ಪ್ರಧಾನ ಮಂತ್ರಿಯವರ ಕಛೇರಿ
ರಾಜಸ್ಥಾನದ ಭರತ್ ಪುರದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಾದ ಜೀವಹಾನಿಗೆ ಸಂತಾಪ ಸೂಚಿಸಿದ ಪ್ರಧಾನಮಂತ್ರಿಗಳು
PMNRF ನಿಂದ ಎಕ್ಸಗ್ರೇಷಿಯಾ ಘೋಷಣೆ
Posted On:
13 SEP 2023 1:31PM by PIB Bengaluru
ರಾಜಸ್ಥಾನದ ಭರತ್ ಪುರದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಾದ ಜೀವಹಾನಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬಕ್ಕೆ PMNRF ನಿಂದ ಅನುಕಂಪದ ಆಧಾರದ ಮೇಲೆ ತಲಾ 2 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ ತಲಾ ರೂ 50,000 ಘೋಷಣೆ ಮಾಡಿದ್ದಾರೆ
ಪ್ರಧಾನಮಂತ್ರಿ ಕಚೇರಿ ಹೀಗೆ ಟ್ವೀಟ್ ಮಾಡಿದೆ;
“ರಾಜಸ್ಥಾನದ ಭರತ್ ಪುರದಲ್ಲಿ ಘಟಿಸಿದ ರಸ್ತೆ ಅಪಘಾತ ತೀವ್ರ ನೋವಿನ ಸಂಗತಿಯಾಗಿದೆ. ಇದರಲ್ಲಿ ಗುಜರಾತ್ ನಿಂದ ಧಾರ್ಮಿಕ ಯಾತ್ರೆಗೆ ತೆರಳುತ್ತಿದ್ದ ವೇಳೆ ಪ್ರಾಣ ಕಳೆದುಕೊಂಡ ಭಕ್ತರ ಕುಟುಂಬಗಳಿಗೆ ನನ್ನ ಸಂತಾಪ. ಎಲ್ಲಾ ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಕೂಡ ಹಾರೈಸುತ್ತೇನೆ.”
“ರಾಜಸ್ಥಾನದ ಭರತ್ ಪುರದಲ್ಲಿ ಸಂಭವಿಸಿದ ರಸ್ತೆ ಅಪಘಾತಲ್ಲಿ ಮೃತರಾದವರ ಕುಟುಂಬಕ್ಕೆ PMNRF ನಿಂದ ಅನುಕಂಪದ ಆಧಾರದ ಮೇಲೆ ಪ್ರಧಾನಮಂತ್ರಿಯವರು ತಲಾ 2 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ ತಲಾ ರೂ 50,000 ಘೋಷಣೆ ಮಾಡಿದ್ದಾರೆ”.
***
(Release ID: 1956962)
Read this release in:
Urdu
,
English
,
Hindi
,
Marathi
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam