ಸಹಕಾರ ಸಚಿವಾಲಯ
azadi ka amrit mahotsav

ನವದೆಹಲಿಯಲ್ಲಿ ಭಾರತೀಯ ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟದ ( ಎನ್ ಸಿಸಿಎಫ್) ನಿರ್ದೇಶಕರ ಮಂಡಳಿಯಲ್ಲಿ  ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರ ಭಾಷಣ 

 
2027-28ರ ವೇಳೆಗೆ 50,000 ಕೋಟಿ ರೂಪಾಯಿ ವಹಿವಾಟು ನಡೆಸುವ ಮೂಲಕ ಎನ್ಸಿಸಿಎಫ್ ಸ್ವಾವಲಂಬಿಯಾಗಬೇಕು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿವರ  ʼಸಹಕಾರದಿಂದ ಸಮೃದ್ಧಿʼ (ಸಹಕಾರ್ ಸೇ ಸಮೃದ್ಧಿ)ಯ ಉದ್ದೇಶವನ್ನು ಈಡೇರಿಸುವಲ್ಲಿ ಎನ್ ಸಿಸಿಎಫ್  ಪ್ರಮುಖ ಪಾತ್ರ ವಹಿಸುತ್ತಿದೆ.

ಪ್ರಧಾನಿ ಮೋದಿಯವರ ದೂರದೃಷ್ಟಿಯ ನಾಯಕತ್ವದಲ್ಲಿ, ಸಹಕಾರ ಸಚಿವಾಲಯವು ಪ್ರಾರಂಭವಾದಾಗಿನಿಂದ, ಕಳೆದ 26 ತಿಂಗಳುಗಳಲ್ಲಿ ದೇಶದಲ್ಲಿ ಸಹಕಾರ ಚಳುವಳಿಯನ್ನು ಬಲಪಡಿಸಲು ಮತ್ತು ಜಿಡಿಪಿ ಯಲ್ಲಿ ಸಹಕಾರಿ ಸಂಸ್ಥೆಗಳ ಪಾಲನ್ನು ಹೆಚ್ಚಿಸಲು 52 ಉಪಕ್ರಮಗಳನ್ನು ತೆಗೆದುಕೊಂಡಿದೆ.

ಎನ್ ಸಿಸಿಎಫ್  ದೇಶಾದ್ಯಂತ ಪಿಎಸಿಎಸ್  ಮತ್ತು ಇತರ ಸಹಕಾರಿ ಸಂಸ್ಥೆಗಳನ್ನು ತನ್ನ ಸದಸ್ಯರನ್ನಾಗಿ ಮಾಡಲು ಒತ್ತು ನೀಡಬೇಕು, ಇದಕ್ಕಾಗಿ ಎನ್ ಸಿಸಿಎಫ್  ತನ್ನ ವ್ಯವಹಾರ ಯೋಜನೆಯನ್ನು ಅಭಿವೃದ್ಧಿಪಡಿಸಬೇಕು ಮತ್ತು ಅದರ ವ್ಯವಹಾರ ವಿಧಾನವನ್ನು ಬದಲಾಯಿಸಬೇಕಾದ ಅಗತ್ಯವಿದೆ

ಗುಜರಾತ್, ಬಿಹಾರ ಮತ್ತು ಇತರ ರಾಜ್ಯಗಳ ರೈತರಿಂದ ಎನ್ ಸಿಸಿಎಫ್ ಮತ್ತು ಅದರ ಸಹವರ್ತಿ ಕಂಪನಿಗಳೊಂದಿಗೆ ಎಥೆನಾಲ್ ಉತ್ಪಾದನೆಗೆ ಮೆಕ್ಕೆಜೋಳವನ್ನು ಸಂಗ್ರಹಿಸುವುದನ್ನು ಖಾತ್ರಿಪಡಿಸಿಕೊಳ್ಳಲು ಸಹಕಾರ ಸಚಿವರು ವಿಶೇಷ ಒತ್ತು ನೀಡಿದರು.

