ಪ್ರಧಾನ ಮಂತ್ರಿಯವರ ಕಛೇರಿ
ಕೈಗೆಟುಕುವ ದರದಲ್ಲಿ ಔಷಧಗಳು ಲಭ್ಯವಾಗುವಂತೆ ಮಾಡಲು ಸರ್ಕಾರ 25,000 ಜನೌಷಧ ಕೇಂದ್ರಗಳನ್ನು ತೆರೆಯಲಿದೆ
"ಜನೌಷಧ ಕೇಂದ್ರಗಳು 20,000 ಕೋಟಿ ರೂ.ಗಳ ಉಳಿತಾಯದ ಮೂಲಕ ದೇಶದ ಮಧ್ಯಮ ವರ್ಗಕ್ಕೆ ಹೊಸ ಶಕ್ತಿಯನ್ನು ನೀಡಿವೆ"
"ಜನೌಷಧಿ ಕೇಂದ್ರಗಳ ಸಂಖ್ಯೆಯನ್ನು 25,000 ಕೇಂದ್ರಗಳಿಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ"
Posted On:
15 AUG 2023 1:58PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಭಾಷಣ ಮಾಡಿ, 'ಜನೌಷಧ ಕೇಂದ್ರಗಳ' ಸಂಖ್ಯೆಯನ್ನು 10,000 ದಿಂದ 25,000ಕ್ಕೆ ಹೆಚ್ಚಿಸಲು ಸರ್ಕಾರ ಯೋಜಿಸಿದೆ ಎಂದು ಹೇಳಿದರು.
ಜನೌಷಧ ಕೇಂದ್ರಗಳು ಜನರಿಗೆ, ವಿಶೇಷವಾಗಿ ಮಧ್ಯಮ ವರ್ಗದವರಿಗೆ ಹೊಸ ಶಕ್ತಿಯನ್ನು ನೀಡಿವೆ ಎಂದರು. ಯಾರಿಗಾದರೂ ಮಧುಮೇಹ ಇರುವುದು ಪತ್ತೆಯಾದರೆ, ಔಷಧಗಳಿಗೆ ಮಾಸಿಕ 3000 ರೂ.ಗಳ ವೆಚ್ಚ ಭರಿಸಬೇಕಾಗುತ್ತದೆ.
ಜನೌಷಧ ಕೇಂದ್ರಗಳ ಮೂಲಕ 100 ರೂ.ಗಳ ಔಷಧಗಳನ್ನು 10 ರಿಂದ 15 ರೂ.ಗೆ ನೀಡುತ್ತಿದ್ದೇವೆ" ಎಂದು ಅವರು ಹೇಳಿದರು.
ಸಾಂಪ್ರದಾಯಿಕ ಕೌಶಲ್ಯ ಹೊಂದಿರುವವರಿಗಾಗಿ ಮುಂದಿನ ತಿಂಗಳಲ್ಲಿ 13,000 ರಿಂದ 15,000 ಕೋಟಿ ರೂ.ಗಳ ಅನುದಾನದೊಂದಿಗೆ ಸರ್ಕಾರ ʻವಿಶ್ವಕರ್ಮ ಯೋಜನೆʼಯನ್ನು ಪ್ರಾರಂಭಿಸಲಿದೆ. 'ಜನೌಷಧ ಕೇಂದ್ರ'ಗಳ (ಸಬ್ಸಿಡಿ ಔಷಧ ಅಂಗಡಿಗಳು) ಸಂಖ್ಯೆಯನ್ನು 10,000 ದಿಂದ 25,000ಕ್ಕೆ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು.
****
(Release ID: 1949161)
Visitor Counter : 134
Read this release in:
Malayalam
,
English
,
Khasi
,
Urdu
,
Hindi
,
Marathi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu