ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

​​​​​​​ಮುಂಬೈನ ಗೋರೆಗಾಂವ್ ‌ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಆದ ಜೀವಹಾನಿಯ ಕುರಿತು ಸಂತಾಪ ಸೂಚಿಸಿದ ಪ್ರಧಾನಮಂತ್ರಿಯವರು


PMNRF ನಿಂದ ಅನುಕಂಪದ ಆಧಾರದ ಮೇಲೆ ನೆರವನ್ನು ಘೋಷಿಸಿದ್ದಾರೆ 

ಪ್ರಕಟಣಾ ದಿನಾಂಕ: 06 OCT 2023 12:50PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಮುಂಬೈನ ಗೋರೆಗಾಂವ್ ‌ನಲ್ಲಿ ಸಂಭವಿಸಿದ ಅಗ್ನಿ ದುರಂತಕ್ಕೆ ಬಲಿಯಾದವರ ಬಗ್ಗೆ ಸಂತಾಪ ಸೂಚಿಸಿದ್ದಾರೆ. ಪ್ರಧಾನಮಂತ್ರಿಯವರು ಅನುಕಂಪದ ಆಧಾರದ ಮೇಲೆ PMNRF ನಿಂದ. ಮೃತರ ಕುಟುಂಬಕ್ಕೆ 2 ಲಕ್ಷ ರೂ.ಹಾಗೂ ಗಾಯಗೊಂಡವರಿಗೆ 50,000 ರೂ ಸಹಾಯ ಧನವನ್ನು ಘೋಷಿಸಿದ್ದಾರೆ.

ಪ್ರಧಾನಮಂತ್ರಿ ಕಾರ್ಯಾಲಯ ಹೀಗೆ ಟ್ವೀಟ್ ಮಾಡಿದೆ;

“ಮುಂಬೈನ ಗೋರೆಗಾಂವ್ ‌ನಲ್ಲಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ ಪ್ರಾಣಹಾನಿಯಾದುದು ಅತೀವ ನೋವು ಉಂಟು ಮಾಡಿದೆ. ಭಗವಂತ ಮೃತರ ಕುಟುಂಬಗಳಿಗೆ ಈ  ನೋವನ್ನು ಭರಿಸುವ ಶಕ್ತಿ ನೀಡಲಿ. ಗಾಯಗೊಂಡವರು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ಸಂತ್ರಸ್ತರಿಗೆ ಅಧಿಕಾರಿಗಳು ಎಲ್ಲ ರೀತಿಯ ನೆರವು ನೀಡುತ್ತಿದ್ದಾರೆ.

ಅನುಕಂಪದ ಆಧಾರದ ಮೇಲೆ ಪಿ ಎಂ ಎನ್ ‌ಆರ್ ‌ಎಫ್ ‌ನಿಂದ ರೂ. 2 ಲಕ್ಷ ರೂ.ಗಳನ್ನು ಪ್ರತಿ ಮೃತರ ಬಂಧುಗಳಿಗೆ ನೀಡಲಾಗುತ್ತದೆ. ಗಾಯಾಳುಗಳಿಗೆ ರೂ. 50,000 ನೀಡಲಾಗುವುದು 

 

*****


(ಪ್ರಕಟಣೆ ಐ.ಡಿ.: 1965029) ವಿಸಿಟರ್ ಕೌಂಟರ್ : 147
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Marathi , Bengali , Manipuri , Punjabi , Gujarati , Odia , Tamil , Telugu , Malayalam