ಪ್ರಧಾನ ಮಂತ್ರಿಯವರ ಕಛೇರಿ

ಭಾರತದ 140 ಕೋಟಿ ಜನರ ಪ್ರಯತ್ನದಿಂದ ವಿಶ್ವದ 5 ನೇ ಅತಿದೊಡ್ಡ ಆರ್ಥಿಕತೆಯಾಗಿ ಭಾರತವು ಏರಿದೆ ಎಂದು ಪ್ರಧಾನಮಂತ್ರಿ ಹೇಳಿದರು


ಸರ್ಕಾರ 8 ಕೋಟಿ ಯುವಕರಿಗೆ ಸ್ವಯಂ ಉದ್ಯೋಗಕ್ಕಾಗಿ ರೂ. 20 ಲಕ್ಷ ಕೋಟಿ ನೀಡಿದೆ: ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ರೂ 3.5 ಲಕ್ಷ ಕೋಟಿ ಸಾಲದ ಬೆಂಬಲ ನೀಡಿ ಕೇಂದ್ರ ಸರ್ಕಾರವು ಎಂ. ಎಸ್. ಎಂ. ಇ. ಗಳನ್ನು ದಿವಾಳಿತನದಿಂದ ರಕ್ಷಿಸಿದೆ: ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

ಪ್ರಧಾನ ಮಂತ್ರಿ ಮುದ್ರಾ ಯೋಜನೆಯ ಸಹಾಯದಿಂದ ಉದ್ಯಮ ಸ್ಥಾಪಿಸಿದ 8 ಕೋಟಿ ನಾಗರಿಕರು ಒಬ್ಬರಿಗೆ ಅಥವಾ ಇಬ್ಬರಿಗೆ ಉದ್ಯೋಗ ನೀಡಿದ್ದಾರೆ: ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

ಹಣದುಬ್ಬರದ ವಿರುದ್ಧದ ಹೋರಾಟವನ್ನು ಮುಂದುವರಿಸುವುದಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಪ್ರತಿಜ್ಞೆ ಮಾಡಿದ್ದಾರೆ

Posted On: 15 AUG 2023 2:52PM by PIB Bengaluru

77ನೇ ಸ್ವಾತಂತ್ರ್ಯ ದಿನದಂದು ಕೆಂಪು ಕೋಟೆಯ ಆವರಣದಲ್ಲಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಭಾರತವು ವಿಶ್ವದ 10 ನೇ ಸ್ಥಾನದಿಂದ 5 ನೇ ಅತಿದೊಡ್ಡ ಆರ್ಥಿಕತೆಗೆ ಏರಲು ಭಾರತದ 140 ಕೋಟಿ ಜನರ ಪ್ರಯತ್ನಗಳು ಕಾರಣವೆಂದು ಹೇಳಿದರು. ಈ ಸರ್ಕಾರ ಸೋರಿಕೆಯನ್ನು ನಿಲ್ಲಿಸಿ, ಬಲಿಷ್ಠ ಆರ್ಥಿಕತೆಯನ್ನು ಸೃಷ್ಟಿಸಿದ ಮತ್ತು ಬಡವರ ಕಲ್ಯಾಣಕ್ಕಾಗಿ ಗರಿಷ್ಠ ಹಣವನ್ನು ವ್ಯಯಿಸಿದ್ದರಿಂದ ಇದು ಸಂಭವಿಸಿದೆ ಎಂದು ಅವರು ಹೇಳಿದರು.

ಪ್ರಧಾನಮಂತ್ರಿ ಶ್ರೀ ಮೋದಿಯವರು, “ದೇಶವು ಆರ್ಥಿಕವಾಗಿ ಸಮೃದ್ಧವಾದಾಗ, ಅದು ಖಜಾನೆಯನ್ನು ಮಾತ್ರ ತುಂಬುವುದಿಲ್ಲ ಎಂದು ನಾನು ಇಂದು ಜನರಿಗೆ ಹೇಳಲು ಬಯಸುತ್ತೇನೆ; ಅದು ರಾಷ್ಟ್ರ ಮತ್ತು ಅದರ ಜನರ ಸಾಮರ್ಥ್ಯವನ್ನು ಕೂಡಾ ಹೆಚ್ಚಿಸುತ್ತದೆ. ಸರ್ಕಾರವು ತನ್ನ ನಾಗರಿಕರ ಕಲ್ಯಾಣಕ್ಕಾಗಿ ಪ್ರತಿ ಪೈಸೆಯನ್ನು ಖರ್ಚು ಮಾಡಲು ಪ್ರತಿಜ್ಞೆ ಮಾಡಿದರೆ, ಅದರ ಫಲಿತಾಂಶಗಳು ಸ್ವಯಂಚಾಲಿತವಾಗಿ ಬರುತ್ತವೆ. 10 ವರ್ಷಗಳ ಹಿಂದೆ ಭಾರತ ಸರ್ಕಾರ  ರಾಜ್ಯಗಳಿಗೆ ರೂ. 30 ಲಕ್ಷ ಕೋಟಿ ನೀಡಿದರೆ, ಕಳೆದ 9 ವರ್ಷಗಳಲ್ಲಿ ಈ ಅಂಕಿ ಅಂಶವು ರೂ. 100 ಲಕ್ಷ ಕೋಟಿ ಆಗಿದೆ. ಈ ಸಂಖ್ಯೆಗಳನ್ನು ನೋಡಿದಾಗ, ಸಾಮರ್ಥ್ಯದ ದೊಡ್ಡ ಹೆಚ್ಚಳದೊಂದಿಗೆ ಅಂತಹ ದೊಡ್ಡ ರೂಪಾಂತರವು ಸಂಭವಿಸಿದೆ ಎಂದು ನೀವು ಭಾವಿಸುತ್ತೀರಿ! ”

 “ಹೆಚ್ಚು ಹೆಚ್ಚುಯುವಕರಿಗೆ ಅವರ ಉದ್ಯೋಗಕ್ಕಾಗಿ ಹಾಗೂ ಸ್ವಯಂ ಉದ್ಯೋಗಕ್ಕಾಗಿ . ರೂ20 ಸಾವಿರ ಕೋಟಿ ನೀಡಲಾಗಿದೆ. 8 ಕೋಟಿ ಜನ ಹೊಸ ಉದ್ಯಮ ಆರಂಭಿಸಿದ್ದಾರೆ ಅಷ್ಟೇ ಅಲ್ಲ ಪ್ರತಿಯೊಬ್ಬ ಉದ್ಯಮಿ ಯೂ ಕನಿಷ್ಟ ಒಬ್ಬಿಬ್ಬರಿಗೆ ಉದ್ಯೋಗ ನೀಡಿದ್ದಾರೆ. ಆದ್ದರಿಂದ, (ಪ್ರಧಾನ ಮಂತ್ರಿ) ಮುದ್ರಾ ಯೋಜನೆಯಿಂದ ಪ್ರಯೋಜನ ಪಡೆಯುವ 8 ಕೋಟಿ ನಾಗರಿಕರು 8-10 ಕೋಟಿ ಹೊಸ ಜನರಿಗೆ ಉದ್ಯೋಗವನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ, ಎಂದು ಸ್ವಯಂ ಉದ್ಯೋಗದ ಹಿನ್ನಲೆಯಲ್ಲಿ ಪ್ರಧಾನಮಂತ್ರಿ  ಶ್ರೀ ಮೋದಿ ಅವರು ಹೇಳಿದರು. 

ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಉಲ್ಲೇಖಿಸಿ ಮಾತನಾಡಿದ ಶ್ರೀ ಮೋದಿ ಅವರು, “ರೂ. 3.5 ಲಕ್ಷ ಕೋಟಿ ಮೌಲ್ಯದ ಸಾಲದ ಸಹಾಯದಿಂದ ಎಂ.ಎಸ್.ಎಂ.ಇ.ಗಳು ದಿವಾಳಿಯಾಗಲು ಅವಕಾಶವನ್ನೇ ನೀಡಲಿಲ್ಲ. ಕೊರೊನಾ ವೈರಸ್ ಬಿಕ್ಕಟ್ಟಿನಲ್ಲಿ ಆರ್ಥಿಕ ಸಂಕಷ್ಟದಿಂದ ಅವರನ್ನು ಸಾಯಲು ಬಿಡಲಿಲ್ಲ, ಅವರಿಗೆ ಶಕ್ತಿ ನೀಡಲಾಯಿತು ಎಂದು ಹೇಳಿದರು.

ಹೊಸ ಮತ್ತು ಮಹತ್ವಾಕಾಂಕ್ಷಿ ಮಧ್ಯಮ ವರ್ಗದ ಬಗ್ಗೆ ಶ್ರೀ ಮೋದಿ ಅವರು ಹೇಳಿದರು ಈ ರೀತಿ ಹೇಳಿದರು…, “ದೇಶದಲ್ಲಿ ಬಡತನ ಕಡಿಮೆಯಾದಾಗ, ಮಧ್ಯಮ ವರ್ಗದ ಶಕ್ತಿಯು ಬಹಳಷ್ಟು ಹೆಚ್ಚಾಗುತ್ತದೆ. ಮತ್ತು ಮುಂಬರುವ ಐದು ವರ್ಷಗಳಲ್ಲಿ ದೇಶವು ಮೊದಲ ಮೂರು ವಿಶ್ವ ಆರ್ಥಿಕತೆಗಳಲ್ಲಿ ತನ್ನ ಸ್ಥಾನವನ್ನು ಪಡೆದುಕೊಳ್ಳುತ್ತದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ಇಂದು 13.5 ಕೋಟಿ ಜನರು ಬಡತನದಿಂದ ಹೊರಬಂದು ಮಧ್ಯಮ ವರ್ಗದ ಶಕ್ತಿಯಾಗಿದ್ದಾರೆ. ಬಡವರ ಕೊಳ್ಳುವ ಶಕ್ತಿ ಹೆಚ್ಚಾದರೆ ಮಧ್ಯಮ ವರ್ಗದವರ ವ್ಯಾಪಾರ ವ್ಯವಹಾರಗಳ ಶಕ್ತಿ ಹೆಚ್ಚುತ್ತದೆ. ಹಳ್ಳಿಯ ಕೊಳ್ಳುವ ಶಕ್ತಿ ಹೆಚ್ಚಾದಾಗ ಪಟ್ಟಣ ಮತ್ತು ನಗರಗಳ ಆರ್ಥಿಕ ವ್ಯವಸ್ಥೆಯು ವೇಗದಲ್ಲಿ ಸಾಗುತ್ತದೆ. ಇದು ಪರಸ್ಪರ ಸಂಬಂಧ ಹೊಂದಿರುವ ಕೊಂಡುಕೊಳ್ಳುವ ನಮ್ಮ ಆರ್ಥಿಕ ಚಕ್ರವಾಗಿದೆ. ಅದಕ್ಕೆ ಶಕ್ತಿ ನೀಡುವ ಮೂಲಕ ನಾವು ಮುಂದುವರಿಯಲು ಬಯಸುತ್ತೇವೆ.”

ಹೆಚ್ಚುವರಿಯಾಗಿ, ಪ್ರಧಾನಮಂತ್ರಿ ಅವರು, “ಆದಾಯ ತೆರಿಗೆಯ (ವಿನಾಯಿತಿ) ಮಿತಿಯನ್ನು ರೂ. 2 ಲಕ್ಷದಿಂದ ರೂ. 7 ಲಕ್ಷಕ್ಕೆ ಹೆಚ್ಚಿಸಿದಾಗ, ಇದರ ಬಹು ದೊಡ್ಡ ಲಾಭ ಸಂಬಳ ಪಡೆಯುವ ವರ್ಗಕ್ಕೆ, ವಿಶೇಷವಾಗಿ ಮಧ್ಯಮ ವರ್ಗಕ್ಕೆ ಲಭಿಸಿತು ಎಂದು ಹೇಳಿದರು.

ಒಟ್ಟಾರೆಯಾಗಿ ಜಗತ್ತು ಎದುರಿಸುತ್ತಿರುವ ಇತ್ತೀಚಿನ ಸಮಸ್ಯೆಗಳನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, “ಜಗತ್ತು ಇನ್ನೂ ಕೋವಿಡ್-19 ಸಾಂಕ್ರಾಮಿಕದ ಪರಣಾಮಗಳಿಂದ  ಹೊರಬಂದಿಲ್ಲ ಮತ್ತು ಯುದ್ಧವು ಹೊಸ ಸಮಸ್ಯೆಯನ್ನು ಸೃಷ್ಟಿಸಿದೆ. ಇಂದು ಜಗತ್ತು ಹಣದುಬ್ಬರದ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂದು ಹೇಳಿದರು.

ಹಣದುಬ್ಬರದ ವಿರುದ್ಧದ ಹೋರಾಟದ ಕುರಿತು ಮಾತನಾಡಿದ ಪ್ರಧಾನಮಂತ್ರಿಯವರು, “ಭಾರತವು ಹಣದುಬ್ಬರವನ್ನು ನಿಯಂತ್ರಿಸಲು ಅತ್ಯುತ್ತಮ ಪ್ರಯತ್ನ ಮಾಡಿದೆ. ನಮ್ಮ ವಿಷಯಗಳು ಪ್ರಪಂಚಕ್ಕಿಂತ ಉತ್ತಮವಾಗಿವೆ ಎಂದು ನಾವು ಭಾವಿಸುವುದಿಲ್ಲ, ನನ್ನ ದೇಶವಾಸಿಗಳ ಮೇಲಿನ ಹಣದುಬ್ಬರದ ಹೊರೆಯನ್ನು ಕಡಿಮೆ ಮಾಡಲು ನಾನು ಈ ದಿಕ್ಕಿನಲ್ಲಿ ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ನನ್ನ ಪ್ರಯತ್ನಗಳು ಹಣದುಬ್ಬರವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಇನ್ನೂ ತೋವ್ರವಾಗಿ ಮುಂದುವರಿಯುತ್ತದೆ”  ಎಂದು ಹೇಳಿದರು.


***



(Release ID: 1949244) Visitor Counter : 89