ಪ್ರಧಾನ ಮಂತ್ರಿಯವರ ಕಛೇರಿ
ಮಧ್ಯಪ್ರದೇಶದ ಚಿತ್ರಕೂಟದಲ್ಲಿರುವ ತುಳಸಿ ಪೀಠದಲ್ಲಿ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ
"ಅಷ್ಟಾಧ್ಯಾಯಿಯು ಭಾರತದ ಭಾಷಾಶಾಸ್ತ್ರ, ಭಾರತದ ಬೌದ್ಧಿಕತೆ ಮತ್ತು ನಮ್ಮ ಸಂಶೋಧನಾ ಸಂಸ್ಕೃತಿಯ ಸಾವಿರಾರು ವರ್ಷಗಳಷ್ಟು ಹಳೆಯ ಪಠ್ಯವಾಗಿದೆ"
"ಸಮಯವು ಸಂಸ್ಕೃತವನ್ನು ಪರಿಷ್ಕರಿಸಿತು, ಆದರೆ ಅದನ್ನು ಎಂದಿಗೂ ಕಲುಷಿತಗೊಳಿಸಲಿಲ್ಲ, ಅದು ಶಾಶ್ವತವಾಗಿ ಉಳಿಯಿತು"
"ಭಾರತದಲ್ಲಿ ನೀವು ಯಾವುದೇ ರಾಷ್ಟ್ರೀಯ ಆಯಾಮ ನೋಡಿದರೂ, ಅದರಲ್ಲಿ ನೀವು ಸಂಸ್ಕೃತದ ಕೊಡುಗೆಯನ್ನು ನೋಡುತ್ತೀರಿ"
"ಸಂಸ್ಕೃತವು ಸಂಪ್ರದಾಯಗಳ ಭಾಷೆ ಮಾತ್ರವಲ್ಲ, ಅದು ನಮ್ಮ ಪ್ರಗತಿ ಮತ್ತು ಗುರುತಿನ ಭಾಷೆಯಾಗಿದೆ"
"ಚಿತ್ರಕೂಟವು ಆಧ್ಯಾತ್ಮಿಕ ಜ್ಞಾನೋದಯ ಮತ್ತು ನೈಸರ್ಗಿಕ ಸೌಂದರ್ಯ ಹೊಂದಿದೆ"
Posted On:
27 OCT 2023 4:46PM by PIB Bengaluru
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಚಿತ್ರಕೂಟದಲ್ಲಿರುವ ತುಳಸಿ ಪೀಠಕ್ಕೆ ಭೇಟಿ ನೀಡಿದರು. ಕಾಂಚ ಮಂದಿರದ ದರ್ಶನ ಪಡೆದು, ಪೂಜೆ ನೆರವೇರಿಸಿದರು. ತುಳಸಿ ಪೀಠದ ಜಗದ್ಗುರು ರಮಾನಂದಾಚಾರ್ಯರ ಆಶೀರ್ವಾದ ಪಡೆದು ಸಾರ್ವಜನಿಕ ಸಮಾರಂಭದಲ್ಲಿ ಪಾಲ್ಗೊಂಡ ಅವರು, ‘ಅಷ್ಟಾಧ್ಯಾಯಿ ಭಾಷ್ಯ’, ‘ರಮಾನಂದಾಚಾರ್ಯ ಚರಿತಂ’ ಮತ್ತು ‘ಭಗವಾನ್ ಶ್ರೀ ಕೃಷ್ಣ ಕಿ ರಾಷ್ಟ್ರಲೀಲಾ’ ಎಂಬ 3 ಪುಸ್ತಕಗಳನ್ನು ಬಿಡುಗಡೆ ಮಾಡಿದರು.
