ಸಂಪುಟ ಕಾರ್ಯಾಲಯ
ಸಿಕ್ಕಿಂನ ಪರಿಸ್ಥಿತಿಯನ್ನು ಪರಿಶೀಲಿಸಿದ ರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣಾ ಸಮಿತಿ (ಎನ್ ಸಿಎಂಸಿ)
Posted On:
04 OCT 2023 7:52PM by PIB Bengaluru
ಸಂಪುಟ ಕಾರ್ಯದರ್ಶಿ ಶ್ರೀ ರಾಜೀವ್ ಗೌಬಾ ಅವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣಾ ಸಮಿತಿ (ಎನ್ ಸಿಎಂಸಿ) ಇಂದು ಸಭೆ ಸೇರಿ ಸಿಕ್ಕಿಂನ ಪರಿಸ್ಥಿತಿಯನ್ನು ಪರಿಶೀಲಿಸಿತು.
ಸಿಕ್ಕಿಂನ ಮುಖ್ಯ ಕಾರ್ಯದರ್ಶಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಪಾಲ್ಗೊಂಡು ರಾಜ್ಯದ ಇತ್ತೀಚಿನ ಪರಿಸ್ಥಿತಿಯ ಬಗ್ಗೆ ಸಮಿತಿಗೆ ಮಾಹಿತಿ ನೀಡಿದರು. ಪರಿಹಾರ ಮತ್ತು ರಕ್ಷಣಾ ಕ್ರಮಗಳನ್ನು ಕೈಗೊಳ್ಳುವಲ್ಲಿ ರಾಜ್ಯ ಸರ್ಕಾರದ ಪ್ರಯತ್ನಗಳ ಬಗ್ಗೆ ಅವರು ಸಮಿತಿಗೆ ವಿವರಿಸಿದರು. ಕೇಂದ್ರ ಸರ್ಕಾರವು ಉನ್ನತ ಮಟ್ಟದಲ್ಲಿ 24×7 ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದೆ ಎಂದು ಗೃಹ ಕಾರ್ಯದರ್ಶಿ ಸಮಿತಿಗೆ ಮಾಹಿತಿ ನೀಡಿದರು. ಗೃಹ ಸಚಿವಾಲಯದ (ಎಂಎಚ್ಎ) ಎರಡೂ ನಿಯಂತ್ರಣ ಕೊಠಡಿಗಳು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿವೆ ಮತ್ತು ಸಾಧ್ಯವಿರುವ ಎಲ್ಲ ಸಹಾಯವನ್ನು ವಿಸ್ತರಿಸಲಾಗುತ್ತಿದೆ.
ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್ ಡಿಆರ್ ಎಫ್) ಈಗಾಗಲೇ ಮೂರು ತಂಡಗಳನ್ನು ನಿಯೋಜಿಸಿದೆ ಮತ್ತು ಗುವಾಹಟಿ ಮತ್ತು ಪಾಟ್ನಾದಲ್ಲಿ ಹೆಚ್ಚುವರಿ ತಂಡಗಳು ಸನ್ನದ್ಧವಾಗಿವೆ. ರಕ್ಷಣಾ ಮತ್ತು ಪುನಃಸ್ಥಾಪನೆ ಪ್ರಯತ್ನಗಳಲ್ಲಿ ರಾಜ್ಯಕ್ಕೆ ಸಹಾಯ ಮಾಡಲು ಸೈನ್ಯ ಮತ್ತು ವಾಯುಪಡೆಯ ಸಾಕಷ್ಟು ಸಂಖ್ಯೆಯ ತಂಡಗಳು ಮತ್ತು ಸ್ವತ್ತುಗಳನ್ನು ನಿಯೋಜಿಸಲಾಗುತ್ತಿದೆ.
ಕೇಂದ್ರ ಏಜೆನ್ಸಿಗಳು ಮತ್ತು ಸಿಕ್ಕಿಂ ಸರ್ಕಾರದ ಪರಿಹಾರ ಮತ್ತು ರಕ್ಷಣಾ ಕ್ರಮಗಳನ್ನು ಪರಿಶೀಲಿಸಿದ ಸಂಪುಟ ಕಾರ್ಯದರ್ಶಿ ಶ್ರೀ ರಾಜೀವ್ ಗೌಬಾ ಅವರು, ಚುಂಗ್ಥಾಂಗ್ ಅಣೆಕಟ್ಟಿನ ಸುರಂಗದಲ್ಲಿ ಸಿಲುಕಿರುವ ಜನರು ಮತ್ತು ಪ್ರವಾಸಿಗರನ್ನು ಆದ್ಯತೆಯ ಆಧಾರದ ಮೇಲೆ ಸ್ಥಳಾಂತರಿಸುವ ಕಾರ್ಯವನ್ನು ಆದ್ಯತೆಯ ಆಧಾರದ ಮೇಲೆ ಕೈಗೊಳ್ಳಬಹುದು ಎಂದು ಒತ್ತಿ ಹೇಳಿದರು. ಎನ್ ಡಿ ಆರ್ ಎಫ್ ನ ಹೆಚ್ಚುವರಿ ತಂಡಗಳನ್ನು ನಿಯೋಜಿಸಬೇಕು ಮತ್ತು ರಸ್ತೆ, ಟೆಲಿಕಾಂ ಮತ್ತು ವಿದ್ಯುತ್ ಸಂಪರ್ಕವನ್ನು ಸಾಧ್ಯವಾದಷ್ಟು ಕಡಿಮೆ ಸಮಯದಲ್ಲಿ ಪುನಃಸ್ಥಾಪಿಸಬೇಕು ಎಂದು ಅವರು ಸೂಚಿಸಿದರು.
ಎಲ್ಲಾ ಕೇಂದ್ರ ಏಜೆನ್ಸಿಗಳು ಸಿದ್ಧವಾಗಿವೆ ಮತ್ತು ಸಹಾಯಕ್ಕಾಗಿ ಲಭ್ಯವಿರುತ್ತವೆ ಎಂದು ಸಂಪುಟ ಕಾರ್ಯದರ್ಶಿ ಸಿಕ್ಕಿಂ ಸರ್ಕಾರಕ್ಕೆ ಭರವಸೆ ನೀಡಿದರು.
ಸಭೆಯಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ, ಸಿಕ್ಕಿಂ ಮುಖ್ಯ ಕಾರ್ಯದರ್ಶಿ, ಇಂಧನ ಸಚಿವಾಲಯದ ಕಾರ್ಯದರ್ಶಿ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿ, ಮಿಲಿಟರಿ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ, ದೂರಸಂಪರ್ಕ ಸಚಿವಾಲಯದ ಕಾರ್ಯದರ್ಶಿ, ಜಲಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿ, ಆರ್ ಡಿ ಮತ್ತು ಜಿಆರ್, ಎನ್ ಡಿಎಂಎ ಸದಸ್ಯ ಕಾರ್ಯದರ್ಶಿ, ಸಿಐಎಸ್ ಸಿ ಐಡಿಎಸ್, ಡಿಜಿ, ಐಎಂಡಿ, ಡಿಜಿ, ಎನ್ ಡಿಆರ್ ಎಫ್ ಮತ್ತು ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
*****
(Release ID: 1964574)
Visitor Counter : 131