ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav

​​​​​​​ಡಿಜಿಟಲ್ ಇಂಡಿಯಾ ಕಾರ್ಯಕ್ರಮದ ಅಡಿ, ಆಡಳಿತ ಸಾಮರ್ಥ್ಯ ನಿರ್ಮಾಣ ಕಾರ್ಯಾಗಾರಗಳನ್ನು ಆರಂಭಿಸಿದ ರಾಷ್ಟ್ರೀಯ ವಿದ್ಯುನ್ಮಾನ-ಆಡಳಿತ

Posted On: 10 OCT 2023 11:02AM by PIB Bengaluru

ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ರಾಷ್ಟ್ರೀಯ ವಿದ್ಯುನ್ಮಾನ-ಆಡಳಿತ ವಿಭಾಗ(ಎನ್ಇಜಿಡಿ)ವು, ತನ್ನ ಜ್ಞಾನ ಪಾಲುದಾರರ ಸಹಭಾಗಿತ್ವದಲ್ಲಿ ಸಾಮರ್ಥ್ಯ ನಿರ್ಮಾಣ ಕಾರ್ಯಕ್ರಮದ ಅಡಿ, ಆಡಳಿತ ಸಾಮರ್ಥ್ಯ ನಿರ್ಮಾಣದ ಕಾರ್ಯಾಗಾರಗಳನ್ನು ಆರಂಭಿಸಿದೆ. ಉದಯೋನ್ಮುಖ ತಂತ್ರಜ್ಞಾನಗಳ ಸಾಮರ್ಥ್ಯವನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳುವಂತೆ ಸಿದ್ಧಪಡಿಸಿ ಸೇವಾ ವಿತರಣೆಯನ್ನು ಸುಧಾರಿಸುವುದು ಮತ್ತು ಹೊಸ ಡಿಜಿಟಲ್ ತಂತ್ರಜ್ಞಾನಗಳಿಗೆ ನೀತಿಗಳು ಮತ್ತು ಕಾರ್ಯತಂತ್ರಗಳನ್ನು ಸರಿ ಹೊಂದಿಸುವುದು ಈ ಕಾರ್ಯಾಗಾರಗಳ ಗುರಿ ಮತ್ತು ಉದ್ದೇಶವಾಗಿದೆ.
ಮಹಾರಾಷ್ಟ್ರದಲ್ಲಿ 2023 ಅಕ್ಟೋಬರ್ 9ರಿಂದ 12ರ ವರೆಗೆ ಮೊದಲ ಕಾರ್ಯಾಗಾರ ನಡೆಸಲಾಗುತ್ತಿದೆ. ಮಹಾರಾಷ್ಟ್ರದ ವಿವಿಧ ಇಲಾಖೆಗಳ 28ಕ್ಕೂ ಹೆಚ್ಚು ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ರಾಜ್ಯದಲ್ಲಿ ಉದಯೋನ್ಮುಖ ತಂತ್ರಜ್ಞಾನದ ಉಪಕ್ರಮಗಳ ಅಳವಡಿಕೆ ಮತ್ತು ಅನುಷ್ಠಾನದಲ್ಲಿ ನಿರಂತರತೆ ಕಾಯ್ದುಕೊಳ್ಳಲು ನೀತಿ ರೂಪಿಸುವ ಸಾರ್ವಜನಿಕ ಅಧಿಕಾರಿಗಳ ಅಡಿ, ಕೆಲಸ ಮಾಡುವ ತಂಡವನ್ನು ಪರಿಚಯಿಸಲು 4 ದಿನಗಳ ಕಾಲ ತರಬೇತಿ ನೀಡಲಾಗುತ್ತದೆ.

