ಸಂಪುಟ
azadi ka amrit mahotsav g20-india-2023

3ನೇ ಹಂತದ ಇ-ಕೋರ್ಟ್(ವಿದ್ಯುನ್ಮಾನ ನ್ಯಾಯಾಲಯಗಳು)ಗಳಿಗೆ 4 ವರ್ಷಗಳ ಅವಧಿಗೆ ಕೇಂದ್ರ ಸಂಪುಟ ಅನುಮೋದನೆ

Posted On: 13 SEP 2023 3:30PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು 3ನೇ ಹಂತದ ವಿದ್ಯುನ್ಮಾನ-ನ್ಯಾಯಾಲಯ(ಇ-ಕೋರ್ಟ್ಸ್)ಗಳಿಗೆ  2023ರಿಂದ ಅನ್ವಯವಾಗುವಂತೆ 4  ವರ್ಷಗಳ ಅವಧಿವರೆಗೆ 7,210 ಕೋಟಿ ರೂ. ಹಣಕಾಸಿನ ವೆಚ್ಚದೊಂದಿಗೆ ಕೇಂದ್ರ ವಲಯದ ಯೋಜನೆಯಾಗಿ ಅನುಮೋದನೆ ನೀಡಿದೆ.

ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ "ಸಬ್ಕಾ ಸಾಥ್, ಸಬ್ಕಾ ವಿಕಾಸ್ ಮತ್ತು ಸಬ್ಕಾ ವಿಶ್ವಾಸ"ದ ದೃಷ್ಟಿಕೋನಕ್ಕೆ ಅನುಗುಣವಾಗಿ, ತಂತ್ರಜ್ಞಾನ ಬಳಸಿಕೊಂಡು ನ್ಯಾಯ ಲಭ್ಯತೆ(ಪ್ರವೇಶ) ಸುಧಾರಿಸಲು ಇ-ಕೋರ್ಟ್ಸ್ ಮಾದರಿಯು ಕಾರ್ಯಾಚರಣೆ ಮಾದರಿ(ಮಿಷನ್ ಮೋಡ್) ಯೋಜನೆಯು ಪ್ರಧಾನ ಚಾಲಕಶಕ್ತಿಯಾಗಿದೆ. ರಾಷ್ಟ್ರೀಯ ಇ-ಆಡಳಿತ ಯೋಜನೆಯ ಭಾಗವಾಗಿ, ಇ-ಕೋರ್ಟ್‌ಗಳ ಯೋಜನೆಯು ಭಾರತೀಯ ನ್ಯಾಯಾಂಗದ ವ್ಯವಸ್ಥೆಯಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನವನ್ನು  ಸಕ್ರಿಯಗೊಳಿಸಲು 2007ರಿಂದ ಅನುಷ್ಠಾನದಲ್ಲಿದೆ. ಇದರ 2ನೇ ಹಂತದ ಯೋಜನೆ 2023ರಲ್ಲಿ ಮುಕ್ತಾಯವಾಗಿದೆ. ಭಾರತದಲ್ಲಿ ಇ-ಕೋರ್ಟ್‌ಗಳ ಯೋಜನೆಯ 3ನೇ ಹಂತವು  "ಪ್ರವೇಶ (ಲಭ್ಯತೆ) ಮತ್ತು ಸೇರ್ಪಡೆ" ತತ್ವಶಾಸ್ತ್ರದಲ್ಲಿ ಬೇರೂರಿದೆ.

1 ಮತ್ತು 2ನೇ ಹಂತದ ಯೋಜನೆಗಳ ಲಾಭಗಳನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು, ಇ-ಕೋರ್ಟ್‌ಗಳ 3ನೇ ಹಂತದಲ್ಲಿ ನ್ಯಾಯಾಲಯಗಳ ಸಂಪೂರ್ಣ ದಾಖಲೆಗಳ ಡಿಜಿಟಲೀಕರಣದ ಮೂಲಕ ಡಿಜಿಟಲ್, ಆನ್‌ಲೈನ್ ಮತ್ತು ಪೇಪರ್‌ಲೆಸ್ ನ್ಯಾಯಾಲಯಗಳಾಗಿ ಪರಿವರ್ತಿಸಿ, ಸುಲಭವಾಗಿ ನ್ಯಾಯದಾನ ಸಿಗುವ ಆಡಳಿತ ಪ್ರಾರಂಭಿಸುವ ಗುರಿ ಹೊಂದಿದೆ. ಪಾರಂಪರಿಕ ದಾಖಲೆಗಳು ಸೇರಿದಂತೆ ಇ-ಸೇವಾ ಕೇಂದ್ರಗಳಲ್ಲಿ ಎಲ್ಲಾ ನ್ಯಾಯಾಲಯಗಳ ಇ-ಫೈಲಿಂಗ್, ಇ-ಪಾವತಿಗಳನ್ನು ಸಾರ್ವತ್ರೀಕರಣಗೊಳಿಸುವುದು, ಪ್ರಕರಣಗಳನ್ನು ನಿಗದಿಪಡಿಸುವಾಗ ಅಥವಾ ಆದ್ಯತೆ ನೀಡುವಾಗ ನ್ಯಾಯಾಧೀಶರು ಮತ್ತು ನೋಂದಾವಣೆಗಳಿಗಾಗಿ ಡೇಟಾ(ದತ್ತಾಂಶ) ಆಧರಿತ ನಿರ್ಧಾರವನ್ನು ಸಕ್ರಿಯಗೊಳಿಸುವ ಬುದ್ಧಿವಂತ ಸ್ಮಾರ್ಟ್ ವ್ಯವಸ್ಥೆಗಳನ್ನು ಇದು ಸಕ್ರಿಯಗೊಳಿಸುತ್ತದೆ, ಒಂದೇ ಸ್ಥಳದಲ್ಲಿ ಇರಿಸುತ್ತದೆ. 3ನೇ ಹಂತದ ಮುಖ್ಯ ಉದ್ದೇಶವೆಂದರೆ, ನ್ಯಾಯಾಂಗಕ್ಕಾಗಿ ಏಕೀಕೃತ ಅಥವಾ ಅನನ್ಯ ತಂತ್ರಜ್ಞಾನ ವೇದಿಕೆ ರಚಿಸುವುದಾಗಿದೆ. ಇದು ನ್ಯಾಯಾಲಯಗಳು, ದಾವೆದಾರರು ಮತ್ತು ಇತರೆ ಪಾಲುದಾರರ ನಡುವೆ ತಡೆರಹಿತ ಮತ್ತು ಕಾಗದಮುಕ್ತ ಸಂಪರ್ಕ ಅಥವಾ ಸಂವಹನ(ಇಂಟರ್ಫೇಸ್) ಒದಗಿಸುತ್ತದೆ.

3ನೇ ಹಂತದ ಇ-ಕೋರ್ಟ್ ಅಂಶಗಳು ಈ ಕೆಳಗಿನಂತಿವೆ:

 

 

ಸರಣಿ ಸಂಖ್ಯೆ

ಯೋಜನೆಯ ಅಂಶಗಳು

ಅಂದಾಜು ವೆಚ್ಚ(ಒಟ್ಟು ಕೋಟಿ ರೂ.ಗಳಲ್ಲಿ)

 

1

ಪ್ರಕರಣದ ದಾಖಲೆಗಳ ಸ್ಕ್ಯಾನಿಂಗ್, ಡಿಜಿಟಲೀಕರಣ ಮತ್ತು ಡಿಜಿಟಲ್ ಸಂರಕ್ಷಣೆ

2038.40

 

2

ಕ್ಲೌಡ್ ಮೂಲಸೌಕರ್ಯ

1205.23

 

3

ಹಾಲಿ ಕೋರ್ಟ್ ಗಳಿಗೆ ಹೆಚ್ಚುವರಿ ಹಾರ್ಡ್ ವೇರ್ ಪೂರೈಕೆ

643.66

 

4

ಹೊಸದಾಗಿ ಸ್ಥಾಪಿಸಿರುವ ಕೋರ್ಟ್ ಗಳಿಗೆ ಮೂಲಸೌಕರ್ಯ

426.25

 

5

1,150 ವರ್ಚುವಲ್ ಕೋರ್ಟ್ ಗಳ ಸ್ಥಾಪನೆ

413.08

 

 

6

 

ಸಂಪೂರ್ಣ ಕಾರ್ಯಪ್ರವೃತ್ತ 4400 ಇ-ಸೇವಾ ಕೇಂದ್ರಗಳು

394.48

7

ಪೇಪರ್ ಲೆಸ್ ಕೋರ್ಟ್

359.20

8

ಸಿಸ್ಟಮ್ ಮತ್ತು ಅಪ್ಲಿಕೇಶನ್ ಸಾಫ್ಟ್‌ವೇರ್ ಅಭಿವೃದ್ಧಿ

243.52

9

ಸೋಲಾರ್ ಪವರ್ ಬ್ಯಾಕ್ಅಪ್

229.50

10

ವೀಡಿಯೊ ಕಾನ್ಫರೆನ್ಸಿಂಗ್ ವ್ಯವಸ್ಥೆ ನಿರ್ಮಾಣ

228.48

11

ಇ-ಫೈಲಿಂಗ್

215.97

12

ಸಂಪರ್ಕ (ಪ್ರಾಥಮಿಕ + ಪುನರಾವರ್ತನೆ)

208.72

13

ಸಾಮರ್ಥ್ಯ ನಿರ್ಮಾಣ

208.52

14

300 ಕೋರ್ಟ್ ಕಾಂಪ್ಲೆಕ್ಸ್ ಕೋರ್ಟ್ ರೂಂನಲ್ಲಿ ಕ್ಲಾಸ್ (ಲೈವ್-ಆಡಿಯೋ ವಿಷುಯಲ್ ಸ್ಟ್ರೀಮಿಂಗ್ ಸಿಸ್ಟಮ್)

112.26

15

ಮಾನವ ಸಂಪನ್ಮೂಲ

56.67

16

ಭವಿಷ್ಯದ ತಂತ್ರಜ್ಞಾನ ಪ್ರಗತಿಗಳು

53.57

17

ನ್ಯಾಯಾಂಗ ಪ್ರಕ್ರಿಯೆ ಪುನಾರಚನೆ

33.00

18

ವಿಶೇಷಚೇತನಸ್ನೇಹಿ ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನ ಸೌಲಭ್ಯಗಳು

27.54

19

ಎನ್ಎಸ್ ಟಿಇಪಿ

25.75

20

ಆನ್ಲೈನ್ ವ್ಯಾಜ್ಯ ಪರಿಹಾರ ವ್ಯವಸ್ಥೆ

23.72

21

ಜ್ಞಾನ ನಿರ್ವಹಣೆ ವ್ಯವಸ್ಥೆ

23.30

22

ಉಚ್ಚ ನ್ಯಾಯಾಲಯಗಳು ಮತ್ತು ಜಿಲ್ಲಾ ನ್ಯಾಯಾಲಯಗಳಲ್ಲಿ ಇ-ಕಚೇರಿ

21.10

23

ಅಂತರ್-ಕಾರ್ಯಾಚರಣೆಯ ಇಂಟರ್-ಆಪರೇಬಲ್ ಕ್ರಿಮಿನಲ್ ಜಸ್ಟಿಸ್ ಸಿಸ್ಟಮ್ (ICJS) ನೊಂದಿಗೆ ಏಕೀಕರಣ

11.78

24

ಎಸ್3ಡಬ್ಲ್ಯುಎಎಎಸ್ ವೇದಿಕೆ

6.35

 

ಒಟ್ಟು

7210

 

 

 

 

 

 

ಯೋಜನೆಯ ನಿರೀಕ್ಷಿತ ಫಲಿತಾಂಶಗಳು ಈ ಕೆಳಗಿನಂತಿವೆ:

  • ತಂತ್ರಜ್ಞಾನದ ಪ್ರವೇಶ ಹೊಂದಿರದ ನಾಗರಿಕರು ಇ-ಸೇವಾ ಕೇಂದ್ರಗಳಿಂದ ನ್ಯಾಯಾಂಗ ಸೇವೆಗಳನ್ನು ಪ್ರವೇಶಿಸಬಹುದು, ಹೀಗಾಗಿ ಡಿಜಿಟಲ್ ವಿಭಜನೆಯನ್ನು ಕಡಿಮೆಗೊಳಿಸಬಹುದು.
  • ನ್ಯಾಯಾಲಯದ ದಾಖಲೆಗಳ ಡಿಜಿಟಲೀಕರಣವು ಯೋಜನೆಯಲ್ಲಿ ಎಲ್ಲಾ ಇತರೆ ಡಿಜಿಟಲ್ ಸೇವೆಗಳಿಗೆ ಅಡಿಪಾಯ ಹಾಕುತ್ತದೆ. ಕಾಗದ-ಆಧಾರಿತ ಫೈಲಿಂಗ್‌ಗಳನ್ನು ಕಡಿಮೆ ಮಾಡುವ ಮತ್ತು ದಾಖಲೆಗಳ ಭೌತಿಕ ಚಲನೆ ಕಡಿಮೆ ಮಾಡುವ ಪ್ರಕ್ರಿಯೆಗಳು ಹೆಚ್ಚು ಪರಿಸರಸ್ನೇಹಿಯಾಗಲು ಶಕ್ತಗೊಳಿಸುತ್ತದೆ.
  • ನ್ಯಾಯಾಲಯ ಪ್ರಕ್ರಿಯೆಗಳಲ್ಲಿ ವರ್ಚುವಲ್ ಭಾಗವಹಿಸುವಿಕೆಯು ನ್ಯಾಯಾಲಯ ಪ್ರಕ್ರಿಯೆಗಳಿಗೆ ತಗುಲುವ ವೆಚ್ಚಗಳನ್ನು ಕಡಿಮೆ ಮಾಡುತ್ತದೆ, ಉದಾಹರಣೆಗೆ ಸಾಕ್ಷಿಗಳು, ನ್ಯಾಯಾಧೀಶರು ಮತ್ತು ಇತರ ಪಾಲುದಾರರಿಗೆ ಪ್ರಯಾಣ ವೆಚ್ಚ ಉಳಿಸುತ್ತದೆ.
  • ಎಲ್ಲಿಂದಲಾದರೂ, ಯಾವುದೇ ಸಮಯದಲ್ಲಿ ನ್ಯಾಯಾಲಯ ಶುಲ್ಕಗಳು, ದಂಡಗಳು ಮತ್ತು ಪೆನಾಲ್ಟಿಗಳನ್ನು ಪಾವತಿ ಮಾಡಬಹುದು.
  • ದಾಖಲೆಗಳನ್ನು ಸಲ್ಲಿಸಲು ಅಗತ್ಯವಿ ಸಮಯ ಮತ್ತು ಶ್ರಮ ಕಡಿಮೆ ಮಾಡಲು ಇ-ಫೈಲಿಂಗ್‌ನ ವಿಸ್ತರಣೆ. ದಾಖಲೆಗಳನ್ನು ಸ್ವಯಂಚಾಲಿತವಾಗಿ ಪರಿಶೀಲಿಸುವುದರಿಂದ ಇದು ಮಾನವ ದೋಷಗಳನ್ನು ಕಡಿಮೆ ಮಾಡುತ್ತದೆ ಕಾಗದ ಆಧಾರಿತ ದಾಖಲೆಗಳ ಹೆಚ್ಚಿನ ಸೃಜನೆಯನ್ನು ತಡೆಯುತ್ತದೆ.
  • "ಸ್ಮಾರ್ಟ್" ಪರಿಸರ ವ್ಯವಸ್ಥೆ ನಿರ್ಮಿಸುವ ಮೂಲಕ ಸುಗಮ ಬಳಕೆದಾರ ಅನುಭವ ಒದಗಿಸಲು ಕೃತಕ ಬುದ್ಧಿಮತ್ತೆ ಮತ್ತು ಅದರ ಉಪವಿಭಾಗಗಳಾದ ಮೆಷಿನ್ ಲರ್ನಿಂಗ್, ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಷನ್(OCR), ನ್ಯಾಚುರಲ್ ಲ್ಯಾಂಗ್ವೇಜ್ ಪ್ರೊಸೆಸಿಂಗ್ (NLP)ಯಂತಹ ಇತ್ತೀಚಿನ ತಂತ್ರಜ್ಞಾನಗಳ ಬಳಕೆ ಉತ್ತೇಜಿಸುತ್ತದೆ. ನೋಂದಾವಣೆಗಳು ಕಡಿಮೆ ದತ್ತಾಂಶ ನಮೂದು ಮತ್ತು ಕನಿಷ್ಠ ಮಟ್ಟದ ಫೈಲ್ ಪರಿಶೀಲನೆ ಹೊಂದಿದ್ದು, ಉತ್ತಮ ನಿರ್ಧಾರ ತಳೆಯುವಿಕೆ ಮತ್ತು ನೀತಿ ನಿರೂಪಣೆಯನ್ನು ಸುಗಮಗೊಳಿಸುತ್ತದೆ. ನ್ಯಾಯಾಧೀಶರು ಮತ್ತು ನೋಂದಾವಣೆಗಳಿಗೆ ಡೇಟಾ ಆಧಾರಿತ ನಿರ್ಧಾರಗಳನ್ನು ಸಕ್ರಿಯಗೊಳಿಸುವ ಬುದ್ಧಿವಂತ ಸ್ಮಾರ್ಟ್ ಶೆಡ್ಯೂಲಿಂಗ್ ವ್ಯವಸ್ಥೆ ಕಲ್ಪಿಸುತ್ತದೆ, ನ್ಯಾಯಾಧೀಶರು ಮತ್ತು ವಕೀಲರ ಸಾಮರ್ಥ್ಯದ ಹೆಚ್ಚಿನ ಭವಿಷ್ಯವನ್ನು ಅತ್ಯುತ್ತಮಗೊಳಿಸಲು (ಆಪ್ಟಿಮೈಸೇಶನ್‌) ಅವಕಾಶ ನೀಡುತ್ತದೆ.
  • ಸಂಚಾರ ಉಲ್ಲಂಘನೆ ಪ್ರಕರಣಗಳ ತೀರ್ಪು ಮೀರಿ ವರ್ಚುವಲ್ ನ್ಯಾಯಾಲಯಗಳ ವಿಸ್ತರಣೆ, ಆ ಮೂಲಕ ನ್ಯಾಯಾಲಯದಲ್ಲಿ ದಾವೆದಾರರು ಅಥವಾ ವಕೀಲರ ಉಪಸ್ಥಿತಿಯನ್ನು ನಿಯಂತ್ರಿಸುತ್ತದೆ.
  • ನ್ಯಾಯಾಲಯದ ವಿಚಾರಣೆಗಳಲ್ಲಿ ಹೆಚ್ಚಿನ ನಿಖರತೆ ಮತ್ತು ಪಾರದರ್ಶಕತೆ ತರುತ್ತದೆ
  • ಎನ್‌ಎಸ್‌ಟಿಇಪಿ (ರಾಷ್ಟ್ರೀಯ ಸೇವೆ ಮತ್ತು ಎಲೆಕ್ಟ್ರಾನಿಕ್ ಪ್ರಕ್ರಿಯೆಗಳ ಟ್ರ್ಯಾಕಿಂಗ್) ಅನ್ನು ಮತ್ತಷ್ಟು ವಿಸ್ತರಿಸುವ ಮೂಲಕ ನ್ಯಾಯಾಲಯದ ಸಮನ್ಸ್‌ಗಳ ಸ್ವಯಂಚಾಲಿತ ವಿತರಣೆಗೆ ಒತ್ತು ನೀಡುತ್ತದೆ. ಇದರಿಂದ ಪ್ರಯೋಗಗಳಲ್ಲಿನ ವಿಳಂಬವನ್ನು ತೀವ್ರವಾಗಿ ಕಡಿಮೆ ಮಾಡುತ್ತದೆ.
  • ನ್ಯಾಯಾಲಯ ಪ್ರಕ್ರಿಯೆಗಳಲ್ಲಿ ಉದಯೋನ್ಮುಖ ತಂತ್ರಜ್ಞಾನಗಳ ಬಳಕೆಯು ಅವುಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುತ್ತದೆ ಮತ್ತು ದಕ್ಷತೆ ಹೆಚ್ಚಿಸುತ್ತದೆ. ಆದ್ದರಿಂದ ಬಾಕಿ ಪ್ರಕರಣಗಳ ಕಡಿತಕ್ಕೆ ಗಣನೀಯ ಕೊಡುಗೆ ನೀಡುತ್ತದೆ.‌

https://pib.gov.in/PressReleasePage.aspx?PRID=1907546

https://pib.gov.in/PressReleasePage.aspx?PRID=1910056

https://pib.gov.in/PressReleasePage.aspx?PRID=1941500

https://pib.gov.in/PressReleasePage.aspx?PRID=1945462

https://pib.gov.in/PressReleasePage.aspx?PRID=1884164

https://pib.gov.in/PressReleasePage.aspx?PRID=1848737

https://static.pib.gov.in/WriteReadData/specificdocs/documents/2023/sep/doc2023913251301.pdf

 

 

*****

 



(Release ID: 1957048) Visitor Counter : 126