ಉಪರಾಷ್ಟ್ರಪತಿಗಳ ಕಾರ್ಯಾಲಯ
ಪ್ರಧಾನಮಂತ್ರಿ ಅವರಿಗೆ ಜನ್ಮದಿನದ ಶುಭಾಶಯ ಕೋರಿದ ಉಪರಾಷ್ಟ್ರಪತಿ
Posted On:
17 SEP 2023 9:53AM by PIB Bengaluru
ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಅವರು ಇಂದು ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ.
ಈ ಕುರಿತು ಎಕ್ಸ್ ಖಾತೆಯಲ್ಲಿ ಉಪರಾಷ್ಟ್ರಪತಿ ಅವರು ಹೀಗೆ ಹೇಳಿದರು;
"ಭಾರತದ ಗೌರವಾನ್ವಿತ ಪ್ರಧಾನಿ ಶ್ರೀ @narendramodi ಜೀ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ನಿಮ್ಮ ದೂರದೃಷ್ಟಿಯ ನಾಯಕತ್ವ, ಮಿಷನರಿ ಮನೋಭಾವ ಮತ್ತು ಅನುಕರಣೀಯ ಕಾರ್ಯನಿರ್ವಹಣೆ ಭಾರತವನ್ನು ಅಸಾಧಾರಣ ಪ್ರಗತಿ ಮತ್ತು ಯುಗದ ಪರಿವರ್ತನೆಯತ್ತ ಮುನ್ನಡೆಸಿದೆ. ನಿಮ್ಮ ಪರಂಪರೆ ನಮ್ಮ ರಾಷ್ಟ್ರದ ಇತಿಹಾಸದಲ್ಲಿ ಅಚ್ಚಳಿಯದೆ ಉಳಿದಿದೆ.
ಮನುಕುಲದ ಆರನೇ ಒಂದು ಭಾಗಕ್ಕೆ ನೆಲೆಯಾಗಿರುವ ಭಾರತ, ನಮ್ಮ ನಾಗರಿಕ ನೀತಿಗಳಿಗೆ ಅನುಗುಣವಾಗಿ ಒಳಗೊಳ್ಳುವಿಕೆ, ಸಾರ್ವಜನಿಕ ಕಲ್ಯಾಣ ಮತ್ತು ದೂರದೃಷ್ಟಿಯ ದೃಷ್ಟಿಕೋನಕ್ಕೆ ನಿಮ್ಮ ಬದ್ಧತೆಯನ್ನು ಎಂದೆಂದಿಗೂ ಗೌರವಿಸುತ್ತದೆ.
ಮುಂಬರುವ ವರ್ಷಗಳಲ್ಲಿ ಭಾರತದ ಸೇವೆಯಲ್ಲಿರಲು ಸರ್ವಶಕ್ತನು ನಿಮಗೆ ಉತ್ತಮ ಆರೋಗ್ಯ ಮತ್ತು ಸಂತೋಷವನ್ನು ಆಶೀರ್ವದಿಸಲಿ" ಎಂದು ಟ್ವೀಟ್ ಮಾಡಿದ್ದಾರೆ.
Warm birthday greetings to Hon’ble Prime Minister of India, Shri @narendramodi Ji. Your visionary leadership, missionary spirit and exemplary execution have steered Bharat to phenomenal progress and epochal transformation. Your legacy is etched in the annals of our nation’s… pic.twitter.com/nxDE6Vue1V
— Vice President of India (@VPIndia) September 17, 2023
(Release ID: 1958187)
Visitor Counter : 127