ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ
azadi ka amrit mahotsav

ದೇಶಾದ್ಯಂತ 30 ಇ.ಎಸ್.ಇ.ಸಿ. ಆಸ್ಪತ್ರೆಗಳಲ್ಲಿ ಕೀಮೋಥೆರಪಿ ಸೇವೆಗಳನ್ನು ಉದ್ಘಾಟಿಸಿದ ಕೇಂದ್ರ ಸಚಿವ ಶ್ರೀ ಭೂಪೇಂದರ್ ಯಾದವ್


ಈ ಉದ್ಘಾಟನೆಯು, ಭಾರತದ ಅಮೃತ ಕಾಲದಲ್ಲಿ ನಮ್ಮ ಶ್ರಮ ಯೋಗಿಗಳ ಸರ್ವತೋಮುಖ ಕಲ್ಯಾಣದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀಯವರ ದೃಷ್ಟಿಕೋನವನ್ನು ಸಾಕಾರಗೊಳಿಸುವ ದಿಕ್ಕಿನಲ್ಲಿ ಒಂದು ಹೆಜ್ಜೆಯಾಗಿದೆ: ಕೇಂದ್ರ ಸಚಿವ ಶ್ರೀ ಯಾದವ್

15 ಹೊಸ ಇ.ಎಸ್.ಐ. ಆಸ್ಪತ್ರೆಗಳು, 78 ಇ.ಎಸ್.ಐ. ಡಿಸ್ಪೆನ್ಸರಿಗಳನ್ನು ಇ.ಎಸ್.ಐ.ಸಿ. ಸ್ಥಾಪಿಸಲಿದೆ

Posted On: 31 AUG 2023 1:10PM by PIB Bengaluru

ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಹಾಗೂ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಶ್ರೀ ಭೂಪೇಂದರ್ ಯಾದವ್ ಅವರು ಇಂದು ನವದೆಹಲಿಯ ಇ.ಎಸ್.ಐ. ಪ್ರಧಾನ ಕಛೇರಿಯಲ್ಲಿ ಇ.ಎಸ್.ಐ. ಕಾರ್ಪೊರೇಶನ್ ನ 191 ನೇ ವಾರ್ಷಿಕ ಸಭೆಯಲ್ಲಿ ದೇಶಾದ್ಯಂತ 30 ಇ.ಎಸ್.ಐ.ಸಿ. ಆಸ್ಪತ್ರೆಗಳಲ್ಲಿ ಕೀಮೋಥೆರಪಿ ಸೇವೆಗಳ ಪ್ರಾರಂಭಕ್ಕೆ ಚಾಲನೆ ನೀಡಿದರು.

ಭಾರತದ ಅಮೃತ ಕಾಲದಲ್ಲಿ  ನಮ್ಮ ಶ್ರಮ ಯೋಗಿಗಳ ಸರ್ವತೋಮುಖ ಕಲ್ಯಾಣದ ಬಗ್ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀಯವರ ದೃಷ್ಟಿಕೋನವನ್ನು ಸಾಕಾರಗೊಳಿಸುವ ದಿಕ್ಕಿನಲ್ಲಿ ಈ ಉದ್ಘಾಟನೆ ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದು ಶ್ರೀ ಯಾದವ್ ಹೇಳಿದರು. ಆಂತರಿಕ ಕೀಮೋಥೆರಪಿ ಸೇವೆಗಳ ಪ್ರಾರಂಭದೊಂದಿಗೆ, ವಿಮೆ ಮಾಡಿದ ಕೆಲಸಗಾರರು ಮತ್ತು ಅವರ ಅವಲಂಬಿತರು ಸುಲಭವಾಗಿ ಉತ್ತಮ ಕ್ಯಾನ್ಸರ್ ಚಿಕಿತ್ಸೆಯನ್ನು ಪಡೆಯಲು ಸಾಧ್ಯವಾಗುತ್ತದೆ.

ಇಎಸ್ಐಸಿಯ ಡ್ಯಾಶ್ಬೋರ್ಡ್ಗಳೊಂದಿಗೆ ನಿಯಂತ್ರಣ ಕೊಠಡಿಯನ್ನು ಕೇಂದ್ರ ಸಚಿವರು ಉದ್ಘಾಟಿಸಿದರು. ಡ್ಯಾಶ್ಬೋರ್ಡ್ಗಳು ಇ.ಎಸ್.ಐ.ಸಿ ಆಸ್ಪತ್ರೆಗಳಲ್ಲಿನ ಸಂಪನ್ಮೂಲಗಳು ಮತ್ತು ಹಾಸಿಗೆಗಳ ಹಾಗೂ ನಡೆಯುತ್ತಿರುವ ನಿರ್ಮಾಣ ಯೋಜನೆಗಳ ಪ್ರಸ್ತುತ ಸ್ಥಿತಿ, ಇತ್ಯಾದಿ ವಿಷಯಗಳ ಉತ್ತಮ ಮೇಲ್ವಿಚಾರಣೆಯನ್ನು ಖಚಿತಪಡಿಸುತ್ತದೆ.

ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಇಎಸ್ಐಸಿ ತನ್ನ ಕೊಡುಗೆಯನ್ನು ನೀಡುತ್ತಿದೆ. ಇ.ಎಸ್.ಐ. ಆಸ್ಪತ್ರೆಗಳಲ್ಲಿ ನುರಿತ ವೈದ್ಯಕೀಯ ವೃತ್ತಿಪರರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಇಎಸ್ಐ ಕಾರ್ಪೊರೇಷನ್ ನಿರ್ಧರಿಸಿದೆ ಎಂದು ಶ್ರೀ ಯಾದವ್ ಹೇಳಿದರು. ರೋಗಿಗಳ ಅಗತ್ಯವನ್ನು ನಿರ್ಣಯಿಸಿದ ನಂತರ ಹೊಸ ಇ.ಎಸ್.ಐ.ಸಿ  ವೈದ್ಯಕೀಯ ಕಾಲೇಜುಗಳು ಮತ್ತು ಆಸ್ಪತ್ರೆಗಳನ್ನು ಸ್ಥಾಪಿಸಲಾಗುವುದು ಎಂದು ಶ್ರೀ ಯಾದವ್ ಅವರು ಹೇಳಿದರು. ಇಲ್ಲಿಯವರೆಗೆ, 8 ವೈದ್ಯಕೀಯ ಕಾಲೇಜುಗಳು, 2 ದಂತ ಕಾಲೇಜುಗಳು, 2 ನರ್ಸಿಂಗ್ ಕಾಲೇಜುಗಳು ಮತ್ತು ಒಂದು ಪ್ಯಾರಾ ಮೆಡಿಕಲ್ ಕಾಲೇಜುಗಳನ್ನು ಸ್ಥಾಪಿಸಲಾಗಿದೆ ಮತ್ತು ಇ.ಎಸ್.ಐ.ಸಿ. ನಿಂದ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.

ವೈದ್ಯಕೀಯ ಆರೈಕೆ ಸೇವೆಗಳು, ಆಡಳಿತ, ಹಣಕಾಸಿನ ವಿಷಯಗಳ ಸುಧಾರಣೆಗೆ ಸಂಬಂಧಿಸಿದ ವಿವಿಧ ಕಾರ್ಯಸೂಚಿ ಅಂಶಗಳನ್ನು ಈ ಸಂದರ್ಭದಲ್ಲಿ ಚರ್ಚಿಸಲಾಯಿತು ಮತ್ತು ನಡೆಯುತ್ತಿರುವ ನಿರ್ಮಾಣ ಯೋಜನೆಗಳ ಪರಿಶೀಲನೆಯೊಂದಿಗೆ ಸಭೆ ಮುಕ್ತಾಯಗೊಂಡಿತು.

15 ಹೊಸ ಇಎಸ್ಐ ಆಸ್ಪತ್ರೆಗಳು, 78 ಇಎಸ್ಐ ಡಿಸ್ಪೆನ್ಸರಿಗಳನ್ನು ಸ್ಥಾಪಿಸಲು ತಾತ್ವಿಕ ಅನುಮೋದನೆ, ಇಎಸ್ಐಸಿ ಆಸ್ಪತ್ರೆ, ಬೆಲ್ಟೋಲಾ, ಅಸ್ಸಾಂ, ಇಎಸ್ಐಸಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಕೆ.ಕೆ.ನಗರ, ಚೆನ್ನೈ, ತಮಿಳುನಾಡು ಮತ್ತು ಇಎಸ್ಐಸಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಫರಿದಾಬಾದ್, ಹರ್ಯಾಣ, ಇವುಗಳಿಗೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು.

ಸಿಟಿಜನ್ ಚಾರ್ಟರ್, ಮ್ಯಾನ್ಯುಯಲ್ ಆಫ್ ಆಡಿಟ್ & ಅಕೌಂಟ್ಸ್ ಆಫ್ ಇಎಸ್ಐಸಿ, ರೆಫರಲ್ ಪಾಲಿಸಿ ಮತ್ತು ಎಕ್ವಿಪ್ಮೆಂಟ್ ಪಾಲಿಸಿಯನ್ನು ಕಾರ್ಯಕ್ರಮದಲ್ಲಿ ಶ್ರೀ ಯಾದವ್ ಅವರು 
ಬಿಡುಗಡೆ ಮಾಡಿದರು.

ಐಗೋಟ್ (ಕರ್ಮಯೋಗಿ ಭಾರತ್) ಕಲಿಕಾ ವೇದಿಕೆಯಲ್ಲಿ ಅಗ್ರಸ್ಥಾನ ಪಡೆದ ರಾಜಸ್ಥಾನ, ಕೇರಳ ಮತ್ತು ಬೆಂಗಳೂರಿನ ಇಎಸ್ಐಸಿ ಕಛೇರಿಗಳ ಇಎಸ್ಐಸಿ ಯ 5 ಐಗೋಟ್ ಕಲಿತವರನ್ನು ಶ್ರೀ ಯಾದವ್ ಸನ್ಮಾನಿಸಿದರು. ವೇದಿಕೆಯು ನಾಗರಿಕ ಸೇವೆಗಳಲ್ಲಿ ಸಾಮರ್ಥ್ಯ ಅಭಿವೃದ್ಧಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.

ಸಂಸತ್ ಸದಸ್ಯರಾದ ಶ್ರೀಮತಿ ಡೋಲಾ ಸೇನ್, ಶ್ರೀ ರಾಮ್ ಕಿರ್ಪಾಲ್ ಯಾದವ್ ಮತ್ತು ಶ್ರೀ ರಾಮ್ ಕೃಪಾಲ್ ಯಾದವ್, ಕಾರ್ಯದರ್ಶಿ (ಎಲ್&ಇ), ಶ್ರೀಮತಿ ಆರ್ತಿ ಅಹುಜಾ,  ಮಹಾನಿರ್ದೇಶಕ ಡಾ.ರಾಜೇಂದ್ರ ಕುಮಾರ್, ಜೊತೆಗೆ ರಾಜ್ಯ ಸರ್ಕಾರಗಳ ಪ್ರಧಾನ ಕಾರ್ಯದರ್ಶಿಗಳು/ಕಾರ್ಯದರ್ಶಿಗಳು, ಉದ್ಯೋಗದಾತರ ಪ್ರತಿನಿಧಿಗಳು, ನೌಕರರು ಮತ್ತು ಇತರ ಇಎಸ್ಐ ನಿಗಮದ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.

***

 


(Release ID: 1953744) Visitor Counter : 113