ರೈತರಿಂದ ಖರೀದಿಸಿದ ಬೇಳೆಕಾಳುಗಳಿಗೆ ರಫ್ತು ಅವಕಾಶಗಳನ್ನು ಕಂಡುಕೊಳ್ಳಲು ಮತ್ತು ಅಂತಹ ಖರೀದಿಗಳನ್ನು ಕನಿಷ್ಠ ಬೆಂಬಲ ಬೆಲೆಯಲ್ಲ

Posted On: 20 OCT 2023 1:22PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ನವದೆಹಲಿಯಲ್ಲಿ ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟದ (ಎನ್ ಸಿಸಿಎಫ್)  ನಿರ್ದೇಶಕರ ಮಂಡಳಿಯನ್ನು ಉದ್ದೇಶಿಸಿ ಮಾತನಾಡಿದರು. 2027-28ರ ವೇಳೆಗೆ 50,000 ಕೋಟಿ ರೂಪಾಯಿ ವಹಿವಾಟು ನಡೆಸುವ ಮೂಲಕ ಎನ್ಸಿಸಿಎಫ್ ಸ್ವಾವಲಂಬಿಯಾಗಬೇಕು ಎಂದು ಶ್ರೀ ಅಮಿತ್ ಶಾ ಹೇಳಿದರು. ಎನ್ಸಿಸಿಎಫ್ನ ಬಂಡವಾಳದ ಪಾಲಿನಲ್ಲಿ ಸಹಕಾರ ಸಂಘಗಳ ಪ್ರಮಾಣವು ತುಲನಾತ್ಮಕವಾಗಿ ಹೆಚ್ಚಿರುವುದನ್ನು ಖಚಿತಪಡಿಸಿಕೊಳ್ಳಲು ದೇಶಾದ್ಯಂತ ಪ್ರಾಥಮಿಕ ಕೃಷಿ ಸಾಲ ಸಂಘಗಳು (ಪಿಎಸಿಎಸ್) ಮತ್ತು ಇತರ ಸಹಕಾರಿ ಸಂಸ್ಥೆಗಳನ್ನು ತನ್ನ ಸದಸ್ಯರನ್ನಾಗಿ ಮಾಡಲು ಎನ್ಸಿಸಿಎಫ್ ಒತ್ತು ನೀಡಬೇಕು ಎಂದು ಅವರು ಹೇಳಿದರು. ಈ ಉದ್ದೇಶಕ್ಕಾಗಿ ಎನ್ಸಿಸಿಎಫ್ ತನ್ನ ವ್ಯವಹಾರ ಯೋಜನೆಯನ್ನು ಅಭಿವೃದ್ಧಿಪಡಿಸಬೇಕು ಮತ್ತು ಅದರ ವ್ಯವಹಾರ ವಿಧಾನವನ್ನು ಬದಲಾಯಿಸಬೇಕಾಗುತ್ತದೆ ಎಂದು ಕೇಂದ್ರ ಸಹಕಾರ ಸಚಿವರು ಹೇಳಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ʼಸಹಕಾರದಿಂದ ಸಮೃದ್ಧಿʼ (ಸಹಕಾರ್ ಸೇ ಸಮೃದ್ಧಿ)ಯ ಉದ್ದೇಶವನ್ನು ಈಡೇರಿಸುವಲ್ಲಿ ಎನ್ಸಿಸಿಎಫ್ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಕೇಂದ್ರ ಸಹಕಾರ ಸಚಿವರು ಹೇಳಿದರು. ಪ್ರಧಾನ,ಮಂತ್ರಿ ಮೋದಿಯವರ ದೂರದೃಷ್ಟಿಯ ನಾಯಕತ್ವದಲ್ಲಿ, ಸಹಕಾರ ಸಚಿವಾಲಯವು ಪ್ರಾರಂಭವಾದಾಗಿನಿಂದ, ಕಳೆದ 26 ತಿಂಗಳಲ್ಲಿ ದೇಶದಲ್ಲಿ ಸಹಕಾರ ಚಳವಳಿಯನ್ನು ಬಲಪಡಿಸಲು ಮತ್ತು ಜಿಡಿಪಿಯಲ್ಲಿ ಸಹಕಾರ ಸಂಸ್ಥೆಗಳ ಪಾಲು ಹೆಚ್ಚಿಸಲು 52 ಉಪಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದರು.

