ಪ್ರಧಾನ ಮಂತ್ರಿಯವರ ಕಛೇರಿ
ನಾರಿ ಶಕ್ತಿ ವಂದನ್ ಅಧಿನಿಯಮ ಅಂಗೀಕಾರ ಬಳಿಕ ಮಹಿಳಾ ಸಂಸದರಿಂದ ಪ್ರಧಾನಿ ಮೋದಿ ಭೇಟಿ
Posted On:
22 SEP 2023 8:22AM by PIB Bengaluru
ಕಳೆದ ರಾತ್ರಿ ಐತಿಹಾಸಿಕ ನಾರಿ ಶಕ್ತಿ ವಂದನ್ ಅಧಿನಿಯಮ ಅಂಗೀಕಾರದ ಬಗ್ಗೆ ತಮ್ಮ ಸಂತಸ ವ್ಯಕ್ತಪಡಿಸಲು ಮಹಿಳಾ ಸಂಸದರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ,
'ನಾರಿ ಶಕ್ತಿ ವಂದನ್ ಅಧಿನಿಯಮ್ ಅಂಗೀಕಾರದಿಂದ ಪುಳಕಿತರಾಗಿರುವ ನಮ್ಮ ಕ್ರಿಯಾಶೀಲ ಮಹಿಳಾ ಸಂಸದರನ್ನು ಭೇಟಿ ಮಾಡುವ ಗೌರವ ಸಿಕ್ಕಿತು. ಬದಲಾವಣೆಯ ಜ್ಯೋತಿ ಹೊತ್ತವರು ತಾವು ರೂಪಿಸಿದ ಶಾಸನವನ್ನು ಆಚರಿಸಲು ಒಗ್ಗೂಡುವುದನ್ನು ನೋಡಲು ಸಂತೋಷವಾಗುತ್ತದೆ.
ನಾರಿ ಶಕ್ತಿ ವಂದನ್ ಅಧಿನಿಯಮ ಅಂಗೀಕಾರದೊಂದಿಗೆ, ಭಾರತವು ಉಜ್ವಲವಾದ, ಹೆಚ್ಚು ಅಂತರ್ಗತ ಭವಿಷ್ಯದ ತುದಿಯಲ್ಲಿ ನಿಂತಿದ್ದು, ಮಹಿಳಾ ಶಕ್ತಿಯು ಈ ರೂಪಾಂತರದ ಮೂಲಭಾಗದಲ್ಲಿದೆ' ಎಂದು ಸಂತೋಷ ಹಂಚಿಕೊಂಡಿದ್ದಾರೆ.
***
(Release ID: 1959695)
Visitor Counter : 168
Read this release in:
Telugu
,
English
,
Urdu
,
Marathi
,
Hindi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Malayalam