ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

 ಆಗಸ್ಟ್ 27, 2023 ರಂದು ನಡೆಯುವ ಬಿ20 ಶೃಂಗಸಭೆ ಭಾರತ 2023 ಅನ್ನು ಉದ್ದೇಶಿಸಿ ಭಾಷಣ ಮಾಡಲಿರುವ ಪ್ರಧಾನಮಂತ್ರಿ


ಈ ಬಿ20 ಶೃಂಗಸಭೆಯ ಮುಖ್ಯ ಥೀಮ್ ಆರ್.ಎ.ಐ.ಎಸ್.ಇ. - ಜವಾಬ್ದಾರಿಯುತ, ವೇಗವರ್ಧಿತ, ನವೀನ, ಸುಸ್ಥಿರ ಮತ್ತು ಸಮಾನ ವ್ಯವಹಾರಗಳು.

Posted On: 26 AUG 2023 8:49PM by PIB Bengaluru

ನವದೆಹಲಿಯಲ್ಲಿ 27 ಆಗಸ್ಟ್, 2023 ರಂದು ನಡೆಯುವ ಬಿ20 ಶೃಂಗಸಭೆ ಭಾರತ 2023 ವನ್ನು ಉದ್ದೇಶಿಸಿ ಮಧ್ಯಾಹ್ನ 12 ಗಂಟೆಗೆ  ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು
ಭಾಷಣ ಮಡಲಿದ್ದಾರೆ.

ಬಿ20 ಶೃಂಗಸಭೆ ಭಾರತವು "ಬಿ20 ಭಾರತ ಸಂವಹನ (ಇಂಡಿಯಾ ಕಮ್ಯುನಿಕ್)" ಸಭೆಗಾಗಿ ಉದ್ದೇಶಪೂರ್ವಕವಾಗಿ ಮತ್ತು ವಿಶೇಷವಾಗಿ ಚರ್ಚಿಸಲು ಪ್ರಪಂಚದಾದ್ಯಂತದ ನೀತಿ ನಿರೂಪಕರು, ವ್ಯಾಪಾರ ನಾಯಕರು ಮತ್ತು ತಜ್ಞರನ್ನು ಸಭೆಗೆ ಆಮಂತ್ರಿಸಿದೆ. ಜಿ20ಗೆ ಸಲ್ಲಿಸಲಿರುವ ಬಿ20 ಇಂಡಿಯಾ ಕಮ್ಯುನಿಕ್ ಯಲ್ಲಿ 54 ಶಿಫಾರಸುಗಳು ಮತ್ತು 172 ನೀತಿ ಕ್ರಮಗಳನ್ನು ಒಳಗೊಂಡಿದೆ.

ಜಾಗತಿಕ ವ್ಯಾಪಾರ ಸಮುದಾಯದೊಂದಿಗೆ ಅಧಿಕೃತ ಜಿ20 ಸಂವಾದ ವೇದಿಕೆಯಾಗಿದೆ ಈ ವ್ಯಾಪಾರ 20 (ಬಿ20). 2010 ರಲ್ಲಿ ಸ್ಥಾಪಿತವಾದ, ಬಿ20 ತಂಡವು ಜಿ20 ನಲ್ಲಿನ ಪ್ರಮುಖ ಎಂಗೇಜ್‌ ಮೆಂಟ್ ಗುಂಪುಗಳಲ್ಲಿ ಒಂದಾಗಿದೆ. ಇದರಲ್ಲಿ ಜಾಗತಿಕ ಮಟ್ಟದಲ್ಲಿ ಕಂಪನಿಗಳು ಮತ್ತು ವ್ಯಾಪಾರ ಸಂಸ್ಥೆಗಳು ಭಾಗವಹಿಸುತ್ತವೆ.  ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸಲು ಸಮರ್ಥ ಕ್ರಿಯಾಶೀಲ ನೀತಿ ಶಿಫಾರಸುಗಳನ್ನು ತಲುಪಿಸುವ ಕೆಲಸವನ್ನು ಬಿ20 ಮಾಡುತ್ತದೆ.

ಮೂರು ದಿನಗಳ ಶೃಂಗಸಭೆಯು ಆಗಸ್ಟ್ 25 ರಿಂದ 27,2023 ರವರೆಗೆ ನಡೆಯಲಿದೆ.  ಈ ಸಭೆಯ ಮುಖ್ಯ ಥೀಮ್ ಆರ್.ಎ.ಐ.ಎಸ್.ಇ. - ಜವಾಬ್ದಾರಿಯುತ, ವೇಗವರ್ಧಿತ, ನವೀನ, ಸುಸ್ಥಿರ ಮತ್ತು ಸಮಾನ ವ್ಯವಹಾರಗಳು ಎಂಬುದಾಗಿದೆ.  ಸುಮಾರು 55 ದೇಶಗಳಿಂದ 1,500 ಕ್ಕೂ ಹೆಚ್ಚು ಪ್ರತಿನಿಧಿಗಳು ಈ ಬಿ20 ಶೃಂಗಸಭೆಯಲ್ಲಿ ಭಾಗವಹಿಸುತ್ತಿದ್ದಾರೆ.

******


(Release ID: 1952843) Visitor Counter : 128