ಪ್ರಧಾನ ಮಂತ್ರಿಯವರ ಕಛೇರಿ
ಸಹಕಾರಿ ಸಂಸ್ಥೆಗಳು ದೇಶದ ಸಾಮಾಜಿಕ ಮತ್ತು ಆರ್ಥಿಕತೆಯ ಮಹತ್ವದ ಭಾಗ : 77 ಸ್ವಾತಂತ್ರ್ಯೋತ್ಸವದಂದು ನವದೆಹಲಿಯ ಕೆಂಪುಕೋಟೆಯಿಂದ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದ ಪ್ರಧಾನಮಂತ್ರಿ
ಸಹಕಾರಿ ಸಂಸ್ಥೆಗಳು ಸಹಕಾರಿ ವಲಯದ ಸಂಪರ್ಕಜಾಲವನ್ನು ವಿಸ್ತರಿಸುತ್ತಿದ್ದು, ಅತ್ಯಂತ ಬಡ ವ್ಯಕ್ತಿಗಳ ಧ್ವನಿಗಳನ್ನು ಆಲಿಸುವುದನ್ನು ಖಚಿತಪಡಿಸುತ್ತಿರುವುದಲ್ಲದೇ ಅವರ ಅಗತ್ಯಗಳನ್ನು ಪೂರೈಸುತ್ತಿವೆ ಮತ್ತು ದೇಶದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿವೆ.
प्रविष्टि तिथि:
15 AUG 2023 1:59PM by PIB Bengaluru
ಸಹಕಾರಿ ಸಂಸ್ಥೆಗಳು ದೇಶದ ಸಾಮಾಜಿಕ ಮತ್ತು ಆರ್ಥಿಕತೆಯ ಮಹತ್ವದ ಭಾಗ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ. 77 ಸ್ವಾತಂತ್ರ್ಯೋತ್ಸವದಂದು ನವದೆಹಲಿಯ ಕೆಂಪುಕೋಟೆಯಿಂದ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದ ಪ್ರಧಾನಮಂತ್ರಿ ಅವರು, ಸಹಕಾರಿ ಸಂಸ್ಥೆಗಳ ಬಲವರ್ಧನೆ, ಆಧುನೀಕರಣಗೊಳಿಸಲು ಪ್ರತ್ಯೇಕ ಸಹಕಾರಿ ಸಚಿವಾಲಯ ಸ್ಥಾಪನೆ ಮಾಡಲಾಗಿದೆ. ದೇಶದ ಮೂಲೆ ಮೂಲೆಗಳಲ್ಲಿ ಪ್ರಜಾತಂತ್ರದ ಅತಿ ದೊಡ್ಡ ಘಟಕವನ್ನು ಬಲಿಷ್ಠಗೊಳಿಸಲಾಗುತ್ತಿದೆ ಎಂದು ಹೇಳಿದರು.
ಸಹಕಾರಿ ಸಂಸ್ಥೆಗಳು ಸಹಕಾರಿ ವಲಯದ ಸಂಪರ್ಕಜಾಲವನ್ನು ವಿಸ್ತರಿಸುತ್ತಿದ್ದು, ಅತ್ಯಂತ ಬಡ ವ್ಯಕ್ತಿಗಳ ಧ್ವನಿಗಳನ್ನು ಆಲಿಸುವುದನ್ನು ಖಚಿತಪಡಿಸುತ್ತಿರುವುದಲ್ಲದೇ ಅವರ ಅಗತ್ಯಗಳನ್ನು ಪೂರೈಸುತ್ತಿವೆ ಮತ್ತು ದೇಶದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿವೆ. “ಸಹಕಾರದಿಂದ ಸಮೃದ್ಧಿ” ಹಾದಿಯನ್ನು ಭಾರತ ಆಯ್ಕೆ ಮಾಡಿಕೊಂಡಿದೆ ಎಂದು ಹೇಳಿದರು.
*****
(रिलीज़ आईडी: 1949253)
आगंतुक पटल : 131
इस विज्ञप्ति को इन भाषाओं में पढ़ें:
Tamil
,
Telugu
,
English
,
Urdu
,
हिन्दी
,
Marathi
,
Manipuri
,
Bengali
,
Assamese
,
Punjabi
,
Gujarati
,
Odia
,
Malayalam