ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)
azadi ka amrit mahotsav

ಗ್ರಾಮೀಣ ಮತ್ತು ಗ್ರಾಮೀಣ ಭಾರತದಲ್ಲಿ ಸಾಂಪ್ರದಾಯಕ ಕರಕುಶಲ ಮತ್ತು ಕುಶಲಕರ್ಮಿಗಳಿಗೆ ಬೆಂಬಲ ನೀಡುವ ಕೇಂದ್ರೀಯ ವಲಯದ “ಪಿಎಂ ವಿಶ್ವಕರ್ಮ” ಎಂಬ ಹೊಸ ಯೋಜನೆಗೆ ಕೇಂದ್ರ ಸಂಪುಟ ಅನುಮೋದನೆ


ಯೋಜನೆಯ ಒಟ್ಟಾರೆ ಹಣಕಾಸು ವೆಚ್ಚ 13,000 ಕೋಟಿ ರೂಪಾಯಿ

ಪಿಎಂ ವಿಶ್ವಕರ್ಮ ಯೋಜನೆಯ ಮೊದಲ ಹಂತದಲ್ಲಿ 18 ಸಾಂಪ್ರದಾಯಿಕ ಕುಲಕಸುಬು ವಲಯಗಳು ಒಳಗೊಂಡಿವೆ  

Posted On: 16 AUG 2023 4:21PM by PIB Bengaluru

ಮುಂದಿನ ಐದು ವರ್ಷಗಳ ಅವಧಿಗೆ (ಹಣಕಾಸು ವರ್ಷ 2023-24 ದಿಂದ ಹಣಕಾಸು ವರ್ಷ 2027-28) ಅನ್ವಯವಾಗುವಂತೆ 13,000 ಕೋಟಿ ರೂಪಾಯಿ ಹಣಕಾಸು ವೆಚ್ಚದ ಕೇಂದ್ರೀಯ ವಲಯದ ಹೊಸ ಯೋಜನೆ “ಪಿಎಂ ವಿಶ್ವಕರ್ಮ” ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಸಭೆ ಅನುಮೋದನೆ ನೀಡಿದೆ. ಗುರು –ಶಿಷ್ಯ ಪರಂಪರೆ ಅಥವಾ ಕುಟುಂಬ ಆಧಾರಿತ ಸಾಂಪ್ರದಾಯಿಕ ಕರಕುಶಲ ಮತ್ತು ಕುಶಲಕರ್ಮಿಗಳು ಕೈಗಳು ಮತ್ತು ಸಾಧನ - ಸಲಕರಣೆಗಳಿಂದ ಕೆಲಸ ಮಾಡುವುದನ್ನು ಪ್ರೋತ್ಸಾಹಿಸಿ ಬಲಪಡಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಈ ಯೋಜನೆಯು ಗುಣಮಟ್ಟ ಸುಧಾರಿಸುವ ಗುರಿ ಹೊಂದಿದ್ದು, ಕರಕುಶಲ ಮತ್ತು ಕುಶಲ ಕರ್ಮಿಗಳ ಉತ್ಪನ್ನಗಳು ಮತ್ತು ಸೇವೆಗಳ ವ್ಯಾಪ್ತಿಯನ್ನು ಹೆಚ್ಚಿಸುವ ಮತ್ತು ವಿಶ್ವಕರ್ಮರನ್ನು ದೇಶೀಯ ಮತ್ತು ಜಾಗತಿಕ ಮೌಲ್ಯ ಸರಪಳಿಯೊಂದಿಗೆ ಬೆಸೆಯುವುದನ್ನು ಖಚಿತಪಡಿಸುತ್ತದೆ.

ಪಿಎಂ ವಿಶ್ವಕರ್ಮ ಯೋಜನೆಯಡಿ ಕರಕುಶಲ ಮತ್ತು ಕುಶಲಕರ್ಮಿಗಳಿಗೆ ಪಿಎಂ ವಿಶ್ವಕರ್ಮ ಪ್ರಮಾಣ ಪತ್ರ ಮತ್ತು ಗುರುತಿನ ಚೀಟಿ ನೀಡಲಾಗುವುದು. ಸಾಲ ಸೌಲಭ್ಯ ಗರಿಷ್ಠ ಒಂದು ಲಕ್ಷ ರೂಪಾಯಿ [ಮೊದಲ ಹಂತ] ಮತ್ತು ಎರಡು ಲಕ್ಷ [ಎರಡನೇ ಹಂತ] ರೂಪಾಯಿ ಮೊತ್ತವನ್ನು ಶೇ 5% ಬಡ್ಡಿದರದೊಂದಿಗೆ ಒದಗಿಸಲಾಗುತ್ತದೆ. ಈ ಯೋಜನೆಯಡಿ ಕೌಶಲ್ಯ ವರ್ಧನೆ, ಉಪಕರಣ ಸಾಧನಗಳ ಕಿಟ್ ಪಡೆಯಲು ಸಹಾಯಧನ, ಡಿಜಿಟಲ್ ವಹಿವಾಟಿಗೆ ಸಹಾಯಧನ ಮತ್ತು ಮಾರುಕಟ್ಟೆ ಬೆಂಬಲ ದೊರೆಯಲಿದೆ.

ಭಾರತದಾದ್ಯಂತ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕರಕುಶಲ ಮತ್ತು ಕುಶಲಕರ್ಮಿಗಳಿಗೆ ಈ ಯೋಜನೆ ಬೆಂಬಲ ಒದಗಿಸುತ್ತದೆ. ಪಿಎಂ ವಿಶ್ವಕರ್ಮ ಯೋಜನೆಯಡಿ 18 ಸಾಂಪ್ರದಾಯಿಕ ಕುಲಕಸುಬುಗಳು ಒಳಗೊಳ್ಳಲಿವೆ. ಅವುಗಳೆಂದರೆ (i) ಮರಗೆಲಸ, (ii) ದೋಣಿ ತಯಾರಿಸುವವರು, (iii) ಶಸ್ತ್ರ ತಯಾರಕರು, (iv) ಕಮ್ಮಾರ (v) ಸುತ್ತಿಗೆ ಮತ್ತು ಉಪಕರಣಗಳನ್ನು ತಯಾರಿಸುವವರು, (vi) ಬೀಗ ತಯಾರಕರು, (vii) ಆಭರಣ ತಯಾರಕರು. (viii) ಕುಂಬಾರರು, (ix) ಶಿಲ್ಪಿ [ಮೂರ್ತಿ ಮತ್ತು ಕಲ್ಲಿನ ಕೆತ್ತನೆ] (x) ಕಲ್ಲು ಕುಟಿಕರು (xi) ಚಮ್ಮಾರ,ಪಾದರಕ್ಷೆ ತಯಾರಕರು, (xii) ಗಾರೆ ಕೆಲಸ ಮಾಡುವವರು [ರಾಜಮೇಸ್ತ್ರಿ] (xiii) ಬಟ್ಟೆ/ಚಾಪೆ/ಪೊರಕೆ/ಕಸಪೊರಕೆ ತಯಾರಕರು. (xiv) ಗೊಂಬೆ ಮತ್ತು ಅಟಿಕೆ ತಯಾರಕರು [ಸಂಪ್ರದಾಯಿಕ], (xv) ಕ್ಷೌರಿಕರು [ಸವಿತಾ ಸಮಾಜ] (xvi) ಹೂಮಾಲೆ ತಯಾರಕರು (xvii) ಅಗಸರು, (xviii)  ದರ್ಜಿಗಳು ಮತ್ತು ಮೀನು ಬಲೆ ಹೆಣೆಯುವವರು.

*****


(Release ID: 1949491) Visitor Counter : 336