ಗೃಹ ವ್ಯವಹಾರಗಳ ಸಚಿವಾಲಯ

ಇಂದು ತೆಲಂಗಾಣದಲ್ಲಿ ಹೈದರಾಬಾದ್ ವಿಮೋಚನಾ ದಿನಾಚರಣೆಯ ಮುಖ್ಯ ಅತಿಥಿಯಾಗಿ ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಭಾಗಿ


ನೇಷನ್ ಫಸ್ಟ್ ಎಂಬ ತತ್ವವನ್ನು ಅನುಸರಿಸಿ, ಹೈದರಾಬಾದ್ ಪೋಲೀಸ್ ಆಕ್ಷನ್ ಅನ್ನು ಯೋಜಿಸಿದ ಸರ್ದಾರ್ ಪಟೇಲ್, ನಿಜಾಮರ ಸೈನ್ಯವನ್ನು ರಕ್ತಪಾತವಿಲ್ಲದೆ ಶರಣಾಗುವಂತೆ ಒತ್ತಾಯಿಸಿದರು.

ತೆಲಂಗಾಣ, ಕಲ್ಯಾಣ ಕರ್ನಾಟಕ ಮತ್ತು ಮರಾಠವಾಡದ ಈ ವಿಶಾಲ ಪ್ರದೇಶವನ್ನು ಭಾರತದೊಂದಿಗೆ ವಿಲೀನಗೊಳಿಸಲು ಸರ್ದಾರ್ ಪಟೇಲ್ ಮತ್ತು ಕೆಎಂ ಮುನ್ಷಿ ಜೋಡಿ ಅದ್ಭುತ ಕೆಲಸ ಮಾಡಿತು.

ಬ್ರಿಟಿಷರ ಗುಲಾಮಗಿರಿಯಿಂದ ವಿಮೋಚನೆಯ ನಂತರವೂ ನಿಜಾಮರು ಇಲ್ಲಿ 399 ದಿನ ಆಳ್ವಿಕೆ ನಡೆಸಿದರು. ಆ 399 ದಿನಗಳು ಈ ಪ್ರದೇಶದ ಜನರಿಗೆ ಅತಿ ಹೆಚ್ಚು ಚಿತ್ರಹಿಂಸೆಯಿಂದ ಕೂಡಿದ್ದವು.

ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಜನ್ಮದಿನವಾಗಿದೆ, ಇದನ್ನು ನಾವು ಸೇವಾ ದಿನವಾಗಿಯೂ ಆಚರಿಸುತ್ತೇವೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕಳೆದ 9 ವರ್ಷಗಳಿಂದ ಸ್ವಾತಂತ್ರ್ಯ ಹೋರಾಟಗಾರರ ಕಲ್ಪನೆಯಂತೆ ಭಾರತವನ್ನು ನಿರ್ಮಿಸಲಾಗುತ್ತಿದೆ.

75 ವರ್ಷಗಳಿಂದ, ತುಷ್ಟೀಕರಣ ನೀತಿಯಿಂದಾಗಿ ದೇಶದ ಯಾವುದೇ ಸರ್ಕಾರವು ಈ ಮಹಾನ್ ದಿನದ ಬಗ್ಗೆ ನಮ್ಮ ಯುವಕರಿಗೆ ತಿಳಿಸಲು ಯಾವುದೇ ಪ್ರಯತ್ನ ಮಾಡಲಿಲ್ಲ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 17 ಸೆಪ್ಟೆಂಬರ್ 2022 ರಂದು ತೆಲಂಗಾಣ ವಿಮೋಚನೆಯ 75 ವರ್ಷಗಳನ್ನು ಪೂರ್ಣಗೊಳಿಸಿದ ಸಂದರ್ಭದಲ್ಲಿ ಸಂಸ್ಕೃತಿ ಸಚಿವಾಲಯದ ವತಿಯಿಂದ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದರು.

Posted On: 17 SEP 2023 3:29PM by PIB Bengaluru

ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಇಂದು ತೆಲಂಗಾಣದಲ್ಲಿ ಹೈದರಾಬಾದ್ ವಿಮೋಚನಾ ದಿನಾಚರಣೆಯನ್ನು ಮುಖ್ಯ ಅತಿಥಿಯಾಗಿ ಮಾತನಾಡಿದರು. ಶ್ರೀ ಅಮಿತ್ ಶಾ ಅವರು ಇಬ್ರಾಹಿಂಪಟ್ಟಣಂನ ಎಸ್‌ಎಸ್‌ಬಿಯ 20 ಕೋಟಿ ರೂಪಾಯಿ ವೆಚ್ಚದ 48 ಟೈಪ್-III ಕುಟುಂಬದ ಮನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಕೇಂದ್ರ ಸಚಿವ ಶ್ರೀ ಜಿ ಕಿಶನ್ ರೆಡ್ಡಿ, ಕೇಂದ್ರ ಗೃಹ ಕಾರ್ಯದರ್ಶಿ, ಸಂಸ್ಕೃತಿ ಸಚಿವಾಲಯದ ಕಾರ್ಯದರ್ಶಿ, ಇಂಟೆಲಿಜೆನ್ಸ್ ಬ್ಯೂರೋ ನಿರ್ದೇಶಕರು, ಸಿಆರ್‌ಪಿಎಫ್ ಮಹಾನಿರ್ದೇಶಕರು ಮತ್ತು ಎಸ್‌ಎಸ್‌ಬಿ ಮಹಾನಿರ್ದೇಶಕರು ಸೇರಿದಂತೆ ಅನೇಕ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

https://static.pib.gov.in/WriteReadData/userfiles/image/image0010QR1.jpg

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವರು ಇಂದು ತೆಲಂಗಾಣ ವಿಮೋಚನೆಯ 75 ವರ್ಷಗಳನ್ನು ಪೂರೈಸುತ್ತಿದ್ದು, ಉಕ್ಕಿನ ಮನುಷ್ಯ ಸರ್ದಾರ್ ಪಟೇಲ್ ಇಲ್ಲದಿದ್ದರೆ ತೆಲಂಗಾಣಕ್ಕೆ ಇಷ್ಟು ಬೇಗ ವಿಮೋಚನೆ ಸಿಗುತ್ತಿರಲಿಲ್ಲ. ನೇಷನ್ ಫಸ್ಟ್ ಎಂಬ ತತ್ವವನ್ನು ಅನುಸರಿಸಿ ಹೈದರಾಬಾದ್ ಪೊಲೀಸ್ ಆ್ಯಕ್ಷನ್ ಯೋಜನೆ ರೂಪಿಸಿ ನಿಜಾಮರ ರಜಾಕರ ಸೇನೆಯನ್ನು ರಕ್ತಪಾತವಿಲ್ಲದೆ ಶರಣಾಗುವಂತೆ ಮಾಡಿದವರು ಸರ್ದಾರ್ ಪಟೇಲರು. ಕರ್ನಾಟಕದ ತೆಲಂಗಾಣ ಪ್ರದೇಶದ ಬೀದರ್ ಮತ್ತು ಮರಾಠವಾಡದ ಈ ವಿಶಾಲ ಪ್ರದೇಶವನ್ನು ಭಾರತದೊಂದಿಗೆ ವಿಲೀನಗೊಳಿಸಲು ಸರ್ದಾರ್ ಪಟೇಲ್ ಮತ್ತು ಕೆಎಂ ಮುನ್ಷಿ ಜೋಡಿ ಉತ್ತಮ ಕೆಲಸ ಮಾಡಿದೆ. ತೆಲಂಗಾಣದ ವಿಮೋಚನೆಗಾಗಿ ಸ್ವಾಮಿ ರಮಾನಂದ ತೀರ್ಥ, ಎಂ ಚಿನ್ನಾರೆಡ್ಡಿ, ನರಸಿಂಹರಾವ್, ಶೇಕ್ ಬಂದಗಿ, ಕೆ ವಿ ನರಸಿಂಹರಾವ್, ವಿದ್ಯಾಧರ ಗುರು, ಪಂಡಿತ್ ಕೇಶವರಾವ್ ಕೋರಟಕರ್, ಅನಭೇರಿ ಪ್ರಭಾಕರಿ ರಾವ್, ಬದ್ದಂ ಯಲ್ಲರೆಡ್ಡಿ, ರವಿ ನಾರಾಯಣರೆಡ್ಡಿ, ಬುರುಗುಳ ರಾಮಕೃಷ್ಣ ರಾವ್, ಕಾಲೋಜಿ. , ನಾರಾಯಣರಾವ್, ದಿಗಂಬರರಾವ್ ಬಿಂದು, ವಾಮನರಾವ್ ನಾಯಕ್, ವಾಘಮಾರೆ ಮತ್ತು ಅವರಂತಹ ಅಸಂಖ್ಯಾತ ಜನರು ಎಲ್ಲವನ್ನೂ ತ್ಯಾಗ ಮಾಡಿದರು ಎಂದು ಸಚಿವರು ಸ್ಮರಿಸಿದರು.

