ಗೃಹ ವ್ಯವಹಾರಗಳ ಸಚಿವಾಲಯ

ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಜನ್ಮದಿನದ ಶುಭಾಶಯಗಳನ್ನು ಕೋರಿದ್ದಾರೆ ಮತ್ತು ಅವರ ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸಿದ್ದಾರೆ


ರಾಷ್ಟ್ರದ ಜನಪ್ರಿಯ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ದೂರದೃಷ್ಟಿ, ದಣಿವರಿಯದ ಪ್ರಯತ್ನಗಳು ಮತ್ತು ನಿಸ್ವಾರ್ಥ ಸೇವೆಯಿಂದ ಕೋಟ್ಯಂತರ ಜನರ ಜೀವನದಲ್ಲಿ ಸಮೃದ್ಧಿ ಮತ್ತು ವಿಶ್ವಾಸವನ್ನು ಮೂಡಿಸಿದ್ದಾರೆ

ನಾಯಕತ್ವ, ಸೂಕ್ಷ್ಮತೆ ಮತ್ತು ಕಠಿಣ ಪರಿಶ್ರಮದ ವಿಶಿಷ್ಟ ಸಂಯೋಜನೆಯೇ ಶ್ರೀ ನರೇಂದ್ರ ಮೋದಿ

ಶ್ರೀ ನರೇಂದ್ರ ಮೋದಿ ಅವರು ನಮ್ಮ ದೇಶದ ಪ್ರಯತ್ನಗಳ ಪ್ರಮಾಣ ಮತ್ತು ವ್ಯಾಪ್ತಿಯನ್ನು ಪರಿವರ್ತಿಸಿದ್ದಾರೆ, ಅದು ಕೋವಿಡ್ -19 ಲಸಿಕೆಯ ಅಭಿವೃದ್ಧಿಯಾಗಿರಲಿ ಅಥವಾ ಚಂದ್ರಯಾನ -3 ರ ಯಶಸ್ಸಾಗಿರಲಿ, ಇಂದು ನಮ್ಮ ತ್ರಿವರ್ಣ ಧ್ವಜವು ವಿಶ್ವದಾದ್ಯಂತ ಹೆಮ್ಮೆಯಿಂದ ರಾರಾಜಿಸುತ್ತಿದೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರತಿಯೊಬ್ಬ ಭಾರತೀಯನ ಹೃದಯದೊಂದಿಗೆ ಸಂಪರ್ಕ ಹೊಂದಿದ್ದಾರೆ ಮತ್ತು ಅವರನ್ನು ದೇಶದ ಅಭಿವೃದ್ಧಿಯೊಂದಿಗೆ ಸಂಪರ್ಕಿಸುವ ಗಮನಾರ್ಹ ಕಾರ್ಯವನ್ನು ಸಾಧಿಸಿದ್ದಾರೆ, ಇದು ಇತಿಹಾಸದಲ್ಲಿ ಅಭೂತಪೂರ್ವ ಸಾಧನೆಯಾಗಿದೆ

ದೇಶದ ಲಕ್ಷಾಂತರ ಬಡ ಜನರನ್ನು ಬಡತನದ ಶಾಪದಿಂದ ಮುಕ್ತಗೊಳಿಸುವ ಮತ್ತು ಅವರ ಜೀವನವನ್ನು ಪರಿವರ್ತಿಸುವ ಅವರ ಸಂಕಲ್ಪದಿಂದಾಗಿ, ಶ್ರೀ ಮೋದಿ ಅವರನ್ನು ಇಂದು 'ದೀನ್ ಮಿತ್ರ' ಎಂದು ಕರೆಯಲಾಗುತ್ತದೆ

ಶ್ರೀ ನರೇಂದ್ರ ಮೋದಿ ಅವರು ನವ ಭಾರತದ ವಾಸ್ತುಶಿಲ್ಪಿಯಾಗಿದ್ದು, ನಮ್ಮ ದೇಶದ ಪ್ರಾಚೀನ ಪರಂಪರೆಯ ಆಧಾರದ ಮೇಲೆ ಭವ್ಯ ಮತ್ತು ಸ್ವಾವಲಂಬಿ ಭಾರತಕ್ಕೆ ಬಲವಾದ ಅಡಿಪಾಯವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಕೆಲಸ ಮಾಡಿದ್ದಾರೆ

ಅದು ಸಂಸ್ಥೆಯಾಗಿರಲಿ ಅಥವಾ ಸರ್ಕಾರವಾಗಿರಲಿ, ನಾವೆಲ್ಲರೂ ಶ್ರೀ ಮೋದಿಯವರ 'ರಾಷ್ಟ್ರ ಮೊದಲು' ಕಾರ್ಯವಿಧಾನದಿಂದ ಸ್ಫೂರ್ತಿ ಪಡೆಯುತ್ತೇವೆ, ಅಂತಹ ಅಸಾಧಾರಣ ನಾಯಕನ ಮಾರ್ಗದರ್ಶನದಲ್ಲಿ ರಾಷ್ಟ್ರದ ಸೇವೆ ಮಾಡುವ ಅವಕಾಶವನ್ನು ಪಡೆಯುವುದು ನನ್ನ ಸೌಭಾಗ್ಯ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಕಲ್ಪಿಸಿದ ಭಾರತವನ್ನು ಕಳೆದ 9 ವರ್ಷಗಳಿಂದ ನಿರ್ಮಿಸಲಾಗುತ್ತಿದೆ

Posted On: 17 SEP 2023 1:03PM by PIB Bengaluru

ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಜನ್ಮದಿನದ ಶುಭಾಶಯಗಳನ್ನು ಕೋರಿದ್ದಾರೆ ಮತ್ತು ಅವರ ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸಿದ್ದಾರೆ. ತಮ್ಮ ದೂರದೃಷ್ಟಿ, ದಣಿವರಿಯದ ಪ್ರಯತ್ನಗಳು ಮತ್ತು ನಿಸ್ವಾರ್ಥ ಸೇವೆಯಿಂದ ಲಕ್ಷಾಂತರ ಜನರ ಜೀವನದಲ್ಲಿ ಸಮೃದ್ಧಿ ಮತ್ತು ವಿಶ್ವಾಸವನ್ನು ತಂದಿರುವ ರಾಷ್ಟ್ರದ ಜನಪ್ರಿಯ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ. ಅವರ ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯಕ್ಕಾಗಿ ನಾನು ದೇವರನ್ನು ಪ್ರಾರ್ಥಿಸುತ್ತೇನೆ ಎಂದು ಶ್ರೀ ಅಮಿತ್ ಶಾ ಹೇಳಿದ್ದಾರೆ. 

ಶ್ರೀ ನರೇಂದ್ರ ಮೋದಿ ಅವರು ನಾಯಕತ್ವ, ಸೂಕ್ಷ್ಮತೆ ಮತ್ತು ಕಠಿಣ ಪರಿಶ್ರಮದ ವಿಶಿಷ್ಟ ಸಂಯೋಜನೆಯನ್ನು ಹೊಂದಿದ್ದಾರೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದ್ದಾರೆ. ಕೋವಿಡ್-19 ಲಸಿಕೆಯ ಅಭಿವೃದ್ಧಿಯಾಗಲಿ ಅಥವಾ ಚಂದ್ರಯಾನ-3ರ ಯಶಸ್ಸಾಗಲಿ ಅವರು ನಮ್ಮ ದೇಶದ ಪ್ರಯತ್ನಗಳ ಪ್ರಮಾಣ ಮತ್ತು ವ್ಯಾಪ್ತಿಯನ್ನು ಪರಿವರ್ತಿಸಿದ್ದಾರೆ. ಇಂದು, ನಮ್ಮ ತ್ರಿವರ್ಣ ಧ್ವಜವು ಪ್ರಪಂಚದಾದ್ಯಂತ ಹೆಮ್ಮೆಯಿಂದ ರಾರಾಜಿಸುತ್ತಿದ್ದೆ ಎಂದಿದ್ದಾರೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರತಿಯೊಬ್ಬ ಭಾರತೀಯನ ಹೃದಯದೊಂದಿಗೆ ಸಂಪರ್ಕ ಹೊಂದಿದ್ದಾರೆ ಮತ್ತು ಅವರನ್ನು ದೇಶದ ಅಭಿವೃದ್ಧಿಯೊಂದಿಗೆ ಸಂಪರ್ಕಿಸುವ ಗಮನಾರ್ಹ ಕಾರ್ಯವನ್ನು ಸಾಧಿಸಿದ್ದಾರೆ. ಇದು ಇತಿಹಾಸದಲ್ಲಿ ಅಭೂತಪೂರ್ವ ಸಾಧನೆಯಾಗಿದೆ ಎಂದು ಶ್ರೀ ಅಮಿತ್ ಶಾ ಅಭಿಪ್ರಾಯಪಟ್ಟಿದ್ದಾರೆ. ದೇಶದ ಲಕ್ಷಾಂತರ ಬಡ ಜನರನ್ನು ಬಡತನದ ಶಾಪದಿಂದ ಮುಕ್ತಗೊಳಿಸುವ ಮತ್ತು ಅವರ ಜೀವನವನ್ನು ಪರಿವರ್ತಿಸುವ ಪ್ರಧಾನಿಯವರ ಸಂಕಲ್ಪದಿಂದಾಗಿ, ಶ್ರೀ ಮೋದಿ ಅವರನ್ನು ಇಂದು 'ದೀನ್ ಮಿತ್ರ' ಎಂದು ಕರೆಯಲಾಗುತ್ತದೆ ಎಂದು ಅಮಿತ್‌ ಶಾ ಹೇಳಿದ್ದಾರೆ.

ಶ್ರೀ ನರೇಂದ್ರ ಮೋದಿ ಅವರು ನವ ಭಾರತದ ವಾಸ್ತುಶಿಲ್ಪಿಯಾಗಿದ್ದು, ನಮ್ಮ ದೇಶದ ಪ್ರಾಚೀನ ಪರಂಪರೆಯ ಆಧಾರದ ಮೇಲೆ ಭವ್ಯ ಮತ್ತು ಸ್ವಾವಲಂಬಿ ಭಾರತಕ್ಕೆ ಬಲವಾದ ಅಡಿಪಾಯವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಕೆಲಸ ಮಾಡಿದ್ದಾರೆ. ಅದು ಸಂಸ್ಥೆಯಾಗಿರಲಿ ಅಥವಾ ಸರ್ಕಾರವಾಗಿರಲಿ, ನಾವೆಲ್ಲರೂ ಶ್ರೀ ಮೋದಿಯವರ 'ರಾಷ್ಟ್ರ ಮೊದಲು' ವಿಧಾನದಿಂದ ಸ್ಫೂರ್ತಿ ಪಡೆಯುತ್ತೇವೆ. ಅಂತಹ ಅಸಾಧಾರಣ ನಾಯಕನ ಮಾರ್ಗದರ್ಶನದಲ್ಲಿ ರಾಷ್ಟ್ರದ ಸೇವೆ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ ಎಂದು ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರು ಹೇಳಿದ್ದಾರೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಕಲ್ಪಿಸಿದ ಭಾರತವನ್ನು ಕಳೆದ 9 ವರ್ಷಗಳಿಂದ ನಿರ್ಮಿಸಲಾಗುತ್ತಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಜನ್ಮದಿನದಂದು ಅಮಿತ್‌ ಶಾ ಅವರು ತಮ್ಮ ʻಎಕ್ಸ್ʼ ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

अपनी दूरदर्शिता, अथक परिश्रम और नि:स्वार्थ सेवाभाव से करोड़ों लोगों के जीवन में समृद्धि और विश्वास लाने वाले देश के लोकप्रिय प्रधानमंत्री श्री @narendramodi जी को जन्मदिन की हार्दिक शुभकामनाएं देता हूँ। साथ ही ईश्वर से आपकी दीर्घायु और उत्तम स्वास्थ्य की प्रार्थना करता हूँ।…

— Amit Shah (@AmitShah) September 17, 2023

मोदी जी में नेतृत्व, संवेदनशीलता और परिश्रम का दुर्लभ संयोजन देखने को मिलता है।@narendramodi जी ने देश के सोचने के स्केल और साइज को बदला है, जिससे चाहे कोरोना की वैक्सीन बनाना हो या चंद्रयान-3 की सफलता, आज हमारा तिरंगा पूरे विश्व में शान से लहरा रहा है।#HappyBdayModiji

— Amit Shah (@AmitShah) September 17, 2023

भारत के हर व्यक्ति के दिल से जुड़कर उसे देश के विकास से जोड़ने का अद्भुत काम इतिहास में पहली बार प्रधानमंत्री मोदी जी ने किया है। देश के करोड़ों गरीबों को गरीबी के अभिशाप से मुक्त कर उनके जीवन को बदलने के अपने संकल्प के कारण मोदी जी आज ‘दीनमित्र’ के रूप में जाने जाते हैं।…

— Amit Shah (@AmitShah) September 17, 2023

नए भारत के शिल्पकार मोदी जी ने हमारे देश की प्राचीन विरासत के आधार पर एक भव्य और आत्मनिर्भर भारत की मजबूत नींव रखने का काम किया है।
चाहे संगठन हो या सरकार, मोदी जी से हम सभी को सदैव “राष्ट्रहित सर्वोपरि” की प्रेरणा मिलती है।

ऐसे अद्वितीय नेता के मार्गदर्शन में देशसेवा का अवसर…

— Amit Shah (@AmitShah) September 17, 2023

हर भारतीय के दिल में बसने वाले एक अद्भुत नेता…श्री नरेंद्र मोदी #HappyBdayModiji pic.twitter.com/sWGtp845b7

— Amit Shah (@AmitShah) September 17, 2023


(Release ID: 1958179) Visitor Counter : 132