಹೋರಾಟದೊಂದಿಗೆ ಕಟ್ಟಿಕೊಡುತ್ತದೆ.

 

https://static.pib.gov.in/WriteReadData/userfiles/image/image003ANPA.jpg

ಡಾಕ್ಯುಮೆಂಟರಿ ಕಿರುಚಿತ್ರ:

 

5. GOPI (14 ನಿಮಿಷಗಳು), ನಿಶಾಂತ್ ಗುರುಮೂರ್ತಿ (ಕನ್ನಡ) ನಿರ್ದೇಶಿಸಿದ್ದಾರೆ: ಗೋಪಿ ಸಿದ್ದಿ ಮಧ್ಯವಯಸ್ಕ ಕಥೆಗಾರ್ತಿ. ಇವರು ಸಿದ್ದಿ ಸಮುದಾಯದೊಂದಿಗೆ (ದಕ್ಷಿಣ ಭಾರತದಲ್ಲಿ ಆಫ್ರಿಕಾ ಸಮುದಾಯ) ಗುರುತಿಸಿಕೊಳ್ಳುತ್ತಾರೆ. ಕಥೆ ಹೇಳುವ ಮೌಖಿಕ ರೂಪದಿಂದ ಸ್ಫೂರ್ತಿ ಪಡೆದ ಗೋಪಿ ತನ್ನ ಕಥೆಗಳನ್ನು ಸ್ವಯಂ-ಪ್ರಕಟಿಸಲು ಬಯಸುತ್ತಾಳೆ. ಆದಾಗ್ಯೂ, ಅವಳು ಮೊದಲು ತನ್ನ ಹೋರಾಟಗಳಲ್ಲಿ ಪರಕೀಯತೆ, ಸಾಮಾಜಿಕ ಸ್ಥಾನಮಾನ ಮತ್ತು ಪರಿಸರ ದುರಂತವನ್ನು ಎದುರಿಸುತ್ತಾಳೆ.

 

https://static.pib.gov.in/WriteReadData/userfiles/image/image0045WQ5.jpg

 

6. ಐರನ್ ವುಮೆನ್ ಆಫ್ ಮಣಿಪುರ (26 ನಿಮಿಷಗಳು), ಹಾವೋಬನ್ ಪಬನ್ ಕುಮಾರ್ ನಿರ್ದೇಶನ (ಮಣಿಪುರಿ,ಇಂಗ್ಲಿಷ್): ಕ್ರೀಡೆಯಲ್ಲಿ ಮಹಿಳೆಯರ ಅಭಿವೃದ್ಧಿಗೆ ಮಹತ್ತರವಾದ ಕೊಡುಗೆ ನೀಡಿದ ಈ ದೇಶದ ಕ್ರೀಡಾಪಟುಗಳಿಗೆ ಈ ಚಲನಚಿತ್ರವು ಗೌರವವಾಗಿದೆ. ಈ ಮಹಿಳಾ ವೇಟ್‌ಲಿಫ್ಟಿಂಗ್ ಪ್ರವರ್ತಕರಾದ ಕುಂಜರಾಣಿ ದೇವಿ (ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು, 2011), ಅನಿತಾ ಚಾನು (ಧ್ಯಾನ್‌ಚಂದ್ ಪ್ರಶಸ್ತಿ ಪುರಸ್ಕೃತರು), ಮತ್ತು ಮೀರಾಬಾಯಿ ಚಾನು (ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು, 2018, ಮತ್ತು ಟೋಕಿಯೊ ಒಲಿಂಪಿಕ್ಸ್ 2020ರಲ್ಲಿ ಬೆಳ್ಳಿ ಪದಕ ವಿಜೇತೆ) ಅವರ ಸ್ಪೂರ್ತಿದಾಯಕ ಕಥೆಗಳು ಕ್ರೀಡಾಪಟುಗಳು ಮತ್ತು ಇಡೀ ದೇಶ ಸೇರಿದಂತೆ ಇಡೀ ಭಾರತೀಯ ಪೀಳಿಗೆಗೆ ಸ್ಫೂರ್ತಿ ನೀಡಿವೆ..