ಕಾರ್ಯಾಗಾರವನ್ನು ಮಾಹಿತಿ ತಂತ್ರಜ್ಞಾನ ಇಲಾಖೆಯ ನಿರ್ದೇಶಕಿ ಶ್ರೀಮತಿ ನಿಮಾ ಅರೋರಾ, ರಾಷ್ಟ್ರೀಯ ವಿದ್ಯುನ್ಮಾನ-ಆಡಳಿತ ವಿಭಾಗ(ಎನ್ಇಜಿಡಿ) ಮತ್ತು ವಾಧ್ವಾನಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ & ಪಾಲಿಸಿ (ಡಬ್ಲ್ಯುಐಟಿಪಿ) ಯ ಹಿರಿಯ ಅಧಿಕಾರಿಗಳು ಉದ್ಘಾಟಿಸಿದರು.
ಉದ್ಘಾಟನೆ ಕಾರ್ಯಕ್ರಮದಲ್ಲಿ ಸರಣಿ ಕಲಾಪಗಳನ್ನು ಪ್ರಾರಂಭಿಸಲಾಯಿತು. ಈ ಕಲಾಪಗಳು ಹಿರಿಯ ಸರ್ಕಾರಿ ಅಧಿಕಾರಿಗಳಿಗೆ, ತಮ್ಮ ಇಲಾಖೆಗಳ ಅಗತ್ಯತೆಗಳಿಗೆ ಸರಿಯಾದ ಪರಿಹಾರ ಕಾರ್ಯಗತಗೊಳಿಸಲು ಈ ಉದಯೋನ್ಮುಖ ತಂತ್ರಜ್ಞಾನಗಳು ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ನಿರ್ಧರಿಸಲು ಸಹಾಯ ಮಾಡಲಿವೆ.

ಈ ಕಾರ್ಯಾಗಾರವು ನಿಜ ಜೀವನದಲ್ಲಿ ಸಂಭವಿಸುವ ಪ್ರಕರಣಗಳ ಅಧ್ಯಯನ, ಸಾಧನಗಳ(ಟೂಲ್ಸ್) ಮೇಲಿನ ಪ್ರಾತ್ಯಕ್ಷಿಕೆಗಳು ಮತ್ತು ಪರಿಕಲ್ಪನೆಗಳು, ಪ್ರಯೋಗಗಳು ಅಥವಾ ಯೋಜನೆಗಳ ಪುರಾವೆಯಾಗಿ ಕಲ್ಪನೆಗಳನ್ನು ಪರಿವರ್ತಿಸುವ ಸಾಕ್ಷ್ಯವಾಗಿಸುವ ದೃಷ್ಟಿಯಲ್ಲಿ ಸಂವಾದ ನಡೆಸಲು ಉದ್ಯಮ ವಲಯ ಮತ್ತು ಸರ್ಕಾರದ ವಿಷಯ ತಜ್ಞರನ್ನು ಒಟ್ಟುಗೂಡಿಸುತ್ತದೆ.
2023 ಆಗಸ್ಟ್  ನಲ್ಲಿ ಪ್ರಾರಂಭವಾದ ಈ ಕಾರ್ಯಾಗಾರವು ಸರ್ಕಾರ ಮತ್ತು ಉದ್ಯಮ ಒಕ್ಕೂಟದ ನಡುವಿನ ಪಾಲುದಾರಿಕೆಯೊಂದಿಗೆ ವಿಭಿನ್ನವಾಗಿವೆ. ಇದರಿಂದಾಗಿ ಸರ್ಕಾರವು ಸಾರ್ವಜನಿಕ ಸೇವೆಗಳ ವಿತರಣೆಯನ್ನು ಸುಧಾರಿಸಲು ಉದಯೋನ್ಮುಖ ತಂತ್ರಜ್ಞಾನಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು, ಆಡಳಿತವನ್ನು ಬಲಪಡಿಸಲು ಉತ್ತಮ ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ಇದು ನೆರವಾಗುತ್ತದೆ. ಮುಂಬರುವ ಕಾರ್ಯಾಗಾರಗಳನ್ನು ಕೇರಳ, ಲಡಾಖ್, ತೆಲಂಗಾಣ ಮತ್ತಿತರ ಸ್ಥಳಗಳಲ್ಲಿ ಆಯೋಜಿಸಲು ಯೋಜಿಸಲಾಗಿದೆ.

***


(Release ID: 1966302) Visitor Counter : 91