ಪ್ರಧಾನ ಮಂತ್ರಿಯವರ ಕಛೇರಿ

​​​​​​​ಯುನೆಸ್ಕೋದ ಸೃಜನಶೀಲ ನಗರಗಳ ಪಟ್ಟಿಗೆ ಕೊಯಿಕೋಡ್‌ ಅನ್ನು “ಸಾಹಿತ್ಯದ ನಗರ” ಮತ್ತು ಗ್ವಾಲಿಯರ್‌ ಅನ್ನು “ಸಂಗೀತದ ನಗರ” ಎಂದು ಸೇರ್ಪಡೆ ಮಾಡಿರುವುದಕ್ಕೆ ಪ್ರಧಾನಮಂತ್ರಿ ಶ್ಲಾಘನೆ

Posted On: 01 NOV 2023 4:56PM by PIB Bengaluru

ಯುನೆಸ್ಕೋದ ಸೃಜನಶೀಲ ನಗರಗಳ ಪಟ್ಟಿಗೆ ಕೊಯಿಕೋಡ್‌ ಅನ್ನು “ಸಾಹಿತ್ಯದ ನಗರ” ಮತ್ತು ಗ್ವಾಲಿಯರ್‌ ಅನ್ನು “ಸಂಗೀತದ ನಗರ” ಎಂದು ಸೇರ್ಪಡೆ ಮಾಡಿರುವುದಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಈ ಗಣನೀಯ ಸಾಧನೆಗೆ ಕೊಯಿಕೊಡ್‌ ಮತ್ತು ಗ್ವಾಲಿಯರ್‌ ನಗರದ ಜನರನ್ನು ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.  

ಕೊಯಿಕೋಡ್‌ ನ ಶ್ರೀಮಂತ ಸಾಹಿತ್ಯ ಪರಂಪರೆಯಿಂದಾಗಿ ಭಾರತದ ಜಾಗತಿಕ ಸಾಂಸ್ಕೃತಿಕ ಚೈತನ್ಯ, ವಿಶ್ವ ವೇದಿಕೆಯಲ್ಲಿ ಪ್ರಕಾಶಮಾನವಾಗಿ ಪ್ರಜ್ವಲಿಸುತ್ತಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ. ಸಂಗೀತ ಪರಂಪರೆಯನ್ನು ಸಂರಕ್ಷಿಸುವಲ್ಲಿ ಮತ್ತು ‍ಶ್ರೀಮಂತಗೊಳಿಸುವ ಬದ್ಧತೆಯನ್ನು ಗ್ವಾಲಿಯರ್‌ ಹೊಂದಿದೆ. ಇದು ಜಾಗತಿಕವಾಗಿ ಪ್ರತಿಧ್ವನಿಸುತ್ತಿದೆ ಎಂದಿದ್ದಾರೆ.  

ಕೇಂದ್ರ ಸಂಸ್ಕೃತಿ ಸಚಿವ ಶ್ರೀ ಜಿ. ಕಿಶನ್‌ ರೆಡ್ಡಿ ಅವರ ಹೇಳಿಕೆಯನ್ನು ಪ್ರಧಾನಮಂತ್ರಿಯವರು ಉಲ್ಲೇಖಿಸಿ ಎಕ್ಸ್‌ ನಲ್ಲಿ ಪೋಸ್ಟ್‌ ಮಾಡಿದ್ದಾರೆ.

“ಕೊಯಿಕೋಡ್‌ ನ ಶ್ರೀಮಂತ ಸಾಹಿತ್ಯ ಪರಂಪರೆಯಿಂದಾಗಿ ಭಾರತದ ಜಾಗತಿಕ  ಸಾಂಸ್ಕೃತಿಕ ಚೈತನ್ಯ, ವಿಶ್ವ ವೇದಿಕೆಯಲ್ಲಿ ಪ್ರಕಾಶಮಾನವಾಗಿ ಪ್ರಜ್ವಲಿಸುತ್ತಿದೆ ಮತ್ತು ಗ್ವಾಲಿಯರ್‌ ನ ಸುಮಧುರ ಸಂಗೀತ ಪರಂಪರೆಯಿಂದಾಗಿ ಇದೀಗ ಗೌರವಾನ್ವಿತ ಯುನೆಸ್ಕೋದ ಕ್ರಿಯಾಶೀಲ ನಗರಗಳ ಸಂಪರ್ಕ ಜಾಲಕ್ಕೆ ಸೇರುವಂತಾಗಿದೆ.  

ಗಣನೀಯ ಸಾಧನೆಗಾಗಿ ಕೊಯಿಕೋಡ್‌ ಮತ್ತು ಗ್ವಾಲಿಯರ್‌ ಜನರಿಗೆ ಅಭಿನಂದನೆಗಳು!

ಈ ಅಂತರರಾಷ್ಟ್ರೀಯ ಮಾನ್ಯತೆಯನ್ನು ನಾವು ಸಂಭ್ರಮಿಸಬೇಕು, ನಮ್ಮ ವೈವಿಧ್ಯಮಯ ಸಂಪ್ರದಾಯಗಳನ್ನು ಸಂರಕ್ಷಿಸುವ ಮತ್ತು ಉತ್ತೇಜಿಸುವ ಬದ್ಧತೆಯನ್ನು ನಮ್ಮ ದೇಶ ಪುನರುಚ್ಚರಿಸಿದೆ.

ಈ ಪ್ರಶಂಸೆಗಳು ನಮ್ಮ ಅನನ್ಯ ಸಾಂಸ್ಕೃತಿಕ ನಿರೂಪಣೆಯನ್ನು ಪೋಷಿಸಲು ಮತ್ತು ಹಂಚಿಕೊಳ್ಳಲು ಸಮರ್ಪಿತವಾಗಿರುವ ಪ್ರತಿಯೊಬ್ಬ ವ್ಯಕ್ತಿಯ ಸಾಮೂಹಿಕ ಪ್ರಯತ್ನಗಳನ್ನು ಪ್ರತಿಂಬಿಸುತ್ತದೆ ಎಂದಿದ್ದಾರೆ.

“യുനെസ്‌കോയുടെ 'സാഹിത്യ നഗരം' ബഹുമതി ലഭിച്ചതോടെ സാഹിത്യ കലയോടുള്ള കോഴിക്കോടിന്റെ അഭിനിവേശം ആഗോളതലത്തിൽ ഇടം നേടിയിരിക്കുന്നു. ഊർജ്ജസ്വലമായ സാഹിത്യ പാരമ്പര്യമുള്ള ഈ നഗരം പഠനത്തെയും കഥാകഥനത്തെയും പ്രതിനിധാനം ചെയ്യുന്നു. സാഹിത്യത്തോടുള്ള കോഴിക്കോടിന്റെ അഗാധമായ സ്നേഹം ലോകമെമ്പാടുമുള്ള എഴുത്തുകാരെയും വായനക്കാരെയും പ്രചോദിപ്പിക്കുന്നത് തുടരട്ടെ.”

“ग्वालियर और संगीत का बहुत खास रिश्ता है। UNESCO से इसे सबसे बड़ा सम्मान मिलना बहुत गर्व की बात है। ग्वालियर ने जिस प्रतिबद्धता के साथ संगीत की विरासत को संजोया और समृद्ध किया है, उसकी गूंज दुनियाभर में सुनाई दे रही है। मेरी कामना है कि इस शहर की संगीत परंपरा और उसे लेकर लोगों का उत्साह और बढ़े, ताकि आने वाली पीढ़ियों को इससे प्रेरणा मिलती रहे।”

 



(Release ID: 1973891) Visitor Counter : 101