ಎನ್ಸಿಸಿಎಫ್ ಸ್ವಾವಲಂಬಿ ಸಹಕಾರಿ ಸಂಸ್ಥೆಯಾಗಲು ಮುಂದಿನ 10 ವರ್ಷಗಳ ಮಾರ್ಗಸೂಚಿಯನ್ನು ಸಿದ್ಧಪಡಿಸಬೇಕು ಎಂದು ಶ್ರೀ ಅಮಿತ್ ಶಾ ಹೇಳಿದರು. ಇಂತಹ ಮಾರ್ಗಸೂಚಿಯನ್ನು ಜಾರಿಗೊಳಿಸುವಲ್ಲಿ ಸಹಕಾರ ಸಚಿವಾಲಯವು ಎನ್ಸಿಸಿಎಫ್ ಗೆ ಸಂಪೂರ್ಣ ಬೆಂಬಲವನ್ನು ನೀಡುತ್ತದೆ ಎಂದು ಅವರು ಹೇಳಿದರು. ಕೇಂದ್ರ ಸಹಕಾರ ಸಚಿವರು ಗುಜರಾತ್, ಬಿಹಾರ ಮತ್ತು ಇತರ ರಾಜ್ಯಗಳ ರೈತರಿಂದ ಎನ್ಸಿಸಿಎಫ್ ಮತ್ತು ಅದರ ಸಹವರ್ತಿ ಕಂಪನಿಗಳೊಂದಿಗೆ ಎಥೆನಾಲ್ ಉತ್ಪಾದನೆಗೆ ಜೋಳವನ್ನು ಸಂಗ್ರಹಿಸುವುದನ್ನು ಖಚಿತಪಡಿಸಿಕೊಳ್ಳಲು ವಿಶೇಷ ಒತ್ತು ನೀಡಿದರು.

ಎನ್ಸಿಸಿಎಫ್ ಮತ್ತು ಎನ್ಎಎಫ್ ಇಡಿ  ಬಯಸಿದಲ್ಲಿ, ಸಹಕಾರ ಸಚಿವಾಲಯವು ರಾಷ್ಟ್ರೀಯ ಮಾಹಿತಿ ಕೇಂದ್ರದಿಂದ (ಎನ್ ಐ ಸಿ) ಡಿಜಿಟಲ್ ಪ್ಲಾಟ್ಫಾರ್ಮ್ನಲ್ಲಿ ತಮ್ಮ ಸಾಮಾನ್ಯ ಆ್ಯಪ್ ಅನ್ನು ಸಿದ್ಧಪಡಿಸಲು ಸಹಾಯ ಮಾಡುತ್ತದೆ ಮತ್ತು ಜೋಳದ ಸಂಗ್ರಹಣೆಯನ್ನು ಸಂಘಟಿಸಲು ಈ ಆ್ಯಪ್  ಅನ್ನು ಬಳಸಿಕೊಳ್ಳಬಹುದು ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು.  ರೈತರಿಂದ ಖರೀದಿಸಿದ ಬೇಳೆಕಾಳುಗಳಿಗೆ ರಫ್ತಿನ ಅವಕಾಶಗಳನ್ನು ಕಂಡುಕೊಳ್ಳಲು ಮತ್ತು ಅಂತಹ ಖರೀದಿಗಳನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ (ಎಂಎಸ್ ಪಿ) ಮಾಡಲಾಗುತ್ತದೆ ಎನ್ನುವುದನ್ನ  ಖಚಿತಪಡಿಸಿಕೊಳ್ಳಲು ಎನ್ಸಿಸಿಎಫ್ ಗೆ ಶ್ರೀ ಶಾ ಒತ್ತಾಯಿಸಿದರು. ತೀವ್ರವಾದ ವಿಸ್ತರಣೆ ಮತ್ತು ಮಾರುಕಟ್ಟೆಯನ್ನು ಅಳವಡಿಸಿಕೊಳ್ಳುವುದು, ರೈತರಿಗೆ ಪೂರ್ವಭಾವಿ ಭರವಸೆ ನೀಡುವ ಮೂಲಕ ಖರೀದಿ ಮತ್ತು ಸಾಮಾನ್ಯ ಸಂಗ್ರಹಣಾ ಕೇಂದ್ರಗಳನ್ನು ಸ್ಥಾಪಿಸಲು ಅವರು ಒತ್ತು ನೀಡಿದರು.

