ಸಂಪುಟ

ಡಿಜಿಟಲ್ ಪರಿವರ್ತನೆಗಾಗಿ ಜನಸಂಖ್ಯಾ ಪ್ರಮಾಣದಲ್ಲಿ ಅಳವಡಿಸಲಾಗಿರುವ ಯಶಸ್ವಿ ಡಿಜಿಟಲ್ ಪರಿಹಾರಗಳನ್ನು ಹಂಚಿಕೊಳ್ಳುವ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ಭಾರತ ಮತ್ತು ಪಪುವಾ ನ್ಯೂಗಿನಿಯಾ ನಡುವಿನ ತಿಳುವಳಿಕೆ ಒಪ್ಪಂದಕ್ಕೆ ಕೇಂದ್ರ ಸಚಿವ ಸಂಪುಟದ ಅನುಮೋದನೆ

Posted On: 11 OCT 2023 3:20PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು, ಭಾರತ ದೇಶದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ಪಾಪುವಾ ನ್ಯೂಗಿನಿಯಾ ದೇಶದ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಸಚಿವಾಲಯದ ನಡುವೆ 28 ಜುಲೈ, 2023 ರಂದು ಡಿಜಿಟಲ್ ಪರಿವರ್ತನೆಗಾಗಿ ಜನಸಂಖ್ಯಾ ಪ್ರಮಾಣದಲ್ಲಿ ಅಳವಡಿಸಲಾಗಿರುವ ಯಶಸ್ವಿ ಡಿಜಿಟಲ್ ಪರಿಹಾರಗಳನ್ನು ಹಂಚಿಕೊಳ್ಳುವ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ಸಹಿ ಮಾಡಿದ ತಿಳುವಳಿಕೆ ಒಪ್ಪಂದಕ್ಕೆ ಇಂದು ತನ್ನ ಅನುಮೋದನೆ ನೀಡಿದೆ.   

ವಿವರಗಳು:

ಎರಡೂ ದೇಶದ ಡಿಜಿಟಲ್ ಪರಿವರ್ತನಾ ಉಪಕ್ರಮಗಳ ಅನುಷ್ಠಾನದಲ್ಲಿ ನಿಕಟ ಸಹಕಾರ ಮತ್ತು ಅನುಭವಗಳ ವಿನಿಮಯ ಮತ್ತು ಡಿಜಿಟಲ್ ತಂತ್ರಜ್ಞಾನ ಆಧಾರಿತ ಪರಿಹಾರಗಳನ್ನು (ಅಂದರೆ ಇಂಡಿಯಾ ಸ್ಟಾಕ್) ಉತ್ತೇಜಿಸಲು   ಉದ್ದೇಶಿಸಿದೆ.

ತಿಳುವಳಿಕೆ ಒಪ್ಪಂದದ ಅವದಿಯು ಎರಡೂ ದೇಶಗಳು ಸಹಿ ಹಾಕಿದ ದಿನಾಂಕದಿಂದ ಜಾರಿಗೆ ಬರುತ್ತದೆ ಮತ್ತು 3 ವರ್ಷಗಳ ಅವಧಿಗೆ ಜಾರಿಯಲ್ಲಿರುತ್ತದೆ.

ಫಲಿತಾಂಶ:

ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (ಡಿಪಿಐ) ಕ್ಷೇತ್ರದಲ್ಲಿ ಜಿ2ಜಿ ಮತ್ತು ಬಿ2ಬಿ ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿಸಲಾಗುವುದು.

ತಿಳುವಳಿಕೆ ಒಪ್ಪಂದವು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳಿಗೆ ಕಾರಣವಾಗುವ ಸುಧಾರಿತ ಸಹಯೋಗವನ್ನು ಕಲ್ಪಿಸುತ್ತದೆ.

ಹಿನ್ನೆಲೆ:

ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ಐಸಿಟಿ) ಕ್ಷೇತ್ರದಲ್ಲಿ   ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಸಹಕಾರವನ್ನು ಉತ್ತೇಜಿಸಲು  ಸಚಿವಾಲಯವು ಹಲವಾರು ದೇಶಗಳು ಮತ್ತು ಬಹುಪಕ್ಷೀಯ ಏಜೆನ್ಸಿಗಳೊಂದಿಗೆ ಸಹಯೋಗವನ್ನು ಹೊಂದಿದೆ. ಅವಧಿಯಲ್ಲಿ, ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯವು ಐಸಿಟಿ ಕ್ಷೇತ್ರದಲ್ಲಿ   ಸಹಕಾರ ಮತ್ತು ಮಾಹಿತಿಯ ವಿನಿಮಯವನ್ನು ಉತ್ತೇಜಿಸಲು ವಿವಿಧ ದೇಶಗಳ ಅದರ ಪ್ರತಿರೂಪ ಸಂಸ್ಥೆಗಳು/ಏಜೆನ್ಸಿಗಳೊಂದಿಗೆ ಎಂಒಉ ಗಳು/ಎಂಒಸಿಗಳು/ಒಪ್ಪಂದಗಳನ್ನು ಮಾಡಿಕೊಂಡಿದೆ. ಇದು ಡಿಜಿಟಲ್ ಇಂಡಿಯಾ, ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ ಮುಂತಾದ ಭಾರತ ಸರ್ಕಾರವು ದೇಶವನ್ನು ಡಿಜಿಟಲ್ ಸಶಕ್ತ ಸಮಾಜ ಮತ್ತು ಜ್ಞಾನದ ಆರ್ಥಿಕತೆಯಾಗಿ ಪರಿವರ್ತಿಸಲು ಕೈಗೊಂಡಿರುವ ವಿವಿಧ ಉಪಕ್ರಮಗಳಿಗೆ ಅನುಗುಣವಾಗಿದೆ. ಬದಲಾಗುತ್ತಿರುವ ಈ ವ್ಯವಸ್ಥೆಯ ಮಾದರಿಯಲ್ಲಿ, ಪರಸ್ಪರ ಸಹಕಾರವನ್ನು ಹೆಚ್ಚಿಸುವ ಉದ್ದೇಶದಿಂದ ವ್ಯಾಪಾರ ಅವಕಾಶಗಳನ್ನು ಅನ್ವೇಷಿಸುವ, ಉತ್ತಮ ಅಭ್ಯಾಸಗಳ ಹಂಚಿಕೆ ಮತ್ತು ಡಿಜಿಟಲ್ ವಲಯದಲ್ಲಿ ಹೂಡಿಕೆಗಳನ್ನು ಆಕರ್ಷಿಸುವ ಸಧ್ಯದ ಅವಶ್ಯಕತೆಯಿದೆ.

ಕಳೆದ ಕೆಲವು ವರ್ಷಗಳಿಂದ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (ಡಿಪಿಐ) ಅನುಷ್ಠಾನದಲ್ಲಿ ಭಾರತವು ತನ್ನ ಮುಂದಾಳತ್ವವನ್ನು ಪ್ರದರ್ಶಿಸಿದೆ ಮತ್ತು ಕೋವಿಡ್  ಸಾಂಕ್ರಾಮಿಕ ಸಮಯದಲ್ಲಿಯೂ ಸಾರ್ವಜನಿಕರಿಗೆ ಸೇವೆಗಳನ್ನು ಯಶಸ್ವಿಯಾಗಿ ತಲುಪಿಸಿದೆ. ಇದರ ಪರಿಣಾಮವಾಗಿ, ಅನೇಕ ದೇಶಗಳು ಭಾರತದ ಅನುಭವಗಳಿಂದ ಕಲಿಯಲು ಮತ್ತು ಭಾರತದೊಂದಿಗೆ  ತಿಳುವಳಿಕೆ ಒಪ್ಪಂದಗಳನ್ನು ಹೊಂದಲು ಆಸಕ್ತಿಯನ್ನು ತೋರಿಸಿವೆ.

ಇಂಡಿಯಾ ಸ್ಟಾಕ್ ಸೊಲ್ಯೂಷನ್ ಸಂಸ್ಥೆಯು ಸಾರ್ವಜನಿಕ ಸೇವೆಗಳ ಸುಗಮಲಭ್ಯತೆ  ಮತ್ತು ವಿತರಣೆಯನ್ನು ಒದಗಿಸಲು ಜನಸಂಖ್ಯೆಯ ಪ್ರಮಾಣದಲ್ಲಿ ಭಾರತವು ಅಭಿವೃದ್ಧಿಪಡಿಸಿದ ಮತ್ತು ಜಾರಿಗೊಳಿಸಿದ ಡಿಪಿಐ ಗಳಾಗಿವೆ. ಇದು ಸಂಪರ್ಕವನ್ನು ಹೆಚ್ಚಿಸಲು, ಡಿಜಿಟಲ್ ಸೇರ್ಪಡೆಯನ್ನು ಉತ್ತೇಜಿಸಲು ಮತ್ತು ಸಾರ್ವಜನಿಕ ಸೇವೆಗಳಿಗೆ ತಡೆರಹಿತ ಲಭ್ಯತೆಯನ್ನು ಸಕ್ರಿಯಗೊಳಿಸುವ ಗುರಿಯನ್ನು ಹೊಂದಿದೆ. ಇವುಗಳನ್ನು ಮುಕ್ತ ತಂತ್ರಜ್ಞಾನಗಳ ಮೇಲೆ ನಿರ್ಮಿಸಲಾಗಿದೆ, ಪರಸ್ಪರ ಕಾರ್ಯಸಾಧ್ಯವಾಗಿದೆ ಮತ್ತು ನವೀನ ಮತ್ತು ಎಲ್ಲವನ್ನೊಳಗೊಂಡ ಪರಿಹಾರಗಳನ್ನು ಉತ್ತೇಜಿಸುವ ಉದ್ಯಮ ಮತ್ತು ಸಮುದಾಯದ ಭಾಗವಹಿಸುವಿಕೆಯನ್ನು ಬಳಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ಜಾಗತಿಕ ಸಹಕಾರಕ್ಕೆ ಅವಕಾಶ ನೀಡಲು ಮೂಲಭೂತ ಕಾರ್ಯಚಟುವಟಿಕೆಯು ಒಂದೇ ರೀತಿ ಇದ್ದರೂ ಪ್ರತಿ ದೇಶವು ಡಿಪಿಐ ಅನ್ನು ನಿರ್ಮಿಸುವಲ್ಲಿ ವಿಶಿಷ್ಟವಾದ ಅಗತ್ಯತೆಗಳು ಮತ್ತು ಸವಾಲುಗಳನ್ನು ಹೊಂದಿದೆ.  


****



(Release ID: 1966619) Visitor Counter : 74