https://static.pib.gov.in/WriteReadData/userfiles/image/image0029ZXZ.jpg

ಇತ್ತೀಚೆಗೆ ದೇಶವು ತನ್ನ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದೆ ಮತ್ತು ಇಂದು ತೆಲಂಗಾಣ ವಿಮೋಚನಾ ದಿನವಾಗಿದೆ. ಬ್ರಿಟಿಷರ ಗುಲಾಮಗಿರಿಯಿಂದ ವಿಮೋಚನೆಗೊಂಡ ನಂತರವೂ ನಿಜಾಮರು ಇಲ್ಲಿ 399 ದಿನ ಆಳ್ವಿಕೆ ನಡೆಸಿದರು. ಆ 399 ದಿನಗಳು ಈ ಭಾಗದ ಜನರಿಗೆ ಅತಿ ಹೆಚ್ಚು ಹಿಂಸೆಯಿಂದ ಕೂಡಿದ್ದವು. ಸರ್ದಾರ್ ಪಟೇಲ್ ಅವರು ಜನರ ಭಾವನೆಗಳನ್ನು ಗೌರವಿಸಿ ಈ ಪ್ರದೇಶವನ್ನು ಮುಕ್ತಗೊಳಿಸಿದರು. ತೆಲಂಗಾಣ ವಿಮೋಚನಾ ಚಳವಳಿಗೆ ಆರ್ಯಸಮಾಜ, ಹಿಂದೂ ಮಹಾಸಭಾ, ಉಸ್ಮಾನಿಯಾ ವಿಶ್ವವಿದ್ಯಾಲಯದಂತಹ ಅನೇಕ ಸಂಘಟನೆಗಳು ಕೊಡುಗೆ ನೀಡಿದ್ದು, ತೆಲಂಗಾಣ ವಿಮೋಚನಾ ಚಳವಳಿಯನ್ನು ಅಂತಿಮಗೊಳಿಸುವ ಕೆಲಸವನ್ನು ನಮ್ಮ ಉಕ್ಕಿನ ಮನುಷ್ಯ ಸರ್ದಾರ್ ಪಟೇಲ್ ಅವರು ಬೀದರ್ ಪ್ರದೇಶದ ರೈತರು ಮತ್ತು ಯುವಕರೊಂದಿಗೆ ಮಾಡಿದ್ದಾರೆ ಎಂದು ಅಮಿತ್‌ ಶಾ ಹೇಳಿದರು.

https://static.pib.gov.in/WriteReadData/userfiles/image/image0033T72.jpg

75 ವರ್ಷಗಳಿಂದ ತುಷ್ಟೀಕರಣ ನೀತಿಯಿಂದಾಗಿ ದೇಶದ ಯಾವುದೇ ಸರ್ಕಾರವು ಈ ಮಹಾನ್ ದಿನದ ಬಗ್ಗೆ ನಮ್ಮ ಯುವಕರಿಗೆ ತಿಳಿಸಲು ಯಾವುದೇ ಪ್ರಯತ್ನ ಮಾಡಲಿಲ್ಲ. 2022 ರ ಸೆಪ್ಟೆಂಬರ್ 17 ರಂದು ತೆಲಂಗಾಣ ವಿಮೋಚನೆಯ 75 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೊಸ ಸಂಪ್ರದಾಯವನ್ನು ಪ್ರಾರಂಭಿಸಿದರು. ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯವು ಪ್ರತಿ ವರ್ಷ ಸೆಪ್ಟೆಂಬರ್ 17 ರಂದು ತೆಲಂಗಾಣ ವಿಮೋಚನಾ ದಿನವನ್ನು ಆಚರಿಸುತ್ತದೆ. ಈ ಮೂಲಕ ನಮ್ಮ ಆ ಮಹಾನ್ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಹೊಸ ಪೀಳಿಗೆಯನ್ನು ಹೋರಾಟಕ್ಕೆ ಪರಿಚಯಿಸಲಾಗುವುದು. ಇದರ ಹಿಂದೆ ಮೂರು ಉದ್ದೇಶಗಳಿವೆ. ಮೊದಲನೆಯದಾಗಿ, ಈ ಮಹಾನ್ ಹೋರಾಟದ ಬಗ್ಗೆ ಹೊಸ ಪೀಳಿಗೆಗೆ ತಿಳಿಸುವ ಮೂಲಕ ದೇಶಭಕ್ತಿಯ ಮೌಲ್ಯಗಳನ್ನು ಬೆಳೆಸುವುದು; ಎರಡನೆಯದಾಗಿ, ಹೈದರಾಬಾದ್‌ನ ವಿಮೋಚನೆಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸುವುದು; ಮತ್ತು ಮೂರನೆಯದಾಗಿ, ಹುತಾತ್ಮರು ಕಲ್ಪಿಸಿದ ಭಾರತವನ್ನು ನಿರ್ಮಿಸುವ ಕನಸನ್ನು ನನಸಾಗಿಸಲು ರಾಷ್ಟ್ರಕ್ಕೆ ಸಮರ್ಪಿಸಿಕೊಳ್ಳುವುದು ಎಂದು ತಿಳಿಸಿದರು.

