ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav g20-india-2023

ಜಿ20 ಶೃಂಗಸಭೆಗೆ ಆಗಮಿಸುತ್ತಿರುವ ನಾಯಕರನ್ನು ಸ್ವಾಗತಿಸಿದ ಪ್ರಧಾನಮಂತ್ರಿ

Posted On: 08 SEP 2023 8:04PM by PIB Bengaluru

2023 ರ ಸೆಪ್ಟೆಂಬರ್ 9 ಮತ್ತು 10 ರಂದು ನವದೆಹಲಿಯಲ್ಲಿ ನಡೆಯಲಿರುವ ಜಿ20 ಶೃಂಗಸಭೆಗೆ ಆಗಮಿಸುತ್ತಿರುವ ನಾಯಕರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆತ್ಮೀಯ ಸ್ವಾಗತವನ್ನು ಕೋರಿದ್ದಾರೆ.

ಮಾರಿಷಸ್ ಪ್ರಧಾನಮಂತ್ರಿಯವರನ್ನು ಸ್ವಾಗತಿಸುತ್ತಾ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹೀಗೆ ಬರೆದಿದ್ದಾರೆ:

“ಭಾರತಕ್ಕೆ ಆಗಮಿಸಿದ ನನ್ನ ಸ್ನೇಹಿತ ಪ್ರಧಾನಮಂತ್ರಿ ಶ್ರೀ ಪ್ರವಿಂದ್ ಕುಮಾರ್ ಜುಗ್ನಾಥ್ ( @KumarJugnauth ) ಅವರಿಗೆ ಸುಸ್ವಾಗತ. ಇಂದು ಆನಂತರ ನಡೆಯಲಿರುವ ನಮ್ಮ ಸಭೆಗಾಗಿ ನಾನು ಎದುರು ನೋಡುತ್ತಿದ್ದೇನೆ”. 

ಅಂತರಾಷ್ಟ್ರೀಯ ಹಣಕಾಸು ನಿಧಿಯ ವ್ಯವಸ್ಥಾಪಕ ನಿರ್ದೇಶಕರನ್ನು ಸ್ವಾಗತಿಸುತ್ತಾ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹೀಗೆ ಬರೆದಿದ್ದಾರೆ:

" ಶ್ರೀಮತಿ ಕ್ರಿಸ್ಟಲಿನಾ ಜಾರ್ಜಿವಾ (@KGeorgieva ) ಅವರೇ, ತಮ್ಮ ಮಾತನ್ನು ಸಂಪೂರ್ಣವಾಗಿ ಒಪ್ಪುತ್ತೇನೆ. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಮತ್ತು ನಮ್ಮ ಕಾಲದ ಸಮಕಾಲೀನ ಒತ್ತಡದ ಸವಾಲುಗಳನ್ನು ತಗ್ಗಿಸೋಣ ಮತ್ತು ನಮ್ಮ ಯುವಕರಿಗೆ ಉತ್ತಮ ಭವಿಷ್ಯವನ್ನು ಖಚಿತಪಡಿಸಿಕೊಳ್ಳೋಣ. ನೀವು ದೆಹಲಿಗೆ ಬಂದಾಗ ನಮ್ಮ ಸಂಸ್ಕೃತಿಯ ಬಗ್ಗೆ ನೀವು ತೋರಿದ ಪ್ರೀತಿಯನ್ನು ನಾನು ಪ್ರಶಂಸಿಸುತ್ತೇನೆ.

ಯುರೋಪಿಯನ್ ಯೂನಿಯನ್ ಆಯೋಗದ ಅಧ್ಯಕ್ಷರನ್ನು ಸ್ವಾಗತಿಸುತ್ತಾ, ಸ್ವಾಗತಿಸುತ್ತಾ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹೀಗೆ ಬರೆದಿದ್ದಾರೆ:

“ಶ್ರೀಮತಿ ಉರ್ಸುಲಾ ವಾನ್ ಡೆರ್ ಲೇಯೆನ್ ( @vonderleyen )ಅವರೇ, ಜಿ 20 ಶೃಂಗಸಭೆಗಾಗಿ ದೆಹಲಿಗೆ ಬಂದಿರುವ ನಿಮ್ಮನ್ನು ನೋಡಲು ಸಂತೋಷವಾಗಿದೆ,. ಯುರೋಪಿಯನ್ ಯೂನಿಯನ್ ಆಯೋಗ( @EU_commission ) ಇದರ ಬೆಂಬಲ ಮತ್ತು ಬದ್ಧತೆಗೆ ಕೃತಜ್ಞತೆಗಳು. ಒಟ್ಟಾರೆಯಾಗಿ, ನಾವು ಎದುರಿಸುತ್ತಿರುವ ಸಮಕಾಲೀನ ಸವಾಲುಗಳನ್ನು ನಾವು ಒಟ್ಟಾಗಿ ಪರಿಹರಿಸುತ್ತೇವೆ. ಈ ನಿಟ್ಟಿನಲ್ಲಿ ಫಲಪ್ರದ ಚರ್ಚೆಗಳು ಮತ್ತು ಸಹಯೋಗದ ಕ್ರಮಗಳಿಗಾಗಿ ಎದುರು ನೋಡುತ್ತಿದ್ದೇನೆ.”  

ಯುನೈಟೆಡ್ ಕಿಂಗ್ ಡಮ್ ನ ಪ್ರಧಾನಮಂತ್ರಿಯವರನ್ನು ಸ್ವಾಗತಿಸುತ್ತಾ,  ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹೀಗೆ ಬರೆದಿದ್ದಾರೆ:

“ಶ್ರೀ ರಿಷಿ ಸುನಕ್ ( @RishiSunak ) ಅವರಿಗೆ ಸ್ವಾಗತ! ನಾಳೆಯ ಉತ್ತಮ ಗ್ರಹಕ್ಕಾಗಿ ಇಂದು ನಾವು ಒಟ್ಟಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ಫಲಪ್ರದ ಶೃಂಗಸಭೆಯನ್ನು ಎದುರು ನೋಡುತ್ತಿದ್ದೇನೆ.”

 


ಸ್ಪೇನ್ ನಿಯೋಗವನ್ನು ಸ್ವಾಗತಿಸುತ್ತಾ, ಪ್ರಧಾನಮಂತ್ರಿಯವರು ಸ್ಪೇನ್ ಅಧ್ಯಕ್ಷರನ್ನು ಉದ್ದೇಶಿಸಿ ತಮ್ಮ ಎಕ್ಸ್ ಖಾತೆಯಲ್ಲಿ ಹೀಗೆ ಬರೆದಿದ್ದಾರೆ:

" ಅಧ್ಯಕ್ಷ ಶ್ರೀ ಪೆಡ್ರೊ ಸ್ಯಾಂಚೆಜ್ ( @sanchezcastejon ) ಅವರೇ, ನಿಮ್ಮ ಉತ್ತಮ ಆರೋಗ್ಯ ಮತ್ತು ಶೀಘ್ರ ಚೇತರಿಕೆಗಾಗಿ ಪ್ರಾರ್ಥಿಸುತ್ತಿದ್ದೇನೆ. ಈ ಬಾರಿಯ ಜಿ20 ಶೃಂಗಸಭೆಯಲ್ಲಿ ನಿಮ್ಮ ಒಳನೋಟವುಳ್ಳ ಪರಿವೀಕ್ಷಣೆಗಳನ್ನು ನಾವು ಕಳೆದುಕೊಳ್ಳುತ್ತೇವೆ. ಅದೇ ಸಮಯದಲ್ಲಿ, ಭಾರತಕ್ಕೆ ಬಂದಿರುವ ಸ್ಪೇನ್ ನಿಯೋಗಕ್ಕೆ ಆತ್ಮೀಯ ಸ್ವಾಗತ ಕೋರುತ್ತೇನೆ.”

ಅರ್ಜೆಂಟೀನಾದ ಅಧ್ಯಕ್ಷರನ್ನು ಸ್ವಾಗತಿಸುತ್ತಾ,  ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹೀಗೆ ಬರೆದಿದ್ದಾರೆ:

“ಅಧ್ಯಕ್ಷ  ಶ್ರೀ ಆಲ್ಬರ್ಟೊ ಫೆರ್ನಾಂಡಿಸ್ ( @alferdez ) ಅವರೇ, ನಿಮ್ಮನ್ನು ಭಾರತಕ್ಕೆ ಸ್ವಾಗತಿಸಲು ಬಹಳಷ್ಟು ಸಂತೋಷವಾಗುತ್ತಿದೆ. ಜಿ20 ಶೃಂಗಸಭೆಯ ಪ್ರಕ್ರಿಯೆಯಲ್ಲಿ ನಿಮ್ಮ ಒಳನೋಟವುಳ್ಳ ಪರಿವೀಕ್ಷಣೆಗಳನ್ನು ಎದುರುನೋಡುತ್ತಿದ್ದೇನೆ.

 

   

ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ಅಧ್ಯಕ್ಷರನ್ನು ಸ್ವಾಗತಿಸುತ್ತಾ,  ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹೀಗೆ ಬರೆದಿದ್ದಾರೆ:

“ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷ ಶ್ರೀ ಜೋ ಬಿಡನ್ ( @POTUS @JoeBiden )  ಅವರೇ , ತಮ್ಮನ್ನು 7, ಲೋಕ ಕಲ್ಯಾಣ ಮಾರ್ಗ, ನವದೆಹಲಿಗೆ ಸ್ವಾಗತಿಸಲು ಸಂತೋಷವಾಗುತ್ತಿದೆ. ನಮ್ಮ ಸಭೆಯು ಬಹಳಷ್ಟು ಫಲಪ್ರದಾಯಕವಾಗಿತ್ತು. ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ನಡುವಿನ ಆರ್ಥಿಕ ಮತ್ತು ಜನರಿಂದ ಜನರ ಪರಸ್ಪರ ಸಂಪರ್ಕವನ್ನು ಮತ್ತಷ್ಟು ಹೆಚ್ಚಿಸುವ ಹಲವಾರು ವಿಷಯಗಳನ್ನು ನಾವು ಚರ್ಚಿಸಲು ಸಾಧ್ಯವಾಯಿತು. ನಮ್ಮ ರಾಷ್ಟ್ರಗಳ ನಡುವಿನ ಸ್ನೇಹವು ಜಾಗತಿಕ ಒಳಿತನ್ನು ಹೆಚ್ಚಿಸುವಲ್ಲಿ ಮಹತ್ತರವಾದ ಪಾತ್ರವನ್ನು ವಹಿಸುತ್ತದೆ.”

ಇಂಡೋನೇಷ್ಯಾದ ಅಧ್ಯಕ್ಷರನ್ನು ಸ್ವಾಗತಿಸುತ್ತಾ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹೀಗೆ ಬರೆದಿದ್ದಾರೆ: 

" ಅಧ್ಯಕ್ಷ ಶ್ರೀ ಜೋಕೊ ವಿಡೋಡೊ ( @jokowi ) ಅವರಿಗೆ ಸ್ವಾಗತ. ಜಕಾರ್ತಾದಲ್ಲಿ ನಡೆದ ಶೃಂಗಸಭೆಗಳ ನಂತರ, ಜಿ20 ಶೃಂಗಸಭೆಗಾಗಿ ಈಗ ದೆಹಲಿಯಲ್ಲಿ ನಿಮ್ಮನ್ನು ನೋಡುತ್ತಿರುವುದು ಅದ್ಭುತ ಅನಿಸುತ್ತಿದೆ."

ಬ್ರೆಜಿಲ್ ಅಧ್ಯಕ್ಷರನ್ನು ಸ್ವಾಗತಿಸುತ್ತಾ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹೀಗೆ ಬರೆದಿದ್ದಾರೆ: 

"ಅಧ್ಯಕ್ಷ ಶ್ರೀ ಲೂಲಾ ( @LulaOficial  ) ಅವರನ್ನು ಭಾರತಕ್ಕೆ ಸ್ವಾಗತಿಸಲು ಸಂತೋಷವಾಗುತ್ತಿದೆ. ನಾನು ಅವರನ್ನು ಇತ್ತೀಚೆಗೆ ಜೋಹಾನ್ಸ್ಬರ್ಗ್ನಲ್ಲಿ ಭೇಟಿಯಾಗಿದ್ದೆ ಮತ್ತು ಈಗ ಜಿ20 ಶೃಂಗಸಭೆಯಲ್ಲಿ ಅವರನ್ನು ಮತ್ತೆ ಭೇಟಿಯಾಗುವ ಅವಕಾಶ ಸಿಕ್ಕಿದ್ದಕ್ಕೆ ನನಗೆ ಬಹಳ ಸಂತೋಷವಾಗಿದೆ. ವಿವಿಧ ವಿಷಯಗಳ ಬಗ್ಗೆ ಅವರ ಅಭಿಪ್ರಾಯಗಳನ್ನು ಕಾತರದಿಂದ ನಿರೀಕ್ಷಿಸುತ್ತಿದ್ದೇನೆ."  

 

 

*****(Release ID: 1955763) Visitor Counter : 89