ತಮ್ಮ ಭಾಷಣದಲ್ಲಿ, ಶ್ರೀ ಅಮಿತ್ ಶಾ ಅವರು ಈರುಳ್ಳಿ ಮತ್ತು ಬೇಳೆಕಾಳುಗಳ ಖರೀದಿಗೆ ಎನ್ಸಿಸಿಎಫ್ ಪಿಎಸಿಎಸ್ ನೊಂದಿಗೆ ಒಪ್ಪಂದ ಮಾಡಿಕೊಳ್ಳಬಹುದು ಎಂದು ಸಲಹೆ ನೀಡಿದರು, ಇದರಿಂದಾಗಿ ಸಹಕಾರಿ ವಲಯದಲ್ಲಿ ವಿಶ್ವದ ಅತಿದೊಡ್ಡ ಶೇಖರಣಾ ಯೋಜನೆಯಡಿಯಲ್ಲಿ ಅವುಗಳ ಸಂಗ್ರಹಣೆಗೆ ವ್ಯವಸ್ಥೆ ಮಾಡಬಹುದು. ಅವರು ಕೃಷಿ ಉತ್ಪನ್ನಗಳಿಗೆ ರಫ್ತು ಅವಕಾಶಗಳನ್ನು ಅನ್ವೇಷಿಸಲು ಮತ್ತು ಅಕ್ಕಿ ಖರೀದಿಸಲು ಮತ್ತು ರಾಷ್ಟ್ರೀಯ ಸಹಕಾರಿ ರಫ್ತು ಲಿಮಿಟೆಡ್  (ಎನ್ಇಸಿ ಎಲ್) ಮೂಲಕ ರಫ್ತು ಮಾಡಲು ಕೇಳಿದರು.

ಎನ್ಸಿಸಿಎಫ್ ಅಧ್ಯಕ್ಷ ಶ್ರೀ ವಿಶಾಲ್ ಸಿಂಗ್ ಅವರು ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರು ಸೂಚಿಸಿದ ಗುರಿಗಳನ್ನು ಪೂರೈಸುವುದಾಗಿ ಭರವಸೆ ನೀಡಿದರು. ನಿರ್ದೇಶಕರ ಮಂಡಳಿಯ ಸಭೆಯಲ್ಲಿ ಸಹಕಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಜ್ಞಾನೇಶ್ ಕುಮಾರ್ ಮತ್ತು ಎನ್ಸಿಸಿಎಫ್ ನ ವ್ಯವಸ್ಥಾಪಕ ನಿರ್ದೇಶಕರಾದ  ಅನಿಸ್ ಜೋಸೆಫ್ ಚಂದ್ರ ಅವರು ಉಪಸ್ಥಿತರಿದ್ದರು.

*****


(Release ID: 1969389) Visitor Counter : 111