https://static.pib.gov.in/WriteReadData/userfiles/image/image004DA5R.jpg

ನಿಜಾಮರ ಆಳ್ವಿಕೆಯ 400 ದಿನಗಳ ಅವಧಿಯಲ್ಲಿ ಸ್ಥಳೀಯ ಸಾರ್ವಜನಿಕರು ಅಪಾರ ಹಿಂಸೆಯನ್ನು ಅನುಭವಿಸಿದ್ದಾರೆ. ಒಮ್ಮೆ ಹೈದರಾಬಾದ್ ನಮ್ಮ ದೇಶಕ್ಕೆ ಸಮಸ್ಯೆ ರೀತಿಯಲ್ಲಿ ಇತ್ತು. ಇದನ್ನು ಕಾರ್ಯಾಚರಣೆಯನ್ನು ಮಾಡದೇ ಬೇರೆ ದಾರಿ ಇರಲಿಲ್ಲ ಎಂದು ಸರ್ದಾರ್ ಪಟೇಲ್ ಹೇಳಿದ್ದರು ಮತ್ತು ಅದಕ್ಕಾಗಿಯೇ ಅವರು ಪೊಲೀಸ್ ಕ್ರಮದ ಮೂಲಕ ಹೈದರಾಬಾದ್ ಅನ್ನು ಬಿಡುಗಡೆ ಮಾಡಲು ಶ್ರಮಿಸಿದರು. ತೆಲಂಗಾಣ ಸ್ಥಾಪನೆಯಾದ ನಂತರವೂ ಹಿಂದಿನ ಸರಕಾರಗಳು ವೋಟ್ ಬ್ಯಾಂಕ್ ರಾಜಕಾರಣದಿಂದ ತೆಲಂಗಾಣ ವಿಮೋಚನಾ ದಿನ ಆಚರಿಸಲು ಹಿಂದೇಟು ಹಾಕುತ್ತಿರುವುದು ಅತ್ಯಂತ ದುರದೃಷ್ಟಕರ ಸಂಗತಿ. ಯಾರು ತಮ್ಮ ದೇಶದ ಇತಿಹಾಸಕ್ಕೆ ಬೆನ್ನು ಹಾಕುತ್ತಾರೋ ಅವರಿಗೆ ದೇಶದ ಜನತೆ ಬೆನ್ನು ತಟ್ಟುತ್ತಾರೆ. ನಮ್ಮ ದೇಶದ ಇತಿಹಾಸ, ಹುತಾತ್ಮರ ಹುತಾತ್ಮತೆ, ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಹೆಮ್ಮೆ ಪಡುವ ಮೂಲಕ ಮಾತ್ರ ನಾವು ನಮ್ಮ ದೇಶ ಮತ್ತು ತೆಲಂಗಾಣವನ್ನು ಮುಂದೆ ಕೊಂಡೊಯ್ಯಬಹುದು. ನಿಜಾಮರ ಕ್ರೂರ ಆಡಳಿತವು ಭಾರಿ ವ್ಯತ್ಯಾಸವನ್ನು ಸೃಷ್ಟಿಸಿತು. ಸರ್ದಾರ್ ಪಟೇಲ್ ಅದನ್ನು ತೊಡೆದುಹಾಕಿದರು. ಈ ಪ್ರದೇಶವನ್ನು ನಿಜಾಮರ ದಬ್ಬಾಳಿಕೆಯಿಂದ ಮುಕ್ತಗೊಳಿಸುವ ಕೆಲಸವನ್ನು ಸರ್ದಾರ್ ಪಟೇಲರು ಮಾಡಿದ್ದಾರೆ. ಆಗಸ್ಟ್ 10, 1948 ರಂದು ಸರ್ದಾರ್ ಪಟೇಲ್ ಅವರು ಹೈದರಾಬಾದ್ ಸಮಸ್ಯೆಯನ್ನು ಪರಿಹರಿಸಲು ಒಂದೇ ಒಂದು ಮಾರ್ಗವಿದೆ. ಹೈದರಾಬಾದ್ ಅನ್ನು ಭಾರತದೊಂದಿಗೆ ವಿಲೀನಗೊಳಿಸುವುದು. ಇದಾದ ನಂತರ 1948ರ ಸೆಪ್ಟೆಂಬರ್ 17ರಂದು ನಿಜಾಮರ ಸೇನೆ ಶರಣಾಯಿತು. ಮುಂಬರುವ ಪೀಳಿಗೆಗೆ ಸ್ಫೂರ್ತಿಯಾಗುವಂತೆ ಈ ದಿನದ ಸ್ಮರಣೆ, ​​ನಮ್ಮ ಹೋರಾಟ, ಹುತಾತ್ಮರ ತ್ಯಾಗವನ್ನು ಸ್ಮರಿಸಬೇಕೆಂದು ತೆಲಂಗಾಣ, ಕಲ್ಯಾಣ ಕರ್ನಾಟಕ, ಮರಾಠವಾಡದ ಜನತೆಗೆ ಕರೆ ನೀಡಿದರು. ಮತ್ತು ದೇಶದ ಅಭಿವೃದ್ಧಿಗೆ ತಮ್ಮನ್ನು ಸಮರ್ಪಿಸಿಕೊಳ್ಳುತ್ತಾರೆ ಎಂದು ತಿಳಿಸಿದರು.

https://static.pib.gov.in/WriteReadData/userfiles/image/image005Y6V6.png

ಸಶಸ್ತ್ರ ಸೀಮಾ ಬಲ್‌ (ಎಸ್‌ಎಸ್‌ಬಿ), ಇಬ್ರಾಹಿಂಪಟಂನ ಕುಟುಂಬ ನಿವಾಸಗಳ ವಾಸ್ತವಿಕ ಅಡಿಪಾಯವನ್ನು ಇಂದು ಹಾಕಲಾಗಿದೆ. ಇದು ಎಸ್‌ಎಸ್‌ಬಿಯಲ್ಲಿ ಸೇವೆ ಸಲ್ಲಿಸುತ್ತಿರುವ ದಕ್ಷಿಣ ಭಾರತದ ಸೈನಿಕರ ಕುಟುಂಬಗಳಿಗೆ ಹೊಸ ಆರಂಭವಾಗಿದೆ. ಇಂದು ಖ್ಯಾತ ಪತ್ರಕರ್ತ ಹಾಗೂ ಹುತಾತ್ಮ ಶೋಯೆಬುಲ್ಲಾ ಖಾನ್ ಮತ್ತು ರಾಮ್‌ಜಿ ಗೊಂಡ್ ಅವರ ಸ್ಮರಣಾರ್ಥ ಅಂಚೆ ಚೀಟಿಗಳನ್ನು ಸಹ ಬಿಡುಗಡೆ ಮಾಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ಇಂದು ನಮ್ಮ ಪ್ರೀತಿಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಜನ್ಮದಿನವಾಗಿದ್ದು, ಇದನ್ನು ನಾವು ಸೇವಾ ದಿನವನ್ನಾಗಿ ಆಚರಿಸುತ್ತೇವೆ. ಕಳೆದ 9 ವರ್ಷಗಳಲ್ಲಿ ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಅಂದುಕೊಂಡಂತೆ ಭಾರತವನ್ನು ಕಟ್ಟುವ ನಿಟ್ಟಿನಲ್ಲಿ ದೇಶ ಸಾಕಷ್ಟು ಪ್ರಗತಿ ಸಾಧಿಸಿದೆ. 2014 ರಲ್ಲಿ ಭಾರತದ ಆರ್ಥಿಕತೆಯು ವಿಶ್ವದ 11 ನೇ ಅತಿದೊಡ್ಡ ಆರ್ಥಿಕತೆಯಾಗಿತ್ತು. ಇಂದು ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಅದು 5 ನೇ ಸ್ಥಾನಕ್ಕೆ ಏರಿದೆ. ಚಂದ್ರಯಾನದ ಮೂಲಕ ಭಾರತವು ಚಂದ್ರನ ಮೇಲೆ ಇಳಿದ ವಿಶ್ವದ ನಾಲ್ಕನೇ ದೇಶವಾಗಿದೆ. ಜಿ-20 ಸಭೆಗಳ ಮೂಲಕ ಪ್ರಧಾನಿ ಮೋದಿ ಅವರು ಭಾರತದ ಸಂಸ್ಕೃತಿ, ಕಲೆ, ಆಹಾರ, ವೇಷಭೂಷಣ ಮತ್ತು ಭಾಷೆಗಳನ್ನು ವಿಶ್ವವಿಖ್ಯಾತಗೊಳಿಸಿದ್ದಾರೆ. ಇದರೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಪ್ರಯತ್ನದಿಂದಾಗಿ ಆಫ್ರಿಕಾ ಒಕ್ಕೂಟವನ್ನು ಜಿ-20 ಗೆ ಸೇರ್ಪಡೆಗೊಳಿಸಲಾಗಿದೆ, ಆ ಮೂಲಕ ಅದನ್ನು ಜಿ-21 ಮಾಡಲಾಗಿದೆ. ಭಯೋತ್ಪಾದನೆ, ಹವಾಮಾನ ಬದಲಾವಣೆ ಮತ್ತು ಆರ್ಥಿಕತೆಗೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೃಷ್ಟಿಕೋನವನ್ನು ವಿಶ್ವ ನಾಯಕರು ಒಪ್ಪಿಕೊಂಡಿದ್ದಾರೆ ಮತ್ತು ದೆಹಲಿ ಘೋಷಣೆಯ ಮೂಲಕ ಜಾಗತಿಕ ಕಾರ್ಯಸೂಚಿಯಾಗಿದೆ. ಜಿ-20 ಶೃಂಗಸಭೆಯು ನಮ್ಮ ದೇಶದ ಒಡಿಶಾದ ಕೊನಾರ್ಕ್ ದೇವಾಲಯ, ನಳಂದಾ ವಿಶ್ವವಿದ್ಯಾಲಯ, ಮಧುಬನಿ ಚಿತ್ರಕಲೆ ಇತ್ಯಾದಿಗಳನ್ನು ಇಡೀ ಜಗತ್ತಿಗೆ ಪರಿಚಯಿಸಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವು ಜಾಗತಿಕ ಮನ್ನಣೆಯನ್ನು ಪಡೆದುಕೊಂಡಿದೆ. ಭಾರತದಲ್ಲಿ ಯುಪಿಐ, ಬ್ಯಾಂಕಿಂಗ್, ಆಧಾರ್ ಮತ್ತು ಮೊಬೈಲ್ ತಂತ್ರಜ್ಞಾನ ತಂದ ಕ್ರಾಂತಿಯನ್ನು ವಿಶ್ವದಾದ್ಯಂತದ ನಾಯಕರು ಶ್ಲಾಘಿಸಿದ್ದಾರೆ ಎಂದು ಅಮಿತ್‌ ಶಾ ತಿಳಿಸಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಜನ್ಮದಿನದಂದು ಸಾಮಾಜಿಕ ನ್ಯಾಯ ಸಚಿವಾಲಯದ ಅಧೀನದಲ್ಲಿರುವ ವಿಕಲಚೇತನರ ಸಬಲೀಕರಣ ಇಲಾಖೆ (ದಿವ್ಯಾಂಗಜನ) ದಿವ್ಯಾಂಗರಿಗೆ ಮೋಟಾರು ಚಾಲಿತ ತ್ರಿಚಕ್ರ ವಾಹನಗಳನ್ನು ವಿತರಿಸುವ ಶಿಬಿರವನ್ನು ಆಯೋಜಿಸಿತ್ತು. ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಸಿಕಂದರಾಬಾದ್ ಸಂಸದೀಯ ಕ್ಷೇತ್ರ ಮತ್ತು ಹೈದರಾಬಾದ್ ನಗರದಲ್ಲಿ ಅರ್ಹ ಫಲಾನುಭವಿಗಳಿಗೆ 173 ತ್ರಿಚಕ್ರ ವಾಹನಗಳನ್ನು ವಿತರಿಸಿದರು.

https://static.pib.gov.in/WriteReadData/userfiles/image/image006DB9F.png

****



(Release ID: 1958421) Visitor Counter : 108