 

https://static.pib.gov.in/WriteReadData/userfiles/image/image005O0O6.png

ಡಾಕ್ಯುಮೆಂಟರಿ ಮಧ್ಯಮ ಗಾತ್ರ

 

7. ವೇರ್ ಮೈ ಗ್ರ್ಯಾಂಡ್‌ಮದರ್ ಲೈವ್ಸ್ (51 ನಿಮಿಷಗಳು) ತಸ್ಮಿಯಾ ಆಫ್ರಿನ್ ಮೌ (ಬಂಗಾಲಿ): ಚಲನಚಿತ್ರ ನಿರ್ಮಾಪಕ ಮೌ ತನ್ನ ಪ್ರೀತಿಯ “ನಾನು’ಳನ್ನು ಚಿತ್ರೀಕರಿಸಲು ಆಕೆಯ ಮನೆಗೆ ಹೋಗುತ್ತಾನೆ. ತನ್ನ 100 ವರ್ಷಗಳ ಹಳೆಯ ಮನೆಯಲ್ಲಿ 27 ವರ್ಷಗಳ ಹಿಂದೆ ತನ್ನ ಪತಿಯ ಮರಣದ ನಂತರ ನಾನು ಒಬ್ಬಂಟಿಯಾಗಿ ವಾಸಿಸುತ್ತಿದ್ದಳು. ಮೌಗೆ, ನಾನುವಿನ ಸ್ಥಳ ಎಂದರೆ ಜವುಗು ಮತ್ತು ಹಸಿರು ಮತ್ತು ಭವ್ಯವಾದ ಕುಟುಂಬದ ಕೊಳದಿಂದ ತುಂಬಿದ ಶಾಂತಿಯುತ ಹಳ್ಳಿಯ ಸ್ಮರಣೆ. ಆ ಕೊಳದಲ್ಲಿ, ತಲೆಮಾರುಗಳಿಂದ, ನೆರೆಹೊರೆಯ ಮಕ್ಕಳು ಈಜು ಕಲಿತು ಬೆಳೆದರು. ನಾನುವಿನ ಮತ್ತೊಬ್ಬ ತಾಯಿಯ ಮೊಮ್ಮಗ ರವನಾಕ್ ತನ್ನ ಕುಟುಂಬದೊಂದಿಗೆ ಅವಳ ಮನೆಯ ಪಕ್ಕದಲ್ಲಿ ವಾಸಿಸುತ್ತಾನೆ. ರವನಾಕ್ ಅವರ ಮನೆಯಲ್ಲಿ, ಇನ್ನೂ ಒಂದು ಸಣ್ಣ ಕೊಳ ಉಳಿದಿದೆ. ಆದರೆ ರವನಾಕ್ ಅವರ ತಂದೆಯ ಕಡೆಯಿಂದ ಅನೇಕ ಉತ್ತರಾಧಿಕಾರಿಗಳು ಈ ಕೊಳವನ್ನು ಮಾರಾಟ ಮಾಡಲು ಬಯಸುತ್ತಾರೆ. ರವನಾಕ್ ತನ್ನ ತಂದೆಯ ನೆನಪು ಹೊಂದಿರುವ ತಮ್ಮ ಸ್ವಂತ ಕುಟುಂಬದ ಕೊಳವನ್ನು ಮಾರಾಟ ಮಾಡಲು ಬಯಸುವುದಿಲ್ಲ. ವಿಪರ್ಯಾಸವೆಂದರೆ, ಅವನ ಸ್ವಂತ ವ್ಯವಹಾರವು ಜವುಗು ಅಥವಾ ಕೊಳಗಳನ್ನು ಖರೀದಿಸುವುದು, ಮರಳು ತುಂಬುವ ಮೂಲಕ ವಸತಿ ಪ್ಲಾಟ್‌ಗಳಾಗಿ "ಅಭಿವೃದ್ಧಿ" ಮಾಡುವುದು ಮತ್ತು ಮಾರಾಟ ಮಾಡುವುದು. "ಅಭಿವೃದ್ಧಿ" ದೇಶದಾದ್ಯಂತ ನಡೆಯುತ್ತಿದೆ, ಜಲಮೂಲಗಳನ್ನು ನಾಶಪಡಿಸುತ್ತದೆ ಮತ್ತು ಅವುಗಳಲ್ಲಿ ವಾಸಿಸುವ ಎಲ್ಲಾ ಜೀವಿಗಳನ್ನು ಅಳಿಸಿಹಾಕುತ್ತದೆ ಎಂಬುದೇ ಚಿತ್ರಕಥಾ ವಸ್ತು.

 

https://static.pib.gov.in/WriteReadData/userfiles/image/image006ZK16.jpg

 

8. ಲಡಾಖ್ 470 (38 ನಿಮಿಷಗಳು), ಶಿವಂ ಸಿಂಗ್ ರಜಪೂತ್ ನಿರ್ದೇಶಿಸಿದ್ದಾರೆ (ಹಿಂದಿ, ಇಂಗ್ಲಿಷ್): ರಾಜಸ್ಥಾನದ ಅಜ್ಮೀರ್‌ನ ಸೂಫಿಯಾ ಓಟಗಾರ್ತಿ, 5 ಗಿನ್ನೆಸ್ ವಿಶ್ವ ಓಟದ ದಾಖಲೆಗಳೊಂದಿಗೆ ಅಲ್ಟ್ರಾ ರನ್ನರ್ ಆಗಿದ್ದು, ತನ್ನ ಅತ್ಯಂತ ಮಹತ್ವಾಕಾಂಕ್ಷೆಯ ಪ್ರಯತ್ನಕ್ಕೆ ಸಜ್ಜಾಗುತ್ತಿದ್ದಾಳೆ - ಇದುವರೆಗೆ ಯಾರೂ ಮಾಡದ ಮ್ಯಾರಥಾನ್ ಕೈಗೊಂಡರು. ಕಾರ್ಗಿಲ್ ಯುದ್ಧದ ಎಲ್ಲಾ ಭಾರತೀಯ ಸೇನೆಯ ಯುದ್ಧ ವೀರರನ್ನು ಗೌರವಿಸಲು ಅವರು 7 ದಿನಗಳಲ್ಲಿ ಸಿಯಾಚಿನ್ ಬೇಸ್ ಕ್ಯಾಂಪ್‌ನಿಂದ ಕಾರ್ಗಿಲ್ ಯುದ್ಧ ಸ್ಮಾರಕದವರೆಗೆ 11,000 ಅಡಿ ಎತ್ತರದಲ್ಲಿ 470 ಕಿಲೋಮೀಟರ್ ಓಡಲು ಯೋಜಿಸಿದ್ದಾರೆ. ಆಶೆ 17,980 ಅಡಿಗಳಷ್ಟು ಭೂಪ್ರದೇಶದ ಮೂಲಕ ಓಡುತ್ತಾನೆ, ಸೂಫಿಯಾಳ ತರಬೇತುದಾರ, ಅವಳ ಪಾಲುದಾರ ಮತ್ತು ಭಾರತೀಯ ಸೇನೆಯು ಅವಳ ಗುರಿ ಸಾಧಿಸಲು ಸಹಾಯ ಮಾಡಲು ಶ್ರಮಿಸುತ್ತಿದ್ದಾರೆ. ಸೂಫಿ ಮನಸ್ಥಿತಿಯು ಈ ಓಟವನ್ನು ತನಗಾಗಿ ಒಂದು ಧ್ಯಾನಸ್ಥ ಅನುಭವವನ್ನಾಗಿ ಮಾಡುತ್ತದೆ. ಕೊನೆಗೂ ಅವಳು ಅಂತಿಮ ಗೆರೆ ದಾಟಿ ಯಶಸ್ವಿಯಾಗುತ್ತಾಳೆ.

https://static.pib.gov.in/WriteReadData/userfiles/image/image007EDV4.jpg

ಫೀಚರ್:

 

 

9. ದಿ ಎಕ್ಸೈಲ್ (ಭಯಾನಕ) - (82 ನಿಮಿಷಗಳು), ಸಮ್ಮಾನ್ ರಾಯ್ (ಬಂಗಾಳಿ): ಈ ಚಲನಚಿತ್ರವು ಇತ್ತೀಚೆಗೆ ತನ್ನ ಪತ್ನಿ ಕಳೆದುಕೊಂಡ ಬಂಗಾಳದ ಹಳ್ಳಿಯೊಂದರ ಯುವಕ ಗೌರಂಗನ ಕಥೆ ಹೇಳುತ್ತದೆ. ಈ ನಷ್ಟವು ಕುಟುಂಬಕ್ಕೆ ದೊಡ್ಡದಾಗಿದೆ, ಇದು ವರ್ಷಗಳಿಂದ ದುರಂತಗಳ ಸರಣಿಯನ್ನು ಎದುರಿಸುತ್ತಿದೆ, ಆದರೆ ವೈಯಕ್ತಿಕವಾಗಿ ಗೌರಂಗನ ಮನಸ್ಸಿನಲ್ಲಿಯೂ ಸಹ ತನ್ನ ಪತ್ನಿಯ ಸಾವಿನೊಂದಿಗೆ ಹೊರಬರಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಗೌರಂಗನು ಪ್ರಯಾಣ ಪ್ರಾರಂಭಿಸುತ್ತಾನೆ, ಅಲ್ಲಿ ಅವನು ತನ್ನದೇ ಆದ ರಾಕ್ಷಸರನ್ನು ಮಾತ್ರ ಎದುರಿಸಬಹುದು, ಆದರೆ ಅಲೌಕಿಕತೆಯ ಗಡಿಯಲ್ಲಿರುವ ಈ ಗ್ರಾಮೀಣ ಸೆಟ್ಟಿಂಗ್‌ಗಳ ಆಧಾರದ ಮೇಲೆ ಕೆಲವು ಪುರಾಣಗಳನ್ನು ಸಹ ಎದುರಿಸುತ್ತಾನೆ. ಚಲನಚಿತ್ರವು 1960ರ ದಶಕದ ಉತ್ತರಾರ್ಧದ ಕಥೆ ಸಾರುತ್ತದೆ. ನಷ್ಟ, ಮೂಢನಂಬಿಕೆಗಳು, ಲೈಂಗಿಕ ವಿಚಲನ, ಅಲೌಕಿಕ ಮತ್ತು ಆ ಸಮಯದಲ್ಲಿ ಕ್ಷೀಣಿಸುತ್ತಿರುವ, ಪುರಾತನ ಸಾಂಪ್ರದಾಯಿಕತೆಯ ಕವಲು ದಾರಿಯಲ್ಲಿದ್ದ ಸಮಾಜದಲ್ಲಿ ಹೆಣ್ಣಿನ ಪಾತ್ರದಂತಹ ವಿಷಯಗಳೊಂದಿಗೆ ವ್ಯವಹರಿಸುತ್ತದೆ. ನಂಬಿಕೆ ವ್ಯವಸ್ಥೆಗಳು ಮತ್ತು ಆಧುನಿಕೋತ್ತರ ಚಿಂತನೆಗಳು ಮತ್ತು ರಾಜಕೀಯದ ಉತ್ತೇಜನ ಇಲ್ಲಿ ವಿಷಯ ವಸ್ತುವಾಗಿದೆ.

 

https://static.pib.gov.in/WriteReadData/userfiles/image/image0086QRH.jpg

 

10. ರಿಟರ್ನ್ ಆಫ್ ದಿ ಜಂಗಲ್ (ಅನಿಮೇಷನ್) - (105 ನಿಮಿಷಗಳು), ವೈಭವ್ ಕುಮಾರೇಶ್ (ಹಿಂದಿ): 9 ವರ್ಷದ ಮಿಹಿರ್ ಮತ್ತು ಅವನ ಸ್ನೇಹಿತರು ಶಾಲೆಯಲ್ಲಿ ಪುಂಡ ರಾಹುಲ್ ಮಲ್ಹೋತ್ರಾನನ್ನು ಬೆದರಿಸುವ ಕೆಲಸ ಮಾಡುತ್ತಾರೆ. ಈ ಅಸಾಧ್ಯವಾದ ಪ್ರಯಾಣದಲ್ಲಿ ಸವಾರಿ ಮಾಡಲು, ಅವರಿಗೆ ಸಹಾಯ ಮಾಡಲು, ಅವರಿಗೆ ಪಟ್ಟಣದಲ್ಲಿ ತಾಳ್ಮೆಯ ಅಜ್ಜ ಇರುತ್ತಾರೆ - ಥಾಥಾ ಮತ್ತು ಭಾರತದ ಪ್ರಾಚೀನ ಜಂಗಲ್ಸ್‌ನಿಂದ ಸ್ಫೂರ್ತಿಯ ಅವರ ಅದ್ಭುತ ಕಥೆಗಳು ಇವರಿಗೆ ನೆರವಾಗುತ್ತವೆ. ಇವರೆಲ್ಲಾ ಒಟ್ಟಿಗೆ ಸೇರಿ ನಿರ್ದಯ ಡೈನೋಸಾರ್ ನಿರ್ಮಿಸುತ್ತಾರೆ, ಕ್ರಿಕೆಟ್‌ ಆಟದಲ್ಲಿ ಹೋರಾಡುತ್ತಾರೆ, ಸ್ನೇಹ, ಸಹಾನುಭೂತಿ ಮತ್ತು ನಿರ್ಣಯದ ಶಕ್ತಿಯನ್ನು ಮರುಶೋಧಿಸಲು ರಾಜಸ್ಥಾನದವರೆಗೆ ಪ್ರಯಾಣಿಸುತ್ತಾರೆ. ರಿಟರ್ನ್ ಆಫ್ ದಿ ಜಂಗಲ್ ಸಮಕಾಲೀನ ಭಾರತೀಯ ಅನಿಮೇಷನ್ - ಹಿಂದೆಂದೂ ನೋಡಿಲ್ಲದಂತೆ! ಸ್ಪೂರ್ತಿದಾಯಕ ಕೌಟುಂಬಿಕ ಮನರಂಜನಾ ಕಥಾವಸ್ತು ಹೊಂದಿದೆ. ಇದು ಅತ್ಯಂತ ಹಳೆಯ, ಸಾಪೇಕ್ಷ ಮತ್ತು ಸ್ಥಳೀಯ ಕಥಾಹಂದರ ಹೊಂದಿದೆ.

 

https://static.pib.gov.in/WriteReadData/userfiles/image/image009HVQ4.jpg

******

 



(Release ID: 1976413) Visitor Counter : 97