ಕಲ್ಲಿದ್ದಲು ಸಚಿವಾಲಯ
azadi ka amrit mahotsav

ರಾಷ್ಟ್ರೀಯ ವೈದ್ಯಕೀಯ ಪ್ರವೇಶ ಪರೀಕ್ಷೆಗೆ (ನೀಟ್) ಎಸ್.ಇ.ಸಿ.ಎಲ್.-ನೀಟ್ ಉಚಿತ ವಸತಿ ತರಬೇತಿ ಒದಗಿಸಲಿದೆ


ಮಧ್ಯಪ್ರದೇಶ ಮತ್ತು ಛತ್ತೀಸ್ಗಢದ ಕಲ್ಲಿದ್ದಲು ಉತ್ಪಾದನಾ ಕ್ಷೇತ್ರದ ಪ್ರದೇಶಗಳಲ್ಲಿನ ಬಡ ಆರ್ಥಿಕ ಹಿನ್ನೆಲೆಯ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯುತ್ತಾರೆ

Posted On: 22 AUG 2023 1:51PM by PIB Bengaluru

ಛತ್ತೀಸ್ಗಢ ಮೂಲದ ಕೋಲ್ ಇಂಡಿಯಾ ಸಂಸ್ಥೆಯ ಉಪಸಂಸ್ಥೆಯಾದ   ಎಸ್.ಇ.ಸಿ.ಎಲ್. ತನ್ನ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿಯ  ಉಪಕ್ರಮದ " ಎಸ್.ಇ.ಸಿ.ಎಲ್ ಕೆ ಸುಶ್ರುತ್", ಅಡಿಯಲ್ಲಿ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಉಚಿತ ವಸತಿಯೊಂದಿಗೆ ವೈದ್ಯಕೀಯ ತರಬೇತಿಯನ್ನು ಒದಗಿಸುತ್ತದೆ. ಕಂಪನಿಯು ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ತಯಾರಿ ಮಾಡಲು ಸಹಾಯ ಮಾಡಲು ಮಾರ್ಗದರ್ಶನ ಮತ್ತು ನೀಟ್ ತರಬೇತಿಯನ್ನು ನೀಡುತ್ತದೆ.

ಈ ಕ್ರಮವು ಬಡ ಆರ್ಥಿಕ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ಹೆಚ್ಚು ಪ್ರಯೋಜನವನ್ನು ನೀಡುತ್ತದೆ, ವಿಶೇಷವಾಗಿ ಮಧ್ಯಪ್ರದೇಶ ಮತ್ತು ಛತ್ತೀಸ್ಗಢದ ಕಲ್ಲಿದ್ದಲು ಬೆಲ್ಟ್ ಪ್ರದೇಶಗಳಲ್ಲಿನ ಹಳ್ಳಿಗಳಲ್ಲಿ, ವೈದ್ಯರಾಗಲು ಹಾತೊರೆಯುವ ಆದರೆ ವೈದ್ಯಕೀಯ ತರಬೇತಿಯನ್ನು ಪಡೆಯಲು ಸಾಧ್ಯವಾಗುತ್ತಿಲ್ಲ.

ಕೋಚಿಂಗ್ಗಾಗಿ ವಿದ್ಯಾರ್ಥಿಗಳ ಆಯ್ಕೆಯು ನೀಟ್  ಮಾದರಿಯನ್ನು ಆಧರಿಸಿ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಇರುತ್ತದೆ. ಕಾರ್ಯಕ್ರಮದ ಅಡಿಯಲ್ಲಿ ಬಿಲಾಸ್ಪುರ ಮೂಲದ ಖಾಸಗಿ ಕೋಚಿಂಗ್ ಸಂಸ್ಥೆಯ ಸಹಭಾಗಿತ್ವದಲ್ಲಿ ಒಟ್ಟು 35 ವಿದ್ಯಾರ್ಥಿಗಳ ಬ್ಯಾಚ್ಗೆ ಈಗ ತರಬೇತಿ ನೀಡಲಾಗುತ್ತದೆ. ಕಾರ್ಯಕ್ರಮವು ನಿಯಮಿತ ರಾಷ್ಟ್ರೀಯ ಮಟ್ಟದ ಪರೀಕ್ಷಾ ಸರಣಿ ಮತ್ತು ಮಾರ್ಗದರ್ಶನದೊಂದಿಗೆ ವಸತಿ  ಸೌಲಭ್ಯಗಳನ್ನು ಕೂಡಾ ಒಳಗೊಂಡಿರುತ್ತದೆ.

ವಿವರವಾದ ನಿಯಮಗಳು ಮತ್ತು ಷರತ್ತುಗಳಿಗಾಗಿ ಮತ್ತು ಪ್ರೋಗ್ರಾಂಗೆ ನೋಂದಾಯಿಸಲು ವಿದ್ಯಾರ್ಥಿಗಳು ಎಸ್.ಇ.ಸಿ.ಎಲ್. ವೆಬ್ಸೈಟ್ https://secl-cil.in/index.php ಗೆ ಭೇಟಿ ನೀಡಬೇಕು. ಆನ್ಲೈನ್ ನೋಂದಣಿಗೆ ಕೊನೆಯ ದಿನಾಂಕ ಸೆಪ್ಟೆಂಬರ್ 6, 2023, ಹಾಗೂ ಆಯ್ಕೆ ಪರೀಕ್ಷೆಯು ಸೆಪ್ಟೆಂಬರ್ 10 , 2023ರಂದು ನಡೆಯಲಿದೆ.

ಕೋಚಿಂಗ್ ಗೆ ಅರ್ಜಿ ಸಲ್ಲಿಸಲು ಅರ್ಹತೆ ಪಡೆಯಲು ವಿದ್ಯಾರ್ಥಿಯು 2023 ರಲ್ಲಿ 12 ನೇ ತರಗತಿಯನ್ನು ಕನಿಷ್ಠ 60% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.

ಅರ್ಜಿದಾರರು ಎಸ್.ಇ.ಸಿ.ಎಲ್. ಸ್ಥಾಪನೆಯ 25 ಕಿಮೀ ವ್ಯಾಪ್ತಿಯೊಳಗೆ ಮಧ್ಯಪ್ರದೇಶ ಅಥವಾ ಛತ್ತೀಸ್ಗಢದಲ್ಲಿ ನೆಲೆಸಿರಬೇಕು ಛತ್ತೀಸ್ಗಢದ ಕೊರ್ಬಾ, ರಾಯ್ಘರ್, ಕೊರಿಯಾ, ಸುರ್ಗುಜಾ, ಸೂರಜ್ಪುರ, ಬಲರಾಮ್ಪುರ್ , ಮಾನೇಂದ್ರಗಢ-ಚಿರ್ಮಿರಿ-ಭಾರತ್ ಕಾರ್ಯಾಚರಣಾ ಜಿಲ್ಲೆಗಳಲ್ಲಿ ಮತ್ತು ಮಧ್ಯಪ್ರದೇಶದ ಉಮಾರಿಯಾ ,  ಅನ್ನಪುರ್ ಮತ್ತು ಶಾಹದೋಲ್ ಜಿಲ್ಲೆಗಳಲ್ಲಿನ ನೆಲೆಸಿರಬೇಕು ಅಥವಾ ಅವರ ಶಾಲೆ ಇರಬೇಕು. 

ಅರ್ಜಿದಾರರ ಪಾಲಕರ/ ಪೋಷಕರ ಮೇಲಿನ ಒಟ್ಟು ಆದಾಯವು ₹ 8,00,000/- ಗಿಂತ ಹೆಚ್ಚಿರಬಾರದು (ವರ್ಷಕ್ಕೆ ಎಂಟು ಲಕ್ಷ ರೂಪಾಯಿಗಳು). ಸೂಕ್ತ ಸರ್ಕಾರಿ ಪ್ರಾಧಿಕಾರದಿಂದ ಆದಾಯ ಪ್ರಮಾಣಪತ್ರ/ ಪೋಷಕರ ಆದಾಯ ತೆರಿಗೆ ರಿಟರ್ನ್ ಅಥವಾ ಬಡತನ ರೇಖೆಗಿಂತ ಕೆಳಗಿರುವ (ಬಿ.ಪಿ.ಎಲ್.) ಕಾರ್ಡ್/ಅಂತ್ಯೋದಯ ಅನ್ನ ಯೋಜನಾ ಕಾರ್ಡ್ನಲ್ಲಿ ನೋಂದಾಯಿಸಲಾದ ವಾರ್ಡ್ನ ಹೆಸರು ಕೋಚಿಂಗ್ ಕಾರ್ಯಕ್ರಮಕ್ಕೆ ಪ್ರವೇಶದ ಮೊದಲು ಸಲ್ಲಿಸಬೇಕು.

ಕೋಚಿಂಗ್ ಮೀಸಲಾತಿಗಾಗಿ ನೀಡಲಾಗುವ ಒಟ್ಟು ಸೀಟುಗಳಲ್ಲಿ ಕೇಂದ್ರ ಕಲ್ಲಿದ್ದಲು ಸಚಿವಾಲಯದ ನೀತಿಯ ಪ್ರಕಾರ 14% ಸೀಟುಗಳನ್ನು ಎಸ್.ಸಿ, 23% ಎಸ್.ಟಿ ಮತ್ತು 13% ಸೀಟುಗಳನ್ನು ಒ.ಬಿ.ಸಿ.ಗೆ ಮೀಸಲಿಡಲಾಗುತ್ತದೆ.

****


(Release ID: 1951162) Visitor Counter : 97