ಪ್ರಧಾನ ಮಂತ್ರಿಯವರ ಕಛೇರಿ
ಶತಕ ಪದಕಗಳು- ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಸ್ಮರಣೀಯ ಸಾಧನೆ: ಪ್ರಧಾನ ಮಂತ್ರಿಗಳು
Posted On:
07 OCT 2023 8:27AM by PIB Bengaluru
ಏಷ್ಯನ್ ಕ್ರೀಡಾಕೂಟದ ಕ್ರೀಡಾಪಟುಗಳೊಂದಿಗೆ ಅಕ್ಟೋಬರ್ 10ರಂದು ಸಂವಾದ ಆಯೋಜಿಸುವ ಜತೆಗೆ ಅವರೊಂದಿಗೆ ಮಾತುಕತೆ ನಡೆಸಲಿರುವ ಪ್ರಧಾನ ಮಂತ್ರಿಗಳು
ಏಷ್ಯನ್ ಕ್ರೀಡಾಕೂಟದಲ್ಲಿ ನಮ್ಮ ಕ್ರೀಡಾಪಟುಗಳು 100 ಪದಕಗಳನ್ನು ಗೆಲ್ಲುವ ಮೂಲಕ ಹೊಸ ಮೈಲುಗಲ್ಲು ಮೂಡಿಸಿರುವ ಸಾಧನೆಯಿಂದ ಇಡೀ ಭಾರತವು ರೋಮಾಂಚನಗೊಂಡಿದೆ ಎಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಪ್ರಧಾನ ಮಂತ್ರಿಗಳು ಅಕ್ಟೋಬರ್ 10ರಂದು ಕ್ರೀಡಾಪಟುಗಳಿಗೆ ಸಂವಾದ ಆಯೋಜಿಸುವ ಜತೆಗೆ ತಾವು ಮಾತುಕತೆ ನಡೆಸಲಿದ್ದಾರೆ.
ಈ ಸಂಬಂಧ ಪ್ರಧಾನ ಮಂತ್ರಿಗಳು ʼಎಕ್ಸ್ʼ ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿದ್ದಾರೆ. "ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಅವಿಸ್ಮರಣೀಯ ಸಾಧನೆ! 100 ಪದಕಗಳನ್ನು ಗೆಲ್ಲುವ ಮೂಲಕ ಮಹತ್ವದ ಸಾಧನೆ ಮೈಲುಗಲ್ಲನ್ನು ಸೃಷ್ಟಿಸಿರುವುದು ದೇಶದ ಜನರನ್ನು ರೋಮಾಂಚನಗೊಳಿಸಿದೆ. ಭಾರತವೂ ಐತಿಹಾಸಿಕ ಸಾಧನೆ ಮಾಡಲು ಕಾರಣರಾದ ನಮ್ಮ ಕ್ರೀಡಾಪಟುಗಳಿಗೆ ನನ್ನ ಹೃದಯಪೂರ್ವಕ ಅಭಿನಂದನೆ ಸಲ್ಲಿಸಬಯಸುತ್ತೇನೆ. ಪ್ರತಿಯೊಬ್ಬರ ಅಸಾಧಾರಣ ಪ್ರದರ್ಶನವು ಭಾರತ ಹೊಸ ಇತಿಹಾಸ ಸೃಷ್ಟಿಸಿದ್ದು, ಹೆಮ್ಮೆಯ ಭಾವನೆಯನ್ನು ನಮ್ಮೆಲ್ಲರ ಹೃದಯದಲ್ಲಿ ಮೂಡಿಸಿದೆ. ಏಷ್ಯನ್ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದವರೊಂದಿಗೆ ಅಕ್ಟೋಬರ್ 10ರಂದು ಸಂವಾದ ಆಯೋಜಿಸಿ ಮಾತುಕತೆ ನಡೆಸಲು ಉತ್ಸುಕನಾಗಿದ್ದೇನೆ,ʼʼ ಎಂದು ಹೇಳಿದ್ದಾರೆ.
***
(Release ID: 1965470)
Visitor Counter : 121
Read this release in:
English
,
Marathi
,
Punjabi
,
Gujarati
,
Tamil
,
Malayalam
,
Assamese
,
Odia
,
Urdu
,
Hindi
,
Bengali
,
Manipuri
,
Telugu