ಪ್ರಧಾನ ಮಂತ್ರಿಯವರ ಕಛೇರಿ
ದಿವ್ಯಾಂಗರು ಪ್ರವೇಶಿಸಬಹುದಾದ ಭಾರತ ನಿರ್ಮಿಸಲು ನಾವು ಕೆಲಸ ಮಾಡುತ್ತಿದ್ದೇವೆ : ಪ್ರಧಾನಮಂತ್ರಿ ನರೇಂದ್ರ ಮೋದಿ
ನಮ್ಮ ದಿವ್ಯಾಂಗರು ಕೂಡ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತದ ತ್ರಿವರ್ಣ ಧ್ವಜ ಹಾರಿಸುವ ಸಾಮರ್ಥ್ಯವನ್ನು ಸೃಷ್ಟಿಸಿದ್ದೇವೆ, ಇದಕ್ಕಾಗಿ ಆಟಗಾರರಿಗೆ ವಿಶೇಷ ತರಬೇತಿ ನೀಡುತ್ತಿದ್ದೇವೆ; ಪ್ರಧಾನಮಂತ್ರಿ ನರೇಂದ್ರ ಮೋದಿ
Posted On:
15 AUG 2023 5:01PM by PIB Bengaluru
ಮುಂದಿನ ತಿಂಗಳು ವಿಶ್ವ ಕರ್ಮ ಜಯಂತಿಯಂದು ವಿಶ್ವಕರ್ಮ ಯೋಜನೆ ಆರಂಭಿಸಲಾಗುವುದು ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ. ಅವರು 77 ಸ್ವಾತಂತ್ರ್ಯೋತ್ಸವದಂದು ಕೆಂಪುಕೋಟೆ ಆವರಣದಿಂದ ದೇಶವನ್ನುದ್ದೇಶಿಸಿ ಮಾತನಾಡಿ, ಈ ಯೋಜನೆ ಸಾಂಪ್ರದಾಯಿಕ ಕೌಶಲ್ಯ ಹೊಂದಿರುವ ಜನರಿಗೆ ಅಂದರೆ ಉಪಕರಣಗಳು ಮತ್ತು ಕೈಯಿಂದ ಕೆಲಸ ಮಾಡುವ ಜನರಿಗೆ ಹೆಚ್ಚಿನ ಪ್ರಮಾಣದಲ್ಲಿ ಅನುಕೂಲವಾಗಲಿದೆ. ಹಿಂದುಳಿದ ಸಮುದಾಯದ ಬಡಗಿಗಳು, ಅಕ್ಕಸಾಲಿಗರು, ಕಲ್ಲುಕುಟಿಕರು, ಅಗಸರು, ಸವಿತಾ ಸಮಾಜದ ಸಹೋದರ, ಸಹೋದರಿಯರು ಅಂತಹ ಜನರಿಗೆ ಹೊಸ ಶಕ್ತಿ ನೀಡಲು ಆಯಾ ಕುಟುಂಬ ಕೆಲಸ ಮಾಡುತ್ತದೆ. ಬಜೆಟ್ ನ 13-15 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಈ ಯೋಜನೆ ಪ್ರಾರಂಭವಾಗಲಿದೆ ಎಂದರು.
आने वाली विश्वकर्मा जयंती पर हाथ से काम करने वाले ज्यादातर ओबीसी समुदाय को सशक्त बनाने के लिए 13000- 15000 हजार करोड़ रुपए के परिव्यय के साथ विश्वकर्मा योजना शुरू करेगे : नरेन्द्र मोदी@ लाल किला #हर_घर_तिरंगा @PIB_India @MSJEGOI pic.twitter.com/XM09iV9cQY
— PIB-SJ&E (@pib_MoSJE) August 15, 2023
ದಿವ್ಯಾಂಗರು ಪ್ರವೇಶಿಸಬಹುದಾದ ಭಾರತ ನಿರ್ಮಿಸಲು ನಾವು ಕೆಲಸ ಮಾಡುತ್ತಿದ್ದೇವೆ ಎಂದು ಪ್ರಧಾನಮಂತ್ರಿಯವರು ಕೆಂಪುಕೋಟೆ ಆವರಣದಿಂದ ಮಾಡಿದ ಭಾಷಣದಲ್ಲಿ ತಿಳಿಸಿದರು. ನಮ್ಮ ದಿವ್ಯಾಂಗರನ್ನು ಕೂಡ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸುವ ಸಾಮರ್ಥ್ಯವನ್ನು ಸೃಷ್ಟಿಸಿದ್ದೇವೆ, ಇದಕ್ಕಾಗಿ ಆಟಗಾರರಿಗೆ ವಿಶೇಷ ತರಬೇತಿ ನೀಡುತ್ತಿದ್ದೇವೆ ಎಂದು ಹೇಳಿದರು.
ಇಂದು ಭಾರತ ಜನಸಂಖ್ಯೆ, ಪ್ರಜಾಪ್ರಭುತ್ವ ಮತ್ತು ವೈವಿಧ್ಯತೆಯನ್ನು ಹೊಂದಿದ ರಾಷ್ಟ್ರವಾಗಿದೆ ಎಂದು ಪ್ರಧಾನಮಂತ್ರಿಯವರು ತಮ್ಮ ಭಾಷಣದಲ್ಲಿ ಹೇಳಿದರು. ಜನಸಂಖ್ಯೆ, ಪ್ರಜಾಪ್ರಭುತ್ವ ಮತ್ತು ವೈವಿಧ್ಯತೆಯ ಈ ತ್ರಿಮೂರ್ತಿಗಳು ಭಾರತದ ಪ್ರತಿಯೊಂದು ಕನಸನ್ನು ನೈಜವಾಗಿ ನನಸಾಗಿಸುವ ಸಾಮರ್ಥ್ಯ ಹೊಂದಿವೆ ಎಂದರು.
Let's celebrate 🫡 Independence Day🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳
We have demography, diversity , and democracy . It means we have a powerful 'TRIVENI' .#HarGharTiranga#BharatInternetUtsav@MSJEGOI @PIB_India pic.twitter.com/QkuKlaEDt3
— PIB-SJ&E (@pib_MoSJE) August 15, 2023
*****
(Release ID: 1949246)
Visitor Counter : 113
Read this release in:
Hindi
,
Odia
,
English
,
Urdu
,
Marathi
,
Assamese
,
Manipuri
,
Bengali
,
Punjabi
,
Gujarati
,
Tamil
,
Telugu
,
Malayalam