ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಭಾರತ ಸರ್ಕಾರದ ವಾರ್ತಾ ಶಾಖೆಯ ಪ್ರಧಾನ ಮಹಾನಿರ್ದೇಶಕರಾಗಿ ಶ್ರೀ ಮನೀಶ್ ದೇಸಾಯಿ ಅಧಿಕಾರ ಸ್ವೀಕಾರ

Posted On: 01 SEP 2023 5:33PM by PIB Bengaluru

ಶ್ರೀ ಮನೀಶ್ ದೇಸಾಯಿ ಅವರು ಭಾರತ ಸರ್ಕಾರದ ವಾರ್ತಾ ಶಾಖೆಯ (ಪಿಐಬಿ) ಪ್ರಧಾನ ಮಹಾನಿರ್ದೇಶಕರಾಗಿ ಇಂದು ಅಧಿಕಾರ ವಹಿಸಿಕೊಂಡರು. ಶ್ರೀ ರಾಜೇಶ್ ಮಲ್ಹೋತ್ರಾ ಅವರು ನಿನ್ನೆ ನಿವೃತ್ತರಾದ ನಂತರ ಶ್ರೀ ದೇಸಾಯಿ ಅಧಿಕಾರ ವಹಿಸಿಕೊಂಡರು.

https://static.pib.gov.in/WriteReadData/userfiles/image/image0019BZK.jpg

ಶ್ರೀ ಮನೀಶ್ ದೇಸಾಯಿ, 1989 ರ ತಂಡದ ಭಾರತೀಯ ಮಾಹಿತಿ ಸೇವೆ ಅಧಿಕಾರಿಯಾಗಿದ್ದಾರೆ. ಇದಕ್ಕೂ ಮೊದಲು, ಶ್ರೀ ದೇಸಾಯಿ ಅವರು ಕೇಂದ್ರೀಯ ಸಂಪರ್ಕ ಬ್ಯೂರೋದ ಪ್ರಧಾನ ಮಹಾನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ, ಅಲ್ಲಿ ಅವರು ಸರ್ಕಾರಿ ಜಾಹೀರಾತು ಮತ್ತು ಔಟ್‌ರೀಚ್ ಚಟುವಟಿಕೆಗಳನ್ನು ನೋಡಿಕೊಳ್ಳುತ್ತಿದ್ದರು.

ಮೂರು ದಶಕಗಳ ಕಾಲದ ತಮ್ಮ ವೃತ್ತಿಜೀವನದಲ್ಲಿ, ಶ್ರೀ ದೇಸಾಯಿ ಅವರು ಮಹಾನಿರ್ದೇಶಕರು ಚಲನಚಿತ್ರ ವಿಭಾಗ, ಹೆಚ್ಚುವರಿ ಮಹಾನಿರ್ದೇಶಕರು (ಆಡಳಿತ ಮತ್ತು ತರಬೇತಿ), ಐಐಎಂಸಿ, ಸಿಇಒ, ಸಿಬಿಎಫ್‌ಸಿ ಸೇರಿದಂತೆ ವಿವಿಧ ಕಾರ್ಯಯೋಜನೆಗಳನ್ನು ನಿರ್ವಹಿಸಿದ್ದಾರೆ. ಅವರು ಚಲನಚಿತ್ರ ವಿಭಾಗದಲ್ಲಿದ್ದಾಗ ಮುಂಬೈನಲ್ಲಿ ಭಾರತೀಯ ಚಲನಚಿತ್ರಗಳ ರಾಷ್ಟ್ರೀಯ ವಸ್ತುಸಂಗ್ರಹಾಲಯ ಸ್ಥಾಪನೆಯ ಸಂಬಂಧ ಕೆಲಸ ಮಾಡಿದ್ದಾರೆ.

ಅವರು ಗೋವಾದ ಅಂತಾರಾಷ್ಟ್ರೀಯ ಚಲನಚಿತ್ರ್ರೋತ್ಸವ (ಐ ಎಫ್‌ ಎಫ್)‌ ಸೇರಿದಂತೆ ವಿವಿಧ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕಾರ್ಯಕ್ರಮಗಳ ಮಾಧ್ಯಮ ಚಟುವಟಿಕೆಗಳನ್ನು ನಿರ್ವಹಿಸುವ ಮೂಲಕ ಮುಂಬೈ ಪಿಐಬಿಯಲ್ಲಿ ಒಂದು ದಶಕಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದಾರೆ.

****


(Release ID: 1954141) Visitor Counter : 118