ಜಲ ಶಕ್ತಿ ಸಚಿವಾಲಯ

“ಸ್ವಚ್ಛತೆಯೇ ಸೇವೆ ಅಭಿಯಾನ”  ಜನಾಂದೋಲನವಾಗಿ ಮಾರ್ಪಾಟು’’


2023ರ ಸೆಪ್ಟಂಬರ್ 15ರಿಂದ 29ರವರೆಗೆ ಪ್ರತಿದಿನ 2.3 ಕೋಟಿ ಜನರು ಪಾಲ್ಗೊಳ್ಳುವುದರೊಂದಿಗೆ ಒಟ್ಟು ದೇಶಾದ್ಯಂತ ಸುಮಾರು 32 ಕೋಟಿ ಜನರು ಭಾಗಿ

15 ಕೋಟಿ ಜನರು ಶ್ರಮದಾನದಲ್ಲಿ ಭಾಗಿ, 3.68 ಲಕ್ಷ ‘ಸ್ಚಚ್ಛ ಭಾರತ’ ಚಟುವಟಿಕೆಗಳಿಗೆ ನೆರವು

ಅಕ್ಟೋಬರ್ 1ರಂದು ‘ಒಂದನೇ ತಾರೀಖು, ಒಂದು ಗಂಟೆ, ಒಂದು ಸಾಥ್’ ನಲ್ಲಿ ಸಮಾಪನ- ಜನರ ನೇತೃತ್ವದಲ್ಲಿ “ಶ್ರಮದಾನದಿಂದ ಸ್ವಚ್ಛತೆ’’ ಗೆ ಪ್ರಧಾನಿ ಕರೆ

Posted On: 29 SEP 2023 12:43PM by PIB Bengaluru

“ತ್ಯಾಜ್ಯ ಮುಕ್ತ ಭಾರತ’’ ಘೋಷಣೆಯಡಿ ಸದ್ಯ ದೇಶಾದ್ಯಂತ ಸ್ವಚ್ಛತೆಯೇ ಸೇವೆ (ಸ್ವಚ್ಛತಾ ಹಿ ಸೇವಾ- ಎಸ್ ಎಚ್ ಎಸ್ ) ಅಭಿಯಾನದಡಿ ಸ್ವಚ್ಛತೆಯ ಪಾಕ್ಷಿಕವನ್ನು ಆಚರಿಸಲಾಗುತ್ತಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಸ್ವಚ್ಛತೆಯ ಕರೆಯಿಂದ ಸ್ಪೂರ್ತಿ ಪಡೆದು, ಸಾಮೂಹಿಕವಾಗಿ ಒಗ್ಗಟ್ಟು ಮತ್ತು ಬದ್ಧತೆಯಿಂದ ಈವರೆಗೆ ಕಳೆದ 14 ದಿನಗಳಲ್ಲಿ ದೇಶವ್ಯಾಪಿ ಸುಮಾರು 32 ಕೋಟಿ ಜನರು ಅಭಿಯಾನದಲ್ಲಿ ಭಾಗವಹಿಸಿದ್ದಾರೆ, ದೇಶಾದ್ಯಂತ ಪ್ರತಿ ದಿನ ಸುಮಾರು 203 ಕೋಟಿ ಜನರು ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ. ಈ 'ಜನ ಆಂದೋಲನ'ವು ಭಾರತದ ಶೇ 75ರಷ್ಟು ಹಳ್ಳಿಗಳನ್ನು ಬಯಲು ಬಹಿರ್ದೆಸೆ ಮುಕ್ತ (ಒಡಿಎಫ್) ಪ್ಲಸ್ ಎಂದು ಘೋಷಿಸುವುದು ಸೇರಿದಂತೆ ರಾಷ್ಟ್ರಕ್ಕೆ ಮಹತ್ವದ ಫಲಿತಾಂಶಗಳನ್ನು ಸಾಧಿಸುತ್ತಿದೆ, ಅಂದರೆ, ಘನ ಅಥವಾ ದ್ರವ ತ್ಯಾಜ್ಯ ನಿರ್ವಹಣೆಗೆ ವ್ಯವಸ್ಥೆ ಮಾಡುವ ಜೊತೆಗೆ ಹಳ್ಳಿಗಳ ಬಯಲು ಬಹಿರ್ದೆಸೆ ಮುಕ್ತ ಸ್ಥಿತಿಯನ್ನು ಉಳಿಸಿಕೊಳ್ಳುತ್ತದೆ. ಇದು ನೈರ್ಮಲ್ಯ ಮತ್ತು ಸ್ವಚ್ಛತೆ ನಿಟ್ಟಿನಲ್ಲಿ ಸಮುದಾಯಗಳು ಮತ್ತು ಸರ್ಕಾರದ ದೃಢ  ಬದ್ಧತೆಯನ್ನು ಎತ್ತಿ ತೋರಿಸುತ್ತದೆ.

ವರ್ಷದ ಅಭಿಯಾನವು ಭಾರಿ ಪ್ರಮಾಣದ ಜನರ ಪಾಲ್ಗೊಳ್ಳುವಿಕೆಗೆ ಸಾಕ್ಷಿಯಾಗುತ್ತಿದೆ, ಈವರೆಗೆ ದೇಶಾದ್ಯಂತ 32 ಕೋಟಿ ಜನರು ಅಭಿಯಾನಕ್ಕೆ ಕೈಜೋಡಿಸಿದ್ದಾರೆ, ಕೇವಲ 14 ದಿನಗಳಲ್ಲಿ, ದಿನಕ್ಕೆ ಸರಾಸರಿ 2.3 ಕೋಟಿ ಜನರು ಭಾಗವಹಿಸುತ್ತಿದ್ದಾರೆ. ಅವರಲ್ಲಿ, ಸುಮಾರು 15 ಕೋಟಿ ನಾಗರಿಕರು ಶ್ರಮದಾನದಲ್ಲಿ ಸಕ್ರಿಯವಾಗಿ ಭಾಗವಹಿಸಿದರು, 3.68 ಲಕ್ಷ ಎಸ್‌ಬಿಎಂ ಚಟುವಟಿಕೆಗಳಿಗೆ ಸ್ವಯಂಪ್ರೇರಿತ ಕಾರ್ಮಿಕರ ಕೊಡುಗೆ ನೀಡಿದ್ದಾರೆ. ಈ ಪ್ರಯತ್ನಗಳಲ್ಲಿ ಸುಮಾರು 5300  ಕಡಲ ತೀರಗಳನ್ನು ಸ್ವಚ್ಛಗೊಳಿಸುವುದು, 4300 ನದಿ ದಂಡೆಗಳು ಮತ್ತು ಜಲಾಭಿಮುಖ ಪ್ರದೇಶಗಳನ್ನು ಪುನರುಜ್ಜೀವನಗೊಳಿಸುವುದಿ, 10.700 ಕ್ಕೂ ಅಧಿಕ ಪಾರಂಪರಿಕ ತ್ಯಾಜ್ಯ ತಾಣಗಳನ್ನು ಮರಳಿ ಪಡೆಯುವುದು, 2400 ಪ್ರವಾಸಿ ಮತ್ತು ಸಾಂಪ್ರದಾಯಿಕ ತಾಣಗಳನ್ನು ಸುಧಾರಿಸುವುದು ಮತ್ತು 93,000 ಸಾರ್ವಜನಿಕ ಸ್ಥಳಗಳನ್ನು ಮರುಸ್ಥಾಪಿಸುವುದು ಸೇರಿವೆ. ಹೆಚ್ಚುವರಿಯಾಗಿ 12,000 ಕ್ಕೂ ಅಧಿಕ ಜಲಮೂಲಗಳನ್ನು ಸ್ವಚ್ಛಗೊಳಿಸಲಾಗಿದೆ. 60, 000 ಕ್ಕೂ ಅಧಿಕ ಸಾಂಸ್ಥಿಕ ಕಟ್ಟಡಗಳನ್ನು ಪುನರುಜ್ಜೀವನಗೊಳಿಸಲಾಗಿದೆ ಮತ್ತು ಸುಮಾರು 47,000 ಸೂಕ್ಷ್ಮ ಕಸದ ಸ್ಥಳಗಳನ್ನು ಸ್ವಚ್ಛಗೊಳಿಸಲಾಗಿದೆ. ಈ ಅಂಕಿಸಂಖ್ಯೆಗಳು ಅಚಲವಾದ ಬದ್ಧತೆ ಮತ್ತು ಕ್ಷಿಪ್ರ ರೂಪಾಂತರವನ್ನು ತರುವ “ಜನಾಂದೋಲನ’ದ ಶಕ್ತಿಯನ್ನು ಪ್ರತಿಬಿಂಬಿಸುತ್ತವೆ.

ವರ್ಷದ ಆಚರಣೆಗಳು ಅಕ್ಟೋಬರ್ 1 ರಂದು ಸಮಾಪನಗೊಳ್ಳಲಿವೆ, ಇಡೀ ಸರ್ಕಾರ ಮತ್ತು ದೇಶದ ನಾಗರಿಕರು 'ಏಕ್ ತಾರೀಖ್ ಏಕ್ ಘಂಟಾ ಏಕ್ ಸಾಥ್' ಭಾಗವಾಗಿ ವಿವಿಧ ಸ್ಥಳಗಳಲ್ಲಿ ಸ್ವಚ್ಛತಾ ಅಭಿಯಾನಗಳನ್ನು ನಡೆಸಲು ಸಹಕರಿಸುತ್ತಾರೆ, ಬೆಳಿಗ್ಗೆ 10 ಗಂಟೆಗೆ ನಾಗರಿಕರ ನೇತೃತ್ವದಲ್ಲಿ 1 ಗಂಟೆ 'ಸ್ವಚ್ಛತಾಗಾಗಿ ಶ್ರಮದಾನ’ ಕ್ಕಾಗಿ ರಾಷ್ಟ್ರೀಯ ಕರೆ ನೀಡಲಾಗಿದೆ.   ಪ್ರಧಾನಮಂತ್ರಿ ಅವರು ನೀಡಿರುವ   ಕರೆಯು ಸಮಾಜದ ಎಲ್ಲಾ ಆಯಾಮಗಳಿಲ್ಲಿಯೂ ಸ್ವಚ್ಛತೆಯ ಮಹತ್ವವನ್ನು ಒತ್ತಿಹೇಳುತ್ತದೆ. ಮನ್ ಕಿ ಬಾತ್‌ನ 105 ನೇ ಸಂಚಿಕೆಯಲ್ಲಿ, ಪ್ರಧಾನಮಂತ್ರಿ ಅವರು ಎಲ್ಲಾ ನಾಗರಿಕರು ಒಟ್ಟಾಗಿ ಬಾಪು ಅವರ ಜಯಂತಿಯ ಮುನ್ನಾದಿನದಂದು 'ಸ್ವಚ್ಛಾಂಜಲಿ'ಯಲ್ಲಿ ಅಕ್ಟೋಬರ್ 1 ರಂದು ಬೆಳಿಗ್ಗೆ 10 ಗಂಟೆಗೆ ಸ್ವಚ್ಛತಾಗಾಗಿ 1 ಗಂಟೆ ಶ್ರಮದಾನದಲ್ಲಿ ಭಾಗಿಯಾಗುವಂತೆ ಮನವಿ ಮಾಡಿದರು,. “ಅಕ್ಟೋಬರ್ 1 ರಂದು ಅಂದರೆ ಭಾನುವಾರ ಬೆಳಿಗ್ಗೆ 10 ಗಂಟೆಗೆ ಸ್ವಚ್ಛತೆಯ ಬಗ್ಗೆ ದೊಡ್ಡ ಕಾರ್ಯಕ್ರಮವನ್ನು ಆಯೋಜಿಸಲಾಗುವುದು. ಸ್ವಚ್ಛತೆಗೆ ಸಂಬಂಧಿಸಿದ ಅಭಿಯಾನದಲ್ಲಿ ನೀವೂ ಸಮಯ ಮೀಸಲಿಟ್ಟು ಸಹಾಯ ಮಾಡಿ. ನಿಮ್ಮ ಬೀದಿಯಲ್ಲಿ ಅಥವಾ ನೆರೆಹೊರೆಯಲ್ಲಿ ಅಥವಾ ಉದ್ಯಾನವನ, ನದಿ, ಸರೋವರ ಅಥವಾ ಇತರ ಯಾವುದೇ ಸಾರ್ವಜನಿಕ ಸ್ಥಳದಲ್ಲಿ ನೀವು ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾಗಬಹುದು’’ ಎಂದು ಪ್ರಧಾನಮಂತ್ರಿ ಅವರು ಹೇಳಿದ್ದರು.

ವರ್ಷದ ಅಭಿಯಾನದ ಪ್ರಮುಖ ಅಂಶವೆಂದರೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಕಲ್ಪನೆಯಂತೆ 'ಸ್ವಚ್ಛ ಭಾರತ'ದ ಸಾಧನೆಗಾಗಿ ಸರ್ಕಾರದ ವಿವಿಧ ಇಲಾಖೆಗಳ ಪ್ರಯತ್ನಗಳಲ್ಲಿ ಏಕತೆಯನ್ನು ಸಂಕೇತಿಸುವ ಮೂವರು ಕೇಂದ್ರ ಸಚಿವರಿಂದ ಎಸ್ಎಚ್ ಎಸ್ ಅಭಿಯಾನದ ಜಂಟಿ ಆರಂಭವಾಗಿದೆ. ಆರಂಭವಾದ ಕೇವಲ ಒಂದು ವಾರದೊಳಗೆ ಕೇಂದ್ರ ಜಲಶಕ್ತಿ ಸಚಿವ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಅವರು ದೇಶಾದ್ಯಂತ ಶೇ.75ರಷ್ಟು ಬಯಲು ಬಹಿರ್ದೆಸೆ ಮುಕ್ತ (ಒಡಿಎಫ್) ಪ್ಲಸ್ ಗ್ರಾಮಗಳ ಸಾಧನೆಯನ್ನು ಘೋಷಿಸಿದ್ದಾರೆ ಎಂಬ ಅಂಶದಿಂದ ಫಲಿತಾಂಶವನ್ನು ಅಳೆಯಬಹುದು.

approved 75% ODF plus villages

‘ಸ್ವಚ್ಛ ಭಾರತ’ವನ್ನು ಖಾತ್ರಿಪಡಿಸಿಕೊಳ್ಳಲು ಹಲವು ಇತರ ಇಲಾಖೆಗಳಿಂದ ಹಲವಾರು ಉಪಕ್ರಮಗಳು ಇರುವುದರಿಂದ, ಸ್ವಚ್ಛ ಭಾರತ ಮಿಷನ್-ಗ್ರಾಮೀಣ ಮತ್ತು ನಗರಗಳ ನಡುವಿನ ಪ್ರಯತ್ನಗಳ ಸಮನ್ವಯದ ಜೊತೆಗೆ ಇಡೀ ಸರ್ಕಾರದ ವಿಧಾನದಿಂದ ಫಲಿತಾಂಶವು ಈ ಬಾರಿ ಸಾಕಷ್ಟು ಸ್ಪಷ್ಟವಾಗಿದೆ. ಪ್ರವಾಸೋದ್ಯಮ ಸಚಿವಾಲಯವು 108 ಆಯ್ದ ಸ್ಥಳಗಳಲ್ಲಿ ಟ್ರಾವೆಲ್ ಫಾರ್ ಲೈಫ್ ಫಾರ್ ಕ್ಲೀನ್ಲಿನೆಸ್ ಅಭಿಯಾನವನ್ನು ಆರಂಭಿಸಿತು. ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ದೇಶಾದ್ಯಂತ ಎಲ್ಲಾ ಚಲನಚಿತ್ರ ಪರದೆಗಳಲ್ಲಿ ಎಸ್ ಎಚ್ ಎಸ್ ವೀಡಿಯೋ ಪ್ರಸಾರ ಮಾಡುವುದನ್ನು ಖಾತ್ರಿಪಡಿಸಿದೆ ಮತ್ತು ದೂರಸಂಪರ್ಕ ಇಲಾಖೆಯು ಎಲ್ಲಾ ಮೊಬೈಲ್‌ ಜಾಲಗಳಲ್ಲಿ ಎಸ್ಎಚ್ಎಸ್ ರಿಂಗ್‌ಟೋನ್ ಅನ್ನು  ಪ್ರಸಾರ ಮಾಡುತ್ತಿದೆ. ನಾಗರಿಕ ವಿಮಾನಯಾನ ಇಲಾಖೆ ಮತ್ತು ರೈಲ್ವೆ ಮಂಡಳಿಯು ಎಲ್ಲಾ ವಿಮಾನ ನಿಲ್ದಾಣಗಳು ಮತ್ತು ರೈಲ್ವೆ ಪ್ರದೇಶಗಳಲ್ಲಿ ಎಸ್ ಎಚ್ ಎಸ್ ಅಭಿಯಾನವನ್ನು ನಡೆಸುತ್ತಿದೆ ಆದರೆ ಎಎಸ್ಐ  ಎಲ್ಲಾ ಪ್ರಮುಖ ಸ್ಮಾರಕಗಳಲ್ಲಿ ಎಸ್‌ ಎಚ್‌ ಎಸ್ ಬ್ರ್ಯಾಂಡಿಂಗ್‌ನೊಂದಿಗೆ  ವಿದ್ಯುತ್ ದೀಪಗಳನ್ನು ಬೆಳಗಿಸುತ್ತಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ದೇಶದ ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ಶಾಲೆಗಳಿಗೆ ನೈರ್ಮಲ್ಯ ಚಟುವಟಿಕೆಗಳನ್ನು ನಡೆಸುತ್ತಿದೆ, ಜತೆಗೆ ಉನ್ನತ ಶಿಕ್ಷಣ ಇಲಾಖೆಯು ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳನ್ನು ಸ್ವಚ್ಛತಾ ಸಂದೇಶವನ್ನು ಹರಡಲು ಪ್ರೋತ್ಸಾಹಿಸುತ್ತಿದೆ. ಪ್ರತಿಯೊಂದು ಇಲಾಖೆಯು ತನ್ನದೇ ಆದ ವಿಶಿಷ್ಟ ರೀತಿಯಲ್ಲಿ ಎಸ್ ಎಚ್ ಎಸ್ ಅಭಿಯಾನವನ್ನು ನಡೆಸುತ್ತಿದೆ ಮತ್ತು ಕೊಡುಗೆ ನೀಡುತ್ತಿವೆ.

ಈ ಅಭಿಯಾನದ ಮತ್ತೊಂದು ವಿಶಿಷ್ಟ ವೈಶಿಷ್ಟ್ಯವೆಂದರೆ, ನೈರ್ಮಲ್ಯ ವೀರರಾದ ಸಫಾಯಿಮಿತ್ರರ ಕಲ್ಯಾಣಕ್ಕಾಗಿಯೂ ಕೆಲಸ ಮಾಡುತ್ತಿದೆ. ಅವರ ಶ್ರೇಯೋಭಿವೃದ್ಧಿಗಾಗಿ ಆರೋಗ್ಯ ತಪಾಸಣೆ ಶಿಬಿರ ಹಾಗೂ ಯೋಗ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಎಸ್‌ಎಚ್‌ಎಸ್  ದೊಡ್ಡ ಮಟ್ಟದಲ್ಲಿ ಯಶಸ್ಸು ಸಾಧಿಸಲು ಸಮುದಾಯದ ಎಲ್ಲಾ ವರ್ಗಗಳು ಸಹ ಮುಂದೆ ಬರುತ್ತಿವೆ. ಮಹಿಳೆಯರು - ಸ್ವಸಹಾಯ ಗುಂಪುಗಳು ಹೆಚ್ಚಿನ ಸಂಖ್ಯೆಯಲ್ಲಿ ಸಜ್ಜುಗೊಂಡಿವೆ, ಅವರಲ್ಲಿ ಹಲವರು ಶ್ರಮದಾನಕ್ಕಾಗಿ ಗ್ರಾಮಗಳನ್ನು ದತ್ತು ತೆಗೆದುಕೊಳ್ಳುತ್ತಿದ್ದಾರೆ. - ಶಾಲಾ-ಕಾಲೇಜುಗಳಲ್ಲಿನ ಯುವಕರು ತಮ್ಮ ನಗರಗಳು, ಪಟ್ಟಣಗಳು ಮತ್ತು ಹಳ್ಳಿಗಳನ್ನು ಸ್ವಚ್ಛಗೊಳಿಸುವಲ್ಲಿ ಹೆಚ್ಚಿನ ಉತ್ಸಾಹವನ್ನು ತೋರಿಸುತ್ತಿದ್ದಾರೆ, ಕಾಲೇಜುಗಳು ಹಳ್ಳಿಗಳನ್ನು ದತ್ತು ತೆಗೆದುಕೊಳ್ಳುತ್ತವೆ. ಹಿರಿಯ ನಾಗರಿಕರು ಕಡಲ ತೀರ, ಪಾರ್ಕ್, ಸಾರ್ವಜನಿಕ ಸ್ಥಳಗಳಲ್ಲಿ ಶ್ರಮದಾನ ಮಾಡಿ ಸ್ವಚ್ಛ ಸಮಾಜಕ್ಕಾಗಿ ತಮ್ಮ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಧಾರ್ಮಿಕ ಸ್ಥಳಗಳಲ್ಲಿ ಧಾರ್ಮಿಕ ಮುಖಂಡರು ಶ್ರಮದಾನ ಮಾಡುತ್ತಿದ್ದಾರೆ. ವಾಣಿಜ್ಯ, ವ್ಯಾಪಾರ ಸಂಸ್ಥೆಗಳು, ರೆಡ್ ಕ್ರಾಸ್, ವಿವಿಧ ವ್ಯಾಪಾರ ಮತ್ತು ಕೃಷಿ ಸಂಸ್ಥೆಗಳಂತಹ ವಿವಿಧ ಸಂಸ್ಥೆಗಳು ಸ್ವಚ್ಛತಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿವೆ.

ಸಾಮೂಹಿಕ ಜನ ಭಾಗಿದಾರಿ ಚಟುವಟಿಕೆಗಳಾದ ಸ್ವಚ್ಛತಾ ಪ್ರತಿಜ್ಞೆ, ಸ್ವಚ್ಛತಾ ಓಟಗಳು ಮತ್ತು ಮಾನವ ಸರಪಳಿಗಳು.  ಕಚೇರಿ ಆವರಣ ಮತ್ತು ಪಕ್ಕದ ಪ್ರದೇಶಗಳಲ್ಲಿ ಸ್ವಚ್ಛತಾ ಆಂದೋಲನಗಳು (ಡಿಎಪಿಆರ್‌ಜಿಯ ವಿಶೇಷ ಅಭಿಯಾನ 3.0 ನೊಂದಿಗೆ ಒಮ್ಮುಖ) ರೈಲ್ವೆ ಹಳಿಗಳು ಮತ್ತು ನಿಲ್ದಾಣಗಳು, ವಿಮಾನ ನಿಲ್ದಾಣಗಳ ಪಕ್ಕದ ಪ್ರದೇಶಗಳು, ಪ್ರವಾಸಿ ಸ್ಥಳಗಳು/ಯಾತ್ರಾ ಸ್ಥಳಗಳು ವಿಶ್ವ ಪ್ರವಾಸೋದ್ಯಮ ದಿನದೊಂದಿಗೆ ಸಮ್ಮಿಳಿತವಾಗಿವೆ.  ಎಎಸ್ಐ ಸ್ಮಾರಕಗಳು/ ಪಾರಂಪರಿಕ ತಾಣಗಳು, ಶಿಕ್ಷಣ ಸಂಸ್ಥೆಗಳು, ಹೆದ್ದಾರಿಗಳು ಮತ್ತು ಹೊಂದಿಕೊಂಡ ಪ್ರದೇಶಗಳು, ಪ್ರಾಣಿ ಸಂಗ್ರಹಾಲಯಗಳು, ಅಭಯಾರಣ್ಯಗಳು, ಉದ್ಯಾನವನಗಳು, ಇತರ ಹೆಚ್ಚಿನ ಜನಸಂದಣಿ ಪ್ರದೇಶಗಳು; ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧ ಮತ್ತು ಶೂನ್ಯ ತ್ಯಾಜ್ಯ ಘಟನೆಗಳಿಗೆ ಪ್ರತಿಜ್ಞೆ ಇವು ಆ ಚಟುವಟಿಕೆಗಳಲ್ಲಿ ಸೇರಿವೆ. ಸಾಮೂಹಿಕ ಪ್ರಯತ್ನಗಳು ನಮ್ಮ ಪರಿಸರವನ್ನು ಪುನರುಜ್ಜೀವನಗೊಳಿಸಿವೆ, ಸ್ವಚ್ಛವಾದ, ಆರೋಗ್ಯಕರ ವಾತಾವರಣವನ್ನು ಸೃಷ್ಟಿಸಿವೆ. ಇದು ಟೀಮ್ ಇಂಡಿಯಾದ ಸ್ಫೂರ್ತಿಯ ಕೊಡುಗೆಯಾಗಿದೆ.

 

ಸ್ವಚ್ಛತಾ ಹಿ ಸೇವಾ 2023 ಅಭಿಯಾನವು ಜನಸಾಮಾನ್ಯರಲ್ಲಿ ಸ್ವಯಂಪ್ರೇರಣೆ ಮತ್ತು ಸಮುದಾಯ ಭಾಗವಹಿಸುವಿಕೆಯ ಮನೋಭಾವವನ್ನು ಪುನರುಜ್ಜೀವನಗೊಳಿಸಿದೆ ಎಂಬುದು ಸ್ಪಷ್ಟವಾಗಿದೆ. ನೈರ್ಮಲ್ಯವನ್ನು ಪ್ರತಿಯೊಬ್ಬರ ದೈನಂದಿನ ಕರ್ತವ್ಯವನ್ನಾಗಿ ಮಾಡುವ ವಾರ್ಷಿಕ ಅಭಿಯಾನದ ಉದ್ದೇಶವನ್ನು ಇದು ಸಾಧಿಸಿದೆ.

 

 

ಅಭಿಯಾನವು ವ್ಯಕ್ತಿಗಳು, ಸಮುದಾಯಗಳು ಮತ್ತು ಸರ್ಕಾರಿ ಸಂಸ್ಥೆಗಳು ಸಮಾನ ದೂರದೃಷ್ಟಿಯೊಂದಿಗೆ ಒಗ್ಗೂಡಿದಾಗ ಮತ್ತು ‘ಸ್ವಚ್ಛ ಭಾರತ’ ಮಿಷನ್‌ನಂತಹ ಕಾರ್ಯವನ್ನು ಸಮರೋಪಾದಿಯಲ್ಲಿ ಮಾಡಿದಾಗ ಗಮನಾರ್ಹ ಸಾಧನೆಗಳನ್ನು ಸಾಧಿಸಬಹುದು ಎಂಬುದನ್ನು ಎತ್ತಿ ತೋರಿಸುತ್ತದೆ.

 

****

 



(Release ID: 1962109) Visitor Counter : 188