ನಂತ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ, ಬಹು ದೇಗುಲಗಳಲ್ಲಿ ಶ್ರೀರಾಮನ ಪೂಜೆ ಮತ್ತು ದರ್ಶನ ಮತ್ತು ಸಂತರಿಂದ ವಿಶೇಷವಾಗಿ ಜಗದ್ಗುರು ರಮಾನಂದಾಚಾರ್ಯರಿಂದ ಆಶೀರ್ವಾದ ಪಡೆದಿದ್ದಕ್ಕಾಗಿ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು. ‘ಅಷ್ಟಾಧ್ಯಾಯಿ ಭಾಷ್ಯ’, ‘ರಮಾನಂದಾಚಾರ್ಯ ಚರಿತಂ’ ಮತ್ತು ‘ಭಗವಾನ್ ಶ್ರೀ ಕೃಷ್ಣ ಕಿ ರಾಷ್ಟ್ರಲೀಲಾ’ ಎಂಬ 3 ಪುಸ್ತಕಗಳ ಬಿಡುಗಡೆ ಕುರಿತು ಮಾತನಾಡಿದ ಅವರು, ಇದು ಭಾರತದ ಜ್ಞಾನ ಪರಂಪರೆಯನ್ನು ಇನ್ನಷ್ಟು ಬಲಪಡಿಸುತ್ತದೆ. "ನಾನು ಈ ಪುಸ್ತಕಗಳನ್ನು ಜಗದ್ಗುರುಗಳ ಆಶೀರ್ವಾದದ ಒಂದು ರೂಪವೆಂದು ಪರಿಗಣಿಸುತ್ತೇನೆ" ಎಂದರು.
"ಅಷ್ಟಾಧ್ಯಾಯಿಯು ಭಾರತದ ಭಾಷಾಶಾಸ್ತ್ರ, ಬೌದ್ಧಿಕತೆ ಮತ್ತು ನಮ್ಮ ಸಂಶೋಧನಾ ಸಂಸ್ಕೃತಿಯ ಸಾವಿರಾರು ವರ್ಷಗಳ ಹಳೆಯದಾದ ಪಠ್ಯವಾಗಿದೆ" ಎಂದು ಅವರು ಅಷ್ಟಾಧ್ಯಾಯಿಯ ಪ್ರತಿಭೆಯನ್ನು ಎತ್ತಿ ತೋರಿಸಿದರು. ಏಕೆಂದರೆ ಅದು ವ್ಯಾಕರಣ ಮತ್ತು ಭಾಷೆಯ ವಿಜ್ಞಾನವನ್ನು ಪಿಥಿ ಲಿಪಿಯಲ್ಲಿದೆ. ಹಲವು ಭಾಷೆಗಳು ಬಂದು ಹೋದವು, ಆದರೆ ಸಂಸ್ಕೃತ ಶಾಶ್ವತವಾಗಿ ಉಳಿದಿದೆ. "ಸಮಯವು ಸಂಸ್ಕೃತವನ್ನು ಪರಿಷ್ಕರಿಸಿತು, ಆದರೆ ಅದನ್ನು ಎಂದಿಗೂ ಕಲುಷಿತಗೊಳಿಸಲಿಲ್ಲ". ಸಂಸ್ಕೃತದ ಪ್ರೌಢ ವ್ಯಾಕರಣವು ಈ ಶಾಶ್ವತತೆಯ ನೆಲೆಯಲ್ಲಿದೆ. ಕೇವಲ 14 ಮಹೇಶ್ವರ ಸೂತ್ರಗಳನ್ನು ಆಧರಿಸಿ, ಈ ಭಾಷೆಯು ಶಾಸ್ತ್ರ ಮತ್ತು ಪುರಾಣದ ತಾಯಿಯಾಗಿದೆ (ಅನುಷ್ಠಾನಗಳು ಮತ್ತು ಪಾಂಡಿತ್ಯ). "ನೀವು ಭಾರತದಲ್ಲಿ ಯಾವುದೇ ರಾಷ್ಟ್ರೀಯ ಆಯಾಮವನ್ನು ನೋಡಿದರೂ, ನೀವು ಸಂಸ್ಕೃತದ ಕೊಡುಗೆಯನ್ನು ಕಾಣುತ್ತೀರಿ" ಎಂದು ಅವರು ಹೇಳಿದರು.
ಸಾವಿರ ವರ್ಷಗಳ ಗುಲಾಮಗಿರಿಯ ಯುಗದಲ್ಲಿ ಭಾರತದ ಸಂಸ್ಕೃತಿ ಮತ್ತು ಪರಂಪರೆಯನ್ನು ಕಿತ್ತುಹಾಕುವ ಪ್ರಯತ್ನಗಳ ಮೇಲೆ ಬೆಳಕು ಚೆಲ್ಲಿದ ಶ್ರೀ ಮೋದಿ ಅವರು, ಸಂಸ್ಕೃತ ಭಾಷೆಯ ಪರಕೀಯತೆಯನ್ನು ಪ್ರಸ್ತಾಪಿಸಿದರು. ಕೆಲವು ವ್ಯಕ್ತಿಗಳು ಸಂಸ್ಕೃತದ ಬಗ್ಗೆ ದ್ವೇಷದ ಭಾವನೆ ಉಂಟುಮಾಡುವ ಗುಲಾಮಗಿರಿ ಮನಸ್ಥಿತಿ ತೋರಿದರು. ಮಾತೃಭಾಷೆಯನ್ನು ತಿಳಿದುಕೊಳ್ಳುವುದು ಹೊರ ದೇಶಗಳಿಗೆ ಹೊಗಳಿಕೆಗೆ ಅರ್ಹವಾಗಿದೆ. "ಸಂಸ್ಕೃತವು ಸಂಪ್ರದಾಯಗಳ ಭಾಷೆ ಮಾತ್ರವಲ್ಲ, ಅದು ನಮ್ಮ ಪ್ರಗತಿ ಮತ್ತು ಗುರುತಿನ ಭಾಷೆಯಾಗಿದೆ". ದೇಶದಲ್ಲಿ ಭಾಷೆಯನ್ನು ಬಲಪಡಿಸುವ ಪ್ರಯತ್ನಗಳನ್ನು ಪ್ರಸ್ತಾಪಿಸಿದ ಅವರು, "ಆಧುನಿಕ ಕಾಲದಲ್ಲಿ ಯಶಸ್ವಿ ಪ್ರಯತ್ನಗಳ ಕಡೆಗೆ ಅಷ್ಟಾಧ್ಯಾಯಿ ಭಾಷ್ಯದಂತಹ ಗ್ರಂಥಗಳು ನಿರ್ಣಾಯಕ ಪಾತ್ರ ವಹಿಸುತ್ತವೆ" ಎಂದರು.
ಪ್ರಧಾನಿ ಮೋದಿ ಅವರು ಜಗದ್ಗುರು ರಮಾನಂದಾಚಾರ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಿ, ಅವರ ಅಗಾಧ ಜ್ಞಾನ ಮತ್ತು ಕೊಡುಗೆಗಳನ್ನು ಉಲ್ಲೇಖಿಸಿದರು. "ಈ ಮಟ್ಟದ ಬುದ್ಧಿವಂತಿಕೆಯು ಎಂದಿಗೂ ವೈಯಕ್ತಿಕವಲ್ಲ, ಈ ಬುದ್ಧಿವಂತಿಕೆಯು ರಾಷ್ಟ್ರೀಯ ಸಂಪತ್ತು". ಸ್ವಾಮೀಜಿ ಅವರು 2015ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ಪಡೆದರು. ಸ್ವಾಮೀಜಿ ಅವರ ರಾಷ್ಟ್ರೀಯ ಮತ್ತು ಸಾಮಾಜಿಕ ಅಂಶಗಳನ್ನು ಉಲ್ಲೇಖಿಸಿದ ಪ್ರಧಾನಿ, 9 ಪ್ರಮುಖ ರಾಯಭಾರಿಗಳಲ್ಲಿ ಒಬ್ಬರಾಗಿ ಸ್ವಚ್ಛ ಭಾರತಕ್ಕೆ ಅವರ ಸಕ್ರಿಯ ಕೊಡುಗೆಯನ್ನು ನೆನಪಿಸಿಕೊಂಡರು.
ಸ್ವಚ್ಛತೆ, ಆರೋಗ್ಯ ಮತ್ತು ಗಂಗಾ ನದಿಯಂತಹ ರಾಷ್ಟ್ರೀಯ ಗುರಿಗಳು ಈಗ ಸಾಕಾರಗೊಳ್ಳುತ್ತಿವೆ. ಪ್ರತಿಯೊಬ್ಬ ದೇಶವಾಸಿಯ ಮತ್ತೊಂದು ಕನಸನ್ನು ನನಸಾಗಿಸುವಲ್ಲಿ ಜಗದ್ಗುರು ರಾಮಭದ್ರಾಚಾರ್ಯರು ದೊಡ್ಡ ಪಾತ್ರ ವಹಿಸಿದ್ದಾರೆ. ನ್ಯಾಯಾಲಯದ ಒಳಗೆ ಮತ್ತು ಹೊರಗೆ ನೀವೆಲ್ಲಾ ತುಂಬಾ ಕೊಡುಗೆ ನೀಡಿದ ರಾಮಮಂದಿರವೂ ಅಯೋಧ್ಯೆಯಲ್ಲಿ ಸಿದ್ಧವಾಗಲಿದೆ” ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಭಾಗವಹಿಸಲು ಸ್ವೀಕರಿಸಿದ ಆಹ್ವಾನವನ್ನು ಪ್ರಧಾನಿ ಪ್ರಸ್ತಾಪಿಸಿದರು.
ಅಮೃತ ಕಾಲದಲ್ಲಿ, ರಾಷ್ಟ್ರವು ಅಭಿವೃದ್ಧಿ ಮತ್ತು ಪರಂಪರೆಯನ್ನು ಒಟ್ಟಿಗೆ ತೆಗೆದುಕೊಂಡು ಹೋಗುತ್ತಿದೆ. "ಚಿತ್ರಕೂಟವು ಆಧ್ಯಾತ್ಮಿಕ ಜ್ಞಾನೋದಯ ಮತ್ತು ನೈಸರ್ಗಿಕ ಸೌಂದರ್ಯ ಹೊಂದಿದೆ". ಯಾತ್ರಾ ಸ್ಥಳಗಳ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ. ಕೆನ್-ಬೆಟ್ವಾ ಲಿಂಕ್ ಯೋಜನೆ, ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇ ಮತ್ತು ಡಿಫೆನ್ಸ್ ಕಾರಿಡಾರ್ ಯೋಜನೆಗಳು ಇದಕ್ಕೆ ಸಾಕ್ಷಿಯಾಗಿವೆ. ಇದು ಈ ಪ್ರದೇಶದಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ. ಚಿತ್ರಕೂಟವು ಅಭಿವೃದ್ಧಿಯ ಹೊಸ ಎತ್ತರವನ್ನು ಏರುತ್ತದೆ ಎಂಬ ನಂಬಿಕೆಯನ್ನು ವ್ಯಕ್ತಪಡಿಸಿ, ಜಗದ್ಗುರು ರಮಾನಂದಾಚಾರ್ಯರಿಗೆ ನಮಿಸಿ, ಪ್ರಧಾನಿ ತಮ್ಮ ಭಾಷಣ ಮುಕ್ತಾಯಗೊಳಿಸಿದರು.
ಈ ಸಂದರ್ಭದಲ್ಲಿ ಮಧ್ಯಪ್ರದೇಶದ ರಾಜ್ಯಪಾಲರಾದ ಶ್ರೀ ಮಂಗುಭಾಯಿ ಪಟೇಲ್, ತುಳಸಿ ಪೀಠದ ಜಗದ್ಗುರು ರಮಾನಂದಾಚಾರ್ಯ, ಮಧ್ಯಪ್ರದೇಶದ ಮುಖ್ಯಮಂತ್ರಿ, ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಹಿನ್ನೆಲೆ
ತುಳಸಿ ಪೀಠವು ಮಧ್ಯಪ್ರದೇಶದ ಚಿತ್ರಕೂಟದಲ್ಲಿರುವ ಪ್ರಮುಖ ಧಾರ್ಮಿಕ ಮತ್ತು ಸಾಮಾಜಿಕ ಸೇವಾ ಸಂಸ್ಥೆಯಾಗಿದೆ. ಇದನ್ನು 1987ರಲ್ಲಿ ಜಗದ್ಗುರು ರಮಾನಂದಾಚಾರ್ಯರು ಸ್ಥಾಪಿಸಿದರು. ತುಳಸಿ ಪೀಠವು ಹಿಂದೂ ಧಾರ್ಮಿಕ ಸಾಹಿತ್ಯದ ಪ್ರಮುಖ ಪ್ರಕಾಶಕರಲ್ಲಿ ಒಂದಾಗಿದೆ.
*****
(Release ID: 1972587)
Visitor Counter : 86
Read this release in:
English
,
Urdu
,
Hindi
,
Marathi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam