ಗೃಹ ವ್ಯವಹಾರಗಳ ಸಚಿವಾಲಯ

ಗುಜರಾತ್‌ನ ಗಾಂಧಿನಗರದಲ್ಲಿ ಸೋಮವಾರ, ಆಗಸ್ಟ್ 28 ರಂದು ನಡೆಯಲಿರುವ ಪಶ್ಚಿಮ ವಲಯ ಮಂಡಳಿಯ 26ನೇ ಸಭೆಯ ಅಧ್ಯಕ್ಷತೆಯನ್ನು ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ವಹಿಸಲಿದ್ದಾರೆ.


ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ಸಹಕಾರಿ ಮತ್ತು ಸ್ಪರ್ಧಾತ್ಮಕ ಸಂಯಕ್ತತತ್ವ ಗಳನ್ನು ಬಳಸಿಕೊಳ್ಳುವ ಅಗತ್ಯವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಮರ್ಥಿಸುತ್ತಿದ್ದಾರೆ

ಕೇಂದ್ರ ಮತ್ತು ರಾಜ್ಯಗಳ ನಡುವಿನ ನೀತಿ ಚೌಕಟ್ಟಿನ ಮೇಲೆ ಉತ್ತಮ ತಿಳುವಳಿಕೆಯನ್ನು ಉತ್ತೇಜಿಸಲು ಮತ್ತು ರಾಜ್ಯಗಳನ್ನು ಸಶಕ್ತಗೊಳಿಸಲು ಸಹಕಾರಿ ಸಂಯಕ್ತತತ್ವ ವಿಧಿ ವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದು ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಒತ್ತಿ ಹೇಳಿದರು.

ಕೇಂದ್ರ ಗೃಹ ಸಚಿವರ ಅಧ್ಯಕ್ಷತೆಯಲ್ಲಿ, ಕಳೆದ ವರ್ಷ ಎಲ್ಲಾ ಐದು ವಲಯ ಮಂಡಳಿಗಳ ಸಭೆಗಳನ್ನು ಆಯೋಜಿಸಲಾಗಿತ್ತು, ಈ ವರ್ಷ, ಪ್ರಾದೇಶಿಕ ಮಂಡಳಿಗಳ ಸಭೆಗಳಿಗೆ ಮುಂಚಿತವಾಗಿ ಆಯಾ ಸ್ಥಾಯಿ ಸಮಿತಿಗಳ ಎಲ್ಲಾ ಸಭೆಗಳನ್ನು ನಡೆಸಲಾಗಿದೆ.

ಮೂಲಸೌಕರ್ಯ, ಗಣಿಗಾರಿಕೆ, ನೀರು ಸರಬರಾಜು, ಪರಿಸರ ಮತ್ತು ಅರಣ್ಯಗಳು ಮತ್ತು ರಾಜ್ಯ ಪುನರ್ರಚನೆ, ಹಾಗೆಯೇ ನೇರ ನಗದು ವರ್ಗಾವಣೆ (ಡಿಬಿಟಿ), ದೂರಸಂಪರ್ಕ/ಅಂತರ್ಜಾಲದ ವ್ಯಾಪಕ ವಿಸ್ತರಣೆ ಮತ್ತು ಸಾಮಾನ್ಯ ಪ್ರಾದೇಶಿಕ ಹಿತಾಸಕ್ತಿಗಳ ಸಮಸ್ಯೆಗಳು ಸೇರಿದಂತೆ ವ್ಯಾಪಕವಾದ ಅನೇಕ ವಿಷಯಗಳ ಕುರಿತು ವಲಯ ಮಂಡಳಿಗಳು ಚರ್ಚೆಗಳನ್ನು ನಡೆಸುತ್ತವೆ.

Posted On: 27 AUG 2023 1:12PM by PIB Bengaluru

ಗುಜರಾತ್‌ ನ ಗಾಂಧಿನಗರದಲ್ಲಿ ಸೋಮವಾರ, 28 ಆಗಸ್ಟ್, 2023 ರಂದು ನಡೆಯಲಿರುವ ಪಶ್ಚಿಮ ವಲಯ ಮಂಡಳಿಯ 26ನೇ ಸಭೆಯ ಅಧ್ಯಕ್ಷತೆಯನ್ನು ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ವಹಿಸಲಿದ್ದಾರೆ.  ಪಶ್ಚಿಮ ವಲಯ ಮಂಡಳಿಯು ಗುಜರಾತ್, ಗೋವಾ, ಮಹಾರಾಷ್ಟ್ರ ರಾಜ್ಯಗಳನ್ನು ಹಾಗೂ ದಾದ್ರಾ ಮತ್ತು ನಗರ ಹವೇಲಿ, ಹಾಗೂ ದಮನ್ ಮತ್ತು ದಿಯು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿದೆ.  ಗುಜರಾತ್ ಸರ್ಕಾರದ ಸಹಯೋಗದೊಂದಿಗೆ ಭಾರತ ಸರ್ಕಾರದ ಗೃಹ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಇಂಟರ್ ಸ್ಟೇಟ್ ಕೌನ್ಸಿಲ್ ಸೆಕ್ರೆಟರಿಯೇಟ್ ಈ ಸಭೆಯನ್ನು ಆಯೋಜಿಸುತ್ತಿದೆ.  ಪಶ್ಚಿಮ ವಲಯ ಪರಿಷತ್(ಕೌನ್ಸಿಲ್‌ )ನ 26 ನೇ ಸಭೆಯಲ್ಲಿ ಸದಸ್ಯ ರಾಷ್ಟ್ರಗಳ ಮುಖ್ಯಮಂತ್ರಿಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತಾಧಿಕಾರಿಗಳು, ಪ್ರತಿ ರಾಜ್ಯದಿಂದ ಇಬ್ಬರು ಹಿರಿಯ ಸಚಿವರು ಭಾಗವಹಿಸಲಿದ್ದಾರೆ.  ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳು, ಸಲಹೆಗಾರರು ಮತ್ತು ಇತರ ಹಿರಿಯ ಅಧಿಕಾರಿಗಳು ಮತ್ತು ಕೇಂದ್ರ ಗೃಹ ಕಾರ್ಯದರ್ಶಿ, ಅಂತರ ರಾಜ್ಯ ಮಂಡಳಿಯ ಕಾರ್ಯದರ್ಶಿ ಮತ್ತು ಕೇಂದ್ರ ಸರ್ಕಾರದ ಇತರ ಹಿರಿಯ ಅಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ರಾಜ್ಯಗಳ ಮರುಸಂಘಟನೆ ಕಾಯಿದೆ, 1956ರ ಪರಿಚ್ಛೇಧ 15-22ರ ಅಡಿಯಲ್ಲಿ ಐದು ವಲಯ ಮಂಡಳಿಗಳನ್ನು 1957ರಲ್ಲಿ ಸ್ಥಾಪಿಸಲಾಯಿತು. ಕೇಂದ್ರ ಗೃಹ ಸಚಿವರು ಈ ಐದು ವಲಯ ಪರಿಷತ್ (ಕೌನ್ಸಿಲ್‌) ಗಳ ಅಧ್ಯಕ್ಷರಾಗಿರುತ್ತಾರೆ. ಆಯಾ ವಲಯ ಕೌನ್ಸಿಲ್ ಗೆ ಸೇರಿದ ಆಯಾ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗವರ್ನರ್ /ಆಡಳಿತಾಧಿಕಾರಿಗಳು ಸದಸ್ಯರಾಗಿರುತ್ತಾರೆ.

ಪ್ರತಿ ರಾಜ್ಯದಿಂದ ಇನ್ನೂ ಇಬ್ಬರು ಮಂತ್ರಿಗಳನ್ನು ಆಯಾ ರಾಜ್ಯಗಳ ರಾಜ್ಯಪಾಲರು ಆ ವಲಯ ಪರಿಷತ್ತಿಗಳ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡುತ್ತಾರೆ.  ಪ್ರತಿ ವಲಯ ಪರಿಷತ್ತು ಮುಖ್ಯ ಕಾರ್ಯದರ್ಶಿಗಳ ಮಟ್ಟದಲ್ಲಿ ಸ್ಥಾಯಿ ಸಮಿತಿಯನ್ನು ಸಹ ಈಗಾಲೇ ರಚಿಸಲಾಗಿದೆ.

ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ಸಹಕಾರಿ ಮತ್ತು ಸ್ಪರ್ಧಾತ್ಮಕ ಸಂಯಕ್ತತತ್ವ ಕಾಪಾಡಿಕೊಳ್ಳುವ ಅಗತ್ಯವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸದಾ ಸಮರ್ಥಿಸುತ್ತಿದ್ದಾರೆ.  


ಬಲಿಷ್ಠ ರಾಜ್ಯಗಳು ಬಲಿಷ್ಠ ರಾಷ್ಟ್ರಗಳನ್ನು ರೂಪಿಸುವ ಉತ್ಸಾಹದಲ್ಲಿ, ಎರಡು ಅಥವಾ ಹೆಚ್ಚಿನ ರಾಜ್ಯಗಳು ಪ್ರಭಾವ ಬೀರುವ ಸಮಸ್ಯೆಗಳು, ಅಥವಾ ಕೇಂದ್ರ ಮತ್ತು ಇತರ ರಾಜ್ಯಗಳ ಮೇಲೆ ಪರಸ್ಪರ ಪರಿಣಾಮ ಬೀರುವ ಸಮಸ್ಯೆಗಳ ಕುರಿತು ನಿಯಮಿತ ಸಂವಾದ ಮತ್ತು ಚರ್ಚೆಗಾಗಿ ವ್ಯವಸ್ಥಿತ ಕಾರ್ಯವಿಧಾನದ ಮೂಲಕ ಸಹಕಾರವನ್ನು ಹೆಚ್ಚಿಸಲು ಈ ವಲಯ ಮಂಡಳಿಗಳು ವೇದಿಕೆಯನ್ನು ಒದಗಿಸುತ್ತವೆ.

ರಾಜ್ಯಗಳನ್ನು ಸಶಕ್ತಗೊಳಿಸಲು ಮತ್ತು ಕೇಂದ್ರ ಮತ್ತು ರಾಜ್ಯಗಳ ನಡುವಿನ ನೀತಿ ಚೌಕಟ್ಟಿನ ಮೇಲೆ ಉತ್ತಮ ತಿಳುವಳಿಕೆಯನ್ನು ಉತ್ತೇಜಿಸಲು ಸಹಕಾರಿ ಸಂಯುಕ್ತತತ್ವ ವಿಧಾನವನ್ನು ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ವಿವರಿಸಿದರು.

ವಿವಾದಗಳನ್ನು ಪರಿಹರಿಸಲು ಮತ್ತು ಸಹಕಾರಿ ಸಂಯುಕ್ತತತ್ವವನ್ನು ಉತ್ತೇಜಿಸಲು ವಲಯ ಮಂಡಳಿಗಳನ್ನು ಬಳಸುವುದನ್ನು ಕೇಂದ್ರ ಸಹಕಾರಿ ಮತ್ತು ಗೃಹ ಸಚಿವರು  ಪ್ರತಿಪಾದಿಸಿದ್ದಾರೆ.  ಕೇಂದ್ರ ಗೃಹ ಸಚಿವರ ಅಧ್ಯಕ್ಷತೆಯಲ್ಲಿ ಕಳೆದ ವರ್ಷ ಎಲ್ಲಾ ಐದು ವಲಯ ಮಂಡಳಿಗಳ ಸಭೆಗಳನ್ನು ಆಯೋಜಿಸಲಾಗಿತ್ತು. ಭಈ ವರ್ಷ, ಆಯಾ ಸ್ಥಾಯಿ ಸಮಿತಿಗಳ ಎಲ್ಲಾ ಸಭೆಗಳನ್ನು ವಲಯ ಪರಿಷತ್ತಿನ ಸಭೆಗಳಿಗೆ ಮುಂಚಿತವಾಗಿ ನಡೆಸಲಾಗಿದೆ.

ಮೂಲಸೌಕರ್ಯ, ಗಣಿಗಾರಿಕೆ, ನೀರು ಸರಬರಾಜು, ಪರಿಸರ ಮತ್ತು ಅರಣ್ಯಗಳು ಮತ್ತು ರಾಜ್ಯ ಪುನರ್ರಚನೆ, ಹಾಗೆಯೇ ನೇರ ಲಾಭ ವರ್ಗಾವಣೆ (ಡಿಬಿಟಿ), ದೂರಸಂಪರ್ಕ/ಇಂಟರ್‌ ನೆಟ್‌ ನ ವ್ಯಾಪಕ ವಿಸ್ತರಣೆ ಮತ್ತು ಸಾಮಾನ್ಯ ಪ್ರಾದೇಶಿಕ ಹಿತಾಸಕ್ತಿಗಳ ಸಮಸ್ಯೆಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ವಲಯ ಪರಿಷತ್(ಕೌನ್ಸಿಲ್‌)ಗಳು ಚರ್ಚೆಗಳನ್ನು ನಡೆಸುತ್ತವೆ.

ವಲಯ ಪರಿಷತ್(ಕೌನ್ಸಿಲ್‌)ಗಳ ಪ್ರತಿ ಸಭೆಯಲ್ಲೂ ರಾಷ್ಟ್ರೀಯ ಪ್ರಾಮುಖ್ಯತೆಯ ಅನೇಕ ವಿಷಯಗಳನ್ನು ಚರ್ಚಿಸಲಾಗಿದೆ. 

 ಇವುಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ಲೈಂಗಿಕ ಅಪರಾಧ/ ಅತ್ಯಾಚಾರ ಪ್ರಕರಣಗಳ ತ್ವರಿತ ತನಿಖೆ, ಅತ್ಯಾಚಾರ ಮತ್ತು ಪೋಸ್ಕೊ ಕಾಯ್ದೆಯ ಪ್ರಕರಣಗಳ ತ್ವರಿತ ವಿಲೇವಾರಿಗಾಗಿ ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯಗಳ (ಎಫ್.ಟಿ.ಎಸ್.ಸಿ.ಗಳು) ಯೋಜನೆಯ ಅನುಷ್ಠಾನ, 5 ಕಿಮೀ ವ್ಯಾಪ್ತಿಯಲ್ಲಿರುವ ಬ್ಯಾಂಕ್‌ಗಳು/ ಭಾರತೀಯ ಪೋಸ್ಟ್ ಪೇಮೆಂಟ್ ಬ್ಯಾಂಕ್ ಶಾಖೆಗಳನ್ನು ಸುಗಮಗೊಳಿಸುವುದು. ಪ್ರತಿ ಗ್ರಾಮದಲ್ಲಿ, ಪೋಷಣ್ ಅಭಿಯಾನದ ಮೂಲಕ ಮಕ್ಕಳಲ್ಲಿ ಅಪೌಷ್ಟಿಕತೆಯನ್ನು ನಿವಾರಿಸುವುದು, ಶಾಲಾ ಮಕ್ಕಳ ಡ್ರಾಪ್-ಔಟ್ ಪ್ರಮಾಣವನ್ನು ಕಡಿಮೆ ಮಾಡುವುದು, ಆಯುಷ್ಮಾನ್ ಭಾರತ್-ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯಲ್ಲಿ ಸರ್ಕಾರಿ ಆಸ್ಪತ್ರೆಗಳ ಭಾಗವಹಿಸುವಿಕೆ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಸಾಮಾನ್ಯ ಆಸಕ್ತಿಯ ಸ್ಥಳೀಯ ಸಮಸ್ಯೆಗಳು ಮುಂತಾದ ಅನೇಕ ವಿಷಯಗಳನ್ನು ಚರ್ಚಿಸಲಾಗಿದೆ. 

****



(Release ID: 1952721) Visitor Counter : 91