ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)
ಬಿಹಾರ ಮತ್ತು ಜಾರ್ಖಂಡ್ ನ ಉತ್ತರ ಕೊಯೆಲ್ ಜಲಾಶಯ ಯೋಜನೆಯ ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಪರಿಷ್ಕೃತ ವೆಚ್ಚಕ್ಕೆ ಸಂಪುಟ ಅನುಮೋದನೆ ನೀಡಿದೆ
Posted On:
04 OCT 2023 4:01PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ಜಲಶಕ್ತಿ ಸಚಿವಾಲಯದ ಜಲಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಇಲಾಖೆ ಸಲ್ಲಿಸಿದ್ದ ಉತ್ತರ ಕೊಯೆಲ್ ಜಲಾಶಯದ ಯೋಜನೆಯ ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸುವ 2,430.76 ಕೋಟಿ ರೂ. (ಕೇಂದ್ರ ಪಾಲು: ರೂ.1,836.41 ಕೋಟಿ) ಪರಿಷ್ಕೃತ ವೆಚ್ಚದ ಪ್ರಸ್ತಾವನೆಗೆ ಅನುಮೋದನೆಯನ್ನು ನೀಡಿದೆ. ಈ ಮೊದಲು ಆಗಸ್ಟ್, 2017 ರಲ್ಲಿ ಅನುಮೋದಿಸಲಾಗಿದ್ದ ಬಾಕಿ ವೆಚ್ಚ ರೂ.1,622.27 ಕೋಟಿಗಳಾಗಿತ್ತು (ಕೇಂದ್ರ ಪಾಲು: ರೂ.1,378.60 ಕೋಟಿ).
ಬಾಕಿ ಕಾಮಗಾರಿಗಳು ಪೂರ್ಣಗೊಂಡ ನಂತರ, ಜಾರ್ಖಂಡ್ ಮತ್ತು ಬಿಹಾರದ ನಾಲ್ಕು ಬರಪೀಡಿತ ಜಿಲ್ಲೆಗಳಲ್ಲಿ 42,301 ಹೆಕ್ಟೇರ್ ಗೆ ಹೆಚ್ಚುವರಿಯಾಗಿ ವಾರ್ಷಿಕ ನೀರಾವರಿ ಸೌಲಭ್ಯವನ್ನು ಈ ಯೋಜನೆಯು ಒದಗಿಸುತ್ತದೆ.
ಉತ್ತರ ಕೊಯೆಲ್ ಜಲಾಶಯ ಯೋಜನೆಯು ಪ್ರಮುಖ ಅಂತರ-ರಾಜ್ಯ ನೀರಾವರಿ ಯೋಜನೆಯಾಗಿದ್ದು, ಬಿಹಾರ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ನೀರಾವರಿ ಪ್ರದೇಶವನ್ನು ಹೊಂದಿದೆ. ಈ ಯೋಜನೆಯು ಕುಟ್ಕು ಗ್ರಾಮದ (ಲತೆಹರ್ ಜಿಲ್ಲೆ, ಜಾರ್ಖಂಡ್) ಬಳಿ ಉತ್ತರ ಕೊಯೆಲ್ ನದಿಗೆ ಅಣೆಕಟ್ಟನ್ನು ಒಳಗೊಂಡಿದೆ. ಅಣೆಕಟ್ಟೆಗೆ ಕೆಳಗೆ 96 ಕಿಮೀ ದೂರದಲ್ಲಿರುವ ಬ್ಯಾರೇಜ್ (ಮೊಹಮ್ಮದ್‌ಗಂಜ್, ಪಲಾಮು ಜಿಲ್ಲೆ, ಜಾರ್ಖಂಡ್), ಬಲದಂಡೆ ಮುಖ್ಯ ಕಾಲುವೆ (ಆರ್ ಎಂ ಸಿ) ಮತ್ತು ಎಡದಂಡೆ ಮುಖ್ಯ ಕಾಲುವೆ (ಎಲ್ ಎಂ ಸಿ) ಗಳು ಬ್ಯಾರೇಜ್ ನಿಂದ ಪ್ರಾರಂಭವಾಗುತ್ತವೆ. ಅಣೆಕಟ್ಟುಗಳ ನಿರ್ಮಾಣ ಮತ್ತು ಪೂರಕ ಚಟುವಟಿಕೆಗಳು 1972 ರಲ್ಲಿ ಬಿಹಾರ ಸರ್ಕಾರದ ಸ್ವಂತ ಸಂಪನ್ಮೂಲಗಳಿಂದ ಪ್ರಾರಂಭವಾದವು. 1993ರ ವರೆಗೆ ಕಾಮಗಾರಿ ಮುಂದುವರಿದಿದ್ದು, ಆ ವರ್ಷ ಬಿಹಾರ ಸರ್ಕಾರದ ಅರಣ್ಯ ಇಲಾಖೆಯು ಕಾಮಗಾರಿಯನ್ನು ತಡೆಹಿಡಿಯಿತು. ಅಣೆಕಟ್ಟಿನಲ್ಲಿ ಸಂಗ್ರಹವಾದ ನೀರು ಬೆಟ್ಲಾ ರಾಷ್ಟ್ರೀಯ ಉದ್ಯಾನವನ ಮತ್ತು ಪಲಾಮು ಹುಲಿ ಸಂರಕ್ಷಿತ ಪ್ರದೇಶಕ್ಕೆ ಅಪಾಯವನ್ನುಂಟುಮಾಡುತ್ತದೆ ಎಂಬ ಆತಂಕದಿಂದಾಗಿ ಅಣೆಕಟ್ಟಿನ ಕೆಲಸವು ಸ್ಥಗಿತಗೊಂಡಿತು. ನವೆಂಬರ್ 2000 ರಲ್ಲಿ ಬಿಹಾರದ ವಿಭಜನೆಯ ನಂತರ, ಮುಖ್ಯ ಕೆಲಸಗಳು ಅಂದರೆ ಅಣೆಕಟ್ಟು ಮತ್ತು ಬ್ಯಾರೇಜ್ ಜಾರ್ಖಂಡ್ ಜಾರ್ಖಂಡ್‌ನಲ್ಲಿದೆ. ಹಾಗೆಯೇ, ಬಲದಂಡೆ ಮುಖ್ಯ ಕಾಲುವೆಯ 110.44 ಕಿಮೀ ಪೈಕಿ ಮೊದಲ 31.40 ಕಿಮೀ ಜಾರ್ಖಂಡ್ ನಲ್ಲಿದೆ ಮತ್ತು ಉಳಿದ 79.04 ಕಿಮೀ ಬಿಹಾರದಲ್ಲಿದೆ. 2016 ರಲ್ಲಿ, ಭಾರತ ಸರ್ಕಾರವು ಯೋಜಿತ ಪ್ರಯೋಜನಗಳನ್ನು ಸಾಧಿಸಲು ಯೋಜನೆಯನ್ನು ಕಾರ್ಯಗತಗೊಳಿಸಲು ಉತ್ತರ ಕೋಯೆಲ್ ಜಲಾಶಯದ ಯೋಜನೆಯ ಬಾಕಿ ಕಾಮಗಾರಿ ಪ್ರಮುಖ ಪ್ರದೇಶವನ್ನು ಉಳಿಸಲು ಜಲಾಶಯದ ಮಟ್ಟವನ್ನು ಕಡಿಮೆ ಮಾಡಲು ನಿರ್ಧರಿಸಲಾಯಿತು. ಯೋಜನೆಯ ಬಾಕಿ ಕಾಮಗಾರಿಗಳನ್ನು ರೂ.1622.27 ಕೋಟಿ ಅಂದಾಜು ವೆಚ್ಚದಲ್ಲಿ ಪೂರ್ಣಗೊಳಿಸುವ ಪ್ರಸ್ತಾವನೆಯನ್ನು ಆಗಸ್ಟ್ 2017 ರಲ್ಲಿ ಕೇಂದ್ರ ಸಚಿವ ಸಂಪುಟವು ಅನುಮೋದಿಸಿತು.
ತರುವಾಯ, ಎರಡೂ ರಾಜ್ಯ ಸರ್ಕಾರಗಳ ಕೋರಿಕೆಯ ಮೇರೆಗೆ, ಯೋಜನೆಯಲ್ಲಿ ಇತರ ಕೆಲವು ಅಂಶಗಳನ್ನು ಸೇರಿಸುವುದು ಅಗತ್ಯವೆಂದು ಕಂಡುಬಂದಿದೆ. ಯೋಜಿತ ನೀರಾವರಿ ಸಾಮರ್ಥ್ಯವನ್ನು ಸಾಧಿಸಲು ತಾಂತ್ರಿಕ ಪರಿಗಣನೆಗಳಿಂದ ಆರ್ ಎಂ ಸಿ ಮತ್ತು ಎಲ್ ಎಂ ಸಿ ಯ ಸಂಪೂರ್ಣ ಲೈನಿಂಗ್ ಕಾಮಗಾರಿ ಸಹ ಅಗತ್ಯವೆಂದು ಪರಿಗಣಿಸಲಾಗಿದೆ. ಹೀಗಾಗಿ, ಗಯಾ ವಿತರಣಾ ವ್ಯವಸ್ಥೆ, ಆರ್ ಎಂ ಸಿ ಮತ್ತು ಎಲ್ ಎಂ ಸಿ ಯ ಲೈನಿಂಗ್, ಮಾರ್ಗದ ರಚನೆಗಳ ಮರುರೂಪಿಸುವಿಕೆ, ಕೆಲವು ಹೊಸ ರಚನೆಗಳ ನಿರ್ಮಾಣ ಮತ್ತು ಯೋಜನೆಯಿಂದ ಸಂತ್ರಸ್ತವಾಗುವ ಕುಟುಂಬಗಳ (ಪಿಎಎಫ್‌ಗಳು) ಆರ್ & ಆರ್ ಗಾಗಿ ಒಂದು ಬಾರಿಯ ವಿಶೇಷ ಪ್ಯಾಕೇಜ್ ಅನ್ನು ನವೀಕರಿಸಿದ ವೆಚ್ಚದ ಅಂದಾಜಿನಲ್ಲಿ ಒದಗಿಸಲಾಗಿದೆ. ಅದರಂತೆ, ಯೋಜನೆಯ ಪರಿಷ್ಕೃತ ವೆಚ್ಚದ ಅಂದಾಜನ್ನು ಸಿದ್ಧಪಡಿಸಲಾಗಿದೆ. ಬಾಕಿ ಕಾಮಗಾರಿಗಳ ವೆಚ್ಚ 2430.76 ಕೋಟಿ ರೂ.ಗಳಲ್ಲಿ ಕೇಂದ್ರವು 1836.41 ಕೋಟಿ ರೂ. ನೀಡಲಿದೆ.
****
(Release ID: 1964189)
Visitor Counter : 117
Read this release in:
English
,
Urdu
,
Hindi
,
Marathi
,
